ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ 19 ಲಿಸಿಕಾ ಅಭಿಯಾನದ ಬಗ್ಗೆ  ಹೊಸ ಮಾಹಿತಿ 


ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 25 ಕೋಟಿಗಿಂತ ಹೆಚ್ಚು ಲಸಿಕೆ ಡೋಸ್ ಗಳನ್ನು ಒದಗಿಸಲಾಗಿದೆ

ಲಸಿಕೆ ನೀಡಲು ರಾಜ್ಯಗಳು /  ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.33 ಕೋಟಿಗಿಂತ ಹೆಚ್ಚಿನ ಡೋಸುಗಳು ಲಭ್ಯವಿವೆ

Posted On: 09 JUN 2021 12:18PM by PIB Bengaluru

ರಾಷ್ಟ್ರವ್ಯಾಪಿ  ಲಸಿಕಾ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬೆಂಬಲಿಸುತ್ತಿದೆಇದರ ಜೊತೆಗೆ, ಸರ್ಕಾರ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಲಸಿಕೆಗಳನ್ನು ನೇರವಾಗಿ ಖರೀದಿಸಲು ಸಹಕರಿಸುತ್ತಿದೆ. ಲಸಿಕೆ ಹಾಕುವುದು ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ, ಜೊತೆಗೆ ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಕೋವಿಡ್ ಸೂಕ್ತ ವರ್ತನೆಯು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಭಾಗವಾಗಿದೆ.

 ಕೋವಿಡ್ -19  ಲಸಿಕಾಕರಣದ ಉದಾರೀಕೃತ ಮತ್ತು ವೇಗವರ್ಧಿತ ಹಂತ -3 ಲಸಿಕಾ ಕಾರ್ಯತಂತ್ರ ಮೇ 1, 2021 ರಿಂದ ಪ್ರಾರಂಭಿಸಲಾಗಿದೆ,

ಕಾರ್ಯತಂತ್ರದಲ್ಲಿ, ಪ್ರತಿ ತಿಂಗಳು ಒಟ್ಟು  ಕೇಂದ್ರೀಯ ಔಷಧ ಪ್ರಯೋಗಾಲಯ (ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ -ಸಿಡಿಎಲ್) ಅನುಮತಿಸಿದ ಯಾವುದೇ ಉತ್ಪಾದಕರ ಲಸಿಕೆ ಡೋಸುಗಳನ್ನು ಭಾರತ ಸರ್ಕಾರದ ವತಿಯಿಂದ ಸಂಗ್ರಹಿಸಲಾಗುತ್ತದೆ. ಡೋಸುಗಳನ್ನು ಹಿಂದೆ ಮಾಡಿದಂತೆ ರಾಜ್ಯ ಸರ್ಕಾರಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಭಾರತ ಸರ್ಕಾರವು ಇಲ್ಲಿಯವರೆಗೆ ಉಚಿತ ವಿಭಾಗದ ಮೂಲಕ ಮತ್ತು ನೇರ ರಾಜ್ಯ ಖರೀದಿ ವಿಭಾಗದ ಮೂಲಕ ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ 25 ಕೋಟಿಗೂ (23,35,86,960) ಹೆಚ್ಚು ಲಸಿಕೆ ಡೋಸ್ ಗಳನ್ನು ಒದಗಿಸಿದೆ.

ಇದರಲ್ಲಿ, ಪೋಲಾಗುವ ಪ್ರಮಾಣ ಸೇರಿದಂತೆ ಒಟ್ಟು ಬಳಕೆ 23,74,21,808 ಡೋಸ್ ಗಳು ಆಗಿವೆ (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ).

ನೀಡಲು ಇನ್ನೂ 1.33 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸುಗಳು (1,64,42,938) ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆ.  

ಇದಲ್ಲದೆ, 3 ಲಕ್ಷಕ್ಕೂ ಹೆಚ್ಚು (3,81,750) ಲಸಿಕೆ ಡೋಸ್ ಗಳು  ತಯಾರಿಕೆಯ ಹಂತದಲ್ಲಿವೆ  ಮತ್ತು ಮುಂದಿನ 3 ದಿನಗಳಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗಲಿವೆ.

***



(Release ID: 1725605) Visitor Counter : 202