ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಮತ್ತು  ಶಿಕ್ಷಣ ರಾಜ್ಯ ಸಚಿವ  ಶ್ರೀ ಸಂಜಯ್ ಧೋತ್ರೆ ಜಂಟಿಯಾಗಿ ಟಾಯ್‌ ಕಥಾನ್ 2021 ಗ್ರ್ಯಾಂಡ್ ಫಿನಾಲೆಯನ್ನು ಉದ್ಘಾಟಿಸಿದರು


ಟಾಯ್‌ ಕಥಾನ್ 2021 ಭಾರತವನ್ನು 100 ಬಿಲಿಯನ್ ಡಾಲರ್ ಜಾಗತಿಕ ಆಟಿಕೆ ಉತ್ಪಾದನಾ ಮಾರುಕಟ್ಟೆಯಲ್ಲಿ ಸ್ಥಾನ ಗಳಿಸಿಕೊಡುವ ಗುರಿ ಹೊಂದಿದೆ

Posted On: 22 JUN 2021 5:08PM by PIB Bengaluru

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಮತ್ತು ರಾಜ್ಯ ಶಿಕ್ಷಣ ಸಚಿವ ಶ್ರೀ ಸಂಜಯ್ ಧೋತ್ರೆ ಅವರು ಇಂದು ಟಾಯ್ಕಥಾನ್ 2021 ಗ್ರ್ಯಾಂಡ್ ಫಿನಾಲೆಯನ್ನು ವಾಸ್ತವೋಪಮವಾಗಿ ಉದ್ಘಾಟಿಸಿದರು. ಶ್ರೀ ಅಮಿತ್ ಖರೆ, ಉನ್ನತ ಶಿಕ್ಷಣ, ಶಿಕ್ಷಣ ಸಚಿವಾಲಯ; ಶ್ರೀ ಉಪೇಂದ್ರ ಪ್ರಸಾದ್ ಸಿಂಗ್, ಜವಳಿ ಸಚಿವಾಲಯದ ಕಾರ್ಯದರ್ಶಿ; ಎಐಸಿಟಿಇ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುದೇ; ಶಿಕ್ಷಣ ಇನ್ನೋವೇಶನ್ ಸೆಲ್ ಮುಖ್ಯ ಇನ್ನೋವೇಶನ್ ಅಧಿಕಾರಿ ಡಾ. ಅಭಯ್ ಜೆರೆ; ಡಾ.ಎಂ.ಪಿ. ಪೂನಿಯಾ ಎಐಸಿಟಿಇ ಉಪಾಧ್ಯಕ್ಷ ಮತ್ತು ಎಂಒಇ ಇನ್ನೋವೇಶನ್ ಸೆಲ್ ನಿರ್ದೇಶಕ ಡಾ.ಮೊಹಿತ್ ಗಂಭೀರ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಟಾಯ್ಕಾಥಾನ್ 2021 ಅನ್ನು ಶಿಕ್ಷಣ ಸಚಿವಾಲಯವು ಜಂಟಿಯಾಗಿ ಇತರ ಐದು ಸಚಿವಾಲಯಗಳ ಸಹಯೋಗದೊಂದಿಗೆ ಆಯೋಜಿಸುತ್ತಿದೆ: ಅವುಗಳೆಂದರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಮತ್ತು ಜವಳಿ ಸಚಿವಾಲಯ. ಅಂತರ ಮಂತ್ರಿಮಂಡಲದ ಟಾಯ್ಕಥಾನ್ ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಅಸಾಧಾರಣವಾದ ಉತ್ತಮ ಗುಣಮಟ್ಟದ ಜೊತೆಗೆ ಆರ್ಥಿಕ, ಕೈಗೆಟುಕುವ ಬೆಲೆಯ, ಸುರಕ್ಷಿತ, ಪರಿಸರ ಸ್ನೇಹಿಯಾಗಿರುವ ಸ್ಥಳೀಯ ವಸ್ತುಗಳನ್ನು ಬಳಸಿಕೊಂಡು ಹೊಸ ಮತ್ತು ನವೀನ ಆಟಿಕೆಗಳನ್ನು ರೂಪಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ. ಸ್ಮೃತಿ ಜುಬಿನ್ ಇರಾನಿ ರಾಷ್ಟ್ರದ ಮೊದಲ ಆಟಿಕೆ ಹ್ಯಾಕಥಾನ್ ಅನ್ನು ಜಗತ್ತಿಗೆ ಸಮರ್ಪಿಸಲಾಗಿರುವ ಕ್ಷಣವನ್ನು ಐತಿಹಾಸಿಕವೆಂದು ಗುರುತಿಸಿದ್ದಾರೆ. ಟಾಯ್ಕಥಾನ್ 2021 ರಲ್ಲಿ ವಿಚಾರಗಳನ್ನು ಸಲ್ಲಿಸಿದ 17749 ತಂಡಗಳನ್ನು ಸಚಿವರು ಅಭಿನಂದಿಸಿದರು. ಟಾಯ್ಕಥಾನ್ ಗ್ರ್ಯಾಂಡ್ ಫಿನಾಲೆಯಿಂದ ಇನ್ನೂ ಅನೇಕ ವಿಚಾರಗಳನ್ನು ವಾಣಿಜ್ಯೀಕರಿಸಬೇಕೆಂದು ಅವರು ಆಶಿಸಿದರು. ಆಟಿಕೆಗಳು ಮಕ್ಕಳ ಸೈಕೋಮೋಟರ್ ಸಾಮರ್ಥ್ಯಗಳ ಮೇಲೆ ಭಾರಿ ಪರಿಣಾಮ ಬೀರುತ್ತವೆ, ಅವರ ನೆನಪಿನಶಕ್ತಿಯ ಕೌಶಲ್ಯದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮಗುವಿನ ಭವಿಷ್ಯದ ಸ್ವಾಯತ್ತತೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಭಾರಿ ಜವಾಬ್ದಾರಿಯನ್ನು ಉಂಟುಮಾಡುತ್ತವೆ ಎಂದು ಅವರು ಒತ್ತಿ ಹೇಳಿದರು.

ನಮ್ಮ ಮಕ್ಕಳು ಆಡುತ್ತಿರುವ 85% ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು ಅವುಗಳನ್ನು ಪ್ರಧಾನವಾಗಿ ಪ್ಲಾಸ್ಟಿಕ್ನಿಂದ ತಯಾರಿಸಲಾಗುತ್ತದೆ ಎಂದು ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಸುಸ್ಥಿರ ಅಭಿವೃದ್ಧಿಗೆ ಜಾಗತಿಕ ಬದ್ಧತೆಯ ಬಗ್ಗೆ ಪ್ರಧಾನ ಮಂತ್ರಿಗಳಿಂದ ಸ್ಫೂರ್ತಿ ಪಡೆದು ಸುಸ್ಥಿರ ಆಟಿಕೆಗಳನ್ನು ತಯಾರಿಸಲು ಸಂಶೋಧನಾ ಸಂಸ್ಥೆಗಳು ಮತ್ತು ಆಟಿಕೆ ತಯಾರಕರನ್ನು ಸಚಿವರು ಆಹ್ವಾನಿಸಿದರು. ಭಾರತವು ಎಂಜಿನಿಯರಿಂಗ್ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು ನಮ್ಮ ತಂತ್ರಜ್ಞರು ಆಟಿಕೆ ಕ್ಷೇತ್ರವನ್ನು ಎಲೆಕ್ಟ್ರಾನಿಕ್ ಆಟಿಕೆಗಳಿಗೆ ಸಾಕಷ್ಟು ಮತ್ತು ನವೀನ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.

ಭಾರತೀಯ ಆಟಿಕೆ ಮಾರುಕಟ್ಟೆ ಸುಮಾರು 1.5 ಬಿಲಿಯನ್ ಡಾಲರ್ ನಷ್ಟಿದೆ  ಮತ್ತು ಪ್ರಸ್ತುತ ನಾವು ಹೆಚ್ಚಿನ ಭಾಗವನ್ನು ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಶ್ರೀ ಧೋತ್ರೆ ಹೇಳಿದರು. ಜಾಗತಿಕ ಆಟಿಕೆ ಮಾರುಕಟ್ಟೆ 100 ಬಿಲಿಯನ್ ಡಾಲರ್ ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ, ಕ್ಷೇತ್ರದಲ್ಲಿ ನಮ್ಮ ಪಾಲನ್ನು ಹೊಂದಲು ನಾವು ನಮ್ಮ ಸೃಜನಶೀಲ, ನವೀನ ಮತ್ತು ಉತ್ಪಾದನಾ ಶಕ್ತಿಯನ್ನು ಉಪಯೋಗಿಸಬೇಕು. ಟಾಯ್ಕಥಾನ್ ನಮ್ಮ ಯುವ ನವೀನ ಮನಸ್ಸುಗಳಿಗೆ ಭಾರತದಲ್ಲಿ ಆಟಿಕೆಗಳನ್ನು ತಯಾರಿಸುವ ಹಾದಿಯನ್ನು ಮುನ್ನಡೆಸಲು ಅವಕಾಶವನ್ನು ಒದಗಿಸುತ್ತದೆ. ಗೊಂಬೆಗಳ ಬಳಕೆಯು ಕಲಿಕೆಯಲ್ಲಿ, ವಿಜ್ಞಾನ ಕಲಿಕೆಯಲ್ಲಿ ಮತ್ತು ಇತರ ವಿಷಯಗಳ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಸಲಹೆ ನೀಡಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಉಪೇಂದ್ರ ಪ್ರಸಾದ್ ಸಿಂಗ್ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಮೌಲ್ಯಗಳು, ನೀತಿಗಳು ಮತ್ತು ಜಾಗೃತಿ ಮೂಡಿಸುವಲ್ಲಿ ಆಟಿಕೆಗಳ ವಾಣಿಜ್ಯ ಮತ್ತು ಶಿಕ್ಷಣದ ಮಹತ್ವವನ್ನು ಎತ್ತಿ ತೋರಿಸಿದರು. ನಮ್ಮಲ್ಲಿ ಬಹಳ ದೊಡ್ಡ ಸಂಖ್ಯೆಯ ಕ್ಲಸ್ಟರ್ಗಳು ಮತ್ತು ಉತ್ತಮ ಕುಶಲಕರ್ಮಿಗಳು ಇದ್ದಾರೆ, ಆದರೆ ಅಗತ್ಯವಿರುವ ಒಂದು ವಿಷಯವೆಂದರೆ ನಮ್ಮ ದೇಶಕ್ಕೆ ಮಾತ್ರವಲ್ಲದೆ ವಿದೇಶಕ್ಕೂ ಬದಲಾಗುತ್ತಿರುವ ಅಗತ್ಯಕ್ಕೆ ಅನುಗುಣವಾಗಿ ಬೇಕಾದ ನಾವೀನ್ಯತೆ. ಟಾಯ್ಕಥಾನ್ನಲ್ಲಿ ಹೊರಹೊಮ್ಮುವ ಆಲೋಚನೆಗಳು ಉದ್ದೇಶಕ್ಕಾಗಿ ಬಹಳ ಉಪಯುಕ್ತವಾಗುತ್ತವೆ ಎಂದು ಅವರು ಆಶಿಸಿದರು.

ಆಮದು ಮಾಡಿದ ಆಟಿಕೆಗಳ ಆರ್ಥಿಕ ಹೊರೆಯು ದೊಡ್ಡದಾಗಿದೆ ಮತ್ತು ಇದು ಆತ್ಮನಿರ್ಭರ ಭಾರತ್ಗೆ ಅಡ್ಡಿಯಾಗಲಿದೆ ಎಂದು ಶ್ರೀ ಅಮಿತ್ ಖರೆ ಕಳವಳ ವ್ಯಕ್ತಪಡಿಸಿದರು. ಆಟಿಕೆಗಳ ಆಮದಿನ ಮೇಲಿನ ನಿರ್ಬಂಧವು ನಮ್ಮ ಕುಶಲಕರ್ಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ 20205 + 3 + 3 + 4 ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ ಮತ್ತು ಇದು ಆಟಿಕೆಗಳು ಮತ್ತು ಆಟಗಳ ಮೂಲಕ ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಯನ್ನು ಬೇಡುತ್ತದೆ, ಇಲ್ಲಿ ಯುವ ಮನಸ್ಸುಗಳನ್ನು ನಮ್ಮ ಸಂಸ್ಕೃತಿ ಮತ್ತು ಇತಿಹಾಸದೊಂದಿಗೆ ಜೋಡಿಸುವಲ್ಲಿ ಪ್ರಾದೇಶಿಕ ಭಾರತೀಯ ಆಟಿಕೆಗಳ ಮಹತ್ವ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಉದ್ಘಾಟನಾ ಸಂದರ್ಭದಲ್ಲಿ ಎಐಸಿಟಿಇ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುದೇ ಮಾತನಾಡಿ, ಆರಂಭಿಕ ಮಕ್ಕಳ ಶಿಕ್ಷಣವು ಒತ್ತಡದಿಂದ ಇರಬಾರದು ಮತ್ತು ಆಟಿಕೆಗಳು, ಕಥೆಗಳು ಮತ್ತು ಆಟಗಳ ಮೂಲಕ ಮೋಜಿನ ಆಧಾರಿತ ಕಲಿಕೆಯಾಗಿರಬೇಕು. ಅದೇ ಸಮಯದಲ್ಲಿ ಮನರಂಜನೆ ಮತ್ತು ಶಿಕ್ಷಣದ ಎಡುಟೈನ್ಮೆಂಟ್ ಅಗತ್ಯವಿದೆ ಎಂದು ಅವರು ಹೇಳಿದರು. ಟಾಯ್ಕಥಾನ್ಗೆ ಅನುಕೂಲವಾಗುವಂತೆ ಭಾಗವಹಿಸುವವರು, ಮೌಲ್ಯಮಾಪಕರು ಮತ್ತು ಸಂಘಟಕರನ್ನು ಒಂದೇ ವೇದಿಕೆಯಲ್ಲಿ ತರಬಲ್ಲ ದೃಢವಾದ ಡಿಜಿಟಲ್ ವೇದಿಕೆ (ಪ್ಲಾಟ್ಫಾರ್ಮ್) ಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಸಂಘಟನಾ ತಂಡವನ್ನು ಅವರು ಶ್ಲಾಘಿಸಿದರು.

ಶಿಕ್ಷಣ ಇನ್ನೋವೇಶನ್ ಸೆಲ್ ಮುಖ್ಯ ಇನ್ನೋವೇಶನ್ ಅಧಿಕಾರಿ ಡಾ. ಅಭಯ್ ಜೆರೆಯವರು ಗಣ್ಯರನ್ನು ಸ್ವಾಗತಿಸಿದರು ಮತ್ತು ಭಾಗವಹಿಸುವವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ ನಿರ್ದೇಶಕ ಡಾ.ಮೊಹಿತ್ ಗಂಭೀರ್ ಅವರು ತಳಮಟ್ಟದ ನಾವೀನ್ಯತೆಯ ಮಹತ್ವವನ್ನು ಒತ್ತಿ ಹೇಳಿದರು. ಇಂದಿನ ಕಾಲದಲ್ಲಿ ಭವಿಷ್ಯದ ಆವಿಷ್ಕಾರಗಳು ಪಿರಮಿಡ್ ತಳದಿಂದ ಹುಟ್ಟುತ್ತವೆ ಎಂದು ಚೆನ್ನಾಗಿ ಅರ್ಥೈಸಲಾಗಿದೆ - ಅಲ್ಲಿ ಸಾಮಾನ್ಯ ಪುರುಷರು ಮತ್ತು ಮಹಿಳೆಯರು ತಮ್ಮ ಅಗತ್ಯಗಳಿಗಾಗಿ ಹೊಸದನ್ನು ಹುಡುಕುತ್ತಾರೆ. ಪಿರಮಿಡ್ ನೆಲೆ ಸಮಾಜದ ಸಮಗ್ರ ಅಭಿವೃದ್ಧಿಗೆ ಬಹಳ ನಿರ್ಣಾಯಕವಾಗಿದೆ ಮತ್ತು ತರಬೇತಿ ಪಡೆಯಬೇಕಾಗಿದೆ.

ಹ್ಯಾಕಥಾನ್ ಅನ್ನು ಆರಂಭದಲ್ಲಿ ಭೌತಿಕ ಮತ್ತು ಡಿಜಿಟಲ್ ಮೋಡ್ನಲ್ಲಿ ಕಲ್ಪಿಸಲಾಗಿತ್ತುಈಗಿನ ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಮತ್ತು ಭಾಗವಹಿಸುವವರ ಸುರಕ್ಷತೆಯ ಕಾರಣದಿಂದಾಗಿ ಭೌತಿಕ ಆವೃತ್ತಿಯನ್ನು ಮುಂದೂಡಲಾಗಿದೆ ಮತ್ತು ಈಗ ಕೇವಲ 22 ನೇ ಜೂನ್ನಿಂದ 24 ಜೂನ್ 2021 ರವರೆಗೆ ಡಿಜಿಟಲ್ ಆವೃತ್ತಿಯನ್ನು ಮಾತ್ರ ನಡೆಸಲಾಗುತ್ತಿದೆ. ಟಾಯ್ಕಥಾನ್ 2021 ಮುಖ್ಯವಾಗಿ ಕಡಿಮೆ ಬೆಲೆಯ ಸ್ಥಳೀಯ ವಸ್ತುಗಳನ್ನು ಬಳಸಿಕೊಂಡು ಕೈಗೆಟುಕುವ ಬೆಲೆಯ, ಸುರಕ್ಷಿತ ಮತ್ತು ಪರಿಸರ ಸ್ನೇಹಿ, ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗೆ ಅಸಾಧಾರಣವಾದ ಉತ್ತಮ ಗುಣಮಟ್ಟದ. ಹೊಸ ಮತ್ತು ನವೀನ ಆಟಿಕೆಗಳನ್ನು ರೂಪಿಸುವುದರ ಮೇಲೆ ಕೇಂದ್ರೀಕರಿಸಿದೆ

ನಡೆಯುತ್ತಿರುವ ಟಾಯ್ ಹ್ಯಾಕಥಾನ್ 3 ಟ್ರಾಕ್ ಗಳನ್ನು ಹೊಂದಿದೆ:

ಟ್ರ್ಯಾಕ್ 1ಜೂನಿಯರ್ ಮಟ್ಟದಲ್ಲಿ ಭಾಗವಹಿಸುವವರಿಗೆ, ಅಂದರೆ ಪ್ರಾಥಮಿಕವಾಗಿ ಶಾಲಾ ವಿದ್ಯಾರ್ಥಿಗಳಿಗೆ. ಅವರು ಮುಖ್ಯವಾಗಿ 0-3 ವರ್ಷ ಮತ್ತು 4-10 ವರ್ಷದ ಮಕ್ಕಳಿಗೆ ಆಟಿಕೆಗಳನ್ನು ವಿನ್ಯಾಸಗೊಳಿಸಲು ಗಮನಹರಿಸುತ್ತಾರೆ.

ಟ್ರ್ಯಾಕ್ 2 - ಸೀನಿಯರ್ ಮಟ್ಟದಲ್ಲಿ ಭಾಗವಹಿಸುವವರಿಗೆ, ಅಂದರೆ ಉನ್ನತ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳಿಗೆ. ಗುಂಪು 0-3 ವರ್ಷಗಳು, 4-10 ಮತ್ತು 11 ವರ್ಷಗಳು ಮತ್ತು ಮೇಲ್ಪಟ್ಟವರಿಗೆ  ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತದೆ. ವಿಭಾಗವು ಪ್ರಾಥಮಿಕವಾಗಿ ಎಲೆಕ್ಟ್ರಾನಿಕ್ಸ್, ಸೆನ್ಸರ್ಗಳು, ಮೆಕಾಟ್ರಾನಿಕ್ಸ್ ಮತ್ತು ಕೃತಕ ಬುದ್ಧಿಬತ್ತೆ (ಎಐ_ ಮತ್ತು ಎಂಎಲ್ ವಿಧಾನಗಳು, ಎಆರ್-ವಿಆರ್-ಎಕ್ಸ್ಆರ್ ಮತ್ತು ರೊಬೊಟಿಕ್ಸ್ ಆಧಾರಿತ ಆಟಿಕೆಗಳ ಮೇಲೆ ಕೇಂದ್ರೀಕರಿಸಿದೆ.

ಟ್ರ್ಯಾಕ್ 3  -  ನವೋದ್ಯಮ ವೃತ್ತಿಪರ ಮಟ್ಟಕ್ಕಾಗಿ. ಇದು ಒಟ್ಟಾರೆ ಆವಿಷ್ಕಾರ ಮತ್ತು ಮೂಲಮಾದರಿಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಮೂಲಮಾದರಿಗಳು ಆಟಿಕೆ ಉದ್ಯಮವನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಟಿಕೆಗಳ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮೂರು ದಿನಗಳ ಟಾಯ್ಕಥಾನ್ 2021 ಗ್ರ್ಯಾಂಡ್ ಫಿನಾಲೆಯಲ್ಲಿ, ಎಲ್ಲಾ ಟ್ರ್ಯಾಕ್ಗಳ ಭಾಗವಹಿಸುವ ತಂಡಗಳಿಗೆ ದಿನದ ಅರ್ಧಭಾಗದಲ್ಲಿ ವಿಶೇಷ ಮಾರ್ಗದರ್ಶನ ಅಧಿವೇಶನದ ಮೂಲಕ ಮಾರ್ಗದರ್ಶನ ನೀಡಲಾಗುವುದು ಮತ್ತು ನಂತರ ಅವುಗಳನ್ನು ದಿನದ ನಂತರದ ಅರ್ಧಭಾಗದಲ್ಲಿ ಆರಂಭಿಕ ಎರಡು ದಿನಗಳವರೆಗೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ನಂತರ  ಟಾಯ್ಕಾಥಾನ್ 2021 ಡಿಜಿಟಲ್ ಆವೃತ್ತಿಗೆ ವಿಜೇತರನ್ನು ಘೋಷಿಸಲು ಭಾಗವಹಿಸುವ ತಂಡಗಳಿಗೆ ಒಂದು ತೀರ್ಪು ನೀಡುವ ಸುತ್ತು  ಇರುತ್ತದೆ. ಉದ್ದೇಶಕ್ಕಾಗಿ, ಶಿಕ್ಷಣ ಇನ್ನೋವೇಶನ್ ಸೆಲ್ 1567 ಭಾಗವಹಿಸುವ ತಂಡಗಳಿಗೆ 645 ಮಾರ್ಗದರ್ಶಕರು ಮತ್ತು ಮೌಲ್ಯಮಾಪಕರನ್ನು ತೊಡಗಿಸಿದೆ. ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯನ್ನು ಬೆಂಬಲಿಸಲು 85 ನೋಡಲ್ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ, ಇವು ಅಂತರ-ಸಚಿವಾಲಯದ ಟಾಯ್ಕಥಾನ್ ಸಂಘಟನಾ ಸಂಸ್ಥೆಗಳಾಗಿವೆ.

***



(Release ID: 1729553) Visitor Counter : 209