ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ  
                
                
                
                
                
                
                    
                    
                        2025 ರ ವೇಳೆಗೆ ಐದು ಟ್ರಿಲಿಯನ್ ಡಾಲರ್ ಭಾರತೀಯ ಆರ್ಥಿಕತೆಯ ಗುರಿಯನ್ನು ಸಾಧಿಸಲು ಜಿಎಸ್ ಟಿ ಸಹಾಯ ಮಾಡುತ್ತದೆ ಎಂದು ಶ್ರೀ ನಿತಿನ್ ಗಡ್ಕರಿ ಹೇಳಿದರು, ಹಣಕಾಸು ಲೆಕ್ಕಪರಿಶೋಧನೆಯೊಂದಿಗೆ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆಗೆ ಕರೆ ನೀಡಿದರು
                    
                    
                        
                    
                
                
                    Posted On:
                01 JUL 2021 1:48PM by PIB Bengaluru
                
                
                
                
                
                
                2025 ರ ವೇಳೆಗೆ ಐದು ಟ್ರಿಲಿಯನ್ ಡಾಲರ್ ಭಾರತೀಯ ಆರ್ಥಿಕತೆಯ ಗುರಿಯನ್ನು  ಸಾಧಿಸಲು ಜಿಎಸ್ ಟಿ ಸಹಾಯ ಮಾಡುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಎಂಎಸ್ಎಂಇ ಸಚಿವರಾದ ಶ್ರೀ ನಿತಿನ್ ಗಡ್ಕರಿ ಹೇಳಿದರು. “ಜಿಎಸ್ ಟಿ ದಿನ” ದಂದು ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ  “ ಜಿಎಸ್ ಟಿಯ ಪಯಣ ಮತ್ತು ಬೆಳವಣಿಗೆ – ಆತ್ಮ ನಿರ್ಭರ ಭಾರತ” ಕುರಿತ  ವೆಬಿನಾರನ್ನು ಉದ್ದೇಶಿಸಿ ಮಾತನಾಡುತ್ತಾ ಜಿಎಸ್ಟಿಯನ್ನು" ಒಂದು ರಾಷ್ಟ್ರ, ಒಂದು ಮಾರುಕಟ್ಟೆ, ಒಂದು ತೆರಿಗೆ "ಎಂಬ ಕಲ್ಪನೆಯ ಮೇಲೆ ತರಲಾಗಿದೆ, ಇದು ಈಗಿರುವ ಸಾಂಕ್ರಾಮಿಕ ಪರಿಸ್ಥಿತಿಯ ಹೊರತಾಗಿಯೂ ವ್ಯಾಪಾರ ಮತ್ತು ಉದ್ಯಮಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ ಮತ್ತು ಹೇಳಿದರು.   ಸರಕು ಮತ್ತು ಸೇವಾ ತೆರಿಗೆಯನ್ನು ಜುಲೈ 1, 2017 ರಿಂದ ಜಾರಿಗೆ ತರಲಾಗಿದೆ ಮತ್ತು ಈಗ ಅದು ನಾಲ್ಕು ವರ್ಷಗಳ ಅನುಷ್ಠಾನವನ್ನು ಪೂರ್ಣಗೊಳಿಸಿದೆ, ಈ ನಾಲ್ಕು ವರ್ಷಗಳಲ್ಲಿ ವ್ಯವಹಾರ ನಡೆಯುತ್ತಿರುವ ರೀತಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಶ್ರೀ ಗಡ್ಕರಿ ಹೇಳಿದರು.
ಡಿಜಿಟಲೀಕರಣ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಇದರಲ್ಲಿ ಪ್ರಮುಖ ಪಾತ್ರವಿದೆ ಎಂದು ಸಚಿವರು ಹೇಳಿದರು. ಹಣಕಾಸು ಲೆಕ್ಕಪರಿಶೋಧನೆಯೊಂದಿಗೆ ಪಾರದರ್ಶಕ ಮತ್ತು ಸಮಯಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಾಗಿ ಕಾರ್ಯಕ್ಷಮತೆ ಲೆಕ್ಕಪರಿಶೋಧನೆ ಕೂಡ ಬಹಳ ಮುಖ್ಯ ಎಂದು ಅವರು ಹೇಳಿದರು. ಎಂಎಸ್ಎಂಇ ಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ವಿಳಂಬಿತ ಪಾವತಿಗಳು ಕಾಳಜಿಗೆ ಮುಖ್ಯ ಕಾರಣವಾಗಿದ್ದು ಅದನ್ನು ಪರಿಹರಿಸಬೇಕಾಗಿದೆ ಎಂದು ಹೇಳಿದರು.
ಜಿಎಸ್ ಟಿಯು ನಾಲ್ಕು ವರ್ಷಗಳನ್ನು ಪೂರೈಸಿದರೂ ಅದರಲ್ಲಿ ಇನ್ನೂ ಸುಧಾರಣೆಗೆ ಅವಕಾಶವಿದೆ ಎಂದು ಸಚಿವರು ಹೇಳಿದರು. ಎಲ್ಲಾ ಭಾಗಿದಾರರಿಂದ  ಸಹಕಾರ, ಸಮನ್ವಯ, ಸಂವಹನ ಮತ್ತು ತಿದ್ದುಪಡಿ ಅಗತ್ಯವಿದೆ ಎಂದು ಶ್ರೀ ಗಡ್ಕರಿ ಹೇಳಿದರು.
ಹೊಸ ತೆರಿಗೆ ವ್ಯವಸ್ಥೆ ಜಾರಿಗೊಂಡ ನಂತರದ ವಾತಾವರಣದಲ್ಲಿ  ಅಗತ್ಯವಿರುವ ಹೊಸ ವಿಷಯಗಳನ್ನು ಕಲಿಯಲು ಮತ್ತು ಕಲಿತದ್ದನ್ನು ಕಾರ್ಯಗತಗೊಳಿಸಲು ದೇಶಾದ್ಯಂತ ವಿವಿಧ ಭಾಗಿದಾರರಿಗೆ ನಿಯಮಿತ ವೆಬಿನಾರ್ಗಳು, ಸೆಮಿನಾರ್ ಗಳು, ವಿವಿಧ ಕೋರ್ಸ್ ಗಳನ್ನು ನಡೆಸಿದ್ದಕ್ಕಾಗಿ ಶ್ರೀ ಗಡ್ಕರಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಅನ್ನು ಅಭಿನಂದಿಸಿದರು.
ಪೂರ್ಣ ಸಮಾರಂಭದ ಲಿಂಕ್ :  https://youtu.be/83c7SBwegX0
***
                
                
                
                
                
                (Release ID: 1731899)
                Visitor Counter : 284