ನೀತಿ ಆಯೋಗ

ನೀತಿ (ಎನ್ಐಟಿಐ) ಆಯೋಗ ಭಾರತದಲ್ಲಿ ಲಾಭರಹಿತ ಆಸ್ಪತ್ರೆ ಮಾದರಿಯ ವರದಿಯನ್ನು ಬಿಡುಗಡೆ ಮಾಡಿದೆ

Posted On: 29 JUN 2021 1:10PM by PIB Bengaluru

ನೀತಿ(ಎನ್ಐಟಿಐ) ಆಯೋಗವು ಇಂದು ದೇಶದಲ್ಲಿ ಲಾಭರಹಿತ ಆಸ್ಪತ್ರೆ ಮಾದರಿಯ ಕುರಿತು ಸಮಗ್ರ ಅಧ್ಯಯನವನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ  ಅಂತಹ ಸಂಸ್ಥೆಗಳೊಂದಿಗೆ ಸಂಬಂಧಿಸಿದ ನಿಖರವಾದ ಮಾಹಿತಿಯ ಕೊರತೆಯನ್ನು ಪರಿಹರಿಸುವ ಮತ್ತು ಈ ಕ್ಷೇತ್ರದಲ್ಲಿ ದೃಢವಾದ ನೀತಿ ನಿರೂಪಣೆಗೆ ಸಹಾಯ ಮಾಡುವ ಒಂದು ಹೆಜ್ಜೆಯಾಗಿದೆ.

"ಖಾಸಗಿ ವಲಯದಲ್ಲಿ ಆರೋಗ್ಯ ಕ್ಷೇತ್ರದ ವಿಸ್ತರಣೆಯಲ್ಲಿ ಕಡಿಮೆ ಹೂಡಿಕೆ ಕಂಡುಬಂದಿದೆ. ನಿನ್ನೆ ಘೋಷಿಸಿದ ಪ್ರೋತ್ಸಾಹವು ಈ ಪರಿಸ್ಥಿತಿಯನ್ನು ಬದಲಾಯಿಸಲು ನಮಗೆ ಅವಕಾಶವನ್ನು ಒದಗಿಸುತ್ತದೆ. ಲಾಭರಹಿತ ವಲಯದ ವರದಿಯು ಆ ದಿಕ್ಕಿನಲ್ಲಿ ಒಂದು ಸಣ್ಣ ಹೆಜ್ಜೆಯಾಗಿದೆ ”ಎಂದು ನೀತಿ ಆಯೋಗ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಹೇಳಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಮಿತಾಭ್ ಕಾಂತ್, ಹೆಚ್ಚುವರಿ ಕಾರ್ಯದರ್ಶಿ ಡಾ.ರಾಕೇಶ್ ಸರ್ವಾಲ್ ಮತ್ತು ಅಧ್ಯಯನದಲ್ಲಿ ಭಾಗವಹಿಸಿದ ದೇಶಾದ್ಯಂತದ ಆಸ್ಪತ್ರೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನೀತಿ  ಆಯೋಗದ ಸದಸ್ಯ ಡಾ.ವಿ.ಕೆ ಪಾಲ್ ಅವರು ವರದಿಯನ್ನು ಬಿಡುಗಡೆ ಮಾಡಿದರು.

ಅಧ್ಯಯನವು ಲಾಭರಹಿತ ಆಸ್ಪತ್ರೆಗಳ ಕಾರ್ಯಾಚರಣಾ ಮಾದರಿಯ ಒಳನೋಟವನ್ನು ಒದಗಿಸುತ್ತದೆ. ಇದು ಮಾಲೀಕತ್ವ ಮತ್ತು ಸೇವೆಯ ಅಡಿಯಲ್ಲಿ ವರ್ಗೀಕರಿಸಲಾದ ಆಸ್ಪತ್ರೆಗಳ ಸಂಶೋಧನಾ-ಆಧಾರಿತ ಸಂಶೋಧನೆಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ನಂತರ ಅವುಗಳನ್ನು ಖಾಸಗಿ ಆಸ್ಪತ್ರೆಗಳು ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳೊಂದಿಗೆ ಹೋಲಿಸುತ್ತದೆ.
ನೀತಿ ಆಯೋಗವು ದೇಶದ ಖಾಸಗಿ ವಲಯದ ಆರೋಗ್ಯ-ವಿತರಣಾ ವ್ಯವಸ್ಥೆಯನ್ನು  ವ್ಯಾಪಕವಾಗಿ ಅಧ್ಯಯನ ಮಾಡುತ್ತಿದೆ.  ಲಾಭರಹಿತ ಆರೋಗ್ಯ ಸೇವೆ ಒದಗಿಸುವವರು ಮತ್ತು ಸಂಸ್ಥೆಗಳ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ,  ಗುಣಮಟ್ಟದ ಆರೋಗ್ಯವನ್ನು ಎಲ್ಲರಿಗೂ ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡುವಲ್ಲಿ ದಣಿವರಿಯದ ಸೇವೆಗೆ ಹೆಸರುವಾಸಿಯಾಗಿರುವ ಲಾಭರಹಿತ  ಸಂಸ್ಥೆಗಳ ಮೇಲೆ ವಿಶ್ವಾಸಾರ್ಹ ಮತ್ತು ರಚನಾತ್ಮಕ ಮಾಹಿತಿಯ ಕೊರತೆಯಿದೆ.

ಲಾಭರಹಿತ ಆಸ್ಪತ್ರೆ ವಲಯವು ರೋಗನಿರೋಧಕ ಮಾತ್ರವಲ್ಲದೆ  ಆರೋಗ್ಯ ರಕ್ಷಣೆಯನ್ನೂ ಒದಗಿಸುತ್ತದೆ. ಇದು ಆರೋಗ್ಯ ಸುಧಾರಣೆಯನ್ನು ಸಾಮಾಜಿಕ ಸುಧಾರಣೆ, ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಶಿಕ್ಷಣದೊಂದಿಗೆ ಸಂಪರ್ಕಿಸುತ್ತದೆ. ಇದು ಲಾಭದ ಬಗ್ಗೆ ಕಾಳಜಿ ವಹಿಸದೆ ಜನರಿಗೆ   ಕೈಗೆಟುಕುವ ಆರೋಗ್ಯ ಸೇವೆ ಒದಗಿಸಲು ಸರ್ಕಾರದ ಸಂಪನ್ಮೂಲಗಳು ಮತ್ತು ಅನುದಾನಗಳನ್ನು ಬಳಸುತ್ತದೆ. ಆದಾಗ್ಯೂ, ಹಲವಾರು ವರ್ಷಗಳಿಂದ, ಈ ವಲಯವು  ಅಧ್ಯಯನಗೊಳ್ಳದೇ ಉಳಿದಿದೆ.

ಲಾಭರಹಿತ ಆಸ್ಪತ್ರೆಗಳು ಜಾರಿಗೆ ತಂದಿರುವ ವೆಚ್ಚ- ನಿಯಂತ್ರಣ ತಂತ್ರಗಳನ್ನು ಅಧ್ಯಯನವು ವಿವರವಾಗಿ ಚರ್ಚಿಸುತ್ತದೆ. ಈ ಸಂಸ್ಥೆಗಳ ಕಾರ್ಯಾಚರಣೆಗಳಿಗೆ ಹೊರೆಯಾಗುವ ಮತ್ತು ಅವುಗಳ ಬೆಳವಣಿಗೆಗೆ ಅಡ್ಡಿಯಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಅದು ಪ್ರಯತ್ನಿಸುತ್ತದೆ.

ಈ ಆಸ್ಪತ್ರೆಗಳನ್ನು ಗುರುತಿಸಲು ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು, ಕಾರ್ಯಕ್ಷಮತೆ ಸೂಚ್ಯಂಕದ ಮೂಲಕ ಶ್ರೇಯಾಂಕ ನೀಡುವುದು ಮತ್ತು ಲೋಕೋಪಕಾರವನ್ನು ಅಭ್ಯಾಸ ಮಾಡಲು ಉನ್ನತ ಆಸ್ಪತ್ರೆಗಳನ್ನು ಉತ್ತೇಜಿಸುವುದು ಮುಂತಾದ ಅಲ್ಪ ಮತ್ತು ದೀರ್ಘಕಾಲೀನ ನೀತಿ ಮಧ್ಯಸ್ಥಿಕೆಗಳನ್ನು ವರದಿಯು ಪ್ರಸ್ತಾಪಿಸುತ್ತದೆ.  ದೂರದ ಪ್ರದೇಶಗಳಲ್ಲಿ ಸೀಮಿತ ಹಣಕಾಸಿನೊಂದಿಗೆ ಮಾನವ ಸಂಪನ್ಮೂಲವನ್ನು ನಿರ್ವಹಿಸುವಲ್ಲಿ ಈ ಆಸ್ಪತ್ರೆಗಳ ಪರಿಣತಿಯನ್ನು ಬಳಸಿಕೊಳ್ಳುವ ಅಗತ್ಯವನ್ನು ಇದು ತೋರಿಸುತ್ತದೆ.

ವಿವರವಾದಿ ವರದಿಯನ್ನು ಇಲ್ಲಿ ಓದಿರಿ

https://niti.gov.in/sites/default/files/2021-06/Not-for-profitHospitalReport.pdf

 

 

 

 



(Release ID: 1731322) Visitor Counter : 211