ಪರಿಸರ ಮತ್ತು ಅರಣ್ಯ ಸಚಿವಾಲಯ

ಏಕ ಬಳಕೆ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಪರಿಸರ ಸಚಿವರು


ಪ್ಲಾಸ್ಟಿಕ್ ಒಂದು ಸಮಸ್ಯೆಯಲ್ಲ, ಆದರೆ ಸಂಗ್ರಹಿಸದ ಪ್ಲಾಸ್ಟಿಕ್ ತ್ಯಾಜ್ಯ ನಿಜವಾದ ಸಮಸ್ಯೆ: ಶ್ರೀ ಪ್ರಕಾಶ್ ಜಾವಡೇಕರ್

ಏಕ ಬಳಕೆಯ ಪ್ಲಾಸ್ಟಿಕ್‌ಗಳಿಗೆ ನವೀನ ಪರ್ಯಾಯಗಳನ್ನು ಅಭಿವೃದ್ಧಿಪಡಿಸಲು ʻಪ್ಲಾಸ್ಟಿಕ್ ಇಂಡಿಯಾ ಹ್ಯಾಕಥಾನ್ʼ ಘೋಷಿಸಿದ ಸಚಿವರು

Posted On: 08 JUN 2021 9:19PM by PIB Bengaluru

ಕಡಿಮೆ ಉಪಯುಕ್ತತೆ ಮತ್ತು ಪರಿಸರದ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುವಗುರುತಿಸಲಾದ ಕೆಲವೊಂದು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡುವ ಸರಾರದ ಬದ್ಧತೆಯನ್ನು ಕೇಂದ್ರ ಪರಿಸರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು ಪುನರುಚ್ಚರಿಸಿದರು. ಪ್ಲಾಸ್ಟಿಕ್ 20ನೇ ಶತಮಾನದ ಉಪಯುಕ್ತ ಆವಿಷ್ಕಾರವಾಗಿದ್ದರೂ, ಸಂಗ್ರಹಣೆ ಮಾಡದ ಪ್ಲಾಸ್ಟಿಕ್ ತ್ಯಾಜ್ಯವು ಪರಿಸರಕ್ಕೆ ಗಂಭೀರ ಅಪಾಯವಾಗಿ ಹೊರಹೊಮ್ಮಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

"ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಕಸದಿಂದ ಭೂ ಮತ್ತು ಜಲಪರಿಸರ ವ್ಯವಸ್ಥೆಗಳೆರಡರ ಮೇಲೂ ಆಗುವ ಪ್ರತಿಕೂಲ ಪರಿಣಾಮಗಳನ್ನು ಪರಿಗಣಿಸಿ, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಲು ಕರೆ ನೀಡಿದರು. ಜೊತಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸಲು ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ" ಎಂದು ಶ್ರೀ ಜಾವಡೇಕರ್ ಹೇಳಿದರು.

 

ಭಾರತ ಸರಕಾರವು ಈಗಾಗಲೇ ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಆಮದನ್ನು ನಿಷೇಧಿಸಿರುವ ವಿಷಯವನ್ನು ಸಚಿವರು ಒತ್ತಿ ಹೇಳಿದರು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪರಿಸರ ಸ್ನೇಹಿ ರೀತಿಯಲ್ಲಿ ಪ್ಲಾಸ್ಟಿಕ್ತ್ಯಾಜ್ಯವನ್ನು ನಿರ್ವಹಿಸಲು ಮೊದಲ ಬಾರಿಗೆ ʻಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು-2016ʼ ಅನ್ನು ಹೊರತಂದಿದೆ ಎಂದು ಸಚಿವರು ಸ್ಮರಿಸಿದರು. " ನಿಯಮಗಳ ಪ್ರಕಾರ 50 ಮೈಕ್ರಾನ್ಗಳಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳನ್ನು ನಿಷೇಧಿಸಲಾಗಿದೆ. ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗುರುತಿಸಲಾದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಸಹ ನಿಷೇಧಿಸಿವೆ. ಇದಿಷ್ಟೇ ಅಲ್ಲದೆ, ʻಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು-2016ʼಕ್ಕೆ ತಿದ್ದುಪಡಿ ಮಾಡಲು ಸಚಿವಾಲಯವು 2021 ಮಾರ್ಚ್ನಲ್ಲಿ ಕರಡು ಅಧಿಸೂಚನೆಯನ್ನು ಸಹ ಹೊರಡಿಸಿದೆ. ಗುರುತಿಸಲಾದ 12 ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು - ಉದಾಹರಣೆಗೆ ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಸ್ಪೂನ್ಇತ್ಯಾದಿಗಳನ್ನು ನಿಷೇಧಿಸುವ ಸಂಬಂಧ ಪ್ರಸ್ತಾಪವನ್ನು ಅಧಿಸೂಚನೆ ಒಳಗೊಂಡಿದೆ," ಎಂದು ಶ್ರೀ ಜಾವಡೇಕರ್ ಹೇಳಿದರು.

ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿರ್ಮೂಲನೆ ಮಾಡುವಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಸಚಿವರು ಒತ್ತಿ ಹೇಳಿದರು. ಜನರ ವರ್ತನೆಯಲ್ಲಿ ಬದಲಾವಣೆ ತರಲು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉಪಯೋಗ ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಹೇಳಿದರು. ಧ್ಯೇಯೋದ್ದೇಶದೊಂದಿಗೆ ಸಚಿವರು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಗುರುತಿಸಲಾದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿರ್ಮೂಲನೆ ಬಗ್ಗೆ ಎರಡು ತಿಂಗಳ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.

 

ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದೊಂದಿಗೆ ಜಿಐಝಡ್, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ) ಮತ್ತು ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಪ್ಐಸಿಸಿಐ) ಎರಡು ತಿಂಗಳ ಸುದೀರ್ಘ ಜಾಗೃತಿ ಅಭಿಯಾನವನ್ನು ಆಯೋಜಿಸುತ್ತಿವೆ. ನಾಲ್ಕು ಆನ್-ಲೈನ್ ಪ್ರಾದೇಶಿಕ ಕಾರ್ಯಕ್ರಮಗಳು ಮತ್ತು ಪ್ಲಾಸ್ಟಿಕ್ ಮಾಲಿನ್ಯವನ್ನು ತಗ್ಗಿಸುವ ಕುರಿತು ವ್ಯಾಪಕ ಮಟ್ಟದಲ್ಲಿ ಸಂದೇಶ ಸಾರುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಇದು ಒಳಗೊಂಡಿರುತ್ತದೆ. ಪ್ರಾದೇಶಿಕ ಕಾರ್ಯಕ್ರಮಗಳ ಅಂಗವಾಗಿ ಏಕ ಬಳಕೆಯ ಪ್ಲಾಸ್ಟಿಕ್ಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತ ಸಂವಾದ ಸಮಾವೇಶಗಳನ್ನು ನಡೆಸಲಾಗುತ್ತದೆ. ಸ್ಥಳೀಯ ಸಂಸ್ಥೆಗಳು, ಮಾಲಿನ್ಯ ನಿಯಂತ್ರಣ ಮಂಡಳಿಗಳು, ಉದ್ಯಮ, ಸಮಾಜಿಕ ಸಂಘಟನೆಗಳು ಮತ್ತು ನಾಗರಿಕರರು ಸೇರಿದಂತೆ ವ್ಯಾಪಕ ಶ್ರೇಣಿಯ ಮಧ್ಯಸ್ಥಗಾರರು ಸಂವಾದಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯ ಮಾಲಿನ್ಯ ನಿರ್ವಹಣೆ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ವಿಚಾರದಲ್ಲಿ ನಾವಿನ್ಯ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸಲು, ಶ್ರೀ ಜಾವಡೇಕರ್ ಅವರು "ಇಂಡಿಯಾ ಪ್ಲಾಸ್ಟಿಕ್ ಚಾಲೆಂಜ್ - ಹ್ಯಾಕಥಾನ್ 2021" ಅನ್ನು ಘೋಷಿಸಿದರು. ಇದೊಂದು ವಿಶಿಷ್ಟ ಸ್ಪರ್ಧೆಯಾಗಿದ್ದು, ಪ್ಲಾಸ್ಟಿಕ್ ಮಾಲಿನ್ಯವನ್ನು ತಗ್ಗಿಸಲು ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ಗೆ ಪರ್ಯಾಯಗಳನ್ನು ಅಭಿವೃದ್ಧಿಪಡಿಸಲು ನವೋದ್ಯಮಗಳು / ಉದ್ಯಮಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ (ಎಚ್ಇಐಗಳು) ವಿದ್ಯಾರ್ಥಿಗಳಿಗೆ ಕರೆ ನೀಡುತ್ತದೆ.

ಅಲ್ಲದೆ, ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುವುದರಿಂದ ಉಂಟಾಗುವ ಪ್ಲಾಸ್ಟಿಕ್ ಮಾಲಿನ್ಯದ ಕುರಿತಾದ ಜಾಗೃತಿಯನ್ನು ವಿದ್ಯಾರ್ಥಿಗಳವರೆಗೂ ತಲುಪಿಸುವ ನಿಟ್ಟಿನಲ್ಲಿ, ಶಾಲಾ ವಿದ್ಯಾರ್ಥಿಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯನ್ನು ಸಹ ಘೋಷಿಸಲಾಯಿತು.

ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಶ್ರೀ ಆರ್.ಪಿ. ಗುಪ್ತಾ; ಜರ್ಮನಿ ಸರಕಾರದ ಪರಿಸರ ಸಚಿವಾಲಯದ ರಾಜ್ಯ ಕಾರ್ಯದರ್ಶಿ ಶ್ರೀ ಜೋಶೆನ್ ಫ್ಲಾಸ್ ಬರ್ತ್; ಏಷ್ಯಾ ಮತ್ತು ಪೆಸಿಫಿಕ್ಹಾಗೂ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಪ್ರಾದೇಶಿಕ ನಿರ್ದೇಶಕ ಡಾ. ಡೆಚೆನ್ ಸೆರಿಂಗ್, ಎಫ್ಐಸಿಸಿಐ ಪ್ರಧಾನ ಕಾರ್ಯದರ್ಶಿ, ಯುಎನ್ಡಿಪಿ ಭಾರತದ ಕಚೇರಿ ಮುಖ್ಯಸ್ಥರು, ʻಜಿಐಝೆಡ್ʼ ದೇಶಿಯ ನಿರ್ದೇಶಕರು ಉದ್ಘಾಟನೆ ಸಂದರ್ಭದಲ್ಲಿ ಹಾಜರಿದ್ದರು

***



(Release ID: 1725639) Visitor Counter : 12161