ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ 19 ಲಸಿಕೆ:  ತಪ್ಪು ಗ್ರಹಿಕೆ Vs. ವಾಸ್ತವ 

Posted On: 22 JUN 2021 4:09PM by PIB Bengaluru

ನೇರ ರಾಜ್ಯ ಸಂಗ್ರಹಣೆಯ ಅಡಿಯಲ್ಲಿ ಲಸಿಕೆಗಳ ಸಂಪೂರ್ಣ ಸರಬರಾಜನ್ನು ಜೂನ್ 21, 2021 ಮೊದಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸುವುದನ್ನು ಭಾರತ ಸರ್ಕಾರವು ಖಚಿತಪಡಿಸಿತ್ತು.

ಲಸಿಕೆ ತಯಾರಕರೊಂದಿಗೆ ನೇರ ರಾಜ್ಯ ಸಂಗ್ರಹಣೆಯ ಡೋಸ್ ಗಳು ಬಾಕಿ ಉಳಿದಿಲ್ಲ

ಹೆಚ್ಚುವರಿಯಾಗಿ, ಭಾರತ ಸರ್ಕಾರವು ನಿಗದಿಯಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಉಚಿತ ಡೋಸ್ ಗಳನ್ನು  ನೀಡಿದೆ

ನಡೆಯುತ್ತಿರುವ ಉಚಿತ ಕೋವಿಡ್ -19 ಲಸಿಕೆ ಅಭಿಯಾನದಲ್ಲಿ  ಮಧ್ಯೆ ದೆಹಲಿ ಸರ್ಕಾರವು 18-44 ವಯಸ್ಸಿನವರಿಗೆ ಯಾವುದೇ ಉಚಿತ ಲಸಿಕೆಗಳನ್ನು ಸರಬರಾಜು ಮಾಡಿಲ್ಲ ಎಂದು ಕೆಲವು ಮಾಧ್ಯಮ ವರದಿಗಳು ಬಂದಿವೆ.

ನೇರ ರಾಜ್ಯ ಸಂಗ್ರಹಣೆಯಡಿಯಲ್ಲಿ ಕೋವಿಡ್ 19 ಲಸಿಕೆಗಳ ಸಂಪೂರ್ಣ ಸರಬರಾಜನ್ನು ಸಂಬಂಧಪಟ್ಟ ರಾಜ್ಯಗಳಿಗೆ ಜೂನ್ 21, 2021 ಮೊದಲು ದೊರಕುವಂತೆ ಭಾರತ ಸರ್ಕಾರ ಖಾತರಿಪಡಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.

ರಾಜ್ಯ ಸಂಗ್ರಹಣೆಯ ಮಾಹಿತಿಯ ಪ್ರಕಾರ, ನಿಗದಿತ 5.6 ಲಕ್ಷ ಡೋಸ್ ಗಳ  ನೇರ ರಾಜ್ಯ ಸಂಗ್ರಹಣೆಯನ್ನು ಲಸಿಕೆ ತಯಾರಕರು ಜೂನ್ 21 ಮೊದಲು ದೆಹಲಿಗೆ ಸರಬರಾಜು ಮಾಡಿದ್ದಾರೆ. ಇದಲ್ಲದೆ, ಹೆಚ್ಚುವರಿ 8.8 ಲಕ್ಷ ಡೋಸ್ಗಳನ್ನು ಭಾರತ ಸರ್ಕಾರದ ಖರೀದಿಯಡಿ ಉಚಿತವಾಗಿ ದೆಹಲಿಗೆ ಒದಗಿಸಲಾಗಿದೆ ಮತ್ತು ಮತ್ತಷ್ಟನ್ನು 2021 ಜೂನ್ ಅಂತ್ಯದ ವೇಳೆಗೆ ಪೂರೈಸಲ್ಪಡುತ್ತವೆ22 ಜೂನ್  2021 ಅಂಕಿಅಂಶದ ಪ್ರಕಾರ  ದೆಹಲಿಯಲ್ಲಿ ಬಾಕಿ ಹಾಗೂ ಬಳಕೆಯಾಗದ ಇನ್ನೂ 9.9 ಲಕ್ಷಕ್ಕೂ ಹೆಚ್ಚಿನ ಡೋಸ್ ಗಳು ಲಭ್ಯವಿವೆ

2021 ಜೂನ್ 21 ರಿಂದ ಜಾರಿಗೆ ಬರುವಂತೆ, ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರದ ಸರಬರಾಜುಗಳು, ಸರಬರಾಜಿನ ಪ್ರಕಾರವನ್ನು ಗಣನೆಗೆ ತೆಗೆದುಕೊಳ್ಳದೆ, 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ನೀಡಬೇಕಾಗಿರುವುದರಿಂದ ಎಲ್ಲಾ ವರ್ಗದ ಆದ್ಯತೆಯ ಗುಂಪುಗಳು ಈಗ ಸಮಾನವಾಗಿವೆ ಮತ್ತು ರಾಜ್ಯಗಳು ಗೊತ್ತುಪಡಿಸಿದ ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರದಲ್ಲಿ ಲಸಿಕೆಯನ್ನು  ಉಚಿತವಾಗಿ  ನೀಡಲಾಗುವುದು.

***


(Release ID: 1729550) Visitor Counter : 237