ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕನಿಷ್ಠ ವೇತನ ಮತ್ತು ನ್ಯಾಷನಲ್ ಪ್ಲೋರ್ ವೇತನ ನಿಗದಿ ಸಂಬಂಧ ರಚಿಸಲಾಗಿರುವ ತಜ್ಞರ ಸಮಿತಿಯಿಂದ ಶೀಘ್ರವೇ ವರದಿ ಸಲ್ಲಿಕೆ

Posted On: 19 JUN 2021 1:24PM by PIB Bengaluru

ಕೇಂದ್ರ ಸರ್ಕಾರ ಕನಿಷ್ಠ ವೇತನ  ಮತ್ತು ನ್ಯಾಷನಲ್ ಪ್ಲೋರ್ ವೇಜಸ್ ನಿಗದಿಗೆ ಸರ್ಕಾರಕ್ಕೆ ತಾಂತ್ರಿಕ ಮಾಹಿತಿ ಮತ್ತು ಶಿಫಾರಸ್ಸುಗಳನ್ನು ನೀಡಲು ಹೆಸರಾಂತ ಅರ್ಥ ಶಾಸ್ತ್ರಜ್ಞ ಪ್ರೊ. ಅಜಿತ್ ಮಿಶ್ರಾ ಅಧ್ಯಕ್ಷತೆಯಲ್ಲಿ  ತಜ್ಞರ ಸಮಿತಿಯನ್ನು ರಚಿಸಿದೆ. ಈ ತಜ್ಞರ ಸಮಿತಿಯ ಅವಧಿ ಮೂರು ವರ್ಷಗಳಾಗಿದೆ. ಕನಿಷ್ಠ ವೇತನ ನಿಗದಿ ಮತ್ತು ನ್ಯಾಷನಲ್ ಫ್ಲೋರ್ ವೇತನ ನಿಗದಿಗೆ ಸಂಬಂಧಿಸಿದಂತೆ ಸರ್ಕಾರದಿಂದ ವಿಳಂಬ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಹಾಗೂ ಕೆಲವು ಪಾಲುದಾರರು ಅಭಿಪ್ರಾಯಪಟ್ಟಿದ್ದಾರೆ ಎಂಬುದು  ಸರ್ಕಾರದ ಗಮನಕ್ಕೆ ಬಂದಿದೆ.
ಈ ಮೂಲಕ ಸ್ಪಷ್ಡಪಡಿಸುವುದೆಂದರೆ, ಸರ್ಕಾರಕ್ಕೆ ವಿಳಂಬ ಮಾಡುವಂತಹ ಯಾವುದೇ ಉದ್ದೇಶವಿಲ್ಲ ಮತ್ತು ತಜ್ಞರ ಸಮಿತಿ ಎಷ್ಟು ಸಾಧ್ಯವೂ ಅಷ್ಟು ಶೀಘ್ರ ಸರ್ಕಾರಕ್ಕೆ ತನ್ನ  ಶಿಫಾರಸುಗಳನ್ನು ಸಲ್ಲಿಸಲಿದೆ. ಸರ್ಕಾರ ತಜ್ಞರ ಸಮಿತಿಗೆ ಮೂರು ವರ್ಷಗಳ ಕಾಲಾವಕಾಶ ಏಕೆ ನೀಡಿದೆ ಎಂದರೆ, ಕನಿಷ್ಠ ವೇತನ ಮತ್ತು ನ್ಯಾಷನಲ್ ಫ್ಲೋರ್ ವೇಜಸ್ ನಿಗದಿ ನಂತರವೂ ಸಹ, ಸರ್ಕಾರ ಕನಿಷ್ಠ ವೇತನ ಮತ್ತು ರಾಷ್ಟ್ರೀಯ ಫ್ಲೋರ್ ವೇತನಕ್ಕೆ ಸಂಬಂಧಿಸಿದಂತೆ ಅಗತ್ಯಬಿದ್ದಾಗ ತಾಂತ್ರಿಕ ಮಾಹಿತಿ/ಸಲಹೆಗಳನ್ನು ಪಡೆದುಕೊಳ್ಳಲಿದೆ. ಸಮಿತಿಯ ಮೊದಲ ಸಭೆ 2021ರ ಜೂನ್ 14ರಂದು ನಡೆದಿದೆ ಮತ್ತು ಎರಡನೆಯ ಸಭೆ 2021ರ ಜೂನ್ 29ರಂದು ನಿಗದಿಯಾಗಿದೆ.

****



(Release ID: 1728575) Visitor Counter : 180