ಇಂಧನ ಸಚಿವಾಲಯ

ಎನ್.ಎಚ್.ಪಿ.ಸಿ. ಗೆ ಹಣಕಾಸು ವರ್ಷ 2020-21ರಲ್ಲಿ ಇದೇ ಮೊದಲ ಬಾರಿಗೆ ರೂ. 3233 ಕೋ.ರೂ. ಗರಿಷ್ಠ ಲಾಭ

Posted On: 11 JUN 2021 12:33PM by PIB Bengaluru

ಇಂಧನ ಸಚಿವಾಲಯದಡಿ ಕಾರ್ಯನಿರ್ವಹಿಸುವ, ಭಾರತದ ಪ್ರಮುಖ ಜಲವಿದ್ಯುತ್ ಕಂಪೆನಿ ಮತ್ತು “ಮಿನಿ ರತ್ನ” ದರ್ಜೆ -1 ಉದ್ಯಮವಾದ ಎನ್.ಎಚ್.ಪಿ.ಸಿ. ಲಿಮಿಟೆಡ್ ಹಣಕಾಸು ವರ್ಷ 2020-21 ರ ಅವಧಿಯ ತನ್ನ ಆಡಿಟ್ ಮಾಡಲಾದ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ.ನಿರ್ದೇಶಕರ ಮಂಡಳಿಯು ಹಣಕಾಸು ವರ್ಷ 20-21 ರ ಅವಧಿಯ  ಆಡಿಟ್ ಮಾಡಲಾದ ಹಣಕಾಸು ಫಲಿತಾಂಶವನ್ನು ನಿನ್ನೆ ನಡೆದ ಇ-ಸಭೆಯಲ್ಲಿ ಅಂಗೀಕರಿಸಿತು.


 ಕಳೆದ ಹಣಕಾಸು ವರ್ಷ ಎನ್.ಎಚ್.ಪಿ.ಸಿ.ಯು 3007.17 ಕೋ.ರೂ. ಗಳಿಸಿದ್ದು ಅದಕ್ಕೆ ಹೋಲಿಸಿದರೆ ಹಣಕಾಸು ವರ್ಷ 2020-21 ರಲ್ಲಿ ತೆರಿಗೆ ಬಳಿಕ 3233.37 ಕೊ.ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ, ಇದು ಅತ್ಯಂತ ಗರಿಷ್ಠವಾಗಿದೆ. ಹಣಕಾಸು ವರ್ಷ 2020-21 ರಲ್ಲಿ ಕಾರ್ಯಾಚರಣೆಯಿಂದ ಬಂದ ಆದಾಯ 8506.58 ಕೋ.ರೂ. ಹಿಂದಿನ ಹಣಕಾಸು ವರ್ಷದಲ್ಲಿ ಇದು 8735.15 ಕೋ.ರೂ.ಗಳಾಗಿತ್ತು. ಒಟ್ಟು ನಿವ್ವಳ ಲಾಭ 2020-21 ರ ಅವಧಿಗೆ 3582.13 ಕೋ.ರೂ.ಹಿಂದಿನ 2019-20 ರ ಅವಧಿಯಲ್ಲಿ ಇದು 3,344.91 ಕೋ.ರೂ. 2020-21 ರಲ್ಲಿ ಗುಂಪಿನ ಒಟ್ಟು ಆದಾಯ 10,705.04 ಕೋ.ರೂ. ಹಿಂದಿನ 2019-20 ರ ಅವಧಿಯಲ್ಲಿ ಇದು 10,776.64 ಕೋ.ರೂ.

ಚಾಲ್ತಿಯಲ್ಲಿರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹೊರತಾಗಿಯೂ, ಎನ್.ಎಚ್.ಪಿ.ಸಿ. ವಿದ್ಯುತ್ ಸ್ಥಾವರಗಳು ಹಣಕಾಸು ವರ್ಷ 2020-21ರಲ್ಲಿ 24471 ಮಿಲಿಯನ್ ಯೂನಿಟ್ (ಎಂ.ಯು.) ಉತ್ಪಾದನೆ ಮಾಡಿವೆ.

ಹಣಕಾಸು ವರ್ಷ 2020-21 ರ ಅವಧಿಗೆ ಕಂಪೆನಿಯು ಈಗಾಗಲೇ 2021 ರ ಮಾರ್ಚ್ ತಿಂಗಳಲ್ಲಿ ಪಾವತಿಸಿದ ಶೇರೊಂದರ ಮೇಲಿನ ರೂ.1.25 ಲಾಭಾಂಶದ ಜೊತೆ ಶೇರೊಂದಕ್ಕೆ 0.35 ರೂ. ಗಳ ಅಂತಿಮ ಲಾಭಾಂಶವನ್ನು ನಿರ್ದೇಶಕರ ಮಂಡಳಿಯು ಶಿಫಾರಸು ಮಾಡಿದೆ. ಹಣಕಾಸು ವರ್ಷ  20-21ರಲ್ಲಿ ಒಟ್ಟು ಲಾಭಾಂಶ ಪಾವತಿ 1607.21 ಕೋ.ರೂ. ಹಣಕಾಸು ವರ್ಷ 19-20 ರಲ್ಲಿ ಒಟ್ಟು ಲಾಭಾಂಶ ಪಾವತಿ 1506.76 ಕೋ.ರೂ. ಎನ್.ಎಚ್.ಪಿ.ಸಿ. ಇಂದು ಸುಮಾರು ಏಳು ಲಕ್ಷ ಶೇರುದಾರರನ್ನು ಹೊಂದಿದೆ. ಜಾಗತಿಕ ಸಾಂಕ್ರಾಮಿಕವಾದ ಕೋವಿಡ್ -19 ಬಾಧಿಸುತ್ತಿದ್ದರೂ ಎನ್.ಎಚ್.ಪಿ.ಸಿ.ಯು ವಿಸ್ತರಣಾ ಯೋಜನೆಯನ್ನು ಬಹಳ ವೇಗದಿಂದ ಕೈಗೆತ್ತಿಕೊಳ್ಳುತ್ತಿದೆ ಎಂದು ಎನ್.ಎಚ್.ಪಿ.ಸಿ.ಯ ಸಿ.ಎಂ.ಡಿ. ಶ್ರೀ ಎ.ಕೆ.ಸಿಂಗ್ ಹೇಳಿದ್ದಾರೆ. ಎನ್.ಎಚ್.ಪಿ.ಸಿ.ಯು ತನ್ನ ಮುಖ್ಯ ವ್ಯವಹಾರವಾದ ಜಲ ವಿದ್ಯುತ್ ಅಭಿವೃದ್ಧಿ ಸಹಿತ  ಸೌರ ಮತ್ತು ಪವನ ವಿದ್ಯುತ್ ಖಾತೆಗಳನ್ನು ದೇಶವ್ಯಾಪೀ ವಿಸ್ತರಿಸಲು ಯೋಜಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಎನ್.ಎಚ್.ಪಿ.ಸಿ.ಯು ಒಟ್ಟು 4134 ಎಂ.ಡಬ್ಲ್ಯು.  ಸ್ಥಾಪಿತ ಸಾಮರ್ಥ್ಯದ 5 ಯೋಜನೆಗಳನ್ನು ಅನುಷ್ಠಾನಿಸಲು ಎಂ.ಒ.ಯು. ಗಳಿಗೆ ಅಂಕಿತ ಹಾಕಿದೆ ಮತ್ತು ನಾವು ಈ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಗಮನ ನೀಡಿದ್ದೇವೆ ಎಂದರು.

ಎನ್.ಎಚ್.ಪಿ.ಸಿ.ಯು ಜಲವಿದ್ಯುತ್, ಸೌರ ವಿದ್ಯುತ್ ಮತ್ತು ಪವನ ವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿ ಮಾಡಲು ಹೊಸ ನಿವೇಶನಗಳನ್ನು ಅನ್ವೇಷಣೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಮಟ್ಟದಲ್ಲಿ ಸಂಬಂಧಿತ ಅಧಿಕಾರಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದೆ. ಎನ್.ಎಚ್.ಪಿ.ಸಿ.ಯು. ಇತ್ತೀಚೆಗೆ ಜಂಟಿ ಸಹಯೋಗದ ಕಂಪೆನಿ “ರಾಟ್ಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಶನ್ ಲಿಮಿಟೆಡ್” ನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯ ಇಂಧನ ಅಭಿವೃದ್ಧಿ ನಿಗಮ ನಿಯಮಿತ (ಜೆ.ಕೆ. ಎಸ್.ಪಿ.ಡಿ.ಸಿ.) ಜೊತೆ ಸ್ಥಾಪಿಸಿದೆ. 850 ಎಂ.ಡಬ್ಲ್ಯು. ರಾಟ್ಲೆ ಜಲವಿದ್ಯುತ್ ಯೋಜನೆ ಅನುಷ್ಠಾನಕ್ಕಾಗಿ ಈ ಜಂಟಿ ಸಹಯೋಗವನ್ನು ಮಾಡಿಕೊಳ್ಳಲಾಗಿದೆ. ಎನ್.ಎಚ್.ಪಿ.ಸಿ.ಯು ಸಿಕ್ಕಿಂನಲ್ಲಿ 120 ಎಂ.ಡಬ್ಲ್ಯು. ರಂಗಿಟ್ ಹಂತ-4 ರ ಜಲವಿದ್ಯುತ್ ಯೋಜನೆ ಅಭಿವೃದ್ಧಿಗಾಗಿ ಜಲ್ ಇಂಧನ ಕಾರ್ಪೋರೇಶನ್ ಅನ್ನು ತನ್ನ ವ್ಯಾಪ್ತಿಗೆ ತಂದುಕೊಂಡಿದೆ.

****



(Release ID: 1726270) Visitor Counter : 164