ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಕೋವಿಡ್ ಸಾಂಕ್ರಾಮಿಕದಿಂದ ಪ್ರತಿಕೂಲ ಪರಿಣಾಮ ಎದುರಿಸುತ್ತಿರುವ ಮಕ್ಕಳ ಆರೈಕೆ ಮತ್ತು ರಕ್ಷಣೆಯನ್ನು ಜೆಜೆ ಕಾಯ್ದೆ 2015 ರ ಅಡಿ ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸೂಚನೆ
ಸಂಕಷ್ಟದಲ್ಲಿರುವ ಮಕ್ಕಳ ಹಿತದೃಷ್ಟಿಯಿಂದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡಿರುವ ಕೇಂದ್ರ ಸಚಿವಾಲಯ
ಪ್ರಕಟಣಾ ದಿನಾಂಕ:
03 JUN 2021 6:19PM by PIB Bengaluru
ಕೋವಿಡ್ ಸಾಂಕ್ರಾಮಿಕದಿಂದ ಪ್ರತಿಕೂಲ ಪರಿಣಾಮ ಎದುರಿಸುತ್ತಿರುವ ಮಕ್ಕಳ ಆರೈಕೆ ಮತ್ತು ರಕ್ಷಣೆಯನ್ನು 2015 ರ ಜೆಜೆ ಕಾಯ್ದೆ ನಿಯಮಾವಳಿಯನ್ನು ಅನುಸರಿಸಿ ಖಚಿತಪಡಿಸಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳು ಒದಗಿಸುವ ಸುರಕ್ಷತಾ ಜಾಲದ ಅಡಿಯಲ್ಲಿ ಅಂತಹ ಎಲ್ಲ ಮಕ್ಕಳನ್ನು ಸೇರಿಸುವ ಪ್ರಯತ್ನಗಳನ್ನು ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕಾರ್ಯದರ್ಶಿ ಶ್ರೀ ರಾಮ್ ಮೋಹನ್ ಮಿಶ್ರಾ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳ ಹಿತಾಸಕ್ತಿ ಖಚಿತಪಡಿಸಿಕೊಳ್ಳಲು, ಅಗತ್ಯ ಮತ್ತು ಸಂಪನ್ಮೂಲಗಳ ಮ್ಯಾಪಿಂಗ್ ಜೊತೆಗೆ ಎಚ್ಚರಿಕೆಯ ಯೋಜನೆಯೊಂದಿಗೆ ಅವರ ವೈಯಕ್ತಿಕ ಅಗತ್ಯಗಳಿಗೆ ಸಂಪನ್ಮೂಲಗಳ ಲಭ್ಯತೆಯನ್ನು ಹೆಚ್ಚಿಸಬೇಕು ಎಂದು ಸಚಿವಾಲಯ ಹೇಳಿದೆ. ತೊಂದರೆಯಲ್ಲಿರುವ ಮಗುವಿನ ಹಿತದೃಷ್ಟಿಯಿಂದ ಸಮನ್ವಯದ ಪ್ರಯತ್ನಗಳನ್ನು ಖಾತರಿಪಡಿಸಿಕೊಳ್ಳಲು ಎಲ್ಲಾ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ಮತ್ತು ಎಲ್ಲಾ ಹಂತಗಳಲ್ಲಿನ ಇತರ ಪಾಲುದಾರರನ್ನು ಸಕ್ರಿಯಗೊಳಿಸಬೇಕು. ತೊಂದರೆಯಲ್ಲಿರುವ ಮಕ್ಕಳಲ್ಲಿ ಯಾರೂ ಸುರಕ್ಷತಾ ಜಾಲದಿಂಧ ಹೊರಗುಳಿಯದಂತೆ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಈ ಕೆಳಗಿನ ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.
1. ಮಕ್ಕಳ ಗುರುತಿಸುವಿಕೆ ಮತ್ತು ವಿವರಗಳ ದಾಖಲೆ
ಎ. ಔಟ್ರೀಚ್, ಸಮೀಕ್ಷೆ ಇತ್ಯಾದಿಗಳ ಮೂಲಕ.ತೊಂದರೆಯಲ್ಲಿರುವ ಮಕ್ಕಳನ್ನು ಗುರುತಿಸುವುದು.
ಬಿ. ಪ್ರತಿ ಮಗುವಿನ ವಿವರಗಳೊಂದಿಗೆ ಅವರ ನಿರ್ದಿಷ್ಟ ಅವಶ್ಯಕತೆಗಳು ಮತ್ತು ಅವಶ್ಯಕತೆಗಳ ವಿವರಗಳೊಂದಿಗೆ ಡೇಟಾಬೇಸ್ ಸೃಷ್ಟಿಸುವುದು. ಜೆಜೆ ಕಾಯ್ದೆ, 2015 ರ ಪ್ರಕಾರ ಮಕ್ಕಳ ಡೇಟಾವನ್ನು ಅಧಿಕಾರಿಗಳು ಸುರಕ್ಷಿತವಾಗಿಡಬೇಕು ಮತ್ತು ಅವರ ಗುರುತಿನ ಬಗ್ಗೆ ಗೋಪ್ಯತೆಯನ್ನು ಕಾಪಾಡಿಕೊಳ್ಳಬೇಕು.
ಸಿ. ಪ್ರತಿ ಮಗುವಿನ ಡೇಟಾವನ್ನು ಭಾರತ ಸರ್ಕಾರದ ಟ್ರ್ಯಾಕ್ ಚೈಲ್ಡ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು.
2. ನಿಗಾ ಮತ್ತು ರಕ್ಷಣೆ
ಎ. ಆಸ್ಪತ್ರೆಯ ಸ್ವಾಗತ ಸ್ಥಳ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಮಕ್ಕಳ ಸಹಾಯವಾಣಿ (1098) ಯ ಸಂಪರ್ಕ ವಿವರಗಳನ್ನು ಪ್ರಚಾರ ಮಾಡಬೇಕು.
ಬಿ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಕಳ್ಳಸಾಗಣೆ ಮತ್ತು ಅಕ್ರಮ ದತ್ತು ಸೇರಿದಂತೆ ಮಕ್ಕಳ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಪೊಲೀಸರನ್ನು ಎಚ್ಚರಿಸಬೇಕು.
ಸಿ. ಅನುಸರಣೆ ಮತ್ತು ನಿಯಮಿತ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಅಪಾಯದಲ್ಲಿರುವ ಮಕ್ಕಳ ಡೇಟಾಬೇಸ್ ಸೃಷ್ಟಿಸಬೇಕು.
ಡಿ. ಮಕ್ಕಳಿಗೆ ನೀಡಲಾಗುವ ಹಣಕಾಸಿನ ನೆರವನ್ನು ಅವರ ಹೆತ್ತವರ ಬಾಕಿ ಇರುವ ಸಾಲಗಳು/ಇತರ ಹೊಣೆಗಾರಿಕೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
3. ತುರ್ತು ಆರೈಕೆ ಮತ್ತು ಪುನರ್ವಸತಿ
ಎ. ಆಸ್ಪತ್ರೆ ದಾಖಲಾತಿ ನಮೂನೆಯಲ್ಲಿ ರೋಗಿಗಳ ವಿಶ್ವಾಸಾರ್ಹ ವ್ಯಕ್ತಿಯ ಸಂಪರ್ಕ ವಿವರಗಳನ್ನು ಸಂಗ್ರಹಿಸಲು ಆಸ್ಪತ್ರೆಗಳಿಗೆ ನಿರ್ದೇಶನಗಳನ್ನು ನೀಡಬಹುದು, ಯಾವುದೇ ಸಂಭವನೀಯತೆಯ ಸಂದರ್ಭದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆವರನ್ನು ಸಂಪರ್ಕಿಸಬೇಕು.
ಬಿ. ಮಕ್ಕಳ ಸಂರಕ್ಷಣಾ ಸೇವೆಗಳ ಯೋಜನೆಯಡಿ ಅಸ್ತಿತ್ವದಲ್ಲಿರುವ ಮಕ್ಕಳ ಆರೈಕೆ ಸೌಲಭ್ಯಗಳ ಮೂಲಕ ಮಕ್ಕಳ ತಾತ್ಕಾಲಿಕ ಪುನರ್ವಸತಿ ಖಾತ್ರಿಪಡಿಸಿಕೊಳ್ಳಬೇಕು.
ಸಿ. ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಮತ್ತು ನವಜಾತ ಶಿಶುಗಳ ಆರೈಕೆಗೆ ಸಾಕಷ್ಟು ನಿಬಂಧನೆಗಳನ್ನು ಖಾತ್ರಿಪಡಿಸಿಕೊಳ್ಳಬಹುದು
4. ಮಕ್ಕಳ ಆರೈಕೆ ಸಂಸ್ಥೆಗಳು (ಸಿಸಿಐ) ಮೂಲಕ ಸಾಂಸ್ಥಿಕ ಬೆಂಬಲ
ಎ. ಎಲ್ಲಾ ಮಕ್ಕಳ ಆರೈಕೆ ಸಂಸ್ಥೆಗಳಲ್ಲಿ (ಸರ್ಕಾರದ ನೆರವಿನ ಅಥವಾ ಇತರ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ) ಗುಣಮಟ್ಟದ ಆರೈಕೆಯ ಮೌಲ್ಯಮಾಪನಕ್ಕಾಗಿ ಮತ್ತು ಅಲ್ಲಿ ವಾಸಿಸುವ ಮಕ್ಕಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗಳ ಸಹಯೋಗದೊಂದಿಗೆ ವಿಶೇಷ ತಪಾಸಣೆ ಅಭಿಯಾನಗಳನ್ನು ಆಯೋಜಿಸುವುದು.
ಬಿ. ಎಲ್ಲಾ ಮಕ್ಕಳಿಗೆ ಸ್ವಚ್ಛ ಮತ್ತು ಆರೋಗ್ಯಕರ ಜೀವನದ ಅನುಕೂಲಗಳು, ಮೂಲಭೂತ ಸೌಕರ್ಯಗಳು, ಗುಣಮಟ್ಟದ ಆಹಾರ ಮತ್ತು ಸುರಕ್ಷತೆಯಂತಹ ಸೂಕ್ತ ಸೌಲಭ್ಯಗಳನ್ನು ಖಾತ್ರಿಪಡಿಸಿಕೊಳ್ಳಲು ಎಲ್ಲಾ ಸಿಸಿಐಗಳಿಗೆ ನಿರ್ದೇಶನ ನೀಡಬೇಕು.
ಸಿ. ಕೋವಿಡ್ ನಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳಲು ಸಿಸಿಐಗಳಲ್ಲಿ ಪ್ರತ್ಯೇಕ ವಾಸದ ಸೌಲಭ್ಯಗಳಿಗೆ ಸೂಕ್ತವಾದ ವ್ಯವಸ್ಥೆಗಳನ್ನು ಜಾರಿಗೆ ತರಬೇಕು.
ಡಿ. ಸಿಸಿಐಗಳಿಗೆ ಭೇಟಿ ನೀಡಲು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಲು ಮಕ್ಕಳ ಮನಶ್ಶಾಸ್ತ್ರಜ್ಞರು ಅಥವಾ ಸಲಹೆಗಾರರಿಗೆ ರೋಸ್ಟರ್ ವ್ಯವಸ್ಥೆ ಮಾಡಬೇಕು.
ಇ. ತೊಂದರೆಯಲ್ಲಿರುವ ಮಕ್ಕಳಿಗೆ ಮಾನಸಿಕ ಸಾಮಾಜಿಕ ಆರೈಕೆ / ನೆರವಿಗಾಗಿ ತಜ್ಞರು ನಿರ್ವಹಿಸುವ ಸ್ಥಳೀಯ ಸಹಾಯವಾಣಿಯನ್ನು ಪ್ರಾರಂಭಿಸಬೇಕು
5. ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತದ ರಕ್ಷಕನ ಪಾತ್ರ
ಎ. ಕೋವಿಡ್ ನಿಂದ ಪ್ರತಿಕೂಲ ಪರಿಣಾಮ ಎದುರಿಸುತ್ತಿರುವ ಮಕ್ಕಳ ರಕ್ಷಕನಾಗಿ ಜಿಲ್ಲಾಧಿಕಾರಿ ಇರಬೇಕು.
ಬಿ. ಅಂತಹ ಮಕ್ಕಳನ್ನು ಜೆಜೆ ಕಾಯ್ದೆ, 2015 ರ ಪ್ರಕಾರ ಈ ಕೆಳಗಿನ ಆದ್ಯತೆಯ ಕ್ರಮದಲ್ಲಿ ಪುನರ್ವಸತಿ ಕಲ್ಪಿಸಲು ಜಿಲ್ಲಾಧಿಕಾರಿ ಪ್ರಯತ್ನಗಳನ್ನು ಮಾಡಬೇಕು:
1. ಮಗುವನ್ನು ಅದರ ವಿಸ್ತೃತ ಕುಟುಂಬ ಮತ್ತು ರಕ್ತಸಂಬಂಧಿಗಳೊಂದಿಗೆ ಪುನಃಸ್ಥಾಪನೆ / ಪುನರ್ವಸತಿ ಕಲ್ಪಿಸಬೇಕು
2. ಮಕ್ಕಳು ಮಕ್ಕಳ ಕಲ್ಯಾಣ ಸಮಿತಿಯ ಪ್ರಕಾರ ದತ್ತು ಪಡೆಯಲು ಕಾನೂನುಬದ್ಧವಾಗಿದ್ದರೆ, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ನಿರ್ವಹಿಸುತ್ತಿರುವ CARINGS ಪೋರ್ಟಲ್ ಮೂಲಕ ದತ್ತು ನೀಡಬಹುದು
3. ಸರ್ಕಾರದ ಅನುಮೋದಿತ ಮಕ್ಕಳ ಆರೈಕೆ ಸಂಸ್ಥೆಗಳ ಅಡಿಯಲ್ಲಿ ಮಕ್ಕಳು ಇರಬೇಕು.
ಸಿ. ಅಗತ್ಯಗಳನ್ನು ಮ್ಯಾಪ್ ಮಾಡಲು, ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಎಲ್ಲಾ ಪ್ರಯೋಜನಗಳು ಸಂತ್ರಸ್ತ ಮಕ್ಕಳನ್ನು ತಲುಪುವಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದ ಬಹು-ಇಲಾಖೆಗಳ ಕಾರ್ಯಪಡೆ ರಚಿಸಬೇಕು
ಡಿ. ಜಿಲ್ಲೆಯಲ್ಲಿ ಗಮನಕ್ಕೆ ಬಂದ ಯಾವುದೇ ಸಂತ್ರಸ್ತ ಮಗುವಿನ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸಲು ಎಲ್ಲಾ ನಾಗರಿಕ ಸಾಮಾಜಿಕ ಸಂಸ್ಥೆಗಳನ್ನು ಕೇಳಬಹುದು.
ಇ. ಜಿಲ್ಲಾಧಿಕಾರಿಗಳು ಮಕ್ಕಳ ಆಸ್ತಿ / ಪೂರ್ವಜರ ಆಸ್ತಿಗಳ ಮೇಲೆ ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು, ಅದು ಮಾರಾಟವಾಗದಂತೆ ಅಥವಾ ಅತಿಕ್ರಮಣವಾಗದಂತೆ ಖಚಿತಪಡಿಸಿಕೊಳ್ಳಬೇಕು. ನೋಂದಣಿ / ಕಂದಾಯ ಇಲಾಖೆ ನಿರ್ವಹಿಸುವ ಸೂಕ್ತ ಮೇಲ್ವಿಚಾರಣೆಯ ಮೂಲಕ ಇದನ್ನು ಮಾಡಬೇಕು.
6. ಮಕ್ಕಳ ಆರೈಕೆ ಕೇಂದ್ರ (ಸಿಸಿಐ) ಗಳ ಮೂಲಕ ಸಾಂಸ್ಥಿಕ ಬೆಂಬಲ
ಎ. ಕೋವಿಡ್ ನಿಂದಾಗಿ ಅನಾರೋಗ್ಯದಿಂದ ಬಳಲುತ್ತಿರುವ ಪೋಷಕರ ಮಕ್ಕಳಿಗೆ ಅವರ ಆರೈಕೆ ಮಾಡಲು ವಿಸ್ತೃತ ಕುಟುಂಬ ಲಭ್ಯವಿಲ್ಲದಿದ್ದರೆ, ತ್ಕಾಲಿಕವಾಗಿ ಮಕ್ಕಳ ಆರೈಕೆ ಸಂಸ್ಥೆಗಳನ್ನು (ಸಿಸಿಐ) ನಿಯೋಜಿಸಬೇಕು ಮತ್ತು ಅವರಿಗೆ ಅಗತ್ಯವಾದ ಬೆಂಬಲವನ್ನು ನೀಡಬೇಕು.
ಬಿ. ಮಕ್ಕಳ ಸೂಕ್ತ ಪುನರ್ವಸತಿ / ಪುನಃಸ್ಥಾಪನೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳ ತಂಡದ ಮೂಲಕ ಜಿಲ್ಲೆಯ ಸಿಸಿಐಗಳ ನಿಯಮಿತ ಮೇಲ್ವಿಚಾರಣೆ ನಡೆಯಬೇಕು.
7. ಪೊಲೀಸ್
ಎ. ಮಕ್ಕಳ ಕಳ್ಳಸಾಗಣೆ, ಅಕ್ರಮ ದತ್ತು, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಅಥವಾ ಇನ್ನಾವುದೇ ದುರುಪಯೋಗವನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್ ತಂಡ.ಎಚ್ಚರಿಕೆ ಮತ್ತು ಜಾಗರೂಕರಾಗಿರಬೇಕು
ಬಿ. ಸಾಮಾಜಿಕ ಮಾಧ್ಯದಮಲ್ಲಿ ಬರುವ ಮಕ್ಕಳನ್ನು ದತ್ತು ಪಡೆಯುವ ಎಲ್ಲಾ ಪ್ರಕರಣಗಳನ್ನು ಪತ್ತೆಹಚ್ಚಬೇಕು ಮತ್ತು ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.
ಸಿ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೋಲಿಸ್ ಗಸ್ತು / ರಾತ್ರಿ ಗಸ್ತು ಸಮಯದಲ್ಲಿ ಜಿಲ್ಲೆಯ ಸಿಸಿಐ ಮತ್ತು ಮಕ್ಕಳನ್ನು ಅಪಾಯಕ್ಕೆ ಸಿಲುಕಿಸಬಹುದಾದ ಹಾಟ್ ಸ್ಪಾಟ್ಗಳಲ್ಲಿ ಜಾಗರೂಕರಾಗಿರಬೇಕು.
8. ಪಂಚಾಯತ್ ರಾಜ್ ಸಂಸ್ಥೆಗಳು / ನಗರ ಸ್ಥಳೀಯ ಸಂಸ್ಥೆಗಳು
ಎ. ಸಂಕಷ್ಟದಲ್ಲಿರುವ ಮಕ್ಕಳನ್ನು ಗುರುತಿಸಿ ಜಿಲ್ಲಾಡಳಿತ / ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸಲು ಪಂಚಾಯತ್ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳ ರಚನೆ
ಬಿ. ಅಂತಹ ಮಕ್ಕಳಿಗೆ ಘೋಷಿಸಲಾದ ಯೋಜನೆಗಳು ಮತ್ತು ತೆಗೆದುಕೊಳ್ಳುತ್ತಿರುವ ಕ್ರಮಗಳು ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿಗಳು ಸಂಘಟಿಸಬಹುದು.
9. ಶಿಕ್ಷಣ
ಎ. ಎಲ್ಲಾ ಅನಾಥ ಮಕ್ಕಳಿಗೆ ಸರ್ಕಾರಿ ದಿನದ ಶಾಲೆಗಳು / ಅಥವಾ ವಸತಿ ಶಾಲೆಗಳ ಮೂಲಕ ಉಚಿತ ಶಿಕ್ಷಣ ನೀಡಲಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಬಿ. ಮಗುವಿನ ನಿರ್ದಿಷ್ಟ ಅಗತ್ಯದ ಆಧಾರದ ಮೇಲೆ, ಅವನು / ಅವಳನ್ನು ಸೆಕ್ಷನ್ ಆರ್ ಟಿ ಇ ಸೆಕ್ಷನ್ 12 (1) (ಸಿ) ಅಡಿಯಲ್ಲಿ ಹತ್ತಿರದ ಖಾಸಗಿ ಶಾಲೆಗಳಿಗೆ ದಾಖಲಿಸಬಹುದು.
ಸಿ. ಕೇಂದ್ರ / ರಾಜ್ಯ ಸರ್ಕಾರಗಳ ಅಸ್ತಿತ್ವದಲ್ಲಿರುವ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಅರ್ಹ ಅನಾಥ ಮಕ್ಕಳನ್ನು ಸೇರಿಸಲು ಪ್ರಯತ್ನಿಸಬಹುದು.
ಡಿ. ಅಗತ್ಯವಿದ್ದರೆ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) ಅಡಿಯಲ್ಲಿ ವೃತ್ತಿ ತರಬೇತಿ ನೀಡಬಹುದು.
10. ವೈದ್ಯಕೀಯ ಸೌಲಭ್ಯಗಳು
ಎ. ಅರ್ಹ ಮಕ್ಕಳಿಗೆ ಆರೋಗ್ಯ ವಿಮೆಯನ್ನು ಭಾರತ ಸರ್ಕಾರದ ಪಿಎಂ ಜನಾರೋಗ್ಯ ಯೋಜನೆ ಅಡಿಯಲ್ಲಿ ಮಾರ್ಗಸೂಚಿಗಳ ಪ್ರಕಾರ ಪಡೆಯಬಹುದು.
***
(ಪ್ರಕಟಣೆ ಐ.ಡಿ.: 1724249)
ವಿಸಿಟರ್ ಕೌಂಟರ್ : 301