ಸಂಪುಟ
ಕೋವಿಡ್ ಬಾಧಿತ ವಲಯಗಳಿಗೆ ಸಾಲ ಖಾತ್ರಿ ಯೋಜನೆ (ಎನ್.ಜಿ.ಎಸ್.ಸಿ.ಎ.ಎಸ್.) ಮತ್ತು ತುರ್ತು ನಮ್ಯ ಸಾಲ (ಕ್ರೆಡಿಟ್ ಲೈನ್) ಖಾತ್ರಿಯ ಕಾಪು ನಿಧಿ(ಇ.ಸಿ.ಎಲ್.ಜಿ.ಎಸ್.)ಯ ಹೆಚ್ಚಳಕ್ಕೆ ಸಂಪುಟದ ಅನುಮೋದನೆ
Posted On:
30 JUN 2021 4:01PM by PIB Bengaluru
ಕೋವಿಡ್ 19ರ ಎರಡನೇ ಅಲೆಯಿಂದ ಅದರಲ್ಲೂ ವಿಶೇಷವಾಗಿ ಆರೋಗ್ಯ ವಲಯದಲ್ಲಿ ಆಗಿರುವ ಅಡಚಣೆ ಹಿನ್ನೆಲೆಯಲ್ಲಿ ಕೋವಿಡ್ ಪೀಡಿತ ವಲಯಗಳಿಗೆ ಸಾಲ ಖಾತ್ರಿ ಯೋಜನೆ (ಎಲ್.ಜಿ.ಎಸ್.ಸಿ.ಎ.ಎಸ್.)ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಆರೋಗ್ಯ / ವೈದ್ಯಕೀಯ ಮೂಲಸೌಕರ್ಯಕ್ಕೆ ಸಂಬಂಧಿಸಿದ ಬೂದು ವಲಯದ ವಿಸ್ತರಣೆ ಮತ್ತು ಹಸಿರು ವಲಯದ ಯೋಜನೆಗಳಿಗೆ ಹಣಕಾಸಿನ ಖಾತ್ರಿಯ ಒದಗಿಸಲು 50,000 ಕೋಟಿ ರೂ.ಹಣಕಾಸು ನೆರವು ಒದಗಿಸಲು ಅವಕಾಶ ಕಲ್ಪಿಸಿದೆ.
ಉತ್ತಮ ಆರೋಗ್ಯ ಸೇವೆಗಾಗಿ ಪೂರಕ ಸೇವೆಯಲ್ಲಿರುವವರೂ ಸೇರಿದಂತೆ ಇತರ ವಲಯಗಳು / ಸಾಲನೀಡಿಕೆದಾರರಿಗೆ ಯೋಜನೆಯನ್ನು ಪರಿಚಯಿಸಲು ಸಂಪುಟ ಅನುಮೋದನೆ ನೀಡಿದೆ. ಉದ್ಭವಿಸುವ ಪರಿಸ್ಥಿತಿಗೆ ಅನುಗುಣವಾಗಿ ವಿವರವಾದ ವಿಧಾನಗಳನ್ನು ಸೂಕ್ತ ಸಮಯದಲ್ಲಿ ಆಖೈರುಗೊಳಿಸಲಾಗುತ್ತದೆ.
ಇದರ ಜೊತೆಗೆ ಸಂಪುಟವು ತುರ್ತು ನಮ್ಯ ಸಾಲ ಖಾತ್ರಿ ಯೋಜನೆ (ಇ.ಸಿ.ಎಲ್.ಜಿ.ಎಸ್.) 1,50,000 ಕೋಟಿ ರೂ. ಮೊತ್ತದ ಹೆಚ್ಚುವರಿ ಆರ್ಥಿಕ ನೆರವಿಗೂ ಅನುಮೋದನೆ ನೀಡಿದೆ.
ಗುರಿಗಳು:
ಎಲ್.ಜಿ.ಎಸ್.ಸಿ.ಎ.ಎಸ್.: ಈ ಯೋಜನೆಯು 31.03.2022ರವರೆಗೆ ಮಂಜೂರಾದ ಎಲ್ಲ ಅರ್ಹ ಸಾಲಗಳಿಗೆ ಅಥವಾ 50,000 ಕೋಟಿ ರೂ. ಹಣ ಮಂಜೂರಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಅನ್ವಯವಾಗುತ್ತದೆ.
ಇ.ಸಿ.ಎಲ್.ಜಿ.ಎಸ್.: ಇದು ಮುಂದುವರಿದ ಯೋಜನೆಯಾಗಿದೆ. 30.09.2021ರವರೆಗೆ ಖಾತ್ರಿಪಡಿಸಿದ ತುರ್ತು ನಮ್ಯ ಸಾಲ (ಜಿ.ಇ.ಸಿ.ಎಲ್) ಅಡಿಯಲ್ಲಿ ಮಂಜೂರಾದ ಎಲ್ಲಾ ಅರ್ಹ ಸಾಲಗಳಿಗೆ ಅಥವಾ ಜಿ.ಇ.ಸಿ.ಎಲ್. ಅಡಿಯಲ್ಲಿ ನಾಲ್ಕು ಲಕ್ಷ ಐವತ್ತು ಸಾವಿರ ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಈ ಯೋಜನೆ ಅನ್ವಯಿಸುತ್ತದೆ.
ಪರಿಣಾಮ:
ಎಲ್.ಜಿ.ಎಸ್.ಸಿ.ಎ.ಎಸ್: ಕೋವಿಡ್ -19ರ ಎರಡನೇ ಅಲೆಯಿಂದ ದೇಶ ಸಾಕಷ್ಟು ಆರೋಗ್ಯ ಮೂಲಸೌಕರ್ಯಗಳ ಕೊರತೆಯ ಅಸಾಧಾರಣ ಸನ್ನಿವೇಶಕ್ಕೆ ಸಾಕ್ಷಿಯಾದ ಹಿನ್ನೆಲೆಯಲ್ಲಿ, ನಿರ್ದಿಷ್ಟ ಸ್ಪಂದನೆಗಾಗಿ ಎಲ್.ಜಿ.ಎಸ್.ಸಿ.ಎ.ಎಸ್. ಅನ್ನು ರೂಪಿಸಲಾಗಿದೆ. ಅನುಮೋದಿತ ಯೋಜನೆಯು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ದೇಶಕ್ಕೆ ಹೆಚ್ಚು ಅಗತ್ಯವಿರುವ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಸಾಲದ ಅಪಾಯವನ್ನು ಭಾಗಶಃ ತಗ್ಗಿಸುವುದಲ್ಲದೆ (ಪ್ರಾಥಮಿಕವಾಗಿ ನಿರ್ಮಾಣ ಅಪಾಯ) ಮತ್ತು ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲವನ್ನು ಸುಗಮಗೊಳಿಸುವುದು ಎಲ್.ಜಿ.ಎಸ್.ಸಿ.ಎ.ಎಸ್.ನ ಮುಖ್ಯ ಉದ್ದೇಶವಾಗಿದೆ.
ಇ.ಸಿ.ಎಲ್.ಜಿ.ಎಸ್.: ಇದು ಒಂದು ಮುಂದುವರಿದ ಯೋಜನೆಯಾಗಿದ್ದು ಇತ್ತೀಚೆಗೆ, ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿನ ವ್ಯವಹಾರಗಳಿಗೆ ಕೋವಿಡ್ 19 ಸಾಂಕ್ರಾಮಿಕ ರೋಗದ ಎರಡನೇ ಅಲೆದಿಂದ ಉಂಟಾದ ಅಡೆತಡೆಗಳ ಕಾರಣದಿಂದಾಗಿ, ಸರ್ಕಾರವು ಇ.ಸಿ.ಎಲ್.ಜಿ.ಎಸ್. ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ಹೆಚ್ಚಳವು ಸಾಲ ನೀಡುವ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮೂಲಕ ಹಣಕಾಸಿನ ನೆರವು ಅಗತ್ಯವಾಗಿದ್ದ ವಿವಿಧ ವಲಯಗಳಿಗೆ ಕಡಿಮೆ ಬಡ್ಡಿಯಲ್ಲಿ 1.5 ಲಕ್ಷ ಕೋಟಿ ರೂ.ವರೆಗೆ, ಸಾಲವನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ, ಆ ಮೂಲಕ ವ್ಯಾಪಾರೋದ್ಯಮಗಳು ತಮ್ಮ ಕಾರ್ಯಾಚರಣೆಯ ಹೊಣೆಗಾರಿಕೆಗಳನ್ನು ಪೂರೈಸಲು ಮತ್ತು ತಮ್ಮ ವ್ಯವಹಾರಗಳನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ ಹಿಂದೆಂದೂ ಕಂಡು ಕೇಳರಿಯದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಣೆಯನ್ನು ಮುಂದುವರಿಸಲು ಎಂ.ಎಸ್.ಎಂ.ಇ.ಗಳನ್ನು ಬೆಂಬಲಿಸುವುದರ ಜೊತೆಗೆ, ಈ ಯೋಜನೆಯು ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅದರ ಪುನಶ್ಚೇತನವನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹಿನ್ನೆಲೆ:
ಎಲ್.ಜಿ.ಎಸ್.ಎ.ಎಸ್.: ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ, ಇದು ಕೋವಿಡ್-19ರ ಎರಡನೇ ಅಲೆಯಿಂದ ಉದ್ಭವಿಸಿದೆ. ಈ ಅಲೆ ಅನೇಕ ಕ್ಷೇತ್ರಗಳಲ್ಲಿನ ಆರೋಗ್ಯ ಸೌಲಭ್ಯಗಳ ಜೊತೆಗೆ ಜೀವನೋಪಾಯ ಮತ್ತು ವ್ಯಾಪಾರೋದ್ಯಮಗಳ ಮೇಲೆ ಅಗಾಧ ಒತ್ತಡವನ್ನು ಹೇರಿದೆ. ಈ ಅಲೆಯು ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳನ್ನು ಹೆಚ್ಚಿಸುವ ಅಗತ್ಯವನ್ನು ಪ್ರಚುರಪಡಿಸಿದೆ. ದೇಶಾದ್ಯಂತ ಮೆಟ್ರೊ ನಗರಗಳಿಂದ ಶ್ರೇಣಿ V ಮತ್ತು VI ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಇದು ಅವಶ್ಯಕವಾಗಿದೆ. ಹೆಚ್ಚುವರಿ ಆಸ್ಪತ್ರೆ ಹಾಸಿಗೆಗಳು, ಐಸಿಯುಗಳು, ರೋಗಪತ್ತೆ ಕೇಂದ್ರಗಳು, ಆಮ್ಲಜನಕ ಸೌಲಭ್ಯಗಳು, ದೂರವಾಣಿ ಅಥವಾ ಇಂಟರ್ನೆಟ್ ಆಧಾರಿತ ವೈದ್ಯಕೀಯ ಸಲಹೆ ಮತ್ತು ಮೇಲ್ವಿಚಾರಣೆ, ಪರೀಕ್ಷಾ ಸೌಲಭ್ಯಗಳು ಮತ್ತು ಪೂರೈಕೆಗಳು, ಲಸಿಕೆಗಳಿಗೆ ಶೀಥಲೀಕರಣ ಸೌಲಭ್ಯ ಸರಪಳಿ, ಔಷಧಿಗಳು ಮತ್ತು ಲಸಿಕೆಗಳಿಗೆ ಉಗ್ರಾಣ, ಪೂರಕ ಚಿಕಿತ್ಸೆ ಅಂದರೆ ಸಿರಿಂಜ್ ಗಳು ಮತ್ತು ಚುಚ್ಚುಮದ್ದಿನ ವೈಲ್ ಗಳು ಇತ್ಯಾದಿಯ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವುದನ್ನು ಇದು ಒಳಗೊಂಡಿದೆ. ಪ್ರಸ್ತಾಪಿತ ಎಲ್.ಜಿ.ಎಸ್.ಸಿ.ಎಎಸ್ ದೇಶದ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ನಿರ್ದಿಷ್ಟವಾಗಿ ಕಡಿಮೆ ಸೇವೆಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ. 8 ಮಹಾನಗರಗಳು, ಶ್ರೇಣಿ 1ರ ನಗರಗಳಲ್ಲಿ (ಹತ್ತನೇ ತರಗತಿ ನಗರಗಳು) ಹೊರತುಪಡಿಸಿ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾದ ಬೂದು ವಲಯ ಯೋಜನೆಗಳಿಗೆ ಶೇ.50 ಮತ್ತು ಹಸಿರು ವಲಯ ಯೋಜನೆಗಳಿಗೆ 100 ಕೋಟಿ ರೂ.ವರೆಗೆ ಮಂಜೂರಾದ ಸಾಲಗಳಿಗೆ ಶೇ.75ರಷ್ಟು ಯೋಜನೆಗಳಿಗೆ ಎಲ್.ಜಿ.ಎಸ್.ಸಿ.ಎ.ಎಸ್. ಖಾತ್ರಿ ಒದಗಿಸಲಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ, ಬೂದುವಲಯ ವಿಸ್ತರಣೆ ಮತ್ತು ಹಸಿರು ವಲಯ ಯೋಜನೆಗಳ ಖಾತ್ರಿ ವ್ಯಾಪ್ತಿ ಶೇ.75 ಆಗಿರುತ್ತದೆ.
ಇ.ಸಿ.ಎಲ್.ಜಿ.ಎಸ್.: ಇತ್ತೀಚಿನ ವಾರಗಳಲ್ಲಿ ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹೆಚ್ಚಳ ಮತ್ತು ಸ್ಥಳೀಯ / ಪ್ರಾದೇಶಿಕ ಮಟ್ಟದಲ್ಲಿ ಅಳವಡಿಸಿಕೊಂಡಿರುವ ಕಂಟೈನ್ಮೆಂಟ್ ಕ್ರಮಗಳು ಹೊಸ ಅನಿಶ್ಚಿತತೆಗಳನ್ನು ಸೃಷ್ಟಿಸಿವೆ ಮತ್ತು ಹೊಸ ರೂಪ ಪಡೆಯುತ್ತಿದ್ದ ಆರ್ಥಿಕ ಪುನಶ್ಚೇತನದ ಮೇಲೆ ಪರಿಣಾಮ ಬೀರಿವೆ. ಈ ಪರಿಸರದಲ್ಲಿ ಸಾಲಪಡೆಯುವವರ ಅತ್ಯಂತ ದುರ್ಬಲ ವರ್ಗವೆಂದರೆ ವೈಯಕ್ತಿಕ ಸಾಲಗಾರರು, ಸಣ್ಣ ಉದ್ಯಮಗಳು ಮತ್ತು ಎಂ.ಎಸ್.ಎಂ.ಇ.ಗಳು, ಇದಕ್ಕಾಗಿ ಇ.ಸಿ.ಎಲ್.ಜಿ.ಎಸ್ ಅನ್ನು ಭಾರತ ಸರ್ಕಾರವು ಉದ್ದೇಶಿತ ನೀತಿ ಪ್ರತಿಕ್ರಿಯೆಯಾಗಿ ಪರಿಚಯಿಸಿದೆ. ಇ.ಸಿ.ಜಿ.ಎಲ್.ಎಸ್. ವಿನ್ಯಾಸವು ಹೊರಹೊಮ್ಮುವ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸಲು ನಮ್ಯತೆಯನ್ನು ಒದಗಿಸುತ್ತದೆ, ಇ.ಸಿ.ಎಲ್.ಜಿ.ಎಸ್. 2.0, 3.0 ಮತ್ತು 4.0ರ ಪರಿಚಯ ಮತ್ತು 30.05.2021 ರಂದು ಘೋಷಿಸಲಾದ ಬದಲಾವಣೆಗಳಿಂದ ಇದು ಸಾಬೀತಾಗಿದ್ದು, ಇವೆಲ್ಲವೂ ಲಭ್ಯವಿರುವ 3 ಲಕ್ಷ ಕೋಟಿ ರೂ. ಮಿತಿಯಲ್ಲಿದೆ. ಇ.ಸಿ.ಎಲ್.ಜಿ.ಎಸ್ ಅಡಿಯಲ್ಲಿ ಪ್ರಸ್ತುತ 2.6 ಲಕ್ಷ ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಇತ್ತೀಚೆಗೆ ಘೋಷಿಸಲಾದ ಬದಲಾವಣೆ, ವ್ಯಾಪಾರಗಳ ಮೇಲೆ ಕೋವಿಡ್ ನಿಂದ ಆಗಿರುವ ಪ್ರತೀಕೂಲ ಪರಿಣಾಮ ಮತ್ತು ಒಂದು ಬಾರಿ ಪುನಾರಚಿತ ಮಿತಿಯನ್ನು 04.06.2021 ರಂದು ಆರ್.ಬಿ.ಐ.ನಿಂದ 50 ಕೋಟಿ ರೂ. ನಿಂದ ಮತ್ತಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ.
***
(Release ID: 1731571)
Visitor Counter : 334
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam