ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ತಪ್ಪು ಕಲ್ಪನೆ ವಿರುದ್ಧ ವಾಸ್ತವ
Posted On:
15 JUN 2021 3:26PM by PIB Bengaluru
ಭಾರತೀಯ ಸಾರ್ಸ್-ಕೊವ-2 ಅನುವಂಶಿಕ ಒಕ್ಕೂಟ [ಐ.ಎನ್.ಎಸ್.ಎ.ಸಿ.ಒ.ಜಿ] ನೈಜ ಸಮಯದಲ್ಲಿ ಅನುವಂಶಿಕ ರೂಪಾಂತರಗಳನ್ನು ಪತ್ತೆ ಮಾಡಲು ಸಹಾಯ ಮಾಡಿದೆ ಮತ್ತು ದತ್ತಾಂಶವನ್ನು ಸಂಬಂಧಪಟ್ಟ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ.
ದೇಶದಲ್ಲಿ ಅನುಕ್ರಮವಾಗಿ ಮಾದರಿಗಳ ಸಂಗ್ರಹ ಮತ್ತು ಮಾದರಿ ಪತ್ತೆಯ ದತ್ತಾಂಶ ಸಲ್ಲಿಕೆ ಹಾಗೂ ಸರ್ಕಾರಕ್ಕೆ ಕ್ರಿಯಾತ್ಮಕ ಎಚ್ಚರಿಕೆ ಸಂದೇಶ ರವಾನೆಯ ನಡುವೆ ಗಮನಾರ್ಹ ವಿಳಂಬವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಇದಕ್ಕೆ ಸ್ಪಷ್ಟನೆ ನೀಡಲಾಗಿದೆ. ಮಾದರಿ ಸಂಗ್ರಹಣೆಯ ಕಾರ್ಯತಂತ್ರ ದೇಶದ ಉದ್ದೇಶಗಳು, ವೈಜ್ಞಾನಿಕ ತತ್ವಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ದಾಖಲೆಗಳನ್ನು ಆಧರಿಸಿದೆ ಎಂದು ಹೇಳಿದೆ. ಕಾಲ ಕಾಲಕ್ಕೆ. ಅಗತ್ಯಗಳಿಗೆ ಅನುಗುಣವಾಗಿ ಕಾರ್ಯತಂತ್ರವನ್ನು ಪರಿಶೀಲಿಸಲಾಗಿದೆ ಮತ್ತು ಪರಿಷ್ಕರಿಸಲಾಗಿದೆ.
ಐ.ಎನ್.ಎಸ್.ಎ.ಸಿ.ಒ.ಜಿ ಅಡಿ ಡಬ್ಲ್ಯೂ.ಜಿ.ಎಸ್. ಮಾದರಿ ತಂತ್ರದ ವಿಕಸನ
ಭಾರತೀಯ ಸಾರ್ಸ್-ಕೊವ-2 ಆನುವಂಶಿಕ ಒಕ್ಕೂಟ [ಐ.ಎನ್.ಎಸ್.ಎ.ಸಿ.ಒ.ಜಿ] ವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿ 2020, ಡಿಸೆಂಬರ್ 25 ರಂದು ಭಾರತ ಸರ್ಕಾರ ಕೋವಿಡ್-19 ರ ವೈರಾಣುವಿನ ರೂಪಾಂತರ ತಳಿಗಳ ವ್ಯತ್ಯಾಸವನ್ನು ಅಧ್ಯಯನ ಮತ್ತು ಮೇಲ್ವಿಚಾರಣೆ ಮಾಡಲು ಸ್ಥಾಪಿಸಿದ ವೇದಿಕೆಯಾಗಿದೆ.
ಆರಂಭಿಕ ಹಂತದಲ್ಲಿ ಮಾದರಿಗಳ ಸಂಗ್ರಹವನ್ನು ಈ ಉದ್ದೇಶದಿಂದ ಮಾಡಲಾಯಿತು.
ಎ. ರೂಪಾಂತರ ತಳಿಗಳನ್ನು ಹೊತ್ತೊಯ್ಯಬಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಗುರುತಿಸುವುದು.
ಬಿ. ಜನ ಸಮೂಹದಲ್ಲಿ ಈಗಾಗಲೇ ರೂಪಾಂತರ [ಗಳು] ಇವೆಯೇ ಎಂದು ಕಂಡು ಹಿಡಿಯಲು,
ಅಂತೆಯೇ 2ನೇ ಹಂತದ ತಂತ್ರವನ್ನು ಅಳವಡಿಸಲಾಯಿತು.
1. ಆಯ್ದ ದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಅವರ ಸಂಪರ್ಕಗಳನ್ನು ಡಬ್ಲ್ಯೂ.ಜಿ.ಎಸ್ ಗಾಗಿ ಗುರಿಮಾಡುವುದು.
2. ಪ್ರತಿಯೊಂದು ರಾಜ್ಯಗಳಲ್ಲಿ ಸಮುದಾಯ ಆಧರಿತವಾಗಿ ಶೇ 5 ರಷ್ಟು ಆರ್.ಟಿ.ಪಿ.ಸಿ.ಆರ್ ಪಾಸಿಟಿವ್ ಪ್ರಕರಣಗಳ ಮಾದರಿ ಸಂಗ್ರಹ
ದೈನಂದಿನ ಹೊಸ ಪ್ರಕರಣಗಳಲ್ಲಿ ಶೇ 5 ರಷ್ಟು ನಿಯಮವನ್ನು [ಪ್ರತಿದಿನ ಅಂದಾಜು10,000 – 15, 000 ವರೆಗೆ] ರೂಪಿಸಲಾಗಿದೆ ಮತ್ತು ಈ ಸಮಯದಲ್ಲಿ ಆರ್.ಜಿ.ಎಸ್.ಎಲ್ ಗಳ ಸಾಮರ್ಥ್ಯವನ್ನು ಗಮನಿಸುವುದು ಮುಖ್ಯವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ರೂಪಾಂತರಗಳನ್ನು ಹೊತ್ತೊಯ್ಯುತ್ತಿದ್ದಾರೆ ಮತ್ತು ಇವುಗಳ ಪ್ರಸರಣ ಕೆಲವು ರಾಜ್ಯಗಳಲ್ಲಿ ಸಮುದಾಯ ಹಂತದಲ್ಲಿ [ಯುಕೆ ರೂಪಾಂತರ] ಕಂಡು ಬಂದಿವೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದಾಗ ಎರಡೂ ಉದ್ದೇಶಗಳು ಈಡೇರಿದವು.
ಬಳಿಕ ಜಾಗತಿಕ ಅನುಕ್ರಮ ತಂತ್ರ ಮತ್ತು ವಿಶ್ವ ಸಂಸ್ಥೆಯ ಮಾರ್ಗದರ್ಶನದ ದಾಖಲೆಗಳಿಗೆ ಅನುಗುಣವಾಗಿ ಮಾದರಿ ಸಂಗ್ರಹಿಸುವ ಕಾರ್ಯತಂತ್ರವನ್ನು ಐ.ಎನ್.ಎಸ್.ಎ.ಸಿ.ಒ.ಜಿ ದ್ಯೇಯೋದ್ದೇಶಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗಿದೆ.
1. ನಿರೀಕ್ಷಿತ ಮಾದರಿಗಳ ಸಂಗ್ರಹದ ಮೂಲಕ ಬೆಳವಣೆಗೆಯಾಗುತ್ತಿರುವ ಜಿನೋಮಿಕ್ ರೂಪಾಂತರಗಳು/ ರೂಪಾಂತರಗಳನ್ನು ಕಂಡು ಹಿಡಿಯುವುದು
2. ದೊಡ್ಡ ಕ್ಲಸ್ಟರ್ ಗಳು, ಅಸಮಾನ್ಯ ಕ್ಲಿನಿಕಲ್ ವ್ಯವಸ್ಥೆ, ಲಸಿಕೆ ಪ್ರಗತಿ, ಮತ್ತೊಮ್ಮೆ ಸೋಂಕು ತಗಲಿರುವ ಶಂಕೆ ಮತ್ತಿತರೆ ಸಾಮಾನ್ಯ ಘಟನೆಗಳಲ್ಲಿ ವಿಒಸಿಗಳು/ ಜಿನೋಮಿಕ್ ರೂಪಾಂತರಗಳನ್ನು ಕಂಡು ಹಿಡಿಯುವುದು
ಹೊಸದಾಗಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅದಕ್ಕೆ ಅನುಗುಣವಾಗಿ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಆರ್.ಜಿ.ಎಸ್.ಎಲ್ ಗಳಲ್ಲಿ ಅಸ್ತಿತ್ವದಲ್ಲಿರುವ ಸಾಮರ್ಥ್ಯ ಮತ್ತು ದೇಶ ಮತ್ತಿತರ ಕಡೆಗಳಲ್ಲಿ ಪತ್ತೆಯಾಗುತ್ತಿರುವ ಇತರ ಜೀನೋಮಿಕ್ ರೂಪಾಂತರಗಳನ್ನು ಒಳಗೊಂಡಂತೆ ರೂಪಾಂತರದ ಆತಂಕವನ್ನು [ವಿ.ಒ.ಸಿಗಳು] ಸಮಯೋಚಿತವಾಗಿ ಪತ್ತೆ ಮಾಡುವ ಉದ್ದೇಶ ಹೊಂದಲಾಗಿದೆ. ಏಪ್ರಿಲ್ 12 ರಂದು ಕಾರ್ಯತಂತ್ರವನ್ನು “ಕಾವಲುಗಾರನ ಕಣ್ಗಾವಲು” ಎಂಬ ಹೆಸರಿನಡಿ ಪರಿಷ್ಕರಿಸಲಾಗಿದೆ. ಇದಕ್ಕೆ ಡಬ್ಲ್ಯೂ.ಎಚ್.ಒ ಅನುಮೋದಿಸಿದ್ದು, ಇದೇ ರೀತಿಯಲ್ಲಿ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ಕಾವಲುಗಾರನ ಕಣ್ಗಾವಲು ಕಾರ್ಯತಂತ್ರದಲ್ಲಿ ಪ್ರಸ್ತುತ
1. ನಿಯೋಜಿತ ಆರ್.ಜಿ.ಎಸ್.ಎಲ್ ಗಳಿಗೆ ಮಾದರಿಗಳನ್ನು ಕಳುಹಿಸಲು ರಾಜ್ಯಗಳಲ್ಲಿ ಐದು ಪ್ರಯೋಗಾಲಯಗಳು ಮತ್ತು 5 ತೃತೀಯ ಆರೈಕೆ ಆಸ್ಪತ್ರೆಗಳನ್ನು ಕಾವಲುಗಾರ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ.
2. ಪ್ರತಿಯೊಂದು ಕಾವಲುಗಾರ ಕೇಂದ್ರಗಳು ನಿಯಮಿತವಾಗಿ 15 ಮಾದರಿಗಳನ್ನು ನಿಯೋಜಿತ ಪ್ರಯೋಗಾಲಯಗಳಿಂದ ಡಬ್ಲ್ಯೂ.ಜಿ.ಎಸ್ ಗಳಿಗೆ ಕಳುಹಿಸಬೇಕು.
ಅಸಮಾನ್ಯ ಕ್ಲಿನಿಕಲ್ ವ್ಯವಸ್ಥೆ, ಲಸಿಕೆ ಪ್ರಗತಿ, ಮತ್ತೊಮ್ಮೆ ಸೋಂಕು ತಗಲಿರುವ ಶಂಕೆ ಮತ್ತಿತರೆ ಸಾಮಾನ್ಯ ಘಟನೆಗಳಲ್ಲಿ ಮರು ತನಿಖೆ ನಡೆಸುವ, ಪ್ರತಿಕ್ರಿಯೆ ನೀಡುವ ಪ್ರಕ್ರಿಯೆಗಳಿಗೆ ಅನುಮೊದನೆ ಪಡೆಯುವುದು ಇದರ ಉದ್ದೇಶವಾಗಿದೆ. ಸಾಂಕ್ರಾಮಿಕಗಳ ತನಿಖೆ, ಅಧ್ಯಯನ ವಿಧಾನ, ಡಬ್ಲ್ಯೂಎಸ್ ಗಳಿಗಾಗಿ ಸಂಗ್ರಹಿಸಬೇಕಾದ ಮಾದರಿಗಳ ಸಂಖ್ಯೆ, ಇತ್ಯಾದಿ ವಿವರಗಳು ಪರಿಸ್ಥಿತಿ ಮತ್ತು ಘಟನೆಯನ್ನು ಅವಲಂಬಿಸಿರುತ್ತದೆ.
ನೈಜ ಸಮಯದಲ್ಲಿ ವಿ.ಒ.ಸಿಗಳನ್ನು ಪತ್ತೆಮಾಡಲು ಐ.ಎನ್.ಎಸ್.ಎ.ಸಿ.ಒ.ಜಿ ಕ್ರಮ ಸಹಾಯ ಮಾಡಿದೆ ಮತ್ತು ಈ ಮಾಹಿತಿಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ. ವಿ.ಒ.ಸಿಗಳಿಗಾಗಿ ಒಟ್ಟು ಸಮಯ 10 ರಿಂದ 15 ದಿನಗಳು ತೆಗೆದುಕೊಳ್ಳಲಿದೆ.
ಆದಾಗ್ಯೂ ಸೋಂಕು ಹರಡುವಿಕೆ ಮತ್ತು ತೀವ್ರತೆಯ ಮೇಲೆ ವಿ.ಒ.ಸಿ ಪರಿಣಾಮಗಳು ಈಗಾಗಲೇ ಸ್ಥಾಪಿತವಾಗಿರುವುದಾಗಿ ನಮೂದಿಸಲಾಗುತ್ತಿದೆ. ಆದರೆ ತನಿಖೆ ಅಡಿ ಹೊಸ ರೂಪಾಂತರಗಳು/ ರೂಪಾಂತರಗಳಿಗೆ ಸಾಂಕ್ರಾಮಿಕ ರೋಗ ಶಾಸ್ತ್ರೀಯ ಸನ್ನಿವೇಶಗಳು/ ಕ್ಲಿನಿಕಲ್ ದೃಷ್ಟಿಕೋನದೊಂದಿಗೆ ಜಿನೋಮಿಕಲ್ ರೂಪಾಂತರಗಳ ಪರಸ್ಪರ ಸಂಬಂಧಕ್ಕಾಗಿ ವೈಜ್ಞಾನಿಕವಾಗಿ ಪುರಾವೆಗಳನ್ನು ಕಲೆ ಹಾಕಲು ಕೆಲವು ವಾರಗಳವರೆಗೆ ಸಾಂಕ್ರಾಮಿಕ ರೋಗ ಶಾಸ್ತ್ರೀಯ ಪ್ರವೃತ್ತಿಗಳು/ ಕ್ಲಿನಿಕಲ್ ತೀವ್ರತೆ ಮತ್ತು ಜಿನೋಮಿಕ್ ರೂಪಾಂತರಗಳೊಂದಿಗೆ ಮಾದರಿಗಳ ಅನುಪಾತವನ್ನು ಮೇಲ್ವಿಚಾರಣೆ ಮಾಡುವುದು ಸಹ ಮುಖ್ಯವಾಗಿದೆ.
ಅಸ್ತಿತ್ವದಲ್ಲಿರುವ ಜೀನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳ ಸಂಖ್ಯೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ 10 ಪ್ರಯೋಗಾಲಯಗಳ ಜತೆಗೆ ಇದೀಗ 18 ಪ್ರಯೋಗಾಲಯಗಳನ್ನು ಸಹ ಸಂಪರ್ಕ ಜಾಲದಲ್ಲಿ ಸಂಯೋಜಿಸುವಂತೆ ಸೂಚಿಸಲಾಗಿದೆ.
***
(Release ID: 1727341)
Visitor Counter : 333