ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ 19 ಸಾವಿನ ಸಂಖ್ಯೆ ಕುರಿತ ಸತ್ಯ ಮತ್ತು ಮಿಥ್ಯಗಳು
ಐ.ಸಿ.ಎಂ.ಆರ್. ಹೊರಡಿಸಿರುವ ‘ಭಾರತದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳನ್ನು ಸೂಕ್ತವಾಗಿ ದಾಖಲಿಸುವ ಮಾರ್ಗದರ್ಶನ’ದ ಪ್ರಕಾರ ಕೋವಿಡ್-19 ಸಾವುಗಳನ್ನು ದಾಖಲಿಸಲಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶ
ಜಿಲ್ಲಾವಾರು ಪ್ರಕರಣಗಳು ಮತ್ತು ದಿನದ ಸಾವಿನ ಪ್ರಕರಣಗಳ ಮೇಲ್ವಿಚಾರಣೆ ಮಾಡಲು ದೃಢವಾದ ವರದಿ ಮಾಡುವ ಕಾರ್ಯವಿಧಾನದ ಅಗತ್ಯವನ್ನು ನಿಯಮಿತವಾಗಿ ಪ್ರತಿಪಾದಿಸುತ್ತಿರುವ ಕೇಂದ್ರ ಆರೋಗ್ಯ ಸಚಿವಾಲಯ
Posted On:
12 JUN 2021 3:10PM by PIB Bengaluru
ಹೆಸರಾಂತ ಅಂತಾರಾಷ್ಟ್ರೀಯ ನಿಯತಕಾಲಿಕವೊಂದು ತನ್ನ ಲೇಖನದಲ್ಲಿ ‘ಭಾರತದಲ್ಲಿ ಅಧಿಕೃತವಾಗಿ ನೀಡಲಾಗಿರುವ ಕೋವಿಡ್-19 ಸಾವಿನ ಸಂಖ್ಯೆಗಿಂತಲೂ ಐದರಿಂದ ಏಳು ಪಟ್ಟು “ಹೆಚ್ಚು ಸಾವುಗಳು” ಸಂಭವಿಸಿದೆ ಎಂದು ಊಹಿಸಿದೆ. ಇದು ಊಹಾತ್ಮಕ ಲೇಖನವಾಗಿದ್ದು, ಇದಕ್ಕೆ ಯಾವುದೇ ಆಧಾರವಿರುವುದಿಲ್ಲ ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ.
ಸದರಿ ಲೇಖನದಲ್ಲಿನ ಆಧಾರ ರಹಿತ ವಿಶ್ಲೇಷಣೆಯು ಯಾವುದೇ ಸಾಂಕ್ರಾಮಿಕ ರೋಗಶಾಸ್ತ್ರದ ಪುರಾವೆಗಳಿಲ್ಲದ ದತ್ತಾಂಶವನ್ನು ಆಧಿರಿಸಿದೆ.
ಹೆಚ್ಚುವರಿ ಸಾವಿನ ಸಂಖ್ಯೆಯ ಅಂದಾಜಿಗೆ ನಿಯತಕಾಲಿಕವು ಬಳಸಿರುವ ಅಧ್ಯಯನಗಳು ಯಾವುದೇ ದೇಶ ಅಥವಾ ಪ್ರದೇಶದ ಮರಣ ಪ್ರಮಾಣವನ್ನು ನಿರ್ಧರಿಸಲು ಮೌಲ್ಯೀಕರಿಸಿದ ಸಾಧನಗಳಾಗಿರುವುದಿಲ್ಲ.
ನಿಯತಕಾಲಿಕವು "ಪುರಾವೆಗಳು" ಎನ್ನಲಾದವುಗಳು ವರ್ಜೀನಿಯಾ ಕಾಮನ್ವೆಲ್ತ್ ವಿಶ್ವವಿದ್ಯಾಲಯದ ಕ್ರಿಸ್ಟೋಫರ್ ಲಾಫ್ಲರ್ ಮಾಡಿದ ಅಧ್ಯಯನವಾಗಿದೆ. ವೈಜ್ಞಾನಿಕ ದತ್ತಾಂಶದಲ್ಲಿ ಅಂತರ್ಜಾಲ ಶೋಧನಾ ಅಧ್ಯಯನಗಳಾದ ಪಬ್ಮೆಡ್, ರಿಸರ್ಚ್ ಗೇಟ್, ಇತ್ಯಾದಿಗಳಲ್ಲಿ ಈ ಅಧ್ಯಯನವು ಪತ್ತೆಯಾಗುವುದಿಲ್ಲ ಮತ್ತು ಈ ಅಧ್ಯಯನದ ವಿವರವಾದ ವಿಧಾನವನ್ನು ನಿಯತಕಾಲಿಕವು ಒದಗಿಸಿಲ್ಲ.
ಅದು ಒದಗಿಸಿರುವ ಮತ್ತೊಂದು ಪುರಾವೆ, ವಿಮೆ ಕ್ಲೇಮ್ ಆಧಾರಿತವಾಗಿ ತೆಲಂಗಾಣದಲ್ಲಿ ನಡೆಸಲಾದ ಅಧ್ಯಯನ. ಮತ್ತೊಮ್ಮೆ ಅಂತಹ ಅಧ್ಯಯನದಲ್ಲಿ ಯಾವುದೇ ಪರಿಶೀಲಿತ ವೈಜ್ಞಾನಿಕ ದತ್ತಾಂಶ ಲಭ್ಯವಿರುವುದಿಲ್ಲ.
ಮತ್ತೆ ಎರಡು ಅಧ್ಯಯನಗಳು ಎರಡು ಮತದಾನದ ಫಲಿತಾಂಶಗಳನ್ನು ಊಹಿಸುವ ಮತ್ತು ವಿಶ್ಲೇಷಿಸುವ ಚುನಾವಣಾ ವಿಶ್ಲೇಷಣಾ ಗುಂಪುಗಳಾದ "ಪ್ರಶ್ನಮ್" ಮತ್ತು "ಸಿ-ವೋಟರ್" ನಡೆಸಿದವುಗಳಾಗಿವೆ. ಅವು ಎಂದಿಗೂ ಸಾರ್ವಜನಿಕ ಆರೋಗ್ಯ ಸಂಶೋಧನೆಯೊಂದಿಗೆ ಸಂಬಂಧ ಹೊಂದಿಲ್ಲ. ಚುನಾವಣಾ ಫಲಿತಾಂಶ ಊಹಿಸುವ ತಮ್ಮದೇ ಆದ ಕಾರ್ಯಕ್ಷೇತ್ರದಲ್ಲಿಯೂ ಸಹ, ಸಮೀಕ್ಷೆಯ ಫಲಿತಾಂಶಗಳನ್ನು ಊಹಿಸುವ ಅವರ ವಿಧಾನಗಳು ಹಲವು ಬಾರಿ ನಿಖರ ಎಂದು ಗುರುತಿಸಲ್ಪಟ್ಟಿಲ್ಲ.
ಅವರದೇ ಆದ ಸ್ವಂತ ಹೇಳಿಕೆಯಂತೆ, ನಿಯತಕಾಲಿಕವು ಇಂತಹ ಅಂದಾಜುಗಳನ್ನು ಸಾಮಾನ್ಯವಾಗಿ ವಿಶ್ವಾಸಾರ್ಹವಲ್ಲದ ಸ್ಥಳೀಯ ಸರ್ಕಾರದ ದತ್ತಾಂಶಗಳಿಂದ, ಕಂಪನಿಯ ದಾಖಲೆಗಳಿಂದ ಮತ್ತು ಶವಸಂಸ್ಕಾರದ ವಿಶ್ಲೇಷಣೆಗಳಿಂದ ಹೊರಹಾಕಲಾಗಿದೆ’.
ಕೇಂದ್ರ ಸರ್ಕಾರವು ಕೋವಿಡ್ ದತ್ತಾಂಶ ನಿರ್ವಹಣೆಯ ತನ್ನ ದೃಷ್ಟಿಕೋನದಲ್ಲಿ ಪಾರದರ್ಶಕವಾಗಿದೆ. ಮೇ 2020ಕ್ಕೂ ಮುನ್ನ, ವರದಿಯಾದ ಸಾವುಗಳ ಅಸಂಗತತೆಯನ್ನು ತಪ್ಪಿಸಲು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು, ಮರಣ ದಾಖಲಿಗೆ ಸಂಬಂಧಿಸಿದಂತೆ ಡಬ್ಲ್ಯು.ಎಚ್.ಓ. ಶಿಫಾರಸು ಮಾಡಿರುವ ಐಸಿಡಿ -10 ಕೋಡ್ ಗಳ ಪ್ರಕಾರ ಎಲ್ಲಾ ಸಾವುಗಳನ್ನು ಸರಿಯಾಗಿ ದಾಖಲಿಸಲು 'ಭಾರತದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳನ್ನು ಸೂಕ್ತವಾಗಿ ದಾಖಲಿಸಲು ಮಾರ್ಗದರ್ಶನ' ನೀಡಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಔಪಚಾರಿಕ ಸಂವಹನ ಮತ್ತು ಬಹು ವಿಡಿಯೋ ಸಮ್ಮೇಳನಗಳ ಮೂಲಕ ಮತ್ತು ಕೇಂದ್ರ ತಂಡಗಳನ್ನು ನಿಯೋಜಿಸುವ ಮೂಲಕ ನಿಗದಿತ ಮಾರ್ಗಸೂಚಿಗಳಿಗೆ ಅನುಸಾರವಾಗಿ ಸಾವಿನ ಪ್ರಕರಣಗಳನ್ನು ಸರಿಯಾಗಿ ದಾಖಲಿಸಲು ಆಗ್ರಹಿಸಿದೆ.
ನಿಯಮಿತವಾಗಿ ಜಿಲ್ಲಾವಾರು ಪ್ರಕರಣಗಳು ಮತ್ತು ಸಾವುಗಳ ಬಗ್ಗೆ ಪ್ರತಿದಿನ ಮೇಲ್ವಿಚಾರಣೆ ಮಾಡಲು ದೃಢವಾದ ವರದಿ ಮಾಡುವ ಕಾರ್ಯವಿಧಾನದ ಅಗತ್ಯವನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿಯಮಿತವಾಗಿ ಒತ್ತಿ ಹೇಳಿದೆ. ಕಡಿಮೆ ಸಂಖ್ಯೆಯ ದೈನಂದಿನ ಸಾವುಗಳನ್ನು ನಿರಂತರವಾಗಿ ವರದಿ ಮಾಡುವ ರಾಜ್ಯಗಳಿಗೆ ತಮ್ಮ ದತ್ತಾಂಶವನ್ನು ಮರುಪರಿಶೀಲಿಸುವಂತೆ ತಿಳಿಸಲಾಗಿದೆ. ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಿಹಾರ ರಾಜ್ಯ ಸರ್ಕಾಕ್ಕೆ ಪತ್ರ ಬರೆದು, ಸಾವಿನ ಮರುಹೊಂದಾಣಿಕೆಯ ಸಂಖ್ಯೆಯನ್ನು ಸವಿವರವಾಗಿ ದಿನಾಂಕ ಮತ್ತು ಜಿಲ್ಲಾವಾರು ದತ್ತಾಂಶದ ರೀತ್ಯ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಒದಗಿಸುವಂತೆ ತಿಳಿಸಿದೆ.
ಅಗಾಧವಾದ ಮತ್ತು ದೀರ್ಘಕಾಲೀನ ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟು ಅಂದರೆ ಕೋವಿಡ್ ಸಾಂಕ್ರಾಮಿಕದಂತಹ ಸಂದರ್ಭದ ಮರಣ ದಾಖಲೆಗಳಲ್ಲಿ ಸದಾ ವ್ಯತ್ಯಾಸ ಇರುತ್ತದೆ ಎಂಬುದು ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಮತ್ತು ಹೆಚ್ಚಿನ ಸಾವಿನ ಸಂಖ್ಯೆಯ ಬಗ್ಗೆ ಉತ್ತಮ ರೀತಿಯಲ್ಲಿ ನಡೆಸಲಾದ ಸಂಶೋಧನಾ ಅಧ್ಯಯನಗಳನ್ನು ಸಾಮಾನ್ಯವಾಗಿ ವಿಶ್ವಾಸಾರ್ಹ ಮೂಲಗಳಿಂದ ಸಾವಿನ ದತ್ತಾಂಶ ಲಭ್ಯವಾದ ನಂತರ, ಘಟನೆ ಮುಗಿದ ಬಳಿಕ ನಡೆಸಲಾಗುತ್ತದೆ.
ಅಂತಹ ಅಧ್ಯಯನಗಳ ವಿಧಾನಗಳು ಸುಸ್ಥಾಪಿತವಾಗಿವೆ, ದತ್ತಾಂಶ ಮೂಲಗಳನ್ನು ಸಿಂಧುವಾದ ಮರಣದ ಕ್ರೋಡೀಕರಣಕ್ಕೆ ಮಾನ್ಯತೆಗಳೆಂದು ವ್ಯಾಖ್ಯಾನಿಸಲಾಗಿದೆ.
***
(Release ID: 1726645)
Visitor Counter : 326