ಪ್ರಧಾನ ಮಂತ್ರಿಯವರ ಕಛೇರಿ

ವಿವಾ ಟೆಕ್ 5ನೇ ಆವೃತ್ತಿಯಲ್ಲಿ ಜೂನ್ 16ರಂದು ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ

प्रविष्टि तिथि: 15 JUN 2021 2:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಜೂನ್ 16ರಂದು ಸಂಜೆ 4 ಗಂಟೆಗೆ ವಿವಾಟೆಕ್ 5ನೇ ಆವೃತ್ತಿಯಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ವಿವಾ ಟೆಕ್ 2021ರಲ್ಲಿ ಪ್ರಧಾನ ಭಾಷಣ ಮಾಡಲು ಪ್ರಧಾನಮಂತ್ರಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಸಲಾಗಿದೆ.

ಕಾರ್ಯಕ್ರಮದ ಪ್ರಮುಖ ಭಾಷಣಕಾರರಲ್ಲಿ ಫ್ರಾನ್ಸ್ ಅಧ್ಯಕ್ಷರಾದ ಶ್ರೀ ಎಮ್ಯಾನ್ಯುಯಲ್ ಮೆಖ್ರಾನ್, ಸ್ಪೇನ್ ಪ್ರಧಾನಮಂತ್ರಿ ಶ್ರೀ ಪೆಡ್ರೋ ಸ್ಯಾಂಚೇಜ್ ಮತ್ತು ಐರೋಪ್ಯ ರಾಷ್ಟ್ರಗಳ ಸಚಿವರು/ಸಂಸದರು ಸೇರಿದ್ದಾರೆ. ಕಾರ್ಯಕ್ರಮವು ಸಾಂಸ್ಥಿಕ ನಾಯಕರಾದ ಆಪಲ್ ಸಿಇಓ ಶ್ರೀ ಟಿಮ್ ಕುಕ್ಫೆಸ್ಬುಕ್ ಅಧ್ಯಕ್ಷ ಹಾಗೂ ಸಿಇಓ ಶ್ರೀ ಮಾರ್ಕ್ ಝುಕರ್ಬರ್ಗ್ ಮತ್ತು ಮೈಕ್ರೋಸಾಫ್ಟ್ ಅಧ್ಯಕ್ಷ ಶ್ರೀ ಬ್ರಾಡ್ ಸ್ಮಿತ್ ಮತ್ತಿತರರ ಪಾಲ್ಗೊಳ್ಳುವಿಕೆಗೂ ಸಾಕ್ಷಿಯಾಗಲಿದೆ.

ವಿವಾಟೆಕ್ ಯೂರೋಪ್ ಅತಿ ದೊಡ್ಡ ಡಿಜಿಟಲ್ ಮತ್ತು ನವೋದ್ಯಮ ಕಾರ್ಯಕ್ರಮವಾಗಿದ್ದು, 2016ರಿಂದ ಪ್ರತಿವರ್ಷ ಪ್ಯಾರಿಸ್ ನಲ್ಲಿ ನಡೆಯಲಿದೆ. ಇದನ್ನು ಪ್ರಮುಖ ಪ್ರಚಾರ ಮತ್ತು ಮಾರುಕಟ್ಟೆ ಸಂಘಟಕರಾದ ಪಬ್ಲಿಕ್ ಗ್ರೂಪ್ (Publicis Groupe) ಮತ್ತು ಫ್ರೆಂಚ್ ಮಾಧ್ಯಮ ಸಮೂಹವಾದ ಲೆಸ್ ಎಕೋಸ್ (Les Echos ) ಜಂಟಿಯಾಗಿ ಆಯೋಜಿಸಿವೆ. ಇದು ತಂತ್ರಜ್ಞಾನ ಹೊಸಶೋಧ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಬಾಧ್ಯಸ್ಥಗಾರರನ್ನು ಒಗ್ಗೂಡಿಸುತ್ತದೆ ಮತ್ತು ಇದರಲ್ಲಿ ಪ್ರದರ್ಶನಗಳು, ಪ್ರಶಸ್ತಿಗಳು, ಚರ್ಚೆಗಳು ಮತ್ತು ನವೋದ್ಯಮ ಸ್ಪರ್ಧೆಗಳೂ ಒಳಗೊಂಡಿರುತ್ತವೆ. ವಿವಾಟೆಕ್ 5ನೇ ಆವೃತ್ತಿ 2021 ಜೂನ್ 16-19 ರವರೆಗೆ ನಡೆಯಲಿದೆ.

***


(रिलीज़ आईडी: 1727223) आगंतुक पटल : 233
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu