ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಬೆಂಗಳೂರಿನ ಐಐಎಸ್ ಸಿಯಲ್ಲಿ ಅತಿ ಕಡಿಮೆ ಸಾಂದ್ರತೆಯಲ್ಲಿ ವಿಷಕಾರಿ ಲೋಹಗಳನ್ನು ನಿಖರವಾಗಿ ಕಂಡುಹಿಡಿಯುವ ಸಲಕರಣೆ ಸೌಕರ್ಯ
Posted On:
10 JUN 2021 3:07PM by PIB Bengaluru
ಬೆಂಗಳೂರಿನ ಐಐಎಸ್ ಸಿಯಲ್ಲಿ ಬಹುಸಲಕರಣೆಗಳ ಸೌಲಭ್ಯವು ಲೋಹಗಳು ಮತ್ತು ಮೆಟಲಾಯ್ಡ್ ಗಳ ಸಾಂದ್ರತೆಯನ್ನು ≥100ಪಿಪಿಎಂನಿಂದ 10 ಪಿಪಿಟಿ(9 ಆರ್ಡರ್ ಆಫ್ ಮ್ಯಾಗ್ನಿಟ್ಯೂಡ್ ) ವ್ಯಾಪ್ತಿಯಲ್ಲಿ ನಿರ್ಧರಿಸುತ್ತದೆ. ಈ ನೀರಿನ ವಿಶ್ಲೇಷಣಾ ಸೌಕರ್ಯ ಮಾಲಿನ್ಯದ ಮೂಲಗಳನ್ನು ಪತ್ತೆ ಹಚ್ಚಲು, ವಿಷಕಾರಿ ಲೋಹಗಳ ಪ್ರತಿಕ್ರಿಯಾತ್ಮಕ- ಸಾರಿಗೆ ಮಾರ್ಗಗಳನ್ನು ಪ್ರಮಾಣೀಕರಿಸಲು ಮತ್ತು ಪರಿಹಾರ ವಿಧಾನಗಳ ದಕ್ಷತೆಯನ್ನು ನಿರ್ಣಯಿಸುವಲ್ಲಿ ಪ್ರಮುಖವಾಗಿದೆ.
ಈ ಸೌಕರ್ಯದಿಂದಾಗಿ ಗುಣಮಟ್ಟದ ಪರಿಸರ ಮತ್ತು ಭೂ-ರಾಸಾಯನಿಕ ಸಂಶೋಧನೆಗೆ ನೈಸರ್ಗಿಕ ಮಾದರಿಗಳಿಂದ ಪ್ರಮುಖ, ಸಣ್ಣ ಮತ್ತು ಜಾಡಿನ ಅಂಶ ಸಾಂದ್ರತೆಯ ನಿಖರ ಮತ್ತು ಕರಾರುವಕ್ಕಾಗಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ.
ಈ ಬಹುಪಯೋಗಿ ಸೌಲಭ್ಯವು ದೇಶಾದ್ಯಂತ ಇರುವ ಪರಿಸರ ಮತ್ತು ಭೂ-ರಾಸಾಯನಿಕ ಸಂಶೋಧಕರಿಗೆ ಕರಗಿದ ಲೋಹಗಳು ಮತ್ತು ಮೆಟಲಾಯ್ಡ್ ಗಳ ನಿರೂಪಣೆಗೆ ಮುಕ್ತ ಪ್ರವೇಶ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಬಹುಸಾಂಸ್ಥಿಕ ಯೋಜನೆಯಡಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಯಲ್ಲಿ ಸ್ಥಾಪಿಸಲಾಗಿರುವ ಈ ಸೌಕರ್ಯ ಎರಡು ಉಪಕರಣೆಗಳ ಸಂಯೋಜನೆಯಾಗಿದ್ದು, ಇದು ಲೋಹಗಳು ಮತ್ತು ಮೆಟಲಾಯ್ಡ್ ಗಳ ಸಾಂದ್ರತೆಯನ್ನು 100 ಪಿಪಿಎಂನಿಂದ 10 ಪಿಪಿಟಿ ವರೆಗೆ(9ರ ತೀವ್ರತೆ) ನಿಖರವಾಗಿ ನಿರ್ಧರಿಸಲು ಅನುವು ಮಾಡಿಕೊಡುತ್ತದೆ.
‘ಸುಸ್ಥಿರ ಅಭಿವೃದ್ಧಿ ಗುರಿ ಎಸ್ ಡಿಜಿ6 ನಿಟ್ಟಿನಲ್ಲಿ ತ್ವರಿತ ಮುನ್ನಡೆ: ದ್ವಿತೀಯ ದರ್ಜೆ ಭಾರತೀಯ ನಗರಗಳಲ್ಲಿ ನೀರಿನ ಲಭ್ಯತೆ ಕುರಿತು (4 ವಾರ್ಡ್) ಯೋಜನೆ ಅಡಿ ನಗರ ನೀರು ನಿರ್ವಹಣಾ ವ್ಯವಸ್ಥೆ ಕಾರ್ಯಕ್ರಮದಡಿ ಹಲವು ಸಂಸ್ಥೆಗಳ ಒಕ್ಕೂಟಕ್ಕೆ(ಐಐಟಿ ಬಾಂಬೆ, ಟಾಟಾ ಇನ್ಸ್ ಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್, ಅಮೃತ ವಿಶ್ವ ವಿದ್ಯಾಪೀಠಂ ಮತ್ತು ಐಐಎಸ್ ಸಿ)ಗೆ ನೀಡಲಾಗಿದ್ದು, ಇದನ್ನು ಐಐಟಿ ಖರಗ್ಪುರ ನೇತೃತ್ವವಹಿಸಿದೆ. ಇದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ ಟಿ) ಬೆಂಬಲ ನೀಡಿದ್ದು, ಅದು ಭಾರತದ ಎರಡನೇ ದರ್ಜೆ ನಗರಗಳು ಎದುರಿಸುತ್ತಿರುವ ನೀರಿನ ಗುಣಮಟ್ಟ ಮತ್ತು ಪ್ರಮಾಣಕ್ಕೆ ಸಂಬಂಧಿಸಿದ ಸವಾಲುಗಳನ್ನು ಗುರುತಿಸುವುದು ಮತ್ತು ನಿವಾರಿಸುವುದಕ್ಕೆ ಒತ್ತು ನೀಡುತ್ತಿದೆ.
ಈ ಸೌಕರ್ಯದಲ್ಲಿ ಕ್ವಾಡ್ರುಪೋಲ್ ಇಂಡೆಕ್ಟಿವ್ಲಿ ಕಪಲ್ ಪ್ಲಾಸ್ಮಾ ಮಾಸ್ ಸ್ಪೆಕ್ರೋಮೀಟರ್ ಅನ್ನು ಘರ್ಷಣೆ ಪ್ರತಿಕ್ರಿಯೆ ಕೋಶ (ಕ್ಯೂಕ್ಯೂಕ್ಯೂ-ಐಸಿಪಿ-ಎಂಎಸ್) ಮತ್ತು ದುಪ್ಪಟ್ಟು ಪತ್ತೆ ಸಾಮರ್ಥ್ಯದ ಇಂಡೆಕ್ಟಿವ್ಲಿ ಕಪಲ್ ಪ್ಲಾಸ್ಮಾ ಆಪ್ಟಿಕಲ್ ಎಮಿಷನ್ ಸ್ಪೆಕ್ಟ್ರೋಮೀಟರ್(ಐಸಿಪಿ-ಒಇಎಸ್) ದೊಂದಿಗೆ ಅಳವಡಿಸಲಾಗಿದೆ.
ಈ ವಿಶ್ಲೇಷಣಾಕಾರಿ ಸೌಕರ್ಯ ಪರಿಸರಕ್ಕೆ ಪ್ರಮುಖವಾಗಿ ಹಾನಿ ಮಾಡುವ ಜೀವಾಣು ವಿಷಗಳಿಗೆ (ಅಂದರೆ ಸಿಆರ್, ಎಫ್ಇ, ಎನ್ಐ, ಸಿಯು, ಎಎಸ್, ಎಸ್ಇ, ಪಿಬಿ) ಇವುಗಳು 5 ಪಿಪಿಟಿಗಿಂತ ಕಡಿಮೆ ಇರುವಂತೆ ಮಿತಿಗೊಳಿಸುತ್ತವೆ. ಆದರೆ, ಐಸಿಪಿ-ಒಇಎಸ್ 100 ಪಿಪಿಎಂ (ಎಂಜಿ/ಎಲ್)ನಿಂದ 100 ಪಿಪಿಬಿ(µg/L)ಮಟ್ಟಕ್ಕಿಂತ ಕಡಿಮೆ ಇರುವ ಸಾಂದ್ರತೆ ನಿರ್ಧರಿಸುವಲ್ಲಿ ಪರಿಣಾಮಕಾರಿಯಾಗಿದೆ. ಈ ಕ್ಯೂಕ್ಯೂಕ್ಯೂ-ಐಸಿಪಿ-ಎಂಎಸ್ ಬಹುಪಯೋಗಿ ಪ್ರತಿಕ್ರಿಯೆ ಮತ್ತು ಅನಿಲಗಳ ಘರ್ಷಣೆಯಿಂದ ಸಜ್ಜಾಗಿದ್ದು, 10 ಪಿಪಿಟಿ(ಎನ್ ಜಿ/ಎಲ್)ಗಿಂತ ಕಡಿಮೆ ಇರುವಂತೆ ಆರು ವ್ಯವಸ್ಥೆಗಳ ಸಾಂದ್ರಕದಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಿಸಲಿದೆ.
***
(Release ID: 1726091)
Visitor Counter : 197