ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ತಾಜಾ ಮಾಹಿತಿ

Posted On: 25 JUN 2021 9:21AM by PIB Bengaluru

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೂ 30.79 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 60.73 ಲಕ್ಷ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 51,667 ಹೊಸ ಪ್ರಕರಣಗಳು ವರದಿಯಾಗಿವೆ.

ಭಾರತದ ಸಕ್ರಿಯ ಪ್ರಕರಣಗಳ ಹೊರೆ 6,12,868ಕ್ಕೆ ಕುಸಿದಿದೆ.

ಇಲ್ಲಿಯವರೆಗೆ ದೇಶಾದ್ಯಂತ ಒಟ್ಟು 2,91,28,267 ಚೇತರಿಕೆಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ 64,527 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಸತತ 43ನೇ ದಿನವೂ ದೈನಂದಿನ ಹೊಸ ಪ್ರಕರಣಗಳಿಗಿಂತ ದೈನಂದಿನ ಚೇತರಿಕೆಗಳು ಅಧಿಕ ಸಂಖ್ಯೆಯಲ್ಲಿವೆ.

ಚೇತರಿಕೆ ದರ ಶೇ.96.66ಕ್ಕೆ ಏರಿಕೆಯಾಗಿದೆ.

ಸಾಪ್ತಾಹಿಕ ಪಾಸಿಟಿವಿಟಿ ದರವು 5% ಕ್ಕಿಂತ ಕೆಳಗಿದ್ದು, ಪ್ರಸ್ತುತ ಅದು 3.00% ರಷ್ಟಿದೆ.

ದೈನಂದಿನ ಪಾಸಿಟಿವಿಟಿ ದರವು 2.98% ಇದ್ದು, ಸತತ 18 ದಿನಗಳಿಂದ 5% ಕ್ಕಿಂತ ಕಡಿಮೆ ಇದೆ.

ಪರೀಕ್ಷಾ ಸಾಮರ್ಥ್ಯಗಣನೀಯವಾಗಿ ಏರಿಕೆಯಾಗಿದ್ದು, 39.95 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

***


(Release ID: 1730291) Visitor Counter : 243