ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆರೋಗ್ಯ ಮತ್ತು ಇಂಧನ ಕ್ರಿಯಾ ವೇದಿಕೆ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಮಟ್ಟದ ಮೈತ್ರಿಕೂಟವನ್ನು ಉದ್ದೇಶಿಸಿ ಮಾತನಾಡಿದ ಡಾ.ಹರ್ಷವರ್ಧನ್


ಕಡಿಮೆ ಇಂಗಾಲದ ಹೊರಸೂಸುವಿಕೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಒಳಗೊಂಡ  ಆರ್ಥಿಕ ಪ್ರಗತಿಯ ಹೊಸ ಮಾದರಿಯ ಪ್ರವರ್ತಕನಾಗಿ ಭಾರತದ ವಿಶಿಷ್ಟ ಸ್ಥಾನ ಪಡೆದಿದೆ

"ಭಾರತದ ಮಾನವ ಕೇಂದ್ರಿತ ವಿಧಾನವು ವಿಶ್ವ ಕಲ್ಯಾಣಕ್ಕೆ ಶಕ್ತಿವರ್ಧಕವಾಗಬಹುದು": ಡಾ. ಹರ್ಷವರ್ಧನ್

Posted On: 10 JUN 2021 11:41AM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಅವರು ʻಆರೋಗ್ಯ ಮತ್ತು ಇಂಧನ ಕ್ರಿಯಾ ವೇದಿಕೆ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಮಟ್ಟದ ಮೈತ್ರಿಕೂಟʼ ಮೊದಲ ಸಭೆಯನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ಮೂಲಕ ಮಾತನಾಡಿದರು. ಸಭೆಯಲ್ಲಿ ಹಲವಾರು ಗಣ್ಯರು, ರಾಷ್ಟ್ರಗಳ ಮುಖ್ಯಸ್ಥರು ಹಾಗೂ ವಿಶ್ವ ಬ್ಯಾಂಕ್, ಯುಎನ್ಡಿಪಿ, ಯುಎನ್ಎಚ್ಆರ್ಸಿ, ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (ಐಆರ್ಇಎನ್) ಮುಂತಾದ ವಿವಿಧ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

https://static.pib.gov.in/WriteReadData/userfiles/image/image00176P9.jpg

https://static.pib.gov.in/WriteReadData/userfiles/image/image0022LEP.jpghttps://static.pib.gov.in/WriteReadData/userfiles/image/image0039YW6.jpg

ಸಚಿವರ ಭಾಷಣದ ವಿವರ ಹೀಗಿದೆ:

ಹಿಂದೆಂದೂ ಕಂಡು ಕೇಳಿರದಂತಹ  ಕೋವಿಡ್-19 ಸಾಂಕ್ರಾಮಿಕದ ತಲ್ಲಣದಿಂದ ವಿಶ್ವವು ಇನ್ನೂ ಹೊರಬಂದಿಲ್ಲ. ವಿಶ್ವಾದ್ಯಂತ ಮಾನವ ಜೀವಗಳನ್ನು ಉಳಿಸಲು ಮತ್ತು ಅಸ್ವಸ್ಥ್ಯತೆಯನ್ನು ತಗ್ಗಿಸಲು ಸರಕಾರಗಳು ಮತ್ತು ನಾಗರೀಕರು ಅಸಾಧಾರಣ ಕ್ರಮಗಳಿಗೆ ಮುಂದಾಗಬೇಕಾದ ಅನಿವಾರ್ಯ ಸ್ಥಿತಿಯನ್ನು ಸಾಂಕ್ರಾಮಿಕ ತಂದೊಡ್ಡಿದೆ. ಸಾಂಕ್ರಾಮಿಕ ಮತ್ತು ಅದನ್ನು ನಿರ್ವಹಿಸಲು ಅಗತ್ಯವಾದ ಅಗಾಧ ಪ್ರಯತ್ನಗಳು ವಿವಿಧ ವಲಯಗಳ ನಡುವೆ ಇರುವಂತಹ ಅಗಾಧ ಪರಸ್ಪರ ಅವಲಂಬನೆಯನ್ನು ಪುನರುಚ್ಚರಿಸಿವೆ. ಪರಿಣಾಮಕಾರಿ ಮತ್ತು ಸುಸ್ಥಿರ ಸೇವಾ ವಿತರಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ವಿವಿಧ ವಲಯಗಳ ನಡುವಿನ ಅಂತರ-ಸಂಪರ್ಕವನ್ನು ನಮ್ಮ ನೀತಿಗಳಲ್ಲೂ ಪ್ರತಿಬಿಂಬಿಸಬೇಕಾದ ಅಗತ್ಯವನ್ನೂ ಇದು ಒತ್ತಿ ಹೇಳುತ್ತದೆ.

ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆ ಎಂಬ ತಜ್ಞರ ಸಮಿತಿಯನ್ನು ನಮ್ಮ ಸರಕಾರವು ರಚಿಸಿದೆ. ಮಾನವ ಆರೋಗ್ಯದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಬಗ್ಗೆ ಸಾಮಾನ್ಯ ಜನರು, ಆರೋಗ್ಯ ಸೇವೆ ನೀಡುವಂಥವರು ಮತ್ತು ನೀತಿ ನಿರೂಪಕರಲ್ಲಿ ಜಾಗೃತಿ ಮೂಡಿಸುವ ಅನೇಕ ಉದ್ದೇಶಗಳೊಂದಿಗೆ ಇದನ್ನು ರಚಿಸಲಾಗಿದೆ ರಾಷ್ಟ್ರೀಯ ತಜ್ಞರ ತಂಡವು ಇತ್ತೀಚೆಗೆ ಏಪ್ರಿಲ್ 2021ರಲ್ಲಿ  ಗುರುತಿಸಲಾದ ಕೆಲವೊಂದು ಹವಾಮಾನ ಸೂಕ್ಷ್ಮ ರೋಗಗಳು ಮತ್ತು 'ಒಂದು ಆರೋಗ್ಯ' ಕುರಿತ ವಿಷಯ ನಿರ್ದಿಷ್ಟ ಆರೋಗ್ಯ ಕ್ರಿಯಾ ಯೋಜನೆಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದೆ.

"ಹಸಿರು ಮತ್ತು ಹವಾಮಾನ ಸ್ಥಿತಿಸ್ಥಾಪಕ ಆರೋಗ್ಯ ಸೌಲಭ್ಯಗಳ" ವಿಚಾರದಲ್ಲಿ, ಭಾರತವು 2017ರಲ್ಲಿ ʼಮಾಲೆ ಘೋಷಣೆʼಗೆ ಸಹಿ ಹಾಕಿತು ಮತ್ತು ಯಾವುದೇ ಹವಾಮಾನ ಕುರಿತಾದ ದುರ್ಘಟನೆಗಳನ್ನು ತಡೆದುಕೊಳ್ಳುವಂತಹ ಹವಾಮಾನ-ಸ್ಥಿತಿಸ್ಥಾಪಕ ಆರೋಗ್ಯ ಸೌಲಭ್ಯಗಳನ್ನು ಉತ್ತೇಜಿಸಲು ಸಮ್ಮತಿಸಿತು. ಭಾರತವು ಇಂದು ಕಡಿಮೆ ಇಂಗಾಲದ ಹೊರಸೂಸುವಿಕೆ ಮತ್ತು ಸಮಗ್ರ ಅಭಿವೃದ್ಧಿಯ ಆರ್ಥಿಕ ಪ್ರಗತಿಯ ಹೊಸ ಮಾದರಿಯ ಪ್ರವರ್ತಕನಾಗಿ ವಿಶಿಷ್ಟ ಸ್ಥಾನದಲ್ಲಿದೆʻಸಾರ್ವತ್ರಿಕ ಆರೋಗ್ಯ ರಕ್ಷಣೆಯ ಸಾಧನೆʼಯು ಸಹ ಇದರ ಪ್ರಮುಖ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ.

ಆರೋಗ್ಯ ಮತ್ತು ಇಂಧನ ವಲಯಗಳ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ದಿಟ್ಟ ರಾಜಕೀಯ ಹಾಗೂ ಆರ್ಥಿಕ ಬದ್ಧತೆಯನ್ನು ಪ್ರದರ್ಶಿಸುವುದು ತಕ್ಷಣದ ಅಗತ್ಯವಾಗಿದೆ ಎಂಬುದು ನಮ್ಮ ನಂಬಿಕೆ. ಕೋವಿಡ್-19 ಸಾಂಕ್ರಾಮಿಕೋತ್ತರ ದಿನಗಳಿಗೆ ರಾಷ್ಟ್ರಗಳು ಸಿದ್ಧವಾಗುತ್ತಿರುವ ಸಮಯದಲ್ಲಿ ಜಾಗತಿಕ ಮರುಹೊಂದಿಕೆಗೆ ಅದ್ಭುತವಾದ ಅವಕಾಶ ಒದಗಿಬಂದಿದೆಮಹತ್ವಾಕಾಂಕ್ಷೆಯ ಹಸಿರು ಉತ್ತೇಜನ ಯೋಜನೆಗಳು ದೇಶಗಳಿಗೆ  ತಮ್ಮ ಆರ್ಥಿಕತೆಯನ್ನು ಪುನಃಸ್ಥಾಪಿಸಲು ಮತ್ತು ಇಂಧನ ಪರಿವರ್ತನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಮೈತ್ರಿಕೂಟದ ಸಹಯೋಗ ಮತ್ತು ಸಾಮೂಹಿಕ ಕ್ರಮವು ಹಸಿರು ಹಾಗೂ ಆರೋಗ್ಯಕವಂತ ಭೂಗ್ರಹ ಸಾಧನೆಗೆ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ.

***



(Release ID: 1725906) Visitor Counter : 179