ರೈಲ್ವೇ ಸಚಿವಾಲಯ

ಆಕ್ಷಿಜನ್ ಎಕ್ಸ್ ಪ್ರೆಸ್ ಮೂಲಕ ರಾಷ್ಟ್ರಕ್ಕೆ 25,000 ಮೆಟ್ರಿಕ್ ವೈದ್ಯಕೀಯ ಆಮ್ಲಜನಕ ಪೂರೈಸಿ ಮೈಲಿಗಲ್ಲು ಸ್ಥಾಪನೆ


ದೇಶಾದ್ಯಂತ 1500ಕ್ಕೂ ಹೆಚ್ಚು ಎಲ್.ಎಂ.ಒ ತುಂಬಿದ ಟ್ಯಾಂಕರ್ ಗಳ ಸಾಗಾಣೆ

368 ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಆಮ್ಲಜನಕ ವಿತರಣೆ ಪೂರ್ಣ ಮತ್ತು 15 ರಾಜ್ಯಗಳಿಗೆ ಪರಿಹಾರ

ಜಾರ್ಖಂಡ್ ನಿಂದ 80 ಮೆಟ್ರಿಕ್ ಟನ್ ಎಲ್.ಎಂ.ಒ ಹೊತ್ತ ಐದನೇ ಆಕ್ಸಿಜನ್ ಎಕ್ಸ್ ಪ್ರೆಸ್ ಅಸ್ಸಾಂಗೆ

3000 ಸಾವಿರಕ್ಕೂ ಹೆಚ್ಚು ಮೆಟ್ರಿನ್ ಟನ್ ಎಲ್.ಎಂ.ಒ ಲೋಡ್ ಸ್ವೀಕರಿಸಿ ಕರ್ನಾಟಕ

614 ಮೆಟ್ರಿಕ್ ಟನ್ ಆಮ್ಲಜನಕ ಸ್ವೀಕರಿಸಿದ ಮಹಾರಾಷ್ಟ್ರ, ಉತ್ತರ ಪ್ರದೇಶಕ್ಕೆ ಸುಮಾರು 3797 ಮೆಟ್ರಿಕ್ ಟನ್ ಪೂರೈಕೆ, ಮಧ್ಯ ಪ್ರದೇಶಕ್ಕೆ 656 ಮೆಟ್ರಿಕ್ ಟನ್, ದೆಹಲಿ 5790 ಮೆಟ್ರಿಕ್ ಟನ್. ಹರ್ಯಾಣ 2212 ಮೆಟ್ರಿಕ್ ಟನ್, ರಾಜಸ್ಥಾನ 98 ಮೆಟ್ರಿಕ್ ಟನ್, ಕರ್ನಾಟಕ 3097 ಮೆಟ್ರಿಕ್ ಟನ್, ಉತ್ತರಾಖಂಡ 320 ಮೆಟ್ರಿಕ್ ಟನ್, ತಮಿಳುನಾಡು 2787 ಮೆಟ್ರಿಕ್ ಟನ್, ಆಂಧ‍್ರಪ್ರದೇಶ 2602 ಮೆಟ್ರಿಕ್ ಟನ್, ಪಂಜಾಬ್ 225 ಮಟ್ರಿಕ್ ಟನ್, ಕೇರಳ 513 ಮೆಟ್ರಿಕ್ ಟನ್. ತೆಲಂಗಾಣ 2474 ಮೆಟ್ರಿಕ್ ಟನ್, ಜಾರ್ಖಂಡ್ 38 ಮೆಟ್ರಿಕ್ ಟನ್ ಮತ್ತು ಅಸ್ಸಾಂಗೆ 400 ಮೆಟ್ರಿಕ್ ಟನ್ ಪೂರೈಕೆ

Posted On: 05 JUN 2021 2:28PM by PIB Bengaluru

ಹಲವಾರು ಅಡೆತಡೆಗಳನ್ನು ದಾಟಿ ಹೊಸ ಪರಿಹಾರಗಳನ್ನು ಹುಡುಕುತ್ತಿರುವ ಭಾರತೀಯ ರೈಲ್ವೆ ದೇಶದ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕ ಪೂರೈಸುವ ತನ್ನ ಯಾನವನ್ನು ಮುಂದುವರೆಸಿದೆ.
ಈ ವರೆಗೆ ಭಾರತೀಯ ರೈಲ್ವೆ ದೇಶದ ವಿವಿಧ ರಾಜ್ಯಗಳಿಗೆ 25629 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು 1503 ಕ್ಕೂ ಹೆಚ್ಚು ಟ್ಯಾಂಕರ್ ಗಳ ಮೂಲಕ ವಿತರಣೆ ಮಾಡಿದೆ.

ಈವರೆಗೆ 368 ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಆಮ್ಲಜನಕ ವಿತರಣೆ ಪೂರ್ಣಗೊಂಡಿದ್ದು, 15 ರಾಜ್ಯಗಳಿಗೆ ಪರಿಹಾರ ದೊರಕಿಸಿಕೊಟ್ಟಿದೆ.  ಈ ಹೇಳಿಕೆ ಬಿಡುಗಡೆಯಾಗುವ ವೇಳೆಗೆ 30 ಟ್ಯಾಂಕರ್ ಗಳ ಮೂಲಕ 482 ಮೆಟ್ರಿಕ್ ಟನ್ ಆಮ್ಲಜನಕ  ಭರ್ತಿಯಾದ 7 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಸಂಚರಿಸುತ್ತಿವೆ. ಅಸ್ಸಾಂ ಗೆ 5 ನೇ ಆಕ್ಸಿಜನ್ ಎಕ್ಸ್ ಪ್ರೆಸ್ ನ 4 ಟ್ಯಾಂಕರ್ ಗಳ ಮೂಲಕ ಜಾರ್ಖಂಡ್ ನಿಂದ 80 ಮೆಟ್ರಿಕ್ ಟನ್ ಆಮ್ಲಜನಕ ಸ್ವೀಕರಿಸಿದೆ.
3000 ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ [ಎಲ್.ಎಂ.ಒ] ವನ್ನು ಕರ್ನಾಟಕ ಸ್ವೀಕರಿಸಿದೆ. 
ಕಳೆದ 42 ದಿನಗಳ ಹಿಂದೆ ಏಪ್ರಿಲ್ 24 ರಂದು ಮಹಾರಾಷ್ಟ್ರದಿಂದ 126 ಮೆಟ್ರಿಕ್ ಟನ್ ಆಮ್ಲಜನಕ ವಿತರಣೆಯನ್ನು ಪ್ರಾರಂಭಿಸಿತು ಎಂಬುದು ಉಲ್ಲೇಖನೀಯ ವಿಚಾರವಾಗಿದೆ.
ವಿನಂತಿಸುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಎಲ್.ಎಂ.ಒ ತಲುಪಿಸುವಲ್ಲಿ ಭಾರತೀಯ ರೈಲ್ವೆ ಪ್ರಯತ್ನಶೀಲವಾಗಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಪ್ರಮುಖವಾಗಿ 15 ರಾಜ್ಯಗಳನ್ನು ತಲುಪಿದ್ದು, ಅವುಗಳೆಂದರೆ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ‍್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂ.

ಈ ಹೇಳಿಕೆ ಬಿಡುಗಡೆಯಾಗುವ ವೇಳೆಗೆ 
614 ಮೆಟ್ರಿಕ್ ಟನ್ ಆಮ್ಲಜನಕವನ್ನು ಮಹಾರಾಷ್ಟ್ರ ಸ್ವೀಕರಿಸಿದೆ. ಉತ್ತರ ಪ್ರದೇಶಕ್ಕೆ ಸುಮಾರು 3797 ಮೆಟ್ರಿಕ್ ಟನ್ ಪೂರೈಕೆ, ಮಧ್ಯ ಪ್ರದೇಶಕ್ಕೆ 656 ಮೆಟ್ರಿಕ್ ಟನ್, ದೆಹಲಿ 5790 ಮೆಟ್ರಿಕ್ ಟನ್. ಹರ್ಯಾಣ 2212 ಮೆಟ್ರಿಕ್ ಟನ್, ರಾಜಸ್ಥಾನ 98 ಮೆಟ್ರಿಕ್ ಟನ್, ಕರ್ನಾಟಕ 3097 ಮೆಟ್ರಿಕ್ ಟನ್, ಉತ್ತರಾಖಂಡ 320 ಮೆಟ್ರಿಕ್ ಟನ್, ತಮಿಳುನಾಡು 2787 ಮೆಟ್ರಿಕ್ ಟನ್, ಆಂಧ‍್ರಪ್ರದೇಶ 2602 ಮೆಟ್ರಿಕ್ ಟನ್, ಪಂಜಾಬ್ 225 ಮಟ್ರಿಕ್ ಟನ್, ಕೇರಳ 513 ಮೆಟ್ರಿಕ್ ಟನ್. ತೆಲಂಗಾಣ 2474 ಮೆಟ್ರಿಕ್ ಟನ್, ಜಾರ್ಖಂಡ್ 38 ಮೆಟ್ರಿಕ್ ಟನ್ ಮತ್ತು ಅಸ್ಸಾಂಗೆ 400 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ.
ಈ ವರೆಗೆ 15 ರಾಜ್ಯಗಳ 39 ನಗರಗಳು/ಪಟ್ಟಣಗಳಿಗೆ ಆಮ್ಲಜನಕ ವಿತರಿಸಲಾಗಿದ್ದು, ಅವುಗಳೆಂದರೆ ಉತ್ತರ ಪ್ರದೇಶದ ಲಖನೌ, ವಾರಣಸಿ, ಕಾನ್ಪುರ್, ಬರೈಲಿ, ಗೋರಖ್ಪುರ್ ಮತ್ತು ಆಗ್ರಾ, ಮಧ್ಯ ಪ್ರದೇಶದ ಸಾಗರ್, ಜಬಲ್ಪುರ್, ಕಾಂತಿ ಮತ್ತು ಭೋಪಾಲ್, ಮಹಾರಾಷ್ಟ್ರದ ನಾಗ್ಪುರ್, ಪುಣೆ, ಮುಂಬೈ ಮತ್ತು ಸೊಲಾಪುರ್, ತೆಲಂಗಾಣದ ಹೈದರಾಬಾದ್, ಹರ್ಯಾಣದ ಫರೀದಾಬಾದ್ ಮತ್ತು ಗುರುಗ್ರಾಮ್, ದೆಹಲಿಯ ತುಗ್ಲಕಾಬಾದ್, ದೆಹಲಿ ಕಂಟೋನ್ಮೆಂಟ್ ಮತ್ತು ಓಕ್ಲಾ, ರಾಜಸ್ತಾನದ ಕೋಟ ಮತ್ತು ಕನಕ್ಪುರ್, ಕರ್ನಾಟಕದ ಬೆಂಗಳೂರು, ಉತ್ತರಾಖಂಡದ ಡೆಹ್ರಾಡೂನ್, ಆಂಧ್ರಪ್ರದೇಶದ ಉತ್ತರಾಖಂಡ, ನೆಲ್ಲೋರ್, ಗುಂಟೂರ್, ತಡಿಪತ್ರಿ ಮತ್ತು ವಿಶಾಖಪಟ್ಟಣಂ, ಕೇರಳದ ಎರ್ನಾಕುಲಂ, ತಮಿಳುನಾಡಿನ ತಿರುವೆಲ್ಲೂರು, ಚೆನ್ನೈ, ತೂತಿಕುಡಿ, ಕೊಯಂಬತ್ತೂರ್ ಮತ್ತು ಮಧುರೈ, ಪಂಜಾಬ್ ನ ಭಟಿಂಡಾ ಮತ್ತು ಫಿಲ್ಲೂರ್, ಅಸ್ಸಾಂನ ಖಾಮ್ರೂಪ್ ಮತ್ತು ಜಾರ್ಖಂಡ್  ನ ರಾಂಚಿ ಸೇರಿದೆ.

ವಿವಿಧ ಸ್ಥಳಗಳಿಗೆ ಆಮ್ಲಜನಕ ಪೂರೈಸಲು ಭಾರತೀಯ ರೈಲ್ವೆ ವಿವಿಧ ಮಾರ್ಗ ನಕ್ಷೆಯನ್ನು ರೂಪಿಸಿದೆ ಮತ್ತು ರಾಜ್ಯಗಳಿಗೆ ಎದುರಾಗುವ ತುರ್ತು ಅಗತ್ಯಗಳನ್ನು ಪೂರೈಸಲು ಸಜ್ಜಾಗಿದೆ. ಎಲ್.ಎಂ.ಓ ಪೂರೈಸಲು ಭಾರತೀಯ ರೈಲ್ವೆಗೆ ರಾಜ್ಯ ಸರ್ಕಾರಗಳು ಟ್ಯಾಂಕರ್ ಗಳನ್ನು ಒದಗಿಸಬೇಕಾಗಿದೆ.  

ದೇಶದಲ್ಲಿ ಬಿಕ್ಕಟ್ಟು ಎದುರಾಗುತ್ತಿದ್ದಂತೆ ಭಾರತೀಯ ರೈಲ್ವೆ ಪಶ‍್ಚಿಮ ಭಾಗದ ಹಪ, ಬರೋಡಾ, ಮುಂದ್ರಾ ಮತ್ತು ಪೂರ್ವದ ರೌರ್ಕೆಲ, ದುರ್ಗಾಪುರ್, ಟಾಟಾನಗರ್, ಅಂಗುಲ್ ಮತ್ತು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಈ ಭಾಗದಿಂದ ಸಂಕಿರ್ಣ ಕಾರ್ಯಾಚರಣೆಯ ಮಾರ್ಗ ಯೋಜನೆ ಮೂಲಕ  ಆಮ್ಲಜನಕ ಸ್ವೀಕರಿಸಿದೆ.  

ಅತ್ಯಂತ ತ್ವರಿತವಾಗಿ ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಹೊಸ ಮಾನದಂಡಗಳನ್ನು ರಚಿಸಿದೆ ಮತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ಸರಕು ರೈಲುಗಳ ಚಾಲನೆಯಲ್ಲಿ ಅಭೂತಪೂರ್ವ ಕ್ರಮಗಳನ್ನು ಅಳವಡಿಸಿಕೊಂಡಿದೆ. ದೂರದ ಸಂಕಿರ್ಣದಾಯಕ ಪ್ರದೇಶಗಳಿಗೆ ಈ ಸರಕು ರೈಲುಗಳ ವೇಗ 55 ಕಿಲೋಮೀಟರ್ ಗಿಂತ ಹೆಚ್ಚಿದೆ. ಹಸಿರು ಕಾರಿಡಾರ್ ನಲ್ಲಿ ಉನ್ನತ ಆದ್ಯತೆಯೊಂದಿಗೆ ಇವು ಚಲಿಸುತ್ತವೆ. ಅತಿ ಹೆಚ್ಚು ತುರ್ತು ಮತ್ತು ಪ್ರಜ್ಞೆಯಿಂದ ಸವಾಲಿನ ಸಂದರ್ಭಗಳಲ್ಲಿ ಆಮ್ಲಜನಕವನ್ನು ತಲುಪಿಸಲು ಹಲವಾರು ವಲಯಗಳ ತಂಡಗಳು ಹಗಲಿರುಳು ಕಾರ್ಯನಿರ್ವಹಿಸುತ್ತಿವೆ. ವಿವಿಧ ವಲಯಗಳಲ್ಲಿ ಸಿಬ್ಬಂದಿಯ ಬದಲಾವಣೆಗಾಗಿ ತಾಂತ್ರಿಕ ನಿಲುಗಡೆಯನ್ನು ಒಂದು ನಿಮಿಷಕ್ಕೆ ಇಳಿಸಲಾಗಿದೆ.  ಟ್ರಾಕ್ ಗಳನ್ನು ಮುಕ್ತವಾಗಿ ಇಡಲಾಗಿತ್ತು ಮತ್ತು ಜಿಪ್ಪಿಂಗ್ ಮೂಲಕ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಗರೂಕತೆ ಕಾಪಾಡಿಕೊಳ್ಳಲಾಗಿದೆ. ಇವೆಲ್ಲವನ್ನೂ ಇತರೆ ಸರಕು ಸಾಗಾಣೆ ಕಾರ್ಯಾಚರಣೆ ವೇಗ ಕಡಿಮೆಯಾಗದಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಎಲ್ಲಾ ಸಮಯದಲ್ಲೂ ಹೊಸ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಚಲಾಯಿಸುವುದು ಅತ್ಯಂತ ಕ್ರಿಯಾತ್ಮಕ ಕಸರತ್ತು ಆಗಿದೆ ಮತ್ತು ಅಂಕಿ ಅಂಶಗಳು ಸದಾ ಕಾಲ ನವೀಕರಿಸಲ್ಪಡುತ್ತವೆ.  ಹೆಚ್ಚಿನ ಪ್ರಮಾಣದ ಆಮ್ಲಜನಕ ಹೊತ್ತ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ರಾತ್ರಿ ವೇಳೆಯಲ್ಲಿ ತನ್ನ ಯಾನ ಆರಂಭಿಸುವ ನಿರೀಕ್ಷೆಯಿದೆ. 

****


(Release ID: 1724798) Visitor Counter : 211