ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಪ್ಪು ಕಲ್ಪನೆ – ವಾಸ್ತವ


ಗ್ರಾಮೀಣ ಆರೋಗ್ಯ ಮೂಲ ಸೌಕರ್ಯವನ್ನು ನಿರಂತರವಾಗಿ ಬಲಪಡಿಸುವ ಮತ್ತು ರಾಜ್ಯ ಸರ್ಕಾರಗಳ ಸಕ್ರಿಯ ಸಹಭಾಗಿತ್ವದೊಂದಿಗೆ ಕೇಂದ್ರೀಕೃತ ಸಾರ್ವಜನಿಕ ಕ್ರಮಗಳ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಭಾರತದಲ್ಲಿ ಕೋವಿಡ್ -19 ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ

Posted On: 12 JUN 2021 3:03PM by PIB Bengaluru

ಸಾಂಕ್ರಾಮಿಕದ ಸಂದರ್ಭದಲ್ಲಿ ಸಾಕಷ್ಟು ಆರೋಗ್ಯ ಮೂಲ ಸೌಕರ್ಯ ಮತ್ತು ಸೇವೆಗಳನ್ನು ಒದಗಿಸುವಲ್ಲಿ ಭಾರತ ಸರ್ಕಾರದ ಪ್ರತಿಕ್ರಿಯೆ ಅಸಮರ್ಥವಾಗಿದೆ ಹಾಗೂ ಗ್ರಾಮೀಣ ಭಾರತದಲ್ಲಿ ದುರಂತದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ಗ್ರಾಮೀಣ ಭಾರತದಲ್ಲಿ ದೃಷ್ಟಿಗೆ ಗೋಚರವಾಗದ ಪರಿಸ್ಥಿತಿ ಇದೆ ಎಂದು ಉಲ್ಲೇಖಿಸಲಾಗಿದೆ.

ಆದರೆ ಭಾರತ ಸರ್ಕಾರ ಗ್ರಾಮೀಣ ಭಾರತದಲ್ಲಿ ಕೋವಿಡ್ 19 ನಿರ್ವಹಣೆಯನ್ನು ಪರಿಣಾಮಕಾರಿಯಾಗಿಸಲು ಬಹು ಹಂತಗಳಲ್ಲಿ ಆರೋಗ್ಯ ಮೂಲ ಸೌಕರ್ಯ ವೃದ್ಧಿಸಲು ಸುಸ್ಥಿರ ಬಲದೊಂದಿಗೆ ಸಕಾರಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳ ಸಕ್ರಿಯ ಸಹಭಾಗಿತ್ವದೊಂದಿಗೆ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿ ಎನ್ನುವುದು ಒಂದು ನಿರಂತರ ಚಟುವಟಿಕೆ. ಕಡಿಮೆ ಭೌಗೋಳಿಕ ಪ್ರದೇಶಗಳ ಮೇಲೆ ಮತ್ತು ವಿವಿಧ ನೀತಿಗಳು, ಯೋಜನೆಗಳು, ಸಾರ್ವಜನಿಕ ಆರೋಗ್ಯ ಮಧ್ಯಸ್ಥಿಕೆಗಳು ಮತ್ತು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಕ್ರಿಯ ಸಹಭಾಗಿತ್ವದ ಮೂಲಕ ಗ್ರಾಮೀಣ ಆರೋಗ್ಯ ಮೂಲ ಸೌಕರ್ಯ ಬಲಗೊಳಿಸಲು ಭಾರತ ಸರ್ಕಾರ ಬದ್ಧವಾಗಿದೆ.

ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೌಲಭ್ಯಗಳ ವ್ಯಾಪಕ ಸಂಪರ್ಕಜಾಲವನ್ನು ಸರ್ಕಾರ ಹೊಂದಿದೆ. 31-03-2020 ರ ಮಾಹಿತಿಯಂತೆ ದೇಶದಲ್ಲಿ 1,55,404 ಉಪ ಆರೋಗ್ಯ ಕೇಂದ್ರಗಳು [ಎಸ್.ಎಚ್.ಸಿಗಳು] ಮತ್ತು 24,918 ಪ್ರಾಥಮಿಕ ಆರೋಗ್ಯ ಕೇಂದ್ರಗಳು [ಪಿ.ಎಚ್.ಸಿಗಳು] ಮತ್ತು 5,895 ನಗರ ಭಾಗದ ಪಿ.ಎಚ್.ಸಿಗಳು ದೇಶದಲ್ಲಿ ಇತ್ತು. ಇದರ ಜತೆಗೆ ಹೆಚ್ಚುವರಿಯಾಗಿ ಆಯುಷ್ಮಾನ್ ಭಾರತ್ – ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು [ಎಬಿ-ಎಚ್.ಡಬ್ಲ್ಯೂ.ಸಿ] [2018 ರ ಏಪ್ರಿಲ್ ನಲ್ಲಿ ಚಾಲನೆ] ಸ್ಥಾಪಿಸಿದ್ದು, ಇದು ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮಹತ್ವದ ಆಂದೋಲನವಾಗಿದೆ. ಈವರೆಗೆ 75,995 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. (50,961 ಎಸ್.ಎಚ್.ಸಿ-ಎಚ್.ಡಬ್ಲ್ಯುಸಿಗಳು, 21,037 ಪಿ.ಎಚ್.ಸಿ – ಎಚ್.ಡಬ್ಲ್ಯೂಸಿ ಮತ್ತು 3,997 ನಗರ ಪಿ.ಎಚ್.ಸಿಗಳು).

ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ಒಟ್ಟು 1,50,000 ಉಪ – ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬರುವ 2022  ರ ಡಿಸೆಂಬರ್ ವೇಳೆಗೆ ಎಬಿ-ಎಚ್.ಡಬ್ಲ್ಯೂಸಿಗಳನ್ನಾಗಿ ಪರಿವರ್ತಿಸಲಾಗುವುದು ಮತ್ತು ನಿರಂತರ ಆರೈಕೆಯೊಂದಿಗೆ ಸಮುದಾಯ ಮಟ್ಟದಲ್ಲಿ ನಿಯಂತ್ರಣ ಹಾಗೂ ಆರೋಗ್ಯ  ವ್ಯವಸ್ಥೆಯನ್ನು ಒಳಗೊಂಡಿರುವ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸಲಾಗುವುದು.  ಇದು ಸಾರ್ವತ್ರಿಕ, ಉಚಿತ ಮತ್ತು ನಗರ, ಗ್ರಾಮೀಣ ಪ್ರದೇಶದಲ್ಲಿ ಸಮುದಾಯಕ್ಕೆ ಹತ್ತಿರವಾಗಿರಲಿದ್ದು, ಕ್ಷೇಮವನ್ನು ಇದು ಕೇಂದ್ರೀಕರಿಸುತ್ತದೆ.

ಇದರ ಜತೆಗೆ ಹೆಚ್ಚುವರಿಯಾಗಿ ಹೊಸ ಹಂತದ ಕಾರ್ಯನಿರ್ವಹಣಾ ತಂಡವನ್ನು ನಿಯೋಜಿಸಲಾಗುತ್ತಿದ್ದು, ಬಿ.ಎಸ್.ಸಿ ನರ್ಸಿಂಗ್, ಬಿ.ಎ.ಎಂ.ಎಸ್ ಶಿಕ್ಷಣ ಪಡೆದ   ವೈದ್ಯರಲ್ಲದ ಆರೋಗ್ಯ ಕಾರ್ಯಕರ್ತರನ್ನು ನೇಮಿಸಲಾಗುತ್ತಿದೆ. ನಿಯೋಜಿತ ಸಮುದಾಯ ಆರೋಗ್ಯಾಧಿಕಾರಿ [ಸಿ.ಎಚ್.ಒ] ಉಪ ಆರೋಗ್ಯ ಕೇಂದ್ರಗಳು ಎಬಿ-ಎಚ್.ಡಬ್ಲ್ಯೂಸಿಗಳು, ಪ್ರಾಥಮಿಕ ಆರೋಗ್ಯ ಕಾರ್ಯಕರ್ತರ ತಂಡ ಮತ್ತು ಎ.ಎಚ್.ಎಸ್.ಎಗಳ ತಂಡದ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ. 

 ಅಸ್ಥಿತ್ವದಲ್ಲಿರುವ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ [ಆರ್.ಎಂ.ಎನ್.ಸಿ.ಎ +ಎನ್] ಸೇವೆಗಳನ್ನು ವಿಸ್ತರಿಸುವುದು ಮತ್ತು ಬಲಪಡಿಸುವ ಜತೆಗೆ ಸಾಂಕ್ರಾಮಿಕ ರೋಗಗಳ ಸೇವೆಗಳು, ಕ್ರಿಯಾತ್ಮಕ ಎಬಿ-ಎಚ್.ಡಬ್ಲ್ಯೂಸಿಗಳು, ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ [ಎನ್.ಸಿ.ಡಿ] ಸಂಬಂಧಿಸಿದ ಸೇವೆಗಳನ್ನು ಒದಗಿಸಲಾಗುತ್ತಿದೆ. [ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬಾಯಿ, ಸ್ತನ, ಗರ್ಭಕಂಠದ 3 ಸಾಮಾನ್ಯ ಕ್ಯಾನ್ಸರ್ ಗಳಂತಹ ಎನ್.ಸಿ.ಡಿಗಳಿಗೆ ತಪಾಸಣೆ ಮತ್ತು ನಿರ್ವಹಣೆ] ಮತ್ತು ಮಾನಸಿಕ ಆರೋಗ್ಯ, ಕಣ್ಣು, ಮೂಗು, ಕಿವಿ, ನೇತ್ರವಿಜ್ಞಾನ, ಬಾಯಿಯ ಆರೋಗ್ಯ, ಜೆರಿಯಾಟ್ರಿಕ್ ಮತ್ತು ಉಪಶಮನ ಆರೈಕೆ, ಅಪಘಾತ ಆರೈಕೆ, ಮತ್ತಿತರ ಆರೋಗ್ಯ ಸೇವೆಗಳನ್ನು ಹೆಚ್ಚಿಸಲಾಗುತ್ತಿದೆ. 

  • ಎಚ್.ಎಸ್.ಸಿ ಹಂತದಲ್ಲಿ 14 ಮತ್ತು ಪಿ.ಎಚ್.ಸಿ ಹಂತದಲ್ಲಿ 63 ರೋಗ ಪತ್ತೆ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ.
  • ಎಸ್.ಎಚ್.ಸಿ ಹಂತದಲ್ಲಿ 105 ಮತ್ತು ಪಿ.ಎಚ್.ಸಿ ಹಂತದಲ್ಲಿ 172 ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

 

  • ಎಚ್.ಡಬ್ಲ್ಯೂಸಿಗಳ ಲಿಂಗ ಸಮಾನತೆಯ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶಕ್ಕಾಗಿ ಹೆಚ್ಚಿನ ಸಾಮರ್ಥ್ಯದಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ನಿರ್ಣಾಯಕ ವಲಯವನ್ನು ಉತ್ತೇಜಿಸಲಾಗುತ್ತಿದೆ. ಈ ದಿನಾಂಕದವರೆಗೆ 50.29 ಕೋಟಿ ಜನತೆಗೆ ಎಬಿ-ಎಚ್.ಡಬ್ಲ್ಯೂಸಿಗಳು ಕೈಗೆಟುಕುತ್ತಿವೆ. ಈ ಪೈಕಿ ಶೇ 54 ರಷ್ಟು ಮಹಿಳೆಯರು.

 

  • ಎಚ್ ಡಬ್ಲ್ಯೂಸಿಗಳು ರೋಗ ನಿಯಂತ್ರಣ ಸೇವೆಗಳಿಗೆ ಆದ್ಯತೆ ನೀಡಲಿದ್ದು, ಸಮುದಾಯ ಆರೋಗ್ಯ ಕಾರ್ಯಕರ್ತರು [ ಆಶಾ ಮತ್ತು ಎನ್.ಎನ್.ಎಂಗಳು] ಸಮುದಾಯ ಆಧರಿತ ಮೌಲ್ಯಮಾಪನ ಪರಿಶೀಲನಾ ಪಟ್ಟಿ ಮೂಲಕ 30+ ಜನ ಸಂಖ್ಯೆಗೆ ಸೇವೆ ಒದಗಿಸಲಾಗುತ್ತಿದೆ.  ಅಪಾಯದ ಶ್ರೇಣಿಕರದ ಆಧಾರದ ಮೇಲೆ ಎನ್.ಸಿ.ಡಿಗಳಿಗಾಗಿ ವ್ಯಕ್ತಿಗಳ ತಪಾಸಣೆ ನಡೆಸಲಾಗುತ್ತದೆ. ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳೊಂದಿಗೆ ಗುರುತಿಸಲ್ಪಟ್ಟ ವ್ಯಕ್ತಿಗಳ ಚಿಕಿತ್ಸೆಯನ್ನು ಅಗತ್ಯ ಅನುಸರಣೆಯೊಂದಿಗೆ ಮಾಡಲಾಗುತ್ತದೆ. ಈವರೆಗೆ 10.98 ಕೋಟಿ ಮಂದಿಯ ಅಧಿಕ ರಕ್ತದೊತ್ತಡ ಪರೀಕ್ಷಿಸಲಾಗಿದೆ. 9.01 ಕೋಟಿ ಮಧುಮೇಹ, 5.73 ಕೋಟಿ ಬಾಯಿ ಕ್ಯಾನ್ಸರ್, 2.94 ಕೋಟಿ ಮಹಿಳೆಯರ ಸ್ತನ ಕ್ಯಾನ್ಸರ್ ಮತ್ತು 2.0 ಕೋಟಿ ಮಹಿಳೆಯರ ಗರ್ಭಕಂಠದ ಕ್ಯಾನ್ಸರ್ ಅನ್ನು ತಪಾಸಣೆಗೆ ಒಳಪಡಿಸಲಾಗಿದೆ. 

 

  • ಎಚ್.ಡಬ್ಲ್ಯೂಸಿಗಳಲ್ಲಿ ದೂರವಾಣಿ ಸಮಾಲೋಚನೆ ಸೇವೆ ಮತ್ತೊಂದು ಪ್ರಮುಖ ಅಂಶವಾಗಿದೆ. ಇ-ಸಂಜೀವಿನಿ ವೇದಿಕೆ ಮೂಲಕ 6 ದಶಲಕ್ಷಕ್ಕೂ ಹೆಚ್ಚು ದೂರವಾಣಿ ಸಮಾಲೋಚನೆಗಳನ್ನು ಮಾಡಲಾಗಿದೆ ಮತ್ತು ಇದರಲ್ಲಿ ಎಚ್.ಡಬ್ಲ್ಯೂಸಿಗಳ ಮೂಲಕ 26.42 ಲಕ್ಷ ದೂರವಾಣಿ ಸಮಾಲೋಚನೆ ನಡೆಸಲಾಗಿದೆ.  

 

  • ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಎಬಿ-ಎಚ್.ಡಬ್ಲ್ಯೂಸಿಗಳು ನಿರ್ಣಾಯಕ ಪಾತ್ರವಹಿಸಿದ್ದು, ಕೋವಿಡ್ ತಡೆಗಟ್ಟುವಿಕೆ ಮತ್ತು ಕೋವಿಡ್ ಅಲ್ಲದ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಿದೆ.  ಕೋವಿಡ್-19 ಸಂದರ್ಭದಲ್ಲಿ [2020 ರ ಫೆಬ್ರವರಿಯಿಂದ ಈವರೆಗೆ] ಶೇ 75 ರಷ್ಟು ಎನ್.ಎಸ್.ಡಿ ತಪಾಸಣೆ ನಡೆಸಲಾಗಿದ್ದು,  ಪ್ರಸ್ತುತ ಸಾರ್ವಜನಿಕ ಆರೋಗ್ಯ ಸವಾಲಿನ ಸಮಯದಲ್ಲಿ ಎಬಿ-ಎಚ್.ಡಬ್ಲ್ಯೂಸಿಗಳ ಮೇಲೆ ಜನತೆ ಇಟ್ಟಿರುವ ವಿಶ್ವಾಸವನ್ನು ಇದು ತೋರಿಸುತ್ತದೆ.

2021 ರ ಜೂನ್ 11 ರ ಮಾಹಿತಿಯಂತೆ ಎಚ್.ಸಿ.ಡಬ್ಲ್ಯೂಗಳ ಕಾರ್ಯಕ್ಷಮತೆಯ ಒಂದು ನೋಟ

 

ಕ್ರಮ ಸಂಖ್ಯೆ

ಮಾನದಂಡ

ಒಟ್ಟಾರೆ ಪ್ರಗತಿ

(ಲಕ್ಷಗಳಲ್ಲಿ)

ಪ್ರಗತಿ ಈ ಅವಧಿಯಲ್ಲಿ

( 11.6.2021 ರ ವೆರೆಗೆ)

1.2.2020 ದಿಂದ  11.6.2021 (ಲಕ್ಷಗಳಲ್ಲಿ)

1

ಎಬಿ-ಎಚ್.ಡಬ್ಲ್ಯೂಸಿಗಳ ಒಟ್ಟಾರೆ ಹೆಜ್ಜೆಗುರುತುಗಳು

5028.89

4123.81

2

ಪುರುಷ

2325.67

1911.05

3

ಮಹಿಳೆ

2691.31

2200.86

4

ಒಟ್ಟು ಅಧಿಕ ರಕ್ತದೊತ್ತಡ ತಪಾಸಣೆ

1098.23

788.58

5

ಒಟ್ಟು ಮದುಮೇಹ ತಪಾಸಣೆ

900.89

636.85

6

ಒಟ್ಟು ಬಾಯಿ ಕ್ಯಾನ್ಸರ್ ತಪಾಸಣೆ

573.15

414.46

7

ಒಟ್ಟು ಸ್ತನ ಕ್ಯಾನ್ಸರ್ ತಪಾಸಣೆ

293.96

198.48

8

ಒಟ್ಟು ಗರ್ಭಕೋಶ ಕಂಠದ ತಪಾಸಣೆ

200.08

135.71

9

ಒಟ್ಟು 3 ವಿಧದ ಕ್ಯಾನ್ಸರ್ ತಪಾಸಣೆ

1067.19

748.65

10

ಒಟ್ಟು ಎನ್.ಸಿ.ಡಿ ತಪಾಸಣೆ

3066.31

2174.08

11

ಒಟ್ಟು ಕ್ಷೇಮ ಕೇಂದ್ರಗಳ ಅಧಿವೇಶನಗಳ ಆಯೋಜನೆ, ಯೋಗ ಸೇರಿ

70.51

63.7

 

ಇದಲ್ಲದೇ ಅನೇಕ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೋಂಕು ಹರಡುವುದನ್ನು ಗಮನಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ [ಎಂ.ಒ.ಎಚ್.ಎಫ್.ಡಬ್ಲ್ಯೂ] 2021 ರ ಮೇ 16 ರಂದು “ ಅರೆ ನಗರ, ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಎಸ್.ಒ.ಪಿ “ ಹೊರಡಿಸಿದೆ. (available at:        https://www.mohfw.gov.in/pdf/SOPonCOVID19Containment&ManagementinPeriurbanRural&tribalareas.pdf)

ಉಪ ಆರೋಗ್ಯ ಕೇಂದ್ರಗಳು [ಎಸ್.ಸಿಗಳು], ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು [ಎಚ್.ಡಬ್ಲ್ಯೂಸಿಗಳು] ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ [ಪಿ.ಎಚ್.ಸಿಗಳಲ್ಲಿ] ರಾಪಿಡ್ ಆಂಟಿಜನ್ ಟೆಸ್ಟ್ [ಆರ್.ಎ.ಟಿ] ಕಿಟ್ ಗಳನ್ನು ಹೊಂದಿರಬೇಕು ಎಂದು ಎಸ್.ಒ.ಪಿ ಶಿಫಾರಸು ಮಾಡಿದೆ.  ರಾಪಿಡ್ ಆಂಟಿಜನ್ ಪರೀಕ್ಷೆ ಮಾಡಲು ಸಮುದಾಯ ಆರೋಗ್ಯಾಧಿಕಾರಿ [ಸಿ.ಎಚ್.ಒ] ಮತ್ತು ಸಹಾಯಕ ನರ್ಸಿಂಗ್ ಸೂಲಗಿತ್ತಿಯರಿಗೆ [ಎ.ಎನ್.ಎಂ] ತರಬೇತಿ ನೀಡುವಂತೆ ಸಲಹೆ ಮಾಡಲಾಗಿದೆ. 

ಆರ್.ಎ.ಟಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಒದಗಿಸಿರುವ ಪರಿಕರಗಳನ್ನು ಬಳಸಲು ಸಿ.ಎಚ್.ಒಗಳು, ಎ.ಎನ್.ಎಂಗಳಿಗೆ ಸೂಕ್ತ ತರಬೇತಿ ನೀಡುವ ಜತೆಗೆ ಗರಿಷ್ಠ ಪ್ರಮಾಣದಲ್ಲಿ ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಜತೆಗೆ ಆರ್.ಎ.ಟಿ ಪರೀಕ್ಷೆ ನಡೆಸುವ ಜತೆಗೆ ಮಾದರಿ ಸಂಗ್ರಹಣೆ, ಐಪಿಸಿ ಶಿಷ್ಟಾಚಾರ ಪಾಲನೆ ಮತ್ತು ದತ್ತಾಂಶ ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಗಿದೆ.

ಕೋವಿಡ್ ಲಸಿಕೆ ವಿಷಯಕ್ಕೆ ಬಂದರೆ 2021 ರ ಜನವರಿ 16 ರಿಂದ ಈವರೆಗೆ ಭಾರತ ಅತಿ ದೊಡ್ಡ ಕೋವಿಡ್-19 ಲಸಿಕೆ ಅಭಿಯಾನವನ್ನು ನಡೆಸುತ್ತಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 24 ಕೋಟಿ ಗೂ ಹೆಚ್ಚು ಡೋಸ್ ಲಸಿಕೆಯನ್ನು ಹಾಕಲಾಗಿದೆ. 

ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೋವಿಡ್ -19 ಲಸಿಕೆ ಹಾಕುವ ಅಭಿಯಾನವನ್ನು ಮತ್ತಷ್ಟು ಸುಧಾರಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್-19 ಲಸಿಕಾ ಅಭಿಯಾನಕ್ಕಾಗಿ ಭಾರತದಲ್ಲಿ ಕೋ-ವಿನ್ ಡಿಜಿಟಲ್ ವೇದಿಕೆಯನ್ನು ಬಳಸಲಾಗುತ್ತಿದೆ. ಫಲಾನುಭವಿಗಳ ಅನುಕೂಲಕ್ಕಾಗಿ ಆನ್ ಲೈನ್ ಮತ್ತು ಆಫ್ ಲೈನ್ ನೋಂದಣಿ ವ್ಯವಸ್ಥೆಯನ್ನು ಈ ವೇದಿಕೆಯಲ್ಲಿ ಕಲ್ಪಿಸಲಾಗಿದೆ.  ಕೋವಿಡ್ ಲಸಿಕಾ ಕೇಂದ್ರ [ಸಿ.ವಿ.ಸಿ] ಗಳಿಗೆ ಫಲಾನುಭವಿಗಳು ನೇರವಾಗಿ ತೆರಳಿ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಮೀಪದ ಸಿವಿಸಿಗಳಿಗೆ ತೆರಳಿ ನೋಂದಣಿ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಬಹುದು.

ಇದಲ್ಲದೇ ವೃದ್ಧರು, ವಿಶೇಷ ಚೇತನರು ಮತ್ತು ಸಮುದಾಯ ಆಧರಿತ ವಿಧಾನವನ್ನು ಮತ್ತಷ್ಟು ಸುಗಮಗೊಳಿಸಲು ಪಂಚಾಯತ್ ಘರ್, ಆರೋಗ್ಯ ಉಪ ಕೇಂದ್ರಗಳು, ಸಮುದಾಯ ಭವನ, ಶಾಲಾ ಕಟ್ಟಡಗಳು ಮತ್ತಿತರ ಕಡೆಗಳಲ್ಲೂ ಕೋವಿಡ್ – 19 ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಲಾಗಿದೆ.

***

 (Release ID: 1726660) Visitor Counter : 237