ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಉದ್ಯೋಗ ಆಧಾರ ಒಡಂಬಡಿಕೆಯ ಮಾನ್ಯತೆಯನ್ನು 2021 ರ ಮಾರ್ಚ್ 31 ರಿಂದ 2021 ರ ಡಿಸೆಂಬರ್ 31ರವರೆಗೆ ವಿಸ್ತರಿಸಿದ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ
Posted On:
17 JUN 2021 7:19PM by PIB Bengaluru
ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ದಿನಾಂಕ 26.06.2020ರ ಮೂಲ ಅಧಿಸೂಚನೆ ಸಂಖ್ಯೆ ಎಸ್.ಒ. 2119 (ಇ) ಗೆ ಸಂಬಂಧಿಸಿ ದಿನಾಂಕ 16.06.2021 ರ 2347(ಇ) ಅನ್ವಯ ತಿದ್ದುಪಡಿಯನ್ನು ಹೊರಡಿಸಿದ್ದು ಇ.ಎಂ. ಭಾಗ –II ಮತ್ತು ಯು.ಎ.ಎಂ.ಗಳ ಮಾನ್ಯತಾ ಅವಧಿಯನ್ನು 31.03.2021 ರಿಂದ 31.12.2021 ರವರೆಗೆ ವಿಸ್ತರಿಸಿದೆ. ಇದರಿಂದ ಇ.ಎಂ. ಭಾಗ –II ಮತ್ತು ಯು.ಎ.ಎಂ.ಗಳನ್ನು ಹೊಂದಿರುವವರಿಗೆ ಈಗಿರುವ ವಿವಿಧ ಯೋಜನೆಗಳ ಪ್ರಸ್ತಾವನೆಗಳ ಅನ್ವಯ ಪ್ರಯೋಜನಗಳನ್ನು ಮತ್ತು ಎಂ.ಎಸ್.ಎಂ.ಇ. ಯ ಆದ್ಯತಾ ವಲಯ ಮುಂಗಡ ಪ್ರಯೋಜನಗಳ ಪ್ರೋತ್ಸಾಹಧನ ಸಹಿತ ಪಡೆದುಕೊಳ್ಳುವುದಕ್ಕೆ ಅವಕಾಶವಾಗುತ್ತದೆ.
ಎಂ.ಎಸ್.ಎಂ.ಇ.ಗಳು ಚಾಲ್ತಿಯಲ್ಲಿರುವ ಕೋವಿಡ್ -19 ಪರಿಸ್ಥಿತಿಯಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳನ್ನು ಮತ್ತು ವಿವಿಧ ಎಂ.ಎಸ್.ಎಂ.ಇ. ಸಂಘಟನೆಗಳಿಂದ ಬಂದಿರುವ ಮನವಿಗಳು, ಹಣಕಾಸು ಸಂಸ್ಥೆಗಳು ಮತ್ತು ಎಂ.ಎಸ್.ಎಂ.ಇ. ವಲಯದ ಹಿತಾಸಕ್ತಿಗಳೊಂದಿಗೆ ವ್ಯವಹರಿಸುತ್ತಿರುವ ಸರಕಾರಿ ಇಲಾಖೆಗಳು ನೀಡಿರುವ ಮನವಿಗಳ ಹಿನ್ನೆಲೆಯಲ್ಲಿ ಈ ತಿದ್ದುಪಡಿಯನ್ನು ಮಾಡಲಾಗಿದೆ.
ಈಗಿರುವ ಇ.ಎಂ. ಭಾಗ –II ಮತ್ತು ಯು.ಎ.ಎಂ.ಗಳನ್ನು ಹೊಂದಿರುವವರು 2020 ರ ಜುಲೈ 1 ರಂದು ಆರಂಭಿಸಲಾದ ಉದ್ಯಮ ನೊಂದಾವಣೆಯ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಸರಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ, ಆ ಮೂಲಕ ಎಂ.ಎಸ್.ಎಂ.ಇ. ಗಳನ್ನು ಬಲಪಡಿಸುವುದಲ್ಲದೆ ಅದರಿಂದ ಅವುಗಳ ತ್ವರಿತ ಪುನಶ್ಚೇತನಕ್ಕೆ ಕಾರಣವಾಗಿ ಅವುಗಳ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ ಮತ್ತು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಆಸಕ್ತ ಉದ್ಯಮಗಳು https://udyamregistration.gov.in ರಲ್ಲಿ ಉಚಿತವಾಗಿ ಯಾವುದೇ ದಾಖಲೆಗಳಿಲ್ಲದೆ ನೊಂದಾಯಿಸಿಕೊಳ್ಳಬಹುದು. ಉದ್ಯಮ ಪೋರ್ಟಲಿನಲ್ಲಿ ನೊಂದಾವಣೆಗೆ ಬರೇ ಪಾನ್ ಮತ್ತು ಆಧಾರ್ ಮಾತ್ರ ಅಗತ್ಯವಾಗಿರುತ್ತದೆ. ಇದುವರೆಗೆ ಅಂದರೆ 17.06.2021 ರಂದು (5.26.43 ಗಂಟೆ ).ವರೆಗೆ ಈ ಪೋರ್ಟಲ್ 33,16,210 ಉದ್ಯಮಗಳ ನೋಂದಣೆ ಮತ್ತು ವರ್ಗೀಕರಣಕ್ಕೆ ಅನುಕೂಲತೆಗಳನ್ನು ಒದಗಿಸಿದೆ.
***
(Release ID: 1728076)
Visitor Counter : 277