ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಇಂದಿನ ಪರಿಷ್ಕೃತ ವರದಿ

Posted On: 28 JUN 2021 9:15AM by PIB Bengaluru

ದೇಶಾದ್ಯಂತ ಜರುಗುತ್ತಿರುವ ಕೋವಿಡ್-19 ಬೃಹತ್ ಲಸಿಕಾ ಆಂದೋಲನದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಲಸಿಕೆ ನೀಡಿಕೆ ಪ್ರಮಾಣದಲ್ಲಿ ಅಮೆರಿಕವನ್ನು ಹಿಂದಿಕ್ಕಿದೆ.

ಇದುವರೆಗೆ ದೇಶಾದ್ಯಂತ 32.36 ಕೋಟಿ ಲಸಿಕೆ ಡೋಸ್|ಗಳನ್ನು ನೀಡಲಾಗಿದೆ.

ಭಾರತದಲ್ಲಿ ನಿನ್ನೆ ಒಂದೇ ದಿನ ಅಂದರೆ ಕಳೆದ 24 ತಾಸುಗಳಲ್ಲಿ 46,148 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಭಾರತದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 5,72,994ಕ್ಕೆ ಇಳಿಕೆ ಕಂಡಿದ್ದು, 6 ಲಕ್ಷದ ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.

ಸಕ್ರಿಯ ಪ್ರಕರಣಗಳ ಪ್ರಮಾಣವು ಒಟ್ಟು ಪ್ರಕರಣಗಳ 1.89% ಇದೆ.

ದೇಶಾದ್ಯಂತ ಇಲ್ಲಿಯ ತನಕ 2,93,09,607 ಸೋಂಕಿತರು ಗುಣಮುಖರಾಗಿದ್ದಾರೆ.

58,578 ರೋಗಿಗಳು ಕಳೆದ 24 ತಾಸುಗಳಲ್ಲಿ ಚೇತರಿಸಿಕೊಂಡಿದ್ದಾರೆ.

ದೈನಂದಿನ ಚೇತರಿಕೆ ಪ್ರಮಾಣ ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಕರಣಗಳನ್ನು ಹಿಂದಿಕ್ಕುತ್ತಿದ್ದು, 46ನೇ ದಿನದಲ್ಲಿ ಈ ಪ್ರವೃತ್ತಿ ಮುಂದುವರಿದಿದೆ.

ಚೇತರಿಕೆ ದರ 96.80%ಗೆ ಸುಧಾರಣೆ ಕಂಡಿದೆ.

ವಾರದ ಪಾಸಿಟಿವಿಟಿ ದರ 5% ಮಟ್ಟದ ಕೆಳಗೆ ಮುಂದುವರಿದಿದ್ದು, ಅದೀಗ 2.81%ಗೆ ಇಳಿಕೆ ಕಂಡಿದೆ.

ಸತತ 21ನೇ ದಿನದಲ್ಲಿ ದೈನಂದಿನ ಪಾಸಿಟಿವಿಟಿ ದರವೂ 5% ಮಟ್ಟದಿಂದ ಕೆಳಗಿದ್ದು, ಅದೀಗ 2.94%ಗೆ ತಗ್ಗಿದೆ.

ದೇಶಾದ್ಯಂತ ಗಂಟಲು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಇದುವರೆಗೆ ದೇಶದಲ್ಲಿ 40.63 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

***



(Release ID: 1730810) Visitor Counter : 211