ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕಳೆದ 24 ಗಂಟೆಗಳಲ್ಲಿ ಭಾರತದ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 1.20 ಲಕ್ಷ. ಸುಮಾರು ಎರಡು ತಿಂಗಳಲ್ಲಿಯೇ ಕನಿಷ್ಠ.
ಸತತ 9 ದಿನಗಳಿಂದ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕಿಂತ ಕಡಿಮೆ ಇದೆ
ಒಟ್ಟು 15,55,248 ಸಕ್ರಿಯ ಪ್ರಕರಣಗಳೊಂದಿಗೆ , ಸತತ ಐದನೇ ದಿನವೂ ಪ್ರಕರಣಗಳ ಹೊರೆ 20 ಲಕ್ಷಕ್ಕಿಂತ ಕಡಿಮೆ ಇದೆ.
ಸತತ 23 ನೇ ದಿನವೂ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು.
ಗುಣಮುಖ ದರ ಇನ್ನಷ್ಟು ಏರಿಕೆಯಾಗಿ 93.38 % ತಲುಪಿದೆ.
ದೈನಿಕ ಪಾಸಿಟಿವ್ ದರ ಇನ್ನಷ್ಟು ಕುಸಿದು 5.78 % ರಲ್ಲಿದೆ. ಸತತ 12 ನೇ ದಿನವೂ ಪಾಸಿಟಿವ್ ದರ 10 % ಗಿಂತ ಕೆಳಗಿದೆ.
ಕಳೆದ 24 ಗಂಟೆಗಳಲ್ಲಿ 36.5 ಲಕ್ಷಕ್ಕೂ ಅಧಿಕ ಲಸಿಕಾ ಡೋಸ್ ಗಳನ್ನು ನೀಡಲಾಗಿದೆ
Posted On:
05 JUN 2021 10:16AM by PIB Bengaluru
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೈನಿಕ 1,20,529 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು ತಿಂಗಳಲ್ಲಿಯೇ (ಕಳೆದ 58 ದಿನಗಳಲ್ಲಿ ) ಪ್ರಕರಣಗಳಲ್ಲಿ ಇದು ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ. ದೇಶವು ಸತತ 9 ನೇ ದಿನವೂ ದೈನಿಕ 2 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ದಾಖಲಿಸಿದೆ. ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಂಯುಕ್ತ ಪ್ರಯತ್ನಗಳಿಗೆ ದೊರೆತ ಫಲ ಇದಾಗಿದೆ.
ಭಾರತದ ಸಕ್ರಿಯ ಪ್ರಕರಣಗಳ ಹೊರೆ ಸತತ ಇಳಿಕೆಯಾಗುತ್ತಿದೆ. ಇಂದು ದೇಶದ ಸಕ್ರಿಯ ಪ್ರಕರಣಗಳ ಹೊರೆ 15,55,248ರಷ್ಟಿದೆ. ಸತತ ಐದನೇ ದಿನವೂ ಪ್ರಕರಣಗಳ ಹೊರೆ 20 ಲಕ್ಷಕ್ಕಿಂತ ಕಡಿಮೆ ಇದೆ.
ಕಳೆದ 24 ಗಂಟೆಗಳಲ್ಲಿ 80,745 ನಿವ್ವಳ ಇಳಿಕೆ ಕಂಡು ಬಂದಿದೆ. ಮತ್ತು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೇ 5.42% ರಷ್ಟಿದೆ.
ಭಾರತದ ದೈನಿಕ ಚೇತರಿಕೆ/ಗುಣಮುಖ ಪ್ರಕರಣಗಳ ಸಂಖ್ಯೆ ಸತತ 23 ನೇ ದಿನವೂ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 1,97,894 ಮಂದಿ ಗುಣಮುಖರಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೈನಿಕ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖ ಪ್ರಕರಣಗಳು 77,365 ರಷ್ಟು ಹೆಚ್ಚಾಗಿವೆ.
ಜಾಗತಿಕ ಸಾಂಕ್ರಾಮಿಕ ಆರಂಭಗೊಂಡಂದಿನಿಂದ ಸೋಂಕಿತರಾಗಿದ್ದವರ ಪೈಕಿ 2,67,95,549 ಮಂದಿ ಈಗಾಗಲೇ ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 1,97,894 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಗುಣಮುಖ ದರ 93.38%, ಆಗಿದೆ, ಅದು ಹೆಚ್ಚಳದ ಪ್ರವೃತ್ತಿಯನ್ನು ದಾಖಲಿಸುತ್ತಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 20,84,421 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಭಾರತವು ಇದುವರೆಗೆ ಒಟ್ಟು 36.1 ಕೋಟಿ (36,11,74,142) ಪರೀಕ್ಷೆಗಳನ್ನು ನಡೆಸಿದೆ.
ಒಂದೆಡೆ ದೇಶಾದ್ಯಂತ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದರೆ, ಸಾಪ್ತಾಹಿಕವಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 6.89% ಇದೆ, ದೈನಿಕ ಪಾಸಿಟಿವ್ ದರ ಇಂದು 5.78% ಆಗಿದೆ. ಅದು ಸತತ 12 ನೇ ದಿನವೂ 10% ಗಿಂತ ಕೆಳಗಿದೆ.
ದೇಶದಲ್ಲಿ ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಮೂಲಕ ಹಾಕಲಾದ ಕೋವಿಡ್ -19 ಲಸಿಕಾ ಡೋಸ್ ಗಳ ಒಟ್ಟು ಪ್ರಮಾಣ ಇಂದು 22.78 ಕೋಟಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 36,50,080 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.
ಇಂದು ಬೆಳಗ್ಗೆ 7 ಗಂಟೆಯವರೆಗಿನ ತಾತ್ಕಾಲಿಕ ವರದಿಗಳ ಪ್ರಕಾರ ಒಟ್ಟು 32,00,677 ಅಧಿವೇಶನಗಳ ಮೂಲಕ 22,78,60,317 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.
ವಿವರಗಳು ಈ ಕೆಳಗಿನಂತಿವೆ:
ಎಚ್.ಸಿ.ಡಬ್ಲ್ಯು.
|
1ನೇ ಡೋಸ್
|
99,45,863
|
2ನ್ ಡೋಸ್
|
68,41,480
|
ಎಫ್.ಎಲ್.ಡಬ್ಲ್ಯು.
|
1ನೇ ಡೋಸ್
|
1,60,57,349
|
2ನ್ ಡೋಸ್
|
86,38,798
|
18-44 ವರ್ಷ ವಯೋಗುಂಪಿನವರು
|
1ನೇ ಡೋಸ್
|
2,59,69,460
|
2ನ್ ಡೋಸ್
|
1,19,137
|
45 ರಿಂದ 60 ವರ್ಷ ವಯೋಗುಂಪಿನವರು
|
1ನೇ ಡೋಸ್
|
6,97,94,194
|
2ನ್ ಡೋಸ್
|
1,11,93,705
|
60ವರ್ಷಕ್ಕಿಂತ ಮೇಲ್ಪಟ್ಟವರು
|
1ನೇ ಡೋಸ್
|
6,01,85,472
|
2ನ್ ಡೋಸ್
|
1,91,14,859
|
ಒಟ್ಟು
|
22,78,60,317
|
****
(Release ID: 1724789)
Visitor Counter : 189