ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ

ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಈಶಾನ್ಯದ ಅಭಿವೃದ್ಧಿ ಯೋಜನೆಗಳಿಗೆ ಇಸ್ರೋ ಸಹಾಯ ಮಾಡುತ್ತದೆ - ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿಕೆ


ಇಸ್ರೊ ಈಗಾಗಲೇ ಮೇಲ್ವಿಚಾರಣೆ ನಡೆಸುತ್ತಿದೆ ಮತ್ತು ಈಶಾನ್ಯ ಪ್ರದೇಶದ 221 ತಾಣಗಳಲ್ಲಿ 67 ಯೋಜನೆಗಳನ್ನು ಜಿಯೋ-ಟ್ಯಾಗ್ ಮಾಡಿದೆ.

Posted On: 09 JUN 2021 4:47PM by PIB Bengaluru

ಈಶಾನ್ಯ ಪ್ರದೇಶದ ಅಭಿವೃದ್ಧಿ (ಡೊನರ್), ಎಂಒಎಸ್ ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ)ರಾದ  ಡಾ.ಜಿತೇಂದ್ರ ಸಿಂಗ್ ಅವರು, ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಈಶಾನ್ಯ ಪ್ರದೇಶದ ಅಭಿವೃದ್ಧಿ ಯೋಜನೆಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಮತ್ತು ಈಶಾನ್ಯ ಪ್ರದೇಶದ ಎಲ್ಲಾ ಎಂಟು ರಾಜ್ಯಗಳಲ್ಲಿ ಮೂಲಸೌಕರ್ಯ ಯೋಜನೆಗಳ ಉತ್ತಮ ಸಾಧನೆಗಾಗಿ ಸ್ಯಾಟಲೈಟ್ ಇಮೇಜಿಂಗ್ ಮತ್ತು ಇತರ ಬಾಹ್ಯಾಕಾಶ ತಂತ್ರಜ್ಞಾನ ಅನ್ವಯಿಕೆಗಳ ಅತ್ಯುತ್ತಮ ಬಳಕೆಯನ್ನು ನೀಡುವ ಮೂಲಕ ಸಹಾಯ ನೀಡುತ್ತದೆ.

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ (ಡೊನೆರ್) ಹಿರಿಯ ಅಧಿಕಾರಿಗಳು ಮತ್ತು ಇಸ್ರೋ ವಿಜ್ಞಾನಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಈಶಾನ್ಯದ ಎಂಟು ರಾಜ್ಯಗಳಲ್ಲಿ ಆರು ರಾಜ್ಯಗಳು ಈಗಾಗಲೇ ಇಸ್ರೊದಿಂದ ಕಾರ್ಯನಿರ್ವಹಣೆಗಾಗಿ  ತಮ್ಮ ನಿರ್ದಿಷ್ಟ ಪ್ರಸ್ತಾಪಗಳನ್ನು ಕಳುಹಿಸಿವೆ ಎಂದು ಹೇಳಿದರು.  ಉಳಿದ ಎರಡು ರಾಜ್ಯಗಳಾದ ಸಿಕ್ಕಿಂ ಮತ್ತು ಅಸ್ಸಾಂ ಶೀಘ್ರದಲ್ಲೇ ತಮ್ಮ ಪ್ರಸ್ತಾಪಗಳನ್ನು ಕಳುಹಿಸಲಿವೆ.

ಡೊನೆರ್ / ಎನ್ ಇ ಸಿ ಯಿಂದ ಧನಸಹಾಯ ಪಡೆದ ಎಲ್ಲಾ 8 ರಾಜ್ಯಗಳ 221 ತಾಣಗಳಲ್ಲಿ ಇಸ್ರೋ ಈಗಾಗಲೇ 67 ಯೋಜನೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಜಿಯೋ-ಟ್ಯಾಗಿಂಗ್ ಮಾಡುತ್ತಿದೆ ಎಂದು ಡಾ.ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು. ಇದು  ಇಡೀ ದೇಶದಲ್ಲಿ ಮೊದಲನೆಯದಾಗಿದ್ದು, ಇದರಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹೊಂದಾಣಿಕೆಯ ಪ್ರಕ್ರಿಯೆ ಮತ್ತು ದತ್ತಾಂಶವನ್ನು ಹಂಚಿಕೊಳ್ಳುವಲ್ಲಿ ಇಸ್ರೊದ ಸಾಂಸ್ಥಿಕ ಒಳಗೊಳ್ಳುವಿಕೆ ಇದೆ ಮತ್ತು ದು ಇತರ ರಾಜ್ಯಗಳಿಗೂ ಮಾದರಿಯಾಗಬಹುದು ಎಂದು ಅವರು ಹೇಳಿದರು.

ಕಳೆದ ಏಳು ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯವಾಗಿ ಉಪಗ್ರಹಗಳ ಉಡಾವಣೆಗೆ ಮಾತ್ರ ಸೀಮಿತವಾಗಿರದೆ, ಅದು ಅಭಿವೃದ್ಧಿ ಚಟುವಟಿಕೆಗಳಲ್ಲಿ ನಿರಂತರವಾಗಿ ತನ್ನ ಪಾತ್ರವನ್ನು ವಿಸ್ತರಿಸುತ್ತಿದೆ ಇದು ಮೋದಿ ಸರ್ಕಾರದ ಪ್ರಮುಖ ಮುಖ್ಯಾಂಶಗಳಲ್ಲಿ ಒಂದಾಗಿದೆ,  ಹೀಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ "ಭಾರತವನ್ನು ಪರಿವರ್ತಿಸುವ" ಧ್ಯೇಯಕ್ಕೆ ಕೊಡುಗೆ ನೀಡುತ್ತವೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು.

ಶಿಲ್ಲಾಂಗ್ನಲ್ಲಿರುವ ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ಸ್ ಕೇಂದ್ರ (ಎನ್ಇಎಸ್ಎಸಿ) ಈಶಾನ್ಯ ರಾಜ್ಯಗಳಿಂದ ಹಲವಾರು ಪ್ರಸ್ತಾಪಗಳನ್ನು ಸ್ವೀಕರಿಸಿದೆ. ಮುಂದಿನ ಹದಿನೈದು ದಿನಗಳಲ್ಲಿ ಅಂತಹ ಎಲ್ಲ ಯೋಜನೆಗಳ ಕಾರ್ಯಸಾಧ್ಯತೆ ಮತ್ತು ಅಪೇಕ್ಷಣೀಯತೆಯನ್ನು ಇದು ಚರ್ಚಿಸುತ್ತದೆ. ಗುರುತಿಸಿದ ನಂತರ, ಅಂತಹ ಎಲ್ಲಾ ಯೋಜನೆಗಳಿಗೆ ಆಯಾ ರಾಜ್ಯಗಳು ಮತ್ತು ಎನ್ಇಎಸ್ಎಸಿ ಜಂಟಿಯಾಗಿ ಧನಸಹಾಯ ನೀಡುವ ಸಾಧ್ಯತೆಯಿದೆ.
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಶಿಲ್ಲಾಂಗ್ಗೆ ಭೇಟಿ ನೀಡಿ ಈ ವರ್ಷದ ಜನವರಿಯಲ್ಲಿ ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ (ಎನ್ಇಎಸಿ) ಸೊಸೈಟಿಯೊಂದಿಗೆ ಸಭೆ ನಡೆಸಿದ್ದು, ಅಲ್ಲಿ ಕೈಗೊಳ್ಳಬೇಕಾದ ಪ್ರಮುಖ ಯೋಜನೆಗಳನ್ನು ಗುರುತಿಸಲಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಅರಣ್ಯ ಅಂತರ ಪ್ರದೇಶಗಳ  ಹೊಂದಾಣಿಕೆಯ ಪ್ರಕ್ರಿಯೆ, ತೋಟಗಾರಿಕೆ ಅಭಿವೃದ್ಧಿಗೆ ಭೂಪ್ರದೇಶದ ವಿಸ್ತರಣೆ, ಜೌಗು ಪ್ರದೇಶಗಳನ್ನು ಗುರುತಿಸುವುದು ಮತ್ತು ಪುನರುಜ್ಜೀವನಗೊಳಿಸುವುದು ಮತ್ತು ಪ್ರವಾಹದ ನೀರನ್ನು ತಿರುಗಿಸುವುದು, ಜೀವನೋಪಾಯದ ಅಗತ್ಯಗಳಿಗಾಗಿ ಬಿದಿರಿನ ಸಂಪನ್ಮೂಲಗಳ ಮೌಲ್ಯಮಾಪನ ಮುಂತಾದ ಕೆಲವು ಪ್ರಮುಖ ಯೋಜನೆಗಳು ನಡೆಯುತ್ತಿವೆ. ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಗೃಹ ಸಚಿವರು ಜುಲೈನಲ್ಲಿ ಮತ್ತೆ ಕೇಂದ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು. ಕೋವಿಡ್ ಪರಿಣಾಮಗಳ ಹೊರತಾಗಿಯೂ, ಈ ಯೋಜನೆಗಳನ್ನು ಕಾರ್ಯಗತಗೊಳಿಸುವಿಕೆಯಲ್ಲಿ ಹೆಚ್ಚಿನ ಮುನ್ನಡೆ ಸಾಧಿಸಲಾಗಿದೆ ಎಂದು ಅವರು ಹೇಳಿದರು.

ಈಶಾನ್ಯ ಪ್ರದೇಶದಲ್ಲಿ ಕೃಷಿ, ರೈಲ್ವೆ, ರಸ್ತೆಗಳು ಮತ್ತು ಸೇತುವೆಗಳು, ವೈದ್ಯಕೀಯ ನಿರ್ವಹಣೆ / ಟೆಲಿಮೆಡಿಸಿನ್, ಸಮಯೋಚಿತ ಬಳಕೆಯ ಪ್ರಮಾಣಪತ್ರಗಳ ಖರೀದಿ, ವಿಪತ್ತು ಮುನ್ಸೂಚನೆ ಮತ್ತು ನಿರ್ವಹಣೆ, ಹವಾಮಾನ / ಮಳೆ / ಪ್ರವಾಹ ಮುನ್ಸೂಚನೆ , ಇತ್ಯಾದಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈಗ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು. 

ಅಣೆಕಟ್ಟು ನಿರ್ಮಾಣ ಮತ್ತು ಪ್ರವಾಹ ತಗ್ಗಿಸುವಿಕೆ, ಮೂರು ಮಾದರಿ ಗ್ರಾಮಗಳು, ತೋಟಗಾರಿಕೆ ಮತ್ತು ಶೂನ್ಯ ಮಟ್ಟದಲ್ಲಿ ಗಡಿಯ ಬೇಲಿ ಮುಂತಾದ ಪ್ರದೇಶಗಳಲ್ಲಿ ಅರುಣಾಚಲ ಪ್ರದೇಶದ ಏಳು ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಇತರ ರಾಜ್ಯಗಳಿಂದ ಇದೇ ರೀತಿಯ ಯೋಜನೆಗಳು ಸಹ ಗುರಿ ಸಾಧಿಸುವ ಹಾದಿಯಲ್ಲಿವೆ.

ನಾರ್ತ್ ಈಸ್ಟರ್ನ್ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್ (ಎನ್ಇಎಸ್ಎಸಿ) ಶಿಲ್ಲಾಂಗ್ನಲ್ಲಿರುವ ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಎಂಟು ರಾಜ್ಯಗಳನ್ನು ಒಳಗೊಂಡಿರುವ ಭಾರತದ ಈಶಾನ್ಯ ಪ್ರದೇಶಕ್ಕೆ (ಎನ್ಇಆರ್) ಎಂದೇ ಸೇವೆಯನ್ನು ಒದಗಿಸುತ್ತದೆ. ಅವುಗಳೆಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರ.  ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಮೂಲಸೌಕರ್ಯ ಯೋಜನೆ, ಆರೋಗ್ಯ ರಕ್ಷಣೆ, ಶಿಕ್ಷಣ, ತುರ್ತು ಸಂವಹನ, ವಿಪತ್ತು ನಿರ್ವಹಣಾ ಬೆಂಬಲ ಮತ್ತು ಬಾಹ್ಯಾಕಾಶ ಕುರಿತು ಬಾಹ್ಯಾಕಾಶ ವಿಜ್ಞಾನ ಮತ್ತು ವಾಯುಮಂಡಲದ ವಿಜ್ಞಾನ ಸಂಶೋಧನೆಯಲ್ಲಿ ತಂತ್ರಜ್ಞಾನದ ಬೆಂಬಲವನ್ನು ನೀಡುವ ಮೂಲಕ ಭಾರತದ ಈಶಾನ್ಯ ಪ್ರದೇಶದ ಸಮಗ್ರ ಅಭಿವೃದ್ಧಿಯಲ್ಲಿ ಪರಿವರ್ತನೆ ತರುವ ಪಾತ್ರವನ್ನು ವಹಿಸುವ ಉದ್ದೇಶದಿಂದ ಕೇಂದ್ರವನ್ನು ಸ್ಥಾಪಿಸಲಾಯಿತು. 

****



(Release ID: 1725802) Visitor Counter : 174