ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಬಾಲಕಾರ್ಮಿಕ ಪ್ರಕರಣ ಕಂಡುಬಂದರೆ ಪೆನ್ಸಿಲ್ ಪೋರ್ಟಲ್ ಅಥವಾ ಮಕ್ಕಳ ಸಹಾಯವಾಣಿ -1098ಕ್ಕೆ ಮಾಹಿತಿ ನೀಡುವಂತೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರಿಂದ ಸಾರ್ವಜನಿಕರಲ್ಲಿ ಮನವಿ
प्रविष्टि तिथि:
12 JUN 2021 2:45PM by PIB Bengaluru
ಬಾಲಕಾರ್ಮಿಕ ಪ್ರಕರಣಗಳು ಕಂಡುಬಂದರೆ ಪೆನ್ಸಿಲ್ ಪೋರ್ಟಲ್ ಅಥವಾ ಮಕ್ಕಳ ಸಹಾಯವಾಣಿ -1098ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ನೀಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜವಳಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬಾಲಕಾರ್ಮಿಕ ಪದ್ಧತಿ ವಿಶ್ವ ವಿರೋಧಿ ದಿನದ ಅಂಗವಾಗಿ ಇಂದು ಟ್ವೀಟ್ ಮಾಡಿರುವ ಶ್ರೀಮತಿ ಇರಾನಿ ಅವರು, “ಪ್ರತಿಯೊಂದು ಮಗುವಿಗೂ ಶಿಕ್ಷಣದ ಹಕ್ಕು ಹಾಗೂ ಸಂತೋಷದಿಂದ ಬಾಲ್ಯವನ್ನು ಕಳೆಯುವ ಹಕ್ಕಿದೆ. ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ನಾವು ಬಾಲಕಾರ್ಮಿಕ ಪದ್ಧತಿ ನಿವಾರಣೆ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಜನರ ಸಹಭಾಗಿತ್ವದಿಂದಾಗಿ ನಾವು ನಮ್ಮ ಮಕ್ಕಳು ಬಯಸಿದಂತಹ ಬಾಲ್ಯವನ್ನು ಖಾತ್ರಿಪಡಿಸಬಹುದಾಗಿದೆ” ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಅವರು, “ಎಲ್ಲಿಯಾದರು ಬಾಲಕಾರ್ಮಿಕ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಪೆನ್ಸಿಲ್ ಪೋರ್ಟಲ್ https://pencil.gov.in ಅಥವಾ ಮಕ್ಕಳ ಸಹಾಯವಾಣಿ – 1098ಕ್ಕೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಏಕೆಂದರೆ ನಮ್ಮ ಮಕ್ಕಳು ನಮ್ಮ ರಾಷ್ಟ್ರದ ಭವಿಷ್ಯ ಎಂಬುದನ್ನು ನಾವು ಅರಿತಿದ್ದೇವೆ” ಎಂದು ಹೇಳಿದ್ದಾರೆ

ಜಗತ್ತಿನಾದ್ಯಂತ ಪ್ರತಿ ವರ್ಷ ಜೂನ್ 12ರಂದು ಬಾಲಕಾರ್ಮಿಕ ಪದ್ಧತಿ ವಿಶ್ವ ವಿರೋಧಿ ದಿನವನ್ನಾಗಿ ಆಚರಿಸಲಾಗುವುದು. ಬಾಲಕಾರ್ಮಿಕ ಪದ್ಧತಿಯನ್ನು ಜಾಗತಿಕವಾಗಿ ಕೊನೆಗಾಣಿಸಲು ಹೆಚ್ಚಿನ ಒತ್ತು ನೀಡುವುದು ಮತ್ತು ಅದರ ನಿವಾರಣೆಗೆ ಅಗತ್ಯ ಕ್ರಿಯೆ ಮತ್ತು ಪ್ರಯತ್ನಗಳನ್ನು ಕೈಗೊಳ್ಳುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ(ಐಎಲ್ಒ) 2002ರಲ್ಲಿ ಈ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಆಚರಣೆಯನ್ನು ಆರಂಭಿಸಿತು.
***
(रिलीज़ आईडी: 1726642)
आगंतुक पटल : 349