ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷ ವರ್ಧನ್ 2021ರ ಜಾಗತಿಕ ಯೋಗ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು


"ಸಮಗ್ರ ಆರೋಗ್ಯ ಮತ್ತು ಜನರ ಯೋಗಕ್ಷೇಮಕ್ಕಾಗಿ ಯೋಗದ ಅಪಾರ  ಪ್ರಯೋಜನಗಳನ್ನು  ಪರಿಗಣಿಸಿ, ಯೋಗವನ್ನು ಪ್ರತಿಯೊಬ್ಬ ನಾಗರಿಕರಿಗೆ ತಲುಪಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ"

ಯೋಗದಿಂದ ಜನರಿಗಾಗುವ ಪ್ರಯೋಜನಗಳನ್ನು ಜಗತ್ತಿನಾದ್ಯಂತದ ದೇಶಗಳು ಗುರುತಿಸಿವೆ - ಡಾ.ಹರ್ಷ ವರ್ಧನ್

Posted On: 15 JUN 2021 7:39PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಹರ್ಷ ವರ್ಧನ್ ಅವರು ಜಾಗತಿಕ ಯೋಗ ಸಮ್ಮೇಳನ 2021 ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ರಾಜ್ಯ ಸಚಿವ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಅವರ ಸಮ್ಮುಖದಲ್ಲಿ ಮಾತನಾಡಿದರು. ಜೂನ್ 21,2021ರಂದು 7 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು, ಭಾರತ ಸರ್ಕಾರದ ಆಯುಷ್ ಸಚಿವಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತಿನೊಂದಿಗೆ 'ಮೋಕ್ಷಾಯತನ್ ಯೋಗ ಸಂಸ್ಥಾನ' ವು ಕಾರ್ಯಕ್ರಮವನ್ನು ಆಯೋಜಿಸಿತು.

ಕಾರ್ಯಕ್ರಮದ ಆರಂಭದಲ್ಲಿ, ಕೇಂದ್ರ ಆರೋಗ್ಯ ಸಚಿವರು ವಿಶ್ವವು ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಮಾತನಾಡುವಾಗ, ತಪ್ಪದೇ ನಮ್ಮ ಪ್ರಾಚೀನ ಯೋಗದ ಜ್ಞಾನವನ್ನು ಉಲ್ಲೇಖಿಸಲಾಗುತ್ತದೆ ಎಂದು ಒತ್ತಿ ಹೇಳಿದರು. "ಪ್ರಪಂಚದಾದ್ಯಂತ ಯೋಗಾಭ್ಯಾಸವನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಲಿರುವುದು ಅದರ ವ್ಯಾಪಕ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಪಾಶ್ಚಿಮಾತ್ಯ ಜಗತ್ತಿನಲ್ಲಿಯೂ ಯೋಗವು  ದೈನಂದಿನ ಜೀವನಶೈಲಿಯ ಭಾಗವಾಗಿರುವುದು  ಕಂಡುಬರುತ್ತದೆ. ಈಗಿನ ಸಾಂಕ್ರಾಮಿಕದ ಕಾಲದಲ್ಲಿ ಕೂಡ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವ ಬಗ್ಗೆ  ಹೆಚ್ಚು ಗಮನ ಕೊಡಲು ಅನೇಕರು ಯೋಗದತ್ತ ಮುಖ ಮಾಡಿದ್ದಾರೆ,” ಎಂದು ಅವರು ಹೇಳಿದರು.

ವರ್ಷ ಯೋಗ ದಿನವನ್ನು ಆಚರಿಸುವ ಮುಖ್ಯ ಸಂದೇಶದ ಮಹತ್ವವನ್ನು ಎತ್ತಿ ತೋರಿಸುತ್ತಾ, ('ಯೋಗದೊಡನೆ ಇರಿ, ಮನೆಯಲ್ಲಿಯೇ ಇರಿ'), “ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ, ಅಂತರರಾಷ್ಟ್ರೀಯ ಯೋಗ ದಿನಾಚರಣೆಯವರೆಗೆ   ಜನ ಸೇರುವ ಹಾಗೆ ಯಾವುದೇ ಸಭೆಗಳನ್ನು ನಡೆಸುವುದಿಲ್ಲ. ಸಂದೇಶವು ಕೋವಿಡ್ -19 ಕಾಲದಲ್ಲಿ ಹೆಚ್ಚು ಪ್ರಸ್ತುತವಾಗಿದೆನಮ್ಮ ಒಟ್ಟಾರೆ ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸುವುದು ನಮ್ಮೆಲ್ಲರಿಗೂ ಅಗತ್ಯ. ಸಮಗ್ರ ಆರೋಗ್ಯ ಮತ್ತು ಜನರ ಯೋಗಕ್ಷೇಮಕ್ಕಾಗಿ ಯೋಗದ ಅಪಾರ ಮತ್ತು ಉತ್ತಮವಾಗಿ ದಾಖಲಿಸಲ್ಪಟ್ಟ ಪ್ರಯೋಜನಗಳನ್ನು ಪರಿಗಣಿಸಿ, ಪ್ರತಿಯೊಬ್ಬ ನಾಗರಿಕರೆಡೆಗೆ ಯೋಗವನ್ನು ತಲುಪಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ.” ಎಂದು ಹೇಳಿದರು.

ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2014 ಸೆಪ್ಟೆಂಬರ್‌ನಲ್ಲಿ ಯುಎನ್ ಜನರಲ್ ಅಸೆಂಬ್ಲಿಗೆ ನೀಡಿದ ಕರೆಯನ್ನು ಎಲ್ಲರಿಗೂ ನೆನಪಿಸುತ್ತಾ, ಡಾ. ಹರ್ಷ ವರ್ಧನ್ ರವರು , “ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮೂಲವನ್ನು ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರು ಸೆಪ್ಟೆಂಬರ್ 2014 ರಲ್ಲಿ ಯುಎನ್ ಜನರಲ್ ಅಸೆಂಬ್ಲಿಗೆ ನೀಡಿದ ಕರೆಯಿಂದ ಗುರುತಿಸಬಹುದು ಎನ್ನುವುದು ಎಲ್ಲರಿಗೂ ತಿಳಿದಿರುವ, ಅಲ್ಲಿ ಅವರು ಪ್ರತಿವರ್ಷ ಜೂನ್ 21 ಅನ್ನು ಯೋಗ ಮತ್ತು ಅದರ ಎಲ್ಲಾ ಪ್ರಯೋಜನಗಳನ್ನು ಆಚರಿಸಲು ಮತ್ತು ಉತ್ತೇಜಿಸುವ ಒಂದು ದಿನವಾಗಿ ಗುರುತಿಸುವ ಆಲೋಚನೆಯನ್ನು ಮುಂದಿಟ್ಟರು. ” ಎಂದು ಹೇಳಿದರು.

ಕೋವಿಡ್  ನಿರ್ಬಂಧದ ಸಮಯದಲ್ಲಿ ಯೋಗ ಜನರಿಗೆ ಹೇಗೆ ಸಹಾಯ ಮಾಡಿದೆ ಎನ್ನುವುದನ್ನು ಡಾ.ಹರ್ಷ ವರ್ಧನ್ ಎತ್ತಿ ತೋರಿಸಿದರು, “ನಮ್ಮ ದೇಶದ ಅಮೂಲ್ಯ ಪರಂಪರೆ ಜಾಗತಿಕ ಮನ್ನಣೆಯನ್ನು ಗಳಿಸಿರುವುದು ಪ್ರತಿಯೊಬ್ಬ ಭಾರತೀಯನಿಗೂ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ರೋಗನಿರೋಧಕ ಶಕ್ತಿ ಮತ್ತು ಒತ್ತಡದ ನಿರ್ವಹಣೆಯಲ್ಲಿ ಯೋಗದ ಪ್ರಯೋಜನಗಳನ್ನು ಪುರಾವೆಗಳೊಂದಿಗೆ ಉತ್ತಮವಾಗಿ ದಾಖಲಿಸಲಾಗಿದೆ. ಜಾಗತಿಕ ಯೋಗ ಸಮ್ಮೇಳನದಂತಹ ಕಾರ್ಯಕ್ರಮಗಳೊಂದಿಗೆ, ಯೋಗ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹೆಚ್ಚಿನ ಜನರನ್ನು ಸೆಳೆಯಲಾಗುತ್ತದೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಅನೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ಸಂಪರ್ಕ ತಡೆಯಿಂದಾಗುವ ಪರಿಣಾಮವನ್ನು ಅನೇಕರು ಅನುಭವಿಸಿದ್ದಾರೆ. ಕೋವಿಡ್-19 ಹರಡುವಿಕೆಯನ್ನು ತಡೆಯಲು ಹಲವಾರು ನಿರ್ಬಂಧಗಳನ್ನು ವಿಧಿಸುವುದರೊಂದಿಗೆ, ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು, ಕ್ರೀಡೆಗಳು ಮತ್ತು ಜಿಮ್‌ ಗಳಂತಹ ದೈಹಿಕ ಸಾಮರ್ಥ್ಯವನ್ನು ಕಾಪಾಡುವ ಇತರ ಜನಪ್ರಿಯ ವಿಧಾನಗಳು ಸ್ಥಗಿತಗೊಂಡಿವೆಜನರು ಹೊಸ ವಾಸ್ತವಗಳಿಗೆ ಹೊಂದಿಕೊಳ್ಳುವುದರಿಂದ ಹೆಚ್ಚಿನ ಕೆಲಸದ ಹೊರೆಯೊಂದಿಗೆ ಸೀಮಿತ ಸ್ಥಳಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರೊಂದಿಗೆ ಒತ್ತಡದ ಮಟ್ಟದಲ್ಲಿನ ಹೆಚ್ಚಳವನ್ನು ಗಮನಿಸಲಾಗಿದೆ. ಅಂತಹ ನಿರ್ಬಂಧಗಳ ನಡುವೆಯೂ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಮತ್ತು ಮಾನಸಿಕ ಶಾಂತಿಗೆ ಯೋಗ ಪರಿಹಾರವನ್ನು ನೀಡುತ್ತದೆ.”

ಪ್ರತಿಯೊಬ್ಬರಿಗೂ ಆರೋಗ್ಯವು ಅತ್ಯಂತ ಮಹತ್ವದ್ದಾಗಿದೆ ಎಂಬ ವ್ಯಾಪಕವಾದ ಅರಿವು ಇಂದು ಇದೆ ಎಂದು ಡಾ. ಹರ್ಷ್ ವರ್ಧನ್ ಹೇಳಿದರು. ಯೋಗವನ್ನು ಸ್ವೀಕರಿಸುವ ಮೂಲಕ ಮನುಕುಲವು ಪಡೆಯಸಬಹುದಾದ  ಪ್ರಯೋಜನಗಳನ್ನು ಜಗತ್ತಿನಾದ್ಯಂತದ ದೇಶಗಳು ಗುರುತಿಸಿವೆವಿವಿಧ ಕ್ಷೇತ್ರಗಳಿಂದ ಭಾಗವಹಿಸಿದವರಿಗೆ ಮತ್ತು ಯೋಗದ ಪ್ರಯೋಜನಗಳನ್ನು ಪ್ರಸಾರ ಮಾಡಲು  ಸೇರಿದ ಪರಿಣತರಿಗೆ ಅವರು ಧನ್ಯವಾದ ಅರ್ಪಿಸಿದರು. ಸಮ್ಮೇಳನವನ್ನು ಆಯೋಜಿಸಿದ್ದಕ್ಕಾಗಿ ಮತ್ತು ಸಾಮಾನ್ಯ ಜನರಲ್ಲಿ ಆರೋಗ್ಯಕರ ಬದುಕಿನ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ಅವರು ಸ್ವಾಮಿ ಡಾ.ಭರತ್ ಭೂಷಣ್ ಮತ್ತು  ಮೋಕ್ಷ್ಯತನ್ ಸಂಸ್ಥೆಗೆ ಕೃತಜ್ಞತೆಯನ್ನು ಅರ್ಪಿಸಿದರು. ಸ್ವಾಮಿ ಡಾ.ಭರತ್ ಭೂಷಣ್ ಅವರು ದಶಕಗಳಿಂದ ಯೋಗ ಮತ್ತು ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಸಮ್ಮೇಳನವು ಜನರಲ್ಲಿ ಯೋಗಾಭ್ಯಾಸ ಮತ್ತು ಅವರ ಜೀವನದಲ್ಲಿ ಅದರಿಂದ ಆಗಬಹುದಾದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಡಾ.ಹರ್ಷ ವರ್ಧನ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***



(Release ID: 1727438) Visitor Counter : 192