ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಶೈಕ್ಷಣಿಕ ಉದ್ದೇಶಗಳಿಗಾಗಿ, ಅಥವಾ ಉದ್ಯೋಗಾವಕಾಶಗಳಿಗಾಗಿ ಅಥವಾ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಭಾರತದ  ತಂಡದ ಭಾಗವಾಗಿ ಅಂತರರಾಷ್ಟ್ರೀಯ ಪ್ರಯಾಣವನ್ನು ಕೈಗೊಳ್ಳುವ ವ್ಯಕ್ತಿಗಳಿಗೆ ಲಸಿಕೆ ನೀಡಲು ಕೇಂದ್ರವು ಪ್ರಮಾಣಿತ ಕಾರ್ಯಾಚರಣಾ ವಿಧಾನ - ಮಾರ್ಗಸೂಚಿ.(ಎಸ್‌ಒಪಿ) ಗಳನ್ನು ನೀಡಿದೆ


ಅಂತಹ ಪ್ರಯಾಣಿಕರ ಪಾಸ್‌ಪೋರ್ಟ್‌ ಗೆ ಕೋವಿನ್ ಪ್ರಮಾಣಪತ್ರಗಳನ್ನು ಕೂಡಿಸಬೇಕು

ಲಸಿಕೆ ಪ್ರಕಾರವನ್ನು “ಕೋವಿಶೀಲ್ಡ್” ಎಂದು ಉಲ್ಲೇಖಿಸಿದರೆ ಸಾಕು; ಲಸಿಕೆ ಪಡೆದ ಪ್ರಮಾಣಪತ್ರಗಳಲ್ಲಿ ಯಾವುದೇ ಅರ್ಹತಾ ನಮೂದುಗಳ ಅಗತ್ಯವಿಲ್ಲ

Posted On: 07 JUN 2021 7:13PM by PIB Bengaluru

ವರ್ಷದ ಜನವರಿ 16 ರಿಂದ ಸಂಪೂರ್ಣ ಸರ್ಕಾರವಿಧಾನದ ಅಡಿಯಲ್ಲಿ ಪರಿಣಾಮಕಾರಿ ಲಸಿಕಾ ಅಭಿಯಾನದ ಚಾಲನೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಭಾರತ ಸರ್ಕಾರ ಬೆಂಬಲ ನೀಡುತ್ತಿದೆ. ಲಸಿಕಾ ಅಭಿಯಾನವನ್ನು ಸಾರ್ವತ್ರಿಕಗೊಳಿಸುವ ಉದ್ದೇಶದಿಂದ, ಸರ್ಕಾರವು ಮೇ 1, 2021 ರಿಂದ ಭಾರತದ ಲಸಿಕೆ ತಂತ್ರದ ಉದಾರೀಕರಣದ ಮೂರನೇ ಹಂತದ ಪ್ರಾರಂಭದೊಂದಿಗೆ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ಲಸಿಕೆ ನೀಡುವುದನ್ನು ಪ್ರಾರಂಭಿಸಿತು.

ಜನರ ಎಲ್ಲಾ ವಿಭಾಗಗಳ ವ್ಯಾಪ್ತಿಯನ್ನು ಹೆಚ್ಚಿಸಲು ಲಸಿಕಾ ಅಭಿಯಾನದ  ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಕೇಂದ್ರ ಸರ್ಕಾರದ ನಿರಂತರ ಪ್ರಯತ್ನವಾಗಿದೆ. ನಿಟ್ಟಿನಲ್ಲಿ, ಕೋವಿಶೀಲ್ಡ್   ಮೊದಲ ಡೋಸ್ ಅನ್ನು ಮಾತ್ರ ತೆಗೆದುಕೊಂಡಿರುವ ಶೈಕ್ಷಣಿಕ ಉದ್ದೇಶಗಳಿಗಾಗಿ ಅಥವಾ ಉದ್ಯೋಗಕ್ಕಾಗಿ, ಅಥವಾ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಭಾರತದ ತಂಡದ  ಭಾಗವಾಗಿ ಅಂತರರಾಷ್ಟ್ರೀಯ ಪ್ರಯಾಣವನ್ನು ಕೈಗೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳಿಗೆ, ಆದರೆ ಮೊದಲ ಡೋಸ್ ಹಾಕಿಸಿಕೊಂಡ ದಿನದಿಂದ   84 ದಿನಗಳ ಪ್ರಸ್ತುತ ಕಡ್ಡಾಯವಾದ ಕನಿಷ್ಠ ಮಧ್ಯಂತರವನ್ನು ಪೂರ್ಣಗೊಳಿಸುವ ಮೊದಲು ಅವರ ಯೋಜಿತ ಪ್ರಯಾಣದ ದಿನಾಂಕಗಳು ಇರುವ ವ್ಯಕ್ತಿಗಳಿಗೆ, ಅಂತವರಿಂದ ಸ್ವೀಕರಿಸಿದ ಹಲವಾರು ಕೋರಿಕೆಗಳನ್ನು ಗಮನಿಸಿಕೋವಿಶೀಲ್ಡ್   ಎರಡನೇ ಡೋಸ್ ನೀಡುವುದನ್ನು ಅನುಮತಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಲಸಿಕೆ ಹಾಕಲು ಅನುಕೂಲವಾಗುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.

ನಿಟ್ಟಿನಲ್ಲಿ ಸಚಿವಾಲಯವು ಎಸ್ಒಪಿಗಳನ್ನು ಹೊರಡಿಸಿದ್ದು, ಇವುಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗಿದೆ. ಎಸ್ಒಪಿಗಳನ್ನು ತಕ್ಷಣ ಕಾರ್ಯಗತಗೊಳಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ವ್ಯಾಪಕವಾಗಿ ಪ್ರಚಾರ ಮಾಡಲು ಮತ್ತು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಎಸ್ಒಪಿ - ಮಾರ್ಗಸೂಚಿಗಳು ಹೀಗಿವೆ:

ಪ್ರಸ್ತುತಕೋವಿಡ್-19 (NEGVAC) ಗಾಗಿ ಲಸಿಕೆ ನೀಡುವಿಕೆಯ ರಾಷ್ಟ್ರೀಯ ತಜ್ಞರ ಗುಂಪಿನ ಶಿಫಾರಸುಗಳ ಆಧಾರದ ಮೇಲೆರಾಷ್ಟ್ರೀಯ ಕೋವಿಡ್ -19 ಲಸಿಕೆ ನೀಡಿಕೆ ಕಾರ್ಯತಂತ್ರದ ಅಡಿಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು 1 ನೇ ಡೋಸ್ ನೀಡಿದ ನಂತರ 12-16 ವಾರಗಳ ಮಧ್ಯಂತರದಲ್ಲಿ (ಅಂದರೆ 84 ದಿನಗಳ ನಂತರ) 2 ನೇ ಡೋಸ್ ಅನ್ನು ನೀಡುವುದು.

ಕೋವಿಶೀಲ್ಡ್   ಮೊದಲ ಡೋಸ್ ಅನ್ನು ಮಾತ್ರ ತೆಗೆದುಕೊಂಡಿರುವ ಶೈಕ್ಷಣಿಕ ಉದ್ದೇಶಗಳಿಗಾಗಿ ಅಥವಾ ಉದ್ಯೋಗಕ್ಕಾಗಿ, ಅಥವಾ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಭಾರತದ ತಂಡದ  ಭಾಗವಾಗಿ ಅಂತರರಾಷ್ಟ್ರೀಯ ಪ್ರಯಾಣವನ್ನು ಕೈಗೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳಿಗೆ, ಆದರೆ ಮೊದಲ ಡೋಸ್ ಹಾಕಿಸಿಕೊಂಡ ದಿನದಿಂದ   84 ದಿನಗಳ ಪ್ರಸ್ತುತ ಕಡ್ಡಾಯವಾದ ಕನಿಷ್ಠ ಮಧ್ಯಂತರವನ್ನು ಪೂರ್ಣಗೊಳಿಸುವ ಮೊದಲು ಅವರ ಯೋಜಿತ ಪ್ರಯಾಣದ ದಿನಾಂಕಗಳು ಇರುವ ವ್ಯಕ್ತಿಗಳಿಗೆ, ಅಂತವರಿಂದ ಹಲವಾರು ಕೋರಿಕೆಗಳನ್ನು ಸ್ವೀಕರಿಸಿರುವುದರಿಂದ ವಿಷಯವನ್ನು ಸಶಕ್ತ ಗುಂಪು 5 (ಇಜಿ -5) ನಲ್ಲಿ ಚರ್ಚಿಸಲಾಗಿದೆ ಮತ್ತು ಸಂದರ್ಭದಲ್ಲಿ ಸೂಕ್ತ ಶಿಫಾರಸುಗಳನ್ನು ಸ್ವೀಕರಿಸಲಾಗಿದೆ.

ಲಸಿಕೆಯನ್ನು  ಸರ್ವರಿಗೂ ಒದಗಿಸುವ ಉದ್ದೇಶದಿಂದ ಮತ್ತು ನೈಜ ಕಾರಣಗಳಿಗಾಗಿ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅನುಕೂಲವಾಗುವಂತೆ, ಅಂತಹ ಫಲಾನುಭವಿಗಳಿಗೆ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನೀಡುವಿಕೆಗೆ ಕೆಳಗಿನ ವಿಧಾನವನ್ನು ಅನುಸರಿಸಲಾಗುತ್ತದೆ.

ವಿಶೇಷ ವಿತರಣೆಯು ಲಭ್ಯವಿರುತ್ತದೆ -

) ಶಿಕ್ಷಣದ ಉದ್ದೇಶಗಳಿಗಾಗಿ ವಿದೇಶ ಪ್ರಯಾಣವನ್ನು ಕೈಗೊಳ್ಳಬೇಕಾದ ವಿದ್ಯಾರ್ಥಿಗಳು.

ಬಿ) ವಿದೇಶಗಳಲ್ಲಿ ಉದ್ಯೋಗ ಮಾಡಬೇಕಾದ ವ್ಯಕ್ತಿಗಳು

ಸಿ) ಟೋಕಿಯೊದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಮತ್ತು ಭಾರತೀಯ ತಂಡದ ಸಿಬ್ಬಂದಿ.

ಕೋವಿಶೀಲ್ಡ್ ಎರಡನೇ ಡೋಸ್ನ ಆಡಳಿತಕ್ಕೆ ಅನುಮತಿಗಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರತಿ ಜಿಲ್ಲೆಯಲ್ಲಿ ಸಮರ್ಥ ಪ್ರಾಧಿಕಾರವನ್ನು ನೇಮಿಸುತ್ತವೆ.

ಮೊದಲ ಡೋಸ್ ದಿನದಿಂದ 84 ದಿನಗಳ ಅವಧಿಯ ಮೊದಲು ಎರಡನೇ ಡೋಸ್ ನೀಡುವಿಕೆಗೆ  ಅನುಮತಿಯ ಪ್ರಕಾರ ಸಕ್ಷಮ ಪ್ರಾಧಿಕಾರವು ಕೆಳಗಿನವುಗಳನ್ನು ಪರಿಶೀಲಿಸುತ್ತದೆ

ಮೊದಲ ಡೋಸ್ ದಿನದ ನಂತರ 28 ದಿನಗಳ ಅವಧಿ ಮುಗಿದಿದೆಯೆ.

ಬಿ) .ಸಂಬಂಧಿಸಿದ ದಾಖಲೆಗಳ ಆಧಾರದ ಮೇಲೆ ಪ್ರಯಾಣದ ಉದ್ದೇಶದ ಪ್ರಾಮಾಣಿಕತೆ -

  1. ಪ್ರವೇಶ ಶಿಕ್ಷಣಕ್ಕಾಗಿ ನೀಡಿದ ಪತ್ರಗಳು ಅಥವಾ ಸಂಬಂಧಿತ ಪತ್ರವ್ಯವಹಾರ.
  2. ಈಗಾಗಲೇ ವಿದೇಶಿ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವವರು ಮತ್ತು ಅವರ ಶಿಕ್ಷಣವನ್ನು ಮುಂದುವರಿಸಲು ಸಂಸ್ಥೆಗೆ ಮರಳಬೇಕಾಗಿದೆಯೆ.
  3. ಉದ್ಯೋಗಕ್ಕಾಗಿ ಸಂದರ್ಶನದ ಕರೆ  ಅಥವಾ ಉದ್ಯೋಗವನ್ನು  ಸ್ವೀಕರಿಸಲು ನೀಡಿರುವ ಪತ್ರ.
  4. ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ನಾಮನಿರ್ದೇಶನ.

ಸಿಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ಅನುಮತಿಸುವ ಗುರುತಿನ ದಾಖಲೆಗಳಲ್ಲಿ ಒಂದಾದ ಪಾಸ್ಪೋರ್ಟ್ ಮೂಲಕ ಲಸಿಕೆಯನ್ನು ಪಡೆಯಬಹುದು ಎಂದು ಸಲಹೆ ನೀಡಲಾಗುತ್ತದೆ, ಇದರಿಂದಾಗಿ ಪಾಸ್ಪೋರ್ಟ್ ಸಂಖ್ಯೆಯನ್ನು ಪ್ರಮಾಣಪತ್ರದಲ್ಲಿ ಮುದ್ರಿಸಲಾಗುತ್ತದೆ. ಮೊದಲ ಡೋಸ್ ನೀಡುವಿಕೆಯ ಸಮಯದಲ್ಲಿ ಪಾಸ್ಪೋರ್ಟ್ ಬಳಸದಿದ್ದರೆ, ಲಸಿಕೆಗಾಗಿ ಬಳಸಲಾದ ಫೋಟೋ ಐಡಿ ಕಾರ್ಡ್ ವಿವರಗಳನ್ನು ಲಸಿಕಾಕರಣದ ಪ್ರಮಾಣಪತ್ರದಲ್ಲಿ ಮುದ್ರಿಸಲಾಗುತ್ತದೆ ಮತ್ತು ಲಸಿಕಾಕರಣದ ಪ್ರಮಾಣಪತ್ರದಲ್ಲಿ ಪಾಸ್ಪೋರ್ಟ್ ಉಲ್ಲೇಖವನ್ನು ಒತ್ತಾಯಿಸಬಾರದು. ಅಗತ್ಯವಿದ್ದಲ್ಲಿ, ಲಸಿಕೆ ಪ್ರಮಾಣಪತ್ರವನ್ನು ಫಲಾನುಭವಿಯ ಪಾಸ್ಪೋರ್ಟ್ ಸಂಖ್ಯೆಯೊಂದಿಗೆ ಕೂಡಿಸುವ  ಸಕ್ಷಮ ಪ್ರಾಧಿಕಾರವು ಮತ್ತೊಂದು ಪ್ರಮಾಣಪತ್ರವನ್ನು ನೀಡಬಹುದು.

ಡಿ) 2021 ಆಗಸ್ಟ್ 31 ಅವಧಿಯಲ್ಲಿ ನಿರ್ದಿಷ್ಟ ಉದ್ದೇಶಗಳಿಗಾಗಿ ಅಂತರರಾಷ್ಟ್ರೀಯ ಪ್ರಯಾಣವನ್ನು ಕೈಗೊಳ್ಳಬೇಕಾದವರಿಗೆ ಸೌಲಭ್ಯ ಲಭ್ಯವಿರುತ್ತದೆ.

) ಸಚಿವಾಲಯದ ಮಾರ್ಗಸೂಚಿಗಳಲ್ಲಿ ಸೂಚಿಸಲಾದ ಎಲ್ಲಾ ತಾಂತ್ರಿಕ ಶಿಷ್ಟಾಚಾರಗಳನ್ನು  ಕೋವಿಡ್ ಲಸಿಕಾ ಕೇಂದ್ರಗಳು ಮತ್ತು AEFI ವ್ಯವಸ್ಥಾಪಕರು ಮತ್ತು ಇತ್ಯಾದಿಗಳು ಅನುಸರಿಸಬೇಕು.

2021 ಜೂನ್ 3 ರಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನಿರ್ಮಿಸಿದ ಮತ್ತು ಡಿಸಿಜಿಐ ಅನುಮೋದಿಸಿದ ಕೋವಿಶೀಲ್ಡ್-ಯು ಬಳಸಬಹುದಾದ ಲಸಿಕೆಗಳಲ್ಲಿ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆಯು  ಸ್ಪಷ್ಟಪಡಿಸಿದೆ. ಸಂಬಂಧಿತ ಪಟ್ಟ ನಮೂದು WHO EUL ಸರಣಿ ಸಂಖ್ಯೆ 4 ರಲ್ಲಿ ಲಭ್ಯವಿದೆ:

https://extranet.who.int/pqweb/sites/default/files/documents/Status%20of%20COVID-19%20Vaccines%20within%20WHO%20EUL-PQ%20evaluation%20process%20-%203%20June%202021.pdf

ಲಸಿಕೆ ಪ್ರಕಾರವನ್ನು ಕೋವಿಶೀಲ್ಡ್ಎಂದು ಉಲ್ಲೇಖಿಸಿದರೆ ಸಾಕು; ಲಸಿಕಾಕರಣದ ಪ್ರಮಾಣಪತ್ರಗಳಲ್ಲಿ ಯಾವುದೇ ಅರ್ಹತಾ ನಮೂದುಗಳ ಅಗತ್ಯವಿಲ್ಲ

ಕೋವಿನ್ ವ್ಯವಸ್ಥೆಯು ಶೀಘ್ರದಲ್ಲೇ ಅಂತಹ ವಿಶೇಷ ಸಂದರ್ಭಗಳಲ್ಲಿ 2 ನೇ ಡೋಸ್ ಅನ್ನು ನೀಡುವ ಸೌಲಭ್ಯವನ್ನು ಒದಗಿಸುತ್ತದೆ.

***



(Release ID: 1725206) Visitor Counter : 279