ಹಣಕಾಸು ಸಚಿವಾಲಯ

17 ರಾಜ್ಯಗಳಿಗೆ 9,871 ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ


ಕಳೆದ 3 ತಿಂಗಳುಗಳಲ್ಲಿ ಒಟ್ಟು ಆದಾಯ ಕೊರತೆ ಅನುದಾನ ರೂ.29,613 ಕೋಟಿ ಬಿಡುಗಡೆ

प्रविष्टि तिथि: 09 JUN 2021 12:30PM by PIB Bengaluru

ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಮಂಗಳವಾರ 17 ರಾಜ್ಯಗಳಿಗೆ 2021-22ನೇ ಸಾಲಿನ ಹಂಚಿಕೆ ನಂತರದ ಆದಾಯ ಕೊರತೆ(ಪಿಡಿಆರ್.ಡಿ.) 3ನೇ ತಿಂಗಳ ಕಂತು 9,871 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಮೂರನೆ ಕಂತಿನ ಬಿಡುಗಡೆಯೊಂದಿಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾದ ಹಂಚಿಕೆ ನಂತರದ ಆದಾಯ ಕೊರತೆಯ ಒಟ್ಟು ಮೊತ್ತ 29,613 ಕೋಟಿ ರೂ. ಆಗಿದೆ. ಮಂಗಳವಾರ 2021-22ನೇ ಸಾಲಿನಲ್ಲಿ ಬಿಡುಗಡೆ ಮಾಡಲಾದ ಹಂಚಿಕೆ ನಂತರದ ಅನುದಾನದ ರಾಜ್ಯವಾರು ವಿವರವನ್ನು ಲಗತ್ತಿಸಲಾಗಿದೆ.

ಸಂವಿಧಾನದ ವಿಧಿ 275 ಅಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ನಂತರದ ಆದಾಯ ಕೊರತೆಯ ಅನುದಾನವನ್ನು ಒದಗಿಸುತ್ತದೆ. ಹಂಚಿಕೆ ನಂತರದ ಆದಾಯ ಕೊರತೆಯನ್ನು ಸರಿದೂಗಿಸಲು ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. 15ನೇ ಹಣಕಾಸು ಆಯೋಗವು 1 ರಾಜ್ಯಗಳಿಗೆ ಹಂಚಿಕೆ ನಂತರದ ಕೊರತೆಯ ಅನುದಾನಕ್ಕೆ ಶಿಫಾರಸು ಮಾಡಿತ್ತು.

ಹಂಚಿಕೆ ನಂತರದ ಆದಾಯ ಕೊರತೆ ಅನುದಾನಕ್ಕೆ ಶಿಫಾರಸು ಮಾಡಲಾದ ರಾಜ್ಯಗಳೆಂದರೆ: ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಪಂಜಾಬ್, ರಾಜಾಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.

ಅನುದಾನವನ್ನು ಪಡೆಯಲು ರಾಜ್ಯಗಳಿಗೆ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ಆದಾಯದ ಮೌಲ್ಯಮಾಪನ ಮತ್ತು ರಾಜ್ಯದ ಖರ್ಚಿನ ನಡುವಿನ ಅಂತರವನ್ನು ಆಧರಿಸಿ ನಿರ್ಧರಿಸುತ್ತದೆ. 2021-22 ಆರ್ಥಿಕ ವರ್ಷಕ್ಕೆ ಮೌಲ್ಯಮಾಪನ ಹಂಚಿಕೆಯನ್ನು ಆಯೋಗವು ಗಣನೆಗೆ ತೆಗೆದುಕೊಂಡಿದೆ.

15ನೇ ಹಣಕಾಸು ಆಯೋಗವು 2021-22ನೇ ಸಾಲಿಗೆ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ. ಹಂಚಿಕೆ ನಂತರದ ಆದಾಯ ಕೊರತೆಯ ಅನುದಾನವನ್ನು ಶಿಫಾರಸು ಮಾಡಿದೆ. ಅನುದಾನವನ್ನು 12 ಮಾಸಿಕ ಕಂತುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ.

ರಾಜ್ಯವಾರು ಹಂಚಿಕೆ ನಂತರದ ಆದಾಯ ಕೊರತೆ ಅನುದಾನ ಬಿಡುಗಡೆ

ಕ್ರ.ಸಂ

ರಾಜ್ಯದ ಹೆಸರು

ಜೂನ್ 2021ರಲ್ಲಿ ಬಿಡುಗಡೆ ಮಾಡಿದ ಮೊತ್ತ (3ನೇ ಕಂತು)

(ರೂ. ಕೋಟಿಗಳಲ್ಲಿ)

2021-22ರಲ್ಲಿ ಬಿಡುಗಡೆ ಮಾಡಲಾದ ಒಟ್ಟು ಮೊತ್ತ

(ಏಪ್ರಿಲ್ -ಜೂನ್ 2021)

(ರೂ. ಕೋಟಿಗಳಲ್ಲಿ)

 

ಆಂಧ್ರಪ್ರದೇಶ

1438.08

4314.24

 

ಅಸ್ಸಾಂ

531.33

1593.99

 

ಹರಿಯಾಣ

11.00

33

 

ಹಿಮಾಚಲ ಪ್ರದೇಶ

854.08

2562.24

 

ಕರ್ನಾಟಕ

135.92

407.76

 

ಕೇರಳ

1657.58

4972.74

 

ಮಣಿಪುರ

210.33

630.99

 

ಮೇಘಾಲಯ

106.58

319.74

 

ಮಿಜೋರಾಂ

149.17

447.51

 

ನಾಗಾಲ್ಯಾಂಡ್

379.75

1139.25

 

ಪಂಜಾಬ್

840.08

2520.24

 

ರಾಜಾಸ್ಥಾನ

823.17

2469.51

 

ಸಿಕ್ಕಿಂ

56.50

169.5

 

ತಮಿಳುನಾಡು

183.67

551.01

 

ತ್ರಿಪುರಾ

378.83

1136.49

 

ಉತ್ತರಾಖಂಡ್

647.67

1943.01

 

ಪಶ್ಚಿಮ ಬಂಗಾಳ

1467.25

4401.75

 

ಒಟ್ಟು

9,871.00

29,613.00

***


(रिलीज़ आईडी: 1725564) आगंतुक पटल : 385
इस विज्ञप्ति को इन भाषाओं में पढ़ें: Telugu , Urdu , हिन्दी , Punjabi , Tamil , Bengali , English , Marathi , Manipuri , Malayalam