ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ ಮೊದಲ ದಿನ ನೀಡಲಾದ ಲಸಿಕೆಯ ಡೋಸ್‌ಗಳಲ್ಲಿ  ಶೇ. 64ರಷ್ಟನ್ನು  ಗ್ರಾಮೀಣ ಭಾರತದಲ್ಲಿ ನೀಡಲಾಗಿದೆ


ಗ್ರಾಮೀಣ ಪ್ರದೇಶದಲ್ಲಿ ಲಸಿಕೆಯ ವ್ಯಾಪ್ತಿಯನ್ನು ಹೆಚ್ಚಿಸುವ ಬಗ್ಗೆ ಸಾಕಷ್ಟು ಒತ್ತಿ ಹೇಳಲಾಗಿದೆ, ಗ್ರಾಮೀಣ ಪ್ರದೇಶವನ್ನು ಸಂಪೂರ್ಣವಾಗಿ ಲಸಿಕೆ ವ್ಯಾಪ್ತಿಗೆ ಒಳಪಡಿಸುವುದು ಸಾಧ್ಯ: ಡಾ. ವಿ.ಕೆ. ಪಾಲ್

ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮುಂದೆ ಬರುವಂತೆ ಮಾಡಬೇಕಿದೆ: ಡಾ. ಪಾಲ್

प्रविष्टि तिथि: 23 JUN 2021 2:31PM by PIB Bengaluru

ಪರಿಷ್ಕೃತ ಲಸಿಕೆ ಮಾರ್ಗಸೂಚಿಗಳು ಜಾರಿಗೆ ಬಂದ ಮೊದಲ ದಿನ, ಸೋಮವಾರ (ಜೂನ್ 21, 2021) ದೇಶಾದ್ಯಂತ ನೀಡಲಾದ ಒಟ್ಟು ಕೋವಿಡ್-19 ಲಸಿಕೆ ಡೋಸ್ಗಳಲ್ಲಿ  ಗ್ರಾಮೀಣ ಪ್ರದೇಶದ ಪಾಲು ಶೇ. 63.68ರಷ್ಟಿದೆ. ದಿನದಲ್ಲಿ ನೀಡಲಾದ ಒಟ್ಟು ಲಸಿಕೆಗಳಲ್ಲಿ 56.09 ಲಕ್ಷ ಡೋಸ್ಗಳನ್ನು  ಗ್ರಾಮೀಣ ಲಸಿಕೆ ಕೇಂದ್ರಗಳಿಂದ ನೀಡಿದರೆ,  ನಗರ ಪ್ರದೇಶಗಳಲ್ಲಿ 31.9 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

ಮಂಗಳವಾರ ನವದೆಹಲಿಯಲ್ಲಿ ಕೋವಿಡ್-19 ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ ಪಾಲ್ ಅವರು ಗ್ರಾಮೀಣ ಭಾಗದಲ್ಲಿ ಲಸಿಕೆಯ ವ್ಯಾಪ್ತಿ ಹೆಚ್ಚಳಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ತಿಳಿಸಿದರು.  "ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ನೀಡುವಿಕೆ ವೇಗ ಪಡೆದಿದೆ ಮತ್ತು ಉತ್ತಮ ಪ್ರಮಾಣದಲ್ಲಿದೆ. ಸೋಮವಾರದಿಂದ (ಜೂನ್ 21, 2021) ದೇಶದಲ್ಲಿ ನಿತ್ಯ ನೀಡಲಾಗುತ್ತಿರುವ ಲಸಿಕೆ ಪ್ರಮಾಣವು ದೇಶದ ಗ್ರಾಮೀಣ ಮತ್ತು ನಗರಗಳ ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿದೆ. ಲಸಿಕೆ ಅಭಿಯಾನವನ್ನು ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೂ ಕೊಂಡೊಯ್ಯಬಹುದು ಎಂಬುದನ್ನು ಇದು ಸಾಬೀತುಪಡಿಸಿದೆ,ʼʼ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಲಸಿಕೆ ನೀಡುವಿಕೆ ಸಾಧ್ಯವಿದೆ

ದೇಶದ ಶೇ. 71ರಷ್ಟು ಲಸಿಕಾ ಕೇಂದ್ರಗಳು ಗ್ರಾಮೀಣ ಪ್ರದೇಶಗಳಲ್ಲೇ ಇವೆ ಮತ್ತು ಕಳೆದ ಕೆಲವು ವಾರಗಳಲ್ಲಿ ನೀಡಲಾದ ಒಟ್ಟು ಲಸಿಕೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲೇ ನೀಡಲಾಗಿದೆ ಎಂದು ಡಾ ಪಾಲ್ ಮಾಹಿತಿ ನೀಡಿದರು. "ಹೆಚ್ಚು ಹೆಚ್ಚು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಬಳಕೆ, ಲಸಿಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಜನರು ಅದನ್ನು ಸ್ವೀಕರಿಸುವ ಮೂಲಕ, ಹೆಚ್ಚಿನ ಲಸಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಮೂಲಕ ನಾವು ನಿಟ್ಟಿನಲ್ಲಿ ಹೆಚ್ಚಿನ ವಿಶ್ವಾಸವನ್ನು ಗಳಿಸುತ್ತಿದ್ದೇವೆ. ಇದು ಗ್ರಾಮೀಣ ಪ್ರದೇಶಗಳನ್ನು ಸಂಪೂರ್ಣವಾಗಿ ಲಸಿಕೆ ಕಾರ್ಯಕ್ರಮದ ವ್ಯಾಪ್ತಿಗೆ ತರಲು ಸಾಧ್ಯ ಎಂಬ ವಿಶ್ವಾಸವನ್ನು ಮೂಡಿಸಿದೆ,ʼʼ ಎಂದರು. ಸೋಮವಾರ ಇಷ್ಟು ದೊಡ್ಡ ಸಂಖ್ಯೆಯಲ್ಲಿ (88.09 ಲಕ್ಷ) ಲಸಿಕೆ ನೀಡಿದರೂ ʻಕೋವಿನ್ʼ ವೇದಿಕೆಯಲ್ಲಿ ಯಾವುದೇ ತಾಂತ್ರಿಕ ತೊಂದರೆ ಕಂಡುಬರಲಿಲ್ಲ ಎಂದು ಅವರು ಗಮನ ಸೆಳೆದರು.

ನೂತನ ಲಸಿಕಾ ಅಭಿಯಾನದಲ್ಲಿ ಸರಕಾರಿ ಲಸಿಕಾ ಕೇಂದ್ರಗಳು ಮಹತ್ತರ ಪಾತ್ರವನ್ನು ವಹಿಸಿವೆ ಎಂದು ಡಾ. ಪಾಲ್ ಹೇಳಿದರು. "ಜೂನ್ 21, 2021 ರಂದು ಶೇ. 92ರಷ್ಟು ಲಸಿಕೆಗಳನ್ನು ಸರಕಾರಿ ಕೇಂದ್ರಗಳಲ್ಲೇ ನೀಡಲಾಯಿತು. ಇದು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಶಕ್ತಿ, ದೃಢತೆ ಮತ್ತು ಜನರನ್ನು ತಲುಪುವ ಸಾಮರ್ಥ್ಯಕ್ಕೆ ಉದಾಹರಣೆಯಾಗಿದೆ." COVID-19 ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ  ಅನುಷ್ಠಾನದ ಅನುಭವಗಳು ಕಠಿಣವಾಗಿವೆ ಎಂದು ಅವರು ಹೇಳಿದರು.   

ಲಸಿಕೆ ಪಡೆಯಲು ಹೆಚ್ಚಿನ ಮಹಿಳೆಯರನ್ನು ಪ್ರೇರೇಪಿಸಬೇಕಿದೆ

ಸೋಮವಾರ ಲಸಿಕೆ ಪಡೆದವರಲ್ಲಿ ಶೇ. 46ರಷ್ಟು ಮಹಿಳೆಯರು, ಸುಮಾರು ಶೇ. 53 ರಷ್ಟು ಪುರುಷರು ಎಂದು ಡಾ ಪಾಲ್ ಮಾಹಿತಿ ನೀಡಿದರು. " ಲಿಂಗ-ಅಸಮತೋಲನವನ್ನು ಸಂಬಂಧಪಟ್ಟ ಎಲ್ಲ ಸ್ಥಳಗಳಲ್ಲೂ ನಾವು ಸರಿದೂಗಿಸಬೇಕಿದೆಲಸಿಕೆ ಪಡೆಯಲು ಹೆಚ್ಚಿನ ಮಹಿಳೆಯರು ಮುಂದೆ ಬರುವಂತೆ ನಾವು ಮಾಡಬೇಕಿದೆ.” ಎಂದರು.

***


(रिलीज़ आईडी: 1729832) आगंतुक पटल : 270
इस विज्ञप्ति को इन भाषाओं में पढ़ें: English , Urdu , Marathi , हिन्दी , Punjabi , Odia , Tamil , Telugu , Malayalam