ಗೃಹ ವ್ಯವಹಾರಗಳ ಸಚಿವಾಲಯ

ಜಮ್ಮು – ಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳ ನಾಯಕರ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಮಂತ್ರಿ


ಜಮ್ಮು ಮತ್ತು ಕಾಶ್ಮೀರದಲ್ಲಿ ತಳಮಟ್ಟದಲ್ಲಿ ಪ್ರಜಾಪ್ರಭುತ್ವ ಬಲಗೊಳಿಸಲು ಆದ್ಯತೆ: ಪ್ರಧಾನಮಂತ್ರಿ

ಕ್ಷೇತ್ರಗಳ ಪುನರ್ ವಿಂಗಡಣೆ ತ್ವರಿತ ವೇಗದಲ್ಲಿ ನಡೆದರೆ ಚುನಾವಣೆ ನಡೆಸಲು ಸಾಧ್ಯ: ಪ್ರಧಾನಮಂತ್ರಿ

ಜಮ್ಮು – ಕಾಶ್ಮೀರ ಚುನಾಯಿತ ಸರ್ಕಾರ ಪಡೆಯಬೇಕು ಮತ್ತು ಅದು ಜಮ್ಮು ಮತ್ತು ಕಾಶ್ಮೀರಕ್ಕೆ ಶಕ್ತಿ ನೀಡುತ್ತದೆ: ಪ್ರಧಾನಮಂತ್ರಿ

ಜಮ್ಮು- ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಯೋಜನೆಗಳ ಪ್ರಗತಿಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿ

ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ವೈಯಕ್ತಿಕ ಫಲಾನುಭವಿಗಳ ವಲಯಗಳಲ್ಲಿ ಶೇ.90 ರಷ್ಟು ಸಾಧನೆ ಸಂತೃಪ್ತಿದಾಯಕ: ಕೇಂದ್ರ ಗೃಹ ಸಚಿವರು

Posted On: 24 JUN 2021 9:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮುಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಮ್ಮುಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಬ್ಲಾಕ್ ಮತ್ತು ಜಿಲ್ಲಾ ಅಭಿವೃದ್ಧಿ ಮಂಡಳಿಗಳ ರಚನೆ, ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಸ್ಥಾಪನೆ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಉತ್ತೇಜನ ನೀಡುವುದು ಹೇಗೆ ಎನ್ನುವ ಕುರಿತು ಚರ್ಚಿಸಲಾಯಿತು. ನಿಟ್ಟಿನಲ್ಲಿ ಹೇಗೆ ಮುಂದುವರೆಯಬಹುದು ಎನ್ನುವ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಂವಿಧಾನ ಮತ್ತು ಪ್ರಜಾಸತ್ತೆಯನ್ನು ಬಲಗೊಳಿಸುವ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದವರು ತಮ್ಮ ಬದ್ಧತೆ ವ್ಯಕ್ತಪಡಿಸಿದರು.

ಸೌಹಾರ್ದ ವಾತಾವರಣದಲ್ಲಿ ನಡೆದ ಮಾತುಕತೆ ಮತ್ತು ಪ್ರಾಮಾಣಿಕವಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಮ್ಮುಕಾಶ್ಮೀರದಲ್ಲಿ ತಳಮಟ್ಟದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸುವುದು ತಮ್ಮ ಆದ್ಯತೆ ಎಂದು ಅವರು ಒತ್ತಿ ಹೇಳಿದರು. ಕ್ಷೇತ್ರ ಪುನರ್ ವಿಂಗಡಣೆ ತ್ವರಿತ ವೇಗದಲ್ಲಿ ನಡೆದರೆ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ ಮತ್ತು ಜಮ್ಮುಕಾಶ್ಮೀರ ಚುನಾಯಿತ ಸರ್ಕಾರ ಸರ್ಕಾರ ಪಡೆದರೆ ಅದು ಜಮ್ಮ ಮತ್ತು ಕಾಶ್ಮೀರಕ್ಕೆ ಶಕ್ತಿ ನೀಡುತ್ತದೆ ಪ್ರಧಾನಮಂತ್ರಿ ಹೇಳಿದರು.

ಜನತೆ, ವಿಶೇಷವಾಗಿ ಯುವ ಸಮೂಹಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಯಕತ್ವ ಒದಗಿಸಬೇಕು ಮತ್ತು ಅವರ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ಮುಖಂಡರಿಗೆ ಹೇಳಿದರು

ಜಮ್ಮ- ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಯೋಜನೆಗಳ ಪ್ರಗತಿಗೆ ಪ್ರಧಾನಮಂತ್ರಿ ಅವರು ತೃಪ್ತಿ ವ್ಯಕ್ತಪಡಿಸಿದರು. ನಾಯಕರು ಸಹ ಜಮ್ಮುಕಾಶ್ಮೀರದ ಪ್ರಗತಿಗೆ ಒಟ್ಟಾಗಿ ಕೆಲಸಮಾಡಬೇಕು ಮತ್ತು ಯುವ ಜನತೆಯ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಮಾತನಾಡಿ, ಜಮ್ಮುಕಾಶ್ಮೀರದಲ್ಲಿ ಬಹುದಿನಗಳ ನಂತರ ಪಾರದರ್ಶಕತೆಯ ಜತೆಗೆ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ವೈಯಕ್ತಿಕ ಫಲಾನುಭವಿಗಳ ವಲಯಗಳಲ್ಲಿ ಶೇ 90 ರಷ್ಟು ಸಂತೃಪ್ತಿ ವ್ಯಕ್ತವಾಗಿದೆಹಲವಾರು ಪ್ರಮುಖ ರಸ್ತೆಗಳು, ಎರಡು ಹೊಸ ಏಮ್ಸ್, 7 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಜಮ್ಮುಕಾಶ್ಮೀರದಲ್ಲಿ ಹೊಸ ಕೈಗಾರಿಕಾ ನೀತಿಯಡಿ 28.400 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್ ನೊಂದಿಗೆ 4.5 ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಕೈಗಾರಿಕಾ ಬೆಳವಣಿಗೆಗೆ ವೇಗ ನೀಡಲಾಗಿದೆ ಎಂದರು.

ಸಂಸತ್ತಿನಲ್ಲಿ ರಾಜ್ಯೋದಯ ಸ್ಥಾಪನೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕ್ಷೇತ್ರ ಪುನರ್ ವಿಂಗಡಣೆಗೆ ಒತ್ತು ನೀಡಿದ್ದು ಮತ್ತು ಶಾಂತಿಯುತ ಚುನಾವಣೆ ನಡೆಸಿದ್ದು, ಪ್ರಮುಖ ಮೈಲಿಗಲ್ಲುಗಳಾಗಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ಸಭೆಯಲ್ಲಿ ಶ್ರೀ ಫಾರೂಕ್ ಅಬ್ದುಲ್ಲಾ, ಶ‍್ರೀ ಗುಲಾಂ ನಭಿ ಆಜಾದ್, ಶ್ರೀಮತಿ ಮೆಹಬೂಬಾ ಮುಫ್ತಿ, ಶ್ರೀ ಒಮರ್ ಅಬ್ದುಲ್ಲಾ, ಶ್ರೀ ಕವಿಂದೆರ್ ಗುಪ್ತಾ, ಶ್ರೀ ಮುಜಾಫರ್ ಹುಸೇನ್ ಬೇಗ್, ಶ್ರೀ ನಿರ್ಮಲ್ ಸಿಂಗ್, ಶ್ರೀ ತಾರಾ ಚಂದ್, ಶ್ರೀ ಮೊಹದ್ ಅಲ್ತಾಫ್ ಬುಖಾರಿ, ಶ್ರೀ ಸಜ್ಜದ್ ಗನಿ ಲೋನೆ, ಶ್ರೀ ರವೀಂದ್ರರ್ ರೈನಾ, ಶ್ರೀ ಗುಲಾಂ ಅಹಮದ್ ಮೀರ್, ಶ್ರೀ ಮೊಹಮದ್ ಯೂಸೂಫ್ ತರಿಗಮಿ ಮತ್ತು ಶ್ರೀ ಭೀಮ್ ಸಿಂಗ್ ಅವರು ಪಾಲ್ಗೊಂಡಿದ್ದರು.

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಜಮ್ಮುಕಾಶ್ಮೀರದ ಉಪರಾಜ್ಯಪಾಲ ಶ್ರೀ ಮನೋಜ್ ಸಿನ್ಹಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ದೋವೆಲ್, ಪ್ರಧಾನಮಂತ್ರಿಗಳ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

***



(Release ID: 1730209) Visitor Counter : 234