ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಒಪೆಕ್ ಪ್ರಧಾನ ಕಾರ್ಯದರ್ಶಿ ಅವರ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಕಚ್ಚಾ ತೈಲ ಬೆಲೆಗಳ ಬಗ್ಗೆ ಶ್ರೀ ಧರ್ಮೇಂದ್ರ ಪ್ರಧಾನ್ ಕಳವಳ ವ್ಯಕ್ತಪಡಿಸಿದರು


ಉತ್ಪಾದನಾ ನಿರ್ಬಂಧಗಳನ್ನು ಹಂತಹಂತವಾಗಿ ತೆಗೆದುಹಾಕಬೇಕು ಎಂದು ಸಚಿವರು ಒತ್ತಾಯಿಸಿದರು

2021 ರಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಒಪೆಕ್ ಅಭಿಪ್ರಾಯ ಪಟ್ಟಿದೆ

Posted On: 24 JUN 2021 6:35PM by PIB Bengaluru

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕಿನ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ರವರು ಇಂದು ಒಪೆಕ್ ಪ್ರಧಾನ ಕಾರ್ಯದರ್ಶಿ ಎಚ್. ಡಾ.ಮೊಹಮ್ಮದ್ ಸಾನುಸಿ ಬಾರ್ಕಿಂಡೋ ಅವರೊಂದಿಗೆ ಉನ್ನತ ಮಟ್ಟದ ಸಮಾಲೋಚನಾ ಸಭೆ ನಡೆಸಿದರುಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳಿಂದ ಗ್ರಾಹಕರ ಮತ್ತು  ಆರ್ಥಿಕ ಚೇತರಿಕೆಯ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಶ್ರೀ ಪ್ರಧಾನ್ ಕಳವಳ ವ್ಯಕ್ತಪಡಿಸಿದರುಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆ ಭಾರತದ ಮೇಲೆ ಹಣದುಬ್ಬರದ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು..

ಎರಡೂ ಕಡೆಯವರು ಇತ್ತೀಚಿನ ತೈಲ ಮಾರುಕಟ್ಟೆಯ ಬೆಳವಣಿಗೆಗಳು, ತೈಲ ಬೇಡಿಕೆಯ ಚೇತರಿಕೆಯ ಪ್ರವೃತ್ತಿಗಳು, ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳು ಇಂಧನ ಸವಾಲುಗಳನ್ನು ನಿಭಾಯಿಸುವುದು ಸೇರಿದಂತೆ ಪರಸ್ಪರ ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರುಉತ್ಪಾದನಾ ನಿರ್ಬಂಧವನ್ನು ತೆಗೆದುಹಾಕಬೇಕೆಂಬ ಮನವಿಯನ್ನು ಶ್ರೀ ಪ್ರಧಾನ್ ಪುನರುಚ್ಚರಿಸಿದರು. ಕಚ್ಚಾ ತೈಲದ ಬೆಲೆಯನ್ನು ಗ್ರಾಹಕರು ಮತ್ತು ಉತ್ಪಾದಕರ ಹಿತದೃಷ್ಟಿಯಿಂದ ಸಮಂಜಸವಾದ ಮಟ್ಟದಲ್ಲಿ ಇಡಬೇಕು, ಇದು ಬಳಕೆಯಲ್ಲಿ ಚೇತರಿಕೆಗೆ ಕಾರಣವಾಗುತ್ತದೆ ಎಂದು ಶ್ರೀ ಪ್ರಧಾನ್ ಹೇಳಿದರು.  

ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ಭಾರತಕ್ಕೆ ನೀಡಿದ ಬೆಂಬಲಕ್ಕಾಗಿ, ವಿಶೇಷವಾಗಿ ಔಷಧಿಗಳ ಸರಬರಾಜು, ಐಎಸ್ಒ ಕಂಟೇನರ್ಗಳು, ದ್ರವ ವೈದ್ಯಕೀಯ ಆಮ್ಲಜನಕ ಮತ್ತು ಅಗತ್ಯ ಪೆಟ್ರೋಲಿಯಂ ಉತ್ಪನ್ನಗಳನ್ನು ಒದಗಿಸಿದ್ದಕ್ಕಾಗಿ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ (ಒಪೆಕ್ ) ಪ್ರಧಾನ ಕಾರ್ಯದರ್ಶಿ ಡಾ. ಬಾರ್ಕಿಂಡೋ ಮತ್ತು ಪ್ರಮುಖ ಮಿತ್ರರಾದ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಶ್ರೀ ಪ್ರಧಾನ್ ಧನ್ಯವಾದ ಅರ್ಪಿಸಿದರು. 2021 ರಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಮಾರುಕಟ್ಟೆಯಾಗಲಿದೆ ಎಂದು ವಿಶ್ಲೇಷಣೆ ಮಾಡಿರುವ ಒಪೆಕ್ ಅಧ್ಯಯನದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.

ಮೊದಲ ಉನ್ನತ ಮಟ್ಟದ ಒಪೆಕ್-ಇಂಡಿಯಾ ಎನರ್ಜಿಯಿಂದ ಭಾರತವು ತಾಂತ್ರಿಕ ಸಹಕಾರ, ತಜ್ಞರ ವಿನಿಮಯ ಮತ್ತು ಒಪೆಕ್ ನೊಂದಿಗೆ ಇತರ ಸಹಯೋಗಗಳನ್ನು ವಿಸ್ತರಿಸುತ್ತಿದೆ.

***


(Release ID: 1730141) Visitor Counter : 192