ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಮಕ್ಕಳಿಗಾಗಿ 14 ಅಡ್ಡ-ಅಂಗವೈಕಲ್ಯ ಪೂರ್ವ ಮಧ್ಯಪ್ರವೇಶ ಕೇಂದ್ರಗಳಿಗೆ ವರ್ಚುವಲ್  ಮೂಲಕ ಶ್ರೀ ತಾವರಚಂದ್ ಗೆಹ್ಲೋಟ್ ಚಾಲನೆ

“ಅಡ್ಡ ಅಂಗವೈಕಲ್ಯ ಪೂರ್ವ ಮಧ್ಯಪ್ರವೇಶ ಕೇಂದ್ರಗಳ ಸ್ಥಾಪನೆಯಿಂದಾಗಿ ಎಲ್ಲಾ ರೀತಿಯ ಅಂಗವೈಕಲ್ಯಗಳ ಗುರುತಿಸುವಿಕೆ ಮತ್ತು ವೈದ್ಯಕೀಯ ಹಾಗು ಪುನರ್ವಸತಿ  ಸೇವೆಗಳು ನಮ್ಮ ಸಂಸ್ಥೆಗಳಲ್ಲಿ ಒಂದೇ ಸೂರಿನಡಿ ಲಭ್ಯವಾಗುತ್ತವೆ” - ಶ್ರೀ ತಾವರಚಂದ್ ಗೆಹ್ಲೋಟ್

Posted On: 17 JUN 2021 5:20PM by PIB Bengaluru

ತೀರಾ ಅಪೂರ್ವ ಉಪಕ್ರಮವಾಗಿ, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವರಾದ ಶ್ರೀ ತಾವರಚಂದ ಗೆಹ್ಲೋಟ್ ಅವರು ಡಿ..ಪಿ.ಡಬ್ಲ್ಯು.ಡಿ ಅಡಿಯಲ್ಲಿ ಬರುವ 7 ರಾಷ್ಟ್ರೀಯ ಸಂಸ್ಥೆಗಳು ಮತ್ತು 7 ಸಂಯುಕ್ತ ಪ್ರಾದೇಶಿಕ ಕೇಂದ್ರಗಳಲ್ಲಿ ಸ್ಥಾಪನೆಯಾಗಿರುವ    14 ಅಡ್ದ ಅಂಗವೈಕಲ್ಯಗಳನ್ನು ಮುಂಚಿತವಾಗಿಯೇ ಮಧ್ಯಪ್ರವೇಶ ಮಾಡುವ ಕೇಂದ್ರಗಳನ್ನು ಹೊಸದಿಲ್ಲಿಯಲ್ಲಿಂದು ವರ್ಚುವಲ್ ಮೂಲಕ ಉದ್ಘಾಟಿಸಿದರು. ಕೇಂದ್ರಗಳು ದಿವ್ಯಾಂಗರಿಗೆ ವಿವಿಧ ಅಂಗವೈಕಲ್ಯಗಳ ಪತ್ತೆ ಮತ್ತು ಗುರುತಿಸುವಿಕೆ, ಪುನರ್ವಸತಿ, ಆಪ್ತ ಸಮಾಲೋಚನೆ, ಚಿಕಿತ್ಸಾ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸುತ್ತವೆ.

ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಖಾತೆ ಸಹಾಯಕ ಸಚಿವ ಶ್ರೀ ಕೃಷ್ಣ ಪಾಲ್ ಗುರ್ಜರ್, ಶ್ರೀ ರಾಂದಾಸ್ ಅಠಾವಳೆ ಮತ್ತು ಶ್ರೀ ರತನ್ ಲಾಲ್ ಕಟಾರಿಯಾ ಸಂದರ್ಭದಲ್ಲಿ ಹಾಜರಿದ್ದರು. ಅಂಗವೈಕಲ್ಯ ಇರುವ ವ್ಯಕ್ತಿಗಳ ಸಶಕ್ತೀಕರಣ ಇಲಾಖೆಯ (ದಿವ್ಯಾಂಗನ್) ಕಾರ್ಯದರ್ಶಿ ಶ್ರೀಮತಿ ಅಂಜಲಿ ಭಾವ್ರಾ, ಡಿ..ಪಿ.ಡಬ್ಲ್ಯು.ಡಿ.ಎಂ.ಎಸ್. ಜಂಟಿ ಕಾರ್ಯದರ್ಶಿ ತಾರಿಕಾ ರಾಯ್ಡಿ..ಪಿ.ಡಬ್ಲ್ಯು.ಡಿ.. ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ತಾವರಚಂದ ಗೆಹ್ಲೋಟ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದ ಸರಕಾರದಿವ್ಯಾಂಗರಿಗೆ ಸದಾ ಗರಿಷ್ಟ ಆದ್ಯತೆ ನೀಡಿದೆ ಎಂದರು. ಕೇಂದ್ರ ಸರಕಾರವು ಅಂಗವೈಕಲ್ಯ ಇರುವ ವ್ಯಕ್ತಿಗಳ ಹಕ್ಕುಗಳ ಕಾಯ್ದೆ,(ಆರ್.ಪಿ.ಡಬ್ಯ್ಲು.ಡಿ.) 2016ನ್ನು ಅಂಗವಿಕಲತೆ ಇರುವ ವ್ಯಕ್ತಿಗಳ ಹಕ್ಕುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಭೆಯ ನಿರ್ಣಯದ ಮಾದರಿಯಲ್ಲಿ ಅನುಷ್ಟಾನಕ್ಕೆ ತಂದಿದೆ. ಇದು ಅಂಗವೈಕಲ್ಯ ಇರುವ ವ್ಯಕ್ತಿಗಳಿಗೆ ಎಲ್ಲರನ್ನು ಒಳಗೊಳ್ಳುವ ಸಮಾಜವನ್ನು ಕಲ್ಪಿಸಿಕೊಡುತ್ತದೆ ಎಂದರು.

 

ಅಂಗವೈಕಲ್ಯ ಇರುವ ಮಕ್ಕಳನ್ನು ಅಥವಾ ಮುಂದೆ ಅಂಗವೈಕಲ್ಯಕ್ಕೀಡಾಗಬಹುದಾದ  ಅಪಾಯ ಇರುವ ಶಿಶುಗಳನ್ನು ಗುರುತಿಸಿ ಅವರಿಗೆ ಸಾಕಷ್ಟು ಮುಂಚಿತವಾಗಿಯೇ ನೆರವು ನೀಡಬೇಕಾದ ಅಗತ್ಯ ಇದೆ ಎಂದ ಸಚಿವ ಗೆಹ್ಲೋಟ್ ಅವರು ಮೂಲಕ ಶಿಶುಗಳ ಸಂಪೂರ್ಣ ಅಭಿವೃದ್ಧಿಯನ್ನು ಖಾತ್ರಿಪಡಿಸಬೇಕು ಎಂದರು. ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಮೊದಲ ಹಂತದಲ್ಲಿ ನಾವು 14 ಅಡ್ಡ ಅಂಗವೈಕಲ್ಯ (ಮುಂಚಿತವಾಗಿ ಮಧ್ಯಪ್ರವೇಶ) ಕೇಂದ್ರಗಳನ್ನು ನಮ್ಮ ಸಂಸ್ಥೆಗಳಲ್ಲಿ ಆರಂಭ ಮಾಡಿದ್ದೇವೆ ಎಂದರು. 2022 ರಲ್ಲಿ ನಾವು ಇಂತಹ ಕೇಂದ್ರಗಳನ್ನು ಎಲ್ಲಾ ಸಿ.ಆರ್.ಸಿ. ಗಳಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ. ಇದರ ಫಲಿತಾಂಶವಾಗಿ ಅಡ್ಡ ಅಂಗವೈಕಲ್ಯ-ಪೂರ್ವ ಮಧ್ಯಪ್ರವೇಶ ಕೇಂದ್ರಗಳು ಸುಮಾರು 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ಅಸ್ತಿತ್ವಕ್ಕೆ ಬರಲಿವೆ  ಎಂದೂ ಸಚಿವರು ವಿವರಿಸಿದರು.

  

  

ನಮ್ಮ ರಾಷ್ಟ್ರೀಯ ಸಂಸ್ಥೆ ಮತ್ತು ಸಿ.ಆರ್.ಸಿ. ಗಳ ಅಡಿಯಲ್ಲಿ ದಿವ್ಯಾಂಗರಿಗೆ ಪುನರ್ವಸತಿ ಸೇವೆಗಳನ್ನು ಒದಗಿಸಲಾಗುತ್ತಿದೆ. ಆದರೆ ರಾಷ್ಟ್ರೀಯ ಸಂಸ್ಥೆಗಳಲ್ಲಿ ನಿರ್ದಿಷ್ಟ ಅಂಗವೈಕಲ್ಯಕ್ಕೆ ಮಾತ್ರ ವ್ಯವಸ್ಥೆ ಇದೆ. ನಮ್ಮ ಹೊಸ ಉಪಕ್ರಮದ ಮೂಲಕಸ್ಥಾಪನೆಯಿಂದಾಗಿ ಎಲ್ಲಾ ರೀತಿಯ ಅಂಗವೈಕಲ್ಯಗಳ ಗುರುತಿಸುವಿಕೆ ಮತ್ತು ವೈದ್ಯಕೀಯ ಹಾಗು ಪುನರ್ವಸತಿ  ಸೇವೆಗಳು ನಮ್ಮ ಸಂಸ್ಥೆಗಳಲ್ಲಿ ಒಂದೇ ಸೂರಿನಡಿ ಲಭ್ಯವಾಗುತ್ತವೆಎಂದವರು ತಿಳಿಸಿದರು.

..ಸಿ. ಕೈಪಿಡಿಯೊಂದನ್ನು ಸಚಿವಾಲಯ ಸಿದ್ಧಪಡಿಸಿದೆ, ಅದರಲ್ಲಿ ಕೇಂದ್ರಗಳ ರಚನೆ ಮತ್ತು ಲಭ್ಯವಾಗುವ ಸೇವೆಗಳ ವಿವರವಾದ ಮಾಹಿತಿಯನ್ನು ಒದಗಿಸಲಾಗಿದೆ ಮತ್ತು ಮಧ್ಯಪ್ರವೇಶದ ಮಾಹಿತಿಯೂ ಇದೆ ಎಂದೂ ಶ್ರೀ ಗೆಹ್ಲೋಟ್ ವಿವರಿಸಿದರು. ಇದು ಇತರ ಪ್ರದೇಶಗಳಲ್ಲಿಯೂ ಹಲವು ಬಗೆಯ ಅಂಗವೈಕಲ್ಯ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲು ಸಹಾಯವಾಗಬಹುದು ಎಂದು ನಮಗೆ ಭರವಸೆ ಇದೆ ಎಂದವರು ಹೇಳಿದರು.

ಕೇಂದ್ರಗಳಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಸಾಧ್ಯ ಇರುವಷ್ಟು ಹೆಚ್ಚು ಜನರಿಗೆ ಮಾಹಿತಿ ಲಭ್ಯವಾಗುವಂತೆ ಮಾಡಲು ರಾಜ್ಯ ಮಟ್ಟದಲ್ಲಿ ಜಾಗೃತಿ ಮೂಡಿಸುವಂತೆ ನಾವು ರಾಜ್ಯ ಸರಕಾರಗಳನ್ನು ಕೋರುತ್ತೇವೆ. ಮತ್ತು ನಮ್ಮ 14 ಬಗೆಯ ಅಂಗವೈಕಲ್ಯ   ಚಿಕಿತ್ಸಾ ಕೇಂದ್ರಗಳನ್ನು ಮಾದರಿಯಾಗಿ ಅನುಸರಿಸಿ ಇಂತಹ ಕೇಂದ್ರಗಳನ್ನು ರಾಜ್ಯಗಳು ಸ್ಥಾಪಿಸಬೇಕು ಎಂದು ನಾವು ಮನವಿ ಮಾಡುತ್ತೇವೆ ಎಂದೂ ಸಚಿವರು ಹೇಳಿದರು.

ಅಂಗವೈಕಲ್ಯ ಇರುವ ಮಕ್ಕಳಿಗಾಗಿ ಇರುವ ಪೂರ್ವ ಮಧ್ಯಪ್ರವೇಶ ಕೇಂದ್ರಗಳನ್ನು ಕುರಿತ ಕೈಪಿಡಿಯನ್ನು ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಶ್ರೀ ಕೃಷ್ಣ ಪಾಲ್ ಗುರ್ಜರ್ ಅಂಗವೈಕಲ್ಯ ಇರುವ ವ್ಯಕ್ತಿಗಳನ್ನು ಮುಂಚಿತವಾಗಿಯೇ ಗುರುತಿಸುವುದು ಮತ್ತು ಸೂಕ್ತ ಚಿಕಿತ್ಸೆ ಒದಗಿಸುವುದು ಪ್ರಮುಖ ಅರ್ಥಪೂರ್ಣ ಸಂಗತಿ. ಅಂತಹ ಅಪಾಯ ಇರುವ ವ್ಯಕ್ತಿಗಳನ್ನು ಮುಂಚಿತವಾಗಿಯೇ ಗುರುತಿಸಿ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇರುವಂತಹವರನ್ನು ಗುರುತಿಸುವುದು ಬಹಳ ಮುಖ್ಯ ಸಂಗತಿ ಎಂದು ನಾವು ಭಾವಿಸುತ್ತೇವೆ ಎಂದರು. ಅಂತಹ ಸಂದರ್ಭದಲ್ಲಿ ಅವರ ಪೋಷಕರಿಗೆ ಅವಶ್ಯ ನೆರವು ನೀಡುವುದು ಮತ್ತು ಆಪ್ತ ಸಮಾಲೋಚನೆ ನಡೆಸುವುದೂ ಅಷ್ಟೇ ಮುಖ್ಯ . ಉದ್ದೇಶಕ್ಕಾಗಿ ನಾವು ಅಂಗವೈಕಲ್ಯ  ಚಿಕಿತ್ಸಾ  ಕೇಂದ್ರ ತೆ ರಾಮದಾಸ್ ಅಠಾವಳೆ ಮಾತನಾಡಿ ದೇಶದಲ್ಲಿ ಇದೇ ಮೊದಲ ಬಾರಿಗೆ ಚಿಕಿತ್ಸಾ ಕೇಂದ್ರಗಳು ಸ್ಥಾಪನೆಯಾಗುತ್ತಿರುವುದು ಚಾರಿತ್ರಿಕ ಸಂದರ್ಭ ಎಂದರು. ಕೇಂದ್ರಗಳ ಉದ್ದೇಶ ಅಂಗ ವೈಕಲ್ಯ ಇರುವ ದಿವ್ಯಾಂಗರನ್ನು ಭಾರತದಲ್ಲಿ ಸ್ವಾವಲಂಬಿಯಾಗಿಸುವುದು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಏಕೀಭವಿಸುವಂತೆ ಮಾಡುವುದಾಗಿದೆ ಎಂದರು. 0-6 ವರ್ಷದೊಳಗಿನ ಮಕ್ಕಳಲ್ಲಿ ಅಂಗವೈಕಲ್ಯವನ್ನು ಕಡಿಮೆ ಮಾಡುವಲ್ಲಿ ಹಲವು ಬಗೆಯ ಅಂಗವೈಕಲ್ಯ ಚಿಕಿತ್ಸಾ ಕೇಂದ್ರಗಳು ಯಶಸ್ವಿಯಾಗುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು ಕೇಂದ್ರಗಳು ಅವುಗಳ ಸೇವೆಯಲ್ಲಿ ಉನ್ನತ ಗುಣಮಟ್ಟವನ್ನು ನಿರ್ಮಾಣ ಮಾಡುತ್ತವೆ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

ಇನ್ನಷ್ಟು ವಿವರಗಳನ್ನು ನೀಡಿದ ಶ್ರೀ ರತ್ತನ್ ಲಾಲ್ ಕಟಾರಿಯಾ ಎಲ್ಲ ಬಗೆಯ ಅಂಗವೈಕಲ್ಯ ಸರಿಪಡಿಸುವ ಚಿಕಿತ್ಸಾ ಕೇಂದ್ರಗಳು ಮಕ್ಕಳು ಸ್ನೇಹಿ ಪರಿಸರದೊಂದಿಗೆ ಅತ್ಯಂತ ಜಾಗರೂಕತೆಯಿಂದ ವಿನ್ಯಾಸ ಮಾಡಲ್ಪಟ್ಟಿವೆ , ಇದರಿಂದ ಕೇಂದ್ರಗಳು ಆಕರ್ಷಕವಾಗಿವೆ ಮತ್ತು ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತಿವೆ ಎಂದರು. ಇದು ಮಕ್ಕಳು ಚಿಕಿತ್ಸೆಯನ್ನು ಹಿತವಾದ ವಾತಾವರಣದಲ್ಲಿ ಪಡೆಯಲು ಸಹಾಯ ಮಾಡಲಿದೆ. ಇದಲ್ಲದೆ, ಸುಲಭ ಲಭ್ಯತೆಯ ಅಂಶಗಳು ಅಂಗವೈಕಲ್ಯ ಇರುವ ದಿವ್ಯಾಂಗ ಮಕ್ಕಳು ಮತ್ತು ಅವರ ಪೋಷಕರು ಕೇಂದ್ರಗಳಲ್ಲಿಯ ಸೌಲಭ್ಯಗಳನ್ನು ಸುಲಭದಲ್ಲಿ ಪಡೆಯಲು ಅನುಕೂಲತೆಗಳನ್ನು ಒದಗಿಸುತ್ತವೆ ಎಂದರು.

ತಮ್ಮ ಪ್ರಾರಂಭಿಕ ಭಾಷಣದಲ್ಲಿ ಶ್ರೀಮತಿ ಅಂಜಲಿ ಭಾವ್ರಾ ಅವರು ಮಕ್ಕಳಲ್ಲಿ ಅಂಗವೈಕಲ್ಯ ಬಹಳ ಗಂಭೀರ ಕಳವಳದ ಸಂಗತಿ ಎಂದರು. 2011 ಜನಗಣತಿ ಪ್ರಕಾರ, 0-6 ವರ್ಷದೊಳಗಿನ ಮಕ್ಕಳಲ್ಲಿ 20 ಲಕ್ಷಕ್ಕೂ ಅಧಿಕ  ಮಕ್ಕಳು  ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ದೃಷ್ಟಿ ಮಾಂಧ್ಯರು, ಶ್ರವಣ ದೋಷವುಳ್ಳವರು, ಚಲನೆ ಸಾಧ್ಯ ಇಲ್ಲದವರು ಇತ್ಯಾದಿ ವರ್ಗದವರು ಇವರಲ್ಲಿ ಸೇರಿದ್ದಾರೆ. ಇದರ ಅರ್ಥ ವಯೋ ಗುಂಪಿನ ಸುಮಾರು 7% ನಷ್ಟು ಮಕ್ಕಳು ಒಂದಲ್ಲ ಒಂದು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಇವರ ಸಂಖ್ಯೆ ಅಂಗವೈಕಲ್ಯ ಇರುವ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಜಾರಿಯಿಂದಾಗಿ ಹೆಚ್ಚುವ ನಿರೀಕ್ಷೆ ಇದೆ. ಈಗ ಅಂಗವೈಕಲ್ಯದಲ್ಲಿ ಇರುವ 7 ವರ್ಗಗಳಿಗೆ ಬದಲಾಗಿ 21 ವರ್ಗಗಳಿವೆ. ಮಕ್ಕಳ ಮೊದಲ 1000 ದಿನಗಳ ಜೀವನವು ಆರೋಗ್ಯಪೂರ್ಣ  ಬೆಳವಣಿಗೆಯ ದೃಷ್ಟಿಯಿಂದ ಬಹಳ ಮಹತ್ವದ್ದು ಎಂದು ಸಂಶೋಧನೆಗಳು ಹೇಳುತ್ತವೆ. ಆದುದರಿಂದ ಕಿರು ವಯಸ್ಸಿನಲ್ಲಿಯೇ ಮುಂಚಿತವಾಗಿ ಅಪಾಯದ ಸಂಭಾವ್ಯತೆ ಇರುವ ಪ್ರಕರಣಗಳನ್ನು ಗುರುತಿಸುವುದು ಬಹಳ ಮುಖ್ಯ. ಇದರಿಂದ ಅಂಗವೈಕಲ್ಯದ ತೀವ್ರತೆಯನ್ನು ಸೂಕ್ತ ಕ್ರಮಗಳ ಮೂಲಕ ಕಡಿಮೆ ಮಾಡಬಹುದು ಎಂದರು.

ಜಂಟಿ ಕಾರ್ಯದರ್ಶಿ ಶ್ರೀಮತಿ ತಾರಿಕಾ ರಾಯ್ ಅವರು ಕೇಂದ್ರಗಳ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ ಒದಗಿಸಿದರು.

14 ಪೂರ್ವ ಮಧ್ಯಪ್ರವೇಶ ಕೇಂದ್ರಗಳನ್ನು ಡೆಹ್ರಾಡೂನ್, ದಿಲ್ಲಿ, ಮುಂಬಯಿ, ಸಿಕಂದರಾಬಾದ್, ಕೋಲ್ಕೊತ್ತಾ, ಕಟಕ್, ಚೆನ್ನೈ, ಸುರೇಂದ್ರನಗರ್, ಲಕ್ನೋ, ಭೋಪಾಲ್, ರಾಜ್ ನಂದಗಾಂವ್, ಪಟನಾ, ನೆಲ್ಲೂರು ಮತ್ತು ಕೋಝಿಕ್ಕೋಡ್ ಗಳಲ್ಲಿ ಆರಂಭಿಸಲಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂಗವೈಕಲ್ಯ ಇರುವ ವ್ಯಕ್ತಿಗಳ ಸಶಕ್ತೀಕರಣಕ್ಕೆ ಸಂಬಂಧಿಸಿದ ಕೆಲಸ ನಿರ್ವಹಿಸುತ್ತಿರುವ ಸಂಬಂಧಿತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು, ರಾಜ್ಯಗಳ ಪಿ.ಡಬ್ಲ್ಯು.ಡಿ.ಗಳ ರಾಜ್ಯ ಆಯುಕ್ತರು ಅಥವಾ ಅವರ ಪ್ರತಿನಿಧಿಗಳು ಭಾಗವಹಿಸಿದ್ದರು. ಎನ್..ಗಳ ನಿರ್ದೇಶಕರು ಮತ್ತು ಸಿ.ಆರ್.ಸಿ.ಗಳ ಮುಖ್ಯಸ್ಥರು ಕೂಡಾ ಪಾಲ್ಗೊಂಡಿದ್ದರು.

ಮೆದುಳಿನ ಅಭಿವೃದ್ಧಿಗೆ ಬಾಲ್ಯಾವಸ್ತೆ ಪೂರ್ವದ (0-6 ವರ್ಷಗಳು) ಕಾಲವೇ ಬಹಳ ಪ್ರಮುಖ ಎಂದು ಸಂಶೋಧನಾ ಅಧ್ಯಯನಗಳು ಹೇಳುತ್ತವೆ. ವ್ಯಕ್ತಿಯ ಜೀವನಪೂರ್ತಿಯ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಸಾಮರ್ಥ್ಯವನ್ನು ಸಾಧಿಸುವುದಕ್ಕೆ  ಸಂಕೀರ್ಣ ಅವಧಿಯೇ ನಿರ್ಣಾಯಕವಾಗಿರುತ್ತದೆ. ಗುಣಮಟ್ಟದ ಬಾಲ್ಯಾವಸ್ಥೆಯ ಮಧ್ಯಪ್ರವೇಶಗಳನ್ನು ಬದುಕಿನ ಮೊದಲ ಅವಧಿಯಲ್ಲಿಯೇ ಒದಗಿಸಿದರೆ ಸ್ವತಂತ್ರ ಮತ್ತು ಗೌರವಾನ್ವಿತ ಬಾಳನ್ನು ಬಾಳಲು ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

ಅಡ್ಡ ಅಂಗವೈಕಲ್ಯ ಪೂರ್ವ ಮಧ್ಯಪ್ರವೇಶ ಕೇಂದ್ರಗಳು ಸುಲಭ ಲಭ್ಯ ರೀತಿಯಲ್ಲಿ ಮತ್ತು ಸುಂದರವಾಗಿ ವಿನ್ಯಾಸ ಮಾಡಲಾದ ಪರಿಸರದಲ್ಲಿ ಒಂದೇ ಸೂರಿನಡಿಯಲ್ಲಿ ಪರಸ್ಪರ ಲಗತ್ತಾದ ಮಾದರಿಯಲ್ಲಿ ಸೌಲಭ್ಯಗಳನ್ನು ಹೊಂದಿದ್ದು ಸೇವೆಗಳನ್ನು ಒದಗಿಸಲು ಅವಶ್ಯ ಉಪಕರಣಗಳನ್ನು ಹೊಂದಿವೆ. ಅಪಾಯದ ಸಂಭಾವ್ಯತೆಯ ಮಕ್ಕಳ ಪ್ರಕರಣಗಳನ್ನು ಗುರುತಿಸಿ ಪತ್ತೆ ಹಚ್ಚುವ ಸೌಲಭ್ಯಗಳು ಮತ್ತು ಅವರನ್ನು ಸೂಕ್ತ ಪುನರ್ವಸತಿ ಚಿಕಿತ್ಸೆಗೆ ಕಳುಹಿಸುವ ವ್ಯವಸ್ಥೆಗಳನ್ನು ಹೊಂದಿವೆ. ವಾಕ್ ದೋಷದ  ಚಿಕಿತ್ಸೆ, ಅಕ್ಯುಪೇಶನಲ್ ಚಿಕಿತ್ಸೆ ಮತ್ತು ಫಿಸಿಯೋಥೆರಪಿ ಚಿಕಿತ್ಸಾ ಸೇವೆಗಳಿಗೆ ಇಲ್ಲಿ ಅವಕಾಶವಿದೆ. ಪೋಷಕರಿಗೆ ಆಪ್ತಸಮಾಲೋಚನೆ ಮತ್ತು ತರಬೇತಿ ಕೇಂದ್ರಗಳ ಅವಿಭಾಜ್ಯ ಅಂಗವಾಗಿದೆಅಂಗವೈಕಲ್ಯ ಇರುವ ಮಕ್ಕಳ ಆವಶ್ಯಕತೆಗಳಿಗೆ ಅನುಗುಣವಾಗಿ ಪೋಷಕರು ಸ್ಪಂದಿಸುವಂತೆ ಮಾಡಲು ಇದರಿಂದ ಸಹಾಯವಾಗಲಿದೆ. ಕೇಂದ್ರಗಳಲ್ಲಿ ಶಾಲಾ ಸಿದ್ಧತಾ ಸೌಲಭ್ಯವು ಲಭ್ಯ ಇದ್ದು ಮಕ್ಕಳ ಸಂವಹನ ಮತ್ತು ಭಾಷಾ ಕೌಶಲ್ಯಗಳನ್ನು ಒಳಗೊಂಡಂತೆ ದೈಹಿಕ ಸಾಮರ್ಥ್ಯವನ್ನು ಸುಧಾರಿಸಲು, ಮೂಲಕ ಅವರಿಗೆ ಸ್ವತಂತ್ರ ಜೀವನ ನಡೆಸಲು ಅದು  ಸಹಾಯ ಮಾಡಲಿದೆ.

Click here for ppt

***(Release ID: 1728065) Visitor Counter : 35