ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸೆನ್ಸಿಟ್ ರಾಪಿಡ್ ಕೋವಿಡ್-19 ಎಜಿ ಕಿಟ್

Posted On: 19 JUN 2021 9:19AM by PIB Bengaluru

ಸದ್ಯದ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತು ತೀವ್ರವಾಗಿ ಬಾಧಿತವಾಗಿದೆ. ಕೋವಿಡ್ -19 ಸೋಂಕಿನ ಸಮಯದಲ್ಲಿ ಕಂಡುಬರುವ ರೋಗ ಲಕ್ಷಣಗಳ ತೀವ್ರತೆಯು ಕಂಡುಹಿಡಿಯಲಾಗದಿಂದ ಹಿಡಿದು ಮಾರಾಣಾಂತಿಕವಾಗಿರುತ್ತದೆ. ತ್ವರಿತ ಪರೀಕ್ಷಾ ವಿಧಾನವು ಅಂಟಿಜನ್ ಪರೀಕ್ಷೆಗಳನ್ನು ಒಳಗೊಂಡಿದೆ, ಅದು ಅಲ್ಪಾವಧಿಯಲ್ಲಿಯೇ ನೂರಾರು ಮಾದರಿಗಳ ಫಲಿತಾಂಶವನ್ನು ನೀಡಲಿದೆ. ಇಂತಹ ಕ್ಷಿಪ್ರ ಪರೀಕ್ಷೆಗಳನ್ನು ನಮ್ಮ ದೇಶದ ಜನರಿಗೆ ಲಭ್ಯವಾಗುವಂತೆ ಮಾಡುವಲ್ಲಿ ಭಾರತ ಸರ್ಕಾರದ ಪ್ರಯತ್ನಗಳು ಶ್ಲಾಘನೀಯ. ಹಲವು ಹೊಸ ಆವಿಷ್ಕಾರಿಗಳು ಮತ್ತು ಉದ್ಯಮಿಗಳು ನಿಖರವಾದ, ಕೈಗೆಟುಕುವ ಮತ್ತು ಎಲ್ಲ ಲಭ್ಯವಾಗುವಂತಹ ಪರೀಕ್ಷಾ ಕಿಟ್ ಗಳನ್ನು ಅಭಿವೃದ್ಧಿಪಡಿಸಲು ಅಹರ್ನಿಶಿ ಕೆಲಸ ಮಾಡುತ್ತಿದ್ದಾರೆ, ಆರೋಗ್ಯ ಕಾರ್ಮಿಕರಿಗೆ ಇಂತಹ ಕಠಿಣ ಸಮಯದಲ್ಲಿ ಸುಲಭವಾಗಿ ಪತ್ತೆ ಹಚ್ಚಲು ಸಹಾಯ ಮಾಡುವುದಕ್ಕಾಗಿ ಮಾತ್ರವಲ್ಲದೆ, ಭಾರತದಲ್ಲಿ ಜೈವಿಕ ತಂತ್ರಜ್ಞಾನ ಪೂರಕ ವ್ಯವಸ್ಥೆಯನ್ನು ವೃದ್ಧಿಸಲು ನೆರವಾಗುತ್ತಿದ್ದಾರೆ.

ಕೋವಿಡ್-19 ಸಂಶೋಧನಾ ಒಕ್ಕೂಟದ ಆಶ್ರಯದಲ್ಲಿ, ಡಿಬಿಟಿ- ಬಿಐಆರ್ ಎಸಿ ಬೆಂಬಲದೊಂದಿಗೆ 15 ನಿಮಿಷಗಳಲ್ಲಿ ಸಾರ್ಸ್ ಸಿಒವಿ-2 ನ್ಯೂಕ್ಲಿಯೋಕ್ಯಾಪ್ಸಿಡ್ ಪ್ರೋಟೀನ್ ನ ಗುಣಾತ್ಮಕ ಪತ್ತೆಗೆ  ಸೆನ್ಸಿಟ್  ರಾಪಿಡ್ ಕೋವಿಡ್-19 ಎಜಿ ಕಿಟ್ ಅನ್ನು ಯುಬಿಯೋ ಬಯೋಟೆಕ್ನಾಲಜಿ ಸಿಸ್ಟಂ ಪ್ರವೈಟ್ ಲಿಮಿಟೆಡ್  ಅಭಿವೃದ್ಧಿಪಡಿಸಿದೆ.  ಸೊಂಕು ಪತ್ತೆಗಾಗಿ ವ್ಯಕ್ತಿಯಿಂದ ನ್ಯಾಸೋಫೆರೆಂಜಿಯಲ್ ಸ್ವಾಬ್ ಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಐಸಿಎಂಆರ್ ಅನುಮೋದಿಸಿರುವ ಈ ಕಿಟ್, ಕ್ರೋಮ್ಯಾಟೋ ಗ್ರಾಫಿಕ್ ಇಮ್ಯುನೋಅಸ್ಸೆ ಆಗಿದ್ದು, ಅದರಲ್ಲಿ ಆರೋಗ್ಯ ರಕ್ಷಣಾ ಸಿಬ್ಬಂದಿ ಫಲಿತಾಂಶವನ್ನು ಓದಬಹುದಾಗಿದೆ. ಈ ಪರೀಕ್ಷೆಯು ಸ್ವಾಂಡ್ ವಿಚ್ ಇಮ್ಯೂನೋಅಸ್ಸೆಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಒಂದು ಜೋಡಿ ಮೋನೊಕ್ಲೊನಲ್ ಪ್ರತಿಕಾಯಗಳನ್ನು ಬಳಸುತ್ತದೆ. ಇದು ಕೋವಿಡ್-19 ನಿರ್ದಿಷ್ಟ ಭಾಗಕ್ಕೆ ಸ್ಪಂದಿಸಿದಾಗ ಬಣ್ಣದ ರೇಖೆಯ ಗೋಚರವಾಗುತ್ತದೆ. ಕಿಟ್ ಗಳು ಕ್ರಮವಾಗಿ ಶೇ.86ರಷ್ಟು ಮತ್ತು ಶೇ.100ರಷ್ಟು ಸೂಕ್ಷ್ಮತೆ ಮತ್ತು ಖಚಿತ ಫಲಿತಾಂಶ ನೀಡುತ್ತದೆ. ಹಾಗು 24 ತಿಂಗಳ ಜೀವಿತಾವಧಿ ಹೊಂದಿರುತ್ತದೆ. ಸೆನ್ಸಿಟ್  ರಾಪಿಡ್ ಕೋವಿಡ್-19 ಎಜಿ ಕಿಟ್ ಅನ್ನು ಯಶಸ್ವಿ ವಾಣಿಜ್ಯಕರಣ ಗೊಳಿಸಲಾಗಿದೆ.

ಇಂತಹ ತ್ವರಿತ ಪರೀಕ್ಷೆಗಳು ಸೋಂಕಿತ ವ್ಯಕ್ತಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಅನುವು ಮಾಡಿಕೊಡುತ್ತದೆ ಮತ್ತು  ಸಮಯವನ್ನು ಉಳಿಸುತ್ತದೆ ಹಾಗೂ ಸೋಂಕಿತ ವ್ಯಕ್ತಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡಲು ಸಾಧ್ಯವಾಗಲಿದೆ.

***************

ಹೆಚ್ಚಿನ ಮಾಹಿತಿಗೆ : ಡಿಬಿಟಿ/ಬಿಐಆರ್ ಎಸಿ  ಇ-ಸಂವಹನ ಕೋಶವನ್ನು ಸಂಪರ್ಕಿಸಿ

@DBTIndia@BIRAC_2012

www.dbtindia.gov.in

www.birac.nic.in

 

ಡಿಬಿಟಿ ಕುರಿತು

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಬರುವ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ಭಾರತದಲ್ಲಿ ಕೃಷಿ, ಆರೋಗ್ಯ ರಕ್ಷಣೆ, ಪ್ರಾಣಿ ವಿಜ್ಞಾನಗಳು, ಪರಿಸರ ಮತ್ತು ಉದ್ಯಮದಲ್ಲಿ ಜೈವಿಕ ತಂತ್ರಜ್ಞಾನ ಅಳವಡಿಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಬಿಐಆರ್ ಎಸಿ ಕುರಿತು

ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ಸಹಾಯಕ ಮಂಡಳಿ (ಬಿಐಆರ್ ಎಸಿ), ಲಾಭದ ಉದ್ದೇಶವಿಲ್ಲದೆ ಸೆಕ್ಷನ್ 8, ಶೆಡ್ಯೂಲ್ ಬಿ ಅಡಿ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಅಡಿ ಸ್ಥಾಪನೆಯಾಗಿರುವ ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ.  ಇದು ಅಭಿವೃದ್ಧಿ ಉತ್ಪನ್ನ ಅಭಿವೃದ್ಧಿ ಅಗತ್ಯತೆಗಳಿಗೆ ಸಂಬಂಧಿಸಿದಂತೆ ಕಾರ್ಯತಂತ್ರದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸಲು ವಿಕಾಸಗೊಳ್ಳುತ್ತಿರುವ ಜೈವಿಕ ತಂತ್ರಜ್ಞಾನ ಉದ್ಯಮವನ್ನು ಬಲಪಡಿಸಲು ಮತ್ತು ಸುಗಮಗೊಳಿಸಲು ಮುಖಾಮುಖಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

***


(Release ID: 1728569) Visitor Counter : 280