ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಗೋಧಿ ಖರೀದಿಯಲ್ಲಿ 12.70 % ಹೆಚ್ಚಳ


ಚಾಲ್ತಿಯಲ್ಲಿರುವ ಆರ್.ಎಂ.ಎಸ್. ನಲ್ಲಿ ಸುಮಾರು 409.80 ಎಲ್.ಎಂ.ಟಿ.ಗೋಧಿ ಖರೀದಿ, ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ 363.61 ಎಲ್.ಎಂ.ಟಿ.

ಚಾಲ್ತಿಯಲ್ಲಿರುವ ಆರ್.ಎಂ.ಎಸ್. ಗೋಧಿ ಖರೀದಿಯಿಂದ ಸುಮಾರು 44.12 ಲಕ್ಷ ರೈತರಿಗೆ ಪ್ರಯೋಜನ

796.46 ಎಲ್.ಎಂ.ಟಿ.ಗೂ ಅಧಿಕ  ಭತ್ತವನ್ನು ಚಾಲ್ತಿಯಲ್ಲಿರುವ ಕೆ.ಎಂ.ಎಸ್. 2020-21 ಮತ್ತು ಆರ್.ಎಂ.ಎಸ್. ನಲ್ಲಿ ಖರೀದಿಸಲಾಗಿದೆ

ಭತ್ತ ಖರೀದಿ ಕೂಡಾ ಸಾರ್ವಕಾಲಿಕ ಗರಿಷ್ಠ ಪ್ರಮಾಣಕ್ಕೆ ತಲುಪಿದೆ. ಕಳೆದ ವರ್ಷದ ಗರಿಷ್ಠ ಪ್ರಮಾಣವಾದ 2019-20 ರ ಕೆ.ಎಂ.ಎಸ್. ನಲ್ಲಿಯ 773.45 ಎಲ್.ಎಂ.ಟಿ.ಯನ್ನು ಮೀರಿದೆ

ಸರಕಾರಿ ಏಜೆನ್ಸಿಗಳು 7,29,854.74  ಎಂ.ಟಿ.ಯಷ್ಟು ದ್ವಿದಳ ಧಾನ್ಯಗಳು ಮತ್ತು ತೈಲ ಬೀಜಗಳನ್ನು ಎಂ.ಎಸ್.ಪಿ.ಯಲ್ಲಿ ಖರೀದಿಸಿವೆ

Posted On: 02 JUN 2021 5:04PM by PIB Bengaluru

ಚಾಲ್ತಿಯಲ್ಲಿರುವ 2021-22 ಆರ್.ಎಂ.ಎಸ್.ನಲ್ಲಿ ಗೋಧಿ ಖರೀದಿ ಸುಸೂತ್ರವಾಗಿ ಮುನ್ನಡೆದಿದೆ. ಖರೀದಿ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಹಾಗು ಕಾಶ್ಮೀರ ರಾಜ್ಯಗಳಲ್ಲಿ  ಹಿಂದಿನ ಋತುಗಳಲ್ಲಿಯಂತೆ ಎಂ.ಎಸ್.ಪಿ.ಯಲ್ಲಿ  ಖರೀದಿ ಮಾಡಲಾಗುತ್ತಿದೆ, ಮತ್ತು ಇಂದಿನವರೆಗೆ ( 01.06.2021ರವರೆಗೆ) 409.80 ಎಲ್.ಎಂ.ಟಿ.ಗೂ ಅಧಿಕ ಪ್ರಮಾಣದ ಗೋಧಿಯನ್ನು ಖರೀದಿಸಲಾಗಿದೆ. (ಇದು ಸಾರ್ವಕಾಲಿಕ ಗರಿಷ್ಟ. ಮತ್ತು ಅದು ಹಿಂದಿನ ವರ್ಷದ ಗರಿಷ್ಠ ಪ್ರಮಾಣವಾದ 2020-21 ಆರ್.ಎಂ.ಎಸ್. ಗರಿಷ್ಠ ಪ್ರಮಾಣವಾದ 389.92 ಎಲ್.ಎಂ.ಟಿ.ಗಿಂತ ಹೆಚ್ಚಾಗಿದೆ. ) ಕಳೆದ ವರ್ಷದ ಇದೇ ಅವಧಿಗೆ  363.61 ಎಲ್.ಎಂ.ಟಿ. ಖರೀದಿಯಾಗಿತ್ತು. ಸುಮಾರು 44.12 ಲಕ್ಷ ರೈತರಿಗೆ ಚಾಲ್ತಿಯಲ್ಲಿರುವ ಆರ್.ಎಂ.ಎಸ್. ಖರೀದಿ ಕಾರ್ಯಾಚರಣೆಯಿಂದ ಪ್ರಯೋಜನವಾಗಿದೆ. ಇದರ ಎಂ.ಎಸ್. ಪಿ. ಮೌಲ್ಯ 80,936.19 ಕೋ.ರೂ.

 

 

 

ಚಾಲ್ತಿಯಲ್ಲಿರುವ 2020-21 ಖಾರೀಫ್ ಋತುವಿನಲ್ಲಿ ಭತ್ತ ಖರೀದಿ  ಸುಸೂತ್ರವಾಗಿ ಮುನ್ನಡೆದಿದೆ. ಖರೀದಿ ರಾಜ್ಯಗಳು  796.46 ಎಲ್.ಎಂ.ಟಿ.ಗೂ ಅಧಿಕ  ಭತ್ತವನ್ನು ( ಖಾರೀಫ್ ಬೆಳೆ 706.69 ಎಲ್.ಎಂ.ಟಿ. ಮತ್ತು ರಾಬಿ ಬೆಳೆ 89.77 ಎಲ್.ಎಂ.ಟಿ. ) 01.06.2021 ರವರೆಗೆ ಖರೀದಿ ಮಾಡಿವೆ. ಹಿಂದಿನ ವರ್ಷ ಅವಧಿಗೆ 726.85 ಎಲ್.ಎಂ.ಟಿ.ಯಷ್ಟನ್ನು ಖರೀದಿ ಮಾಡಲಾಗಿತ್ತು. ಚಾಲ್ತಿಯಲ್ಲಿರುವ ಕೆ.ಎಂ.ಎಸ್. ಖರೀದಿ ಕಾರ್ಯಾಚರಣೆಯಿಂದ ಸುಮಾರು 118.16 ಲಕ್ಷ ರೈತರಿಗೆ ಈಗಾಗಲೇ ಲಾಭವಾಗಿದೆ. 1,50,370.25 ಕೋ.ರೂ. ಎಂ.ಎಸ್.ಪಿ. ಮೌಲ್ಯದ ಉತ್ಪಾದನೆ ಖರೀದಿಯಾಗಿದೆ. ಭತ್ತ ಖರೀದಿ ಕೂಡಾ ಸಾರ್ವಕಾಲಿಕ ಗರಿಷ್ಠ ಪ್ರಮಾಣಕ್ಕೆ ಹೋಗಿದೆ, ಅದು ಕಳೆದ ವರ್ಷದ  ಪ್ರಮಾಣವಾದ 2019-20 ಕೆ.ಎಂ.ಎಸ್. ಅವಧಿಯ 773.45 ಎಲ್.ಎಂ.ಟಿ.ಯನ್ನು ದಾಟಿದೆ. 

 

ರಾಜ್ಯಗಳ ಪ್ರಸ್ತಾವನೆಗಳನ್ನು ಆಧರಿಸಿ 2020-21 ಖಾರೀಫ್ ಮಾರುಕಟ್ಟೆ ಋತುವಿನಲ್ಲಿ ಮತ್ತು 2021 ರಾಬಿ ಮಾರುಕಟ್ಟೆ ಅವಧಿಯಲ್ಲಿ ಹಾಗು 2021 ಬೇಸಿಗೆ ಅವಧಿಯಲ್ಲಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಹರ್ಯಾಣಾ, ಮಧ್ಯಪ್ರದೇಶ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಂದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ (ಪಿ.ಎಸ್.ಎಸ್.) 107.81 ಎಲ್.ಎಂ.ಟಿ.ದ್ವಿದಳ ಧಾನ್ಯಗಳು ಮತ್ತು ತೈಲ ಬೀಜಗಳನ್ನು ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ. ಆಂಧ್ರ ಪ್ರದೇಶ,ಕರ್ನಾಟಕ, ತಮಿಳು ನಾಡು, ಕೇರಳಗಳಿಗೆ 1.74 ಎಲ್.ಎಂ.ಟಿ.ಯಷ್ಟು ಕೊಬ್ಬರಿಯನ್ನು ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ. ದ್ವಿದಳ ಧಾನ್ಯಗಳು, ತೈಲ ಬೀಜಗಳು, ಮತ್ತು ಕೊಬ್ಬರಿಯನ್ನು ಪಿ.ಎಸ್.ಎಸ್. ಅಡಿಯಲ್ಲಿ ಖರೀದಿ ಮಾಡಲು ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಪ್ರಸ್ತಾವನೆ ಬಂದ ಕೂಡಲೇ ಅನುಮೋದನೆ ನೀಡಲಾಗುತ್ತದೆ. ಇದರಿಂದ 2020-21 ಅವಧಿಗೆ ಬೆಳೆಗಳ ಖರೀದಿಗೆ ಎಪ್..ಕ್ಯು. ದರ್ಜೆಯನ್ನು ಅಧಿಸೂಚಿಸಬಹುದಾಗಿದೆ. ಮಾರುಕಟ್ಟೆ ದರ ಅಧಿಸೂಚಿತ ಕೊಯಿಲು ಹಂಗಾಮಿನಲ್ಲಿ ಎಂ.ಎಸ್.ಪಿ.ಗಿಂತ ಕೆಳಗೆ ಹೋದಲ್ಲಿ ನೊಂದಾಯಿತ ರೈತರಿಂದ ಆಯಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ರಾಜ್ಯ ನಾಮ ನಿರ್ದೇಶಿತ ಖರೀದಿ ಏಜೆನ್ಸಿಗಳಿಂದ ಖರೀದಿಸಬಹುದಾಗಿರುತ್ತದೆ.

01.06.2021ರವರೆಗೆ, ಸರಕಾರವು ತನ್ನ ನೋಡಲ್ ಏಜೆನ್ಸಿಗಳ ಮೂಲಕ 7,29,854.74  ಎಂ.ಟಿ.ಯಷ್ಟು ಹೆಸರು, ಉದ್ದು, ತೊಗರಿ, ಕೆಂಪು ತೊಗರಿ, ನೆಲಕಡಲೆ, ಸಾಸಿವೆ ಬೀಜಗಳು ಮತ್ತು ಸೋಯಾಬೀನ್ ಗಳನ್ನು ಖರೀದಿ ಮಾಡಿದೆ. ಇದರ ಎಂ.ಎಸ್.ಪಿ. ಮೌಲ್ಯ 3,818.78 ಕೋ.ರೂ.ಗಳು ಮತ್ತು ಇದರಿಂದ 2020-21  ಖಾರೀಫ್ ಮತ್ತು 2021ರಾಬಿ ಋತುವಿನಲ್ಲಿ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ತೆಲಂಗಾಣ, ಹರ್ಯಾಣಾ ಮತ್ತು ರಾಜಸ್ಥಾನಗಳ 4,32,323ರೈತರಿಗೆ ಲಾಭವಾಗಿದೆ.

ಅದೇ ರೀತಿ, 2020-21 ಬೆಳೆ ಹಂಗಾಮಿನಲ್ಲಿ ಎಂ.ಎಸ್.ಪಿ. ಮೌಲ್ಯ 52.40 ಕೋ.ರೂ.ಗಳ, 5089 ಎಂ.ಟಿ. ಕೊಬ್ಬರಿಯನ್ನು ಖರೀದಿ ಮಾಡಲಾಗಿದ್ದು, ಕರ್ನಾಟಕ ಮತ್ತು ತಮಿಳುನಾಡುಗಳ 3961 ರೈತರಿಗೆ ಲಾಭವಾಗಿದೆ. 2021-22 ಅವಧಿಗೆ ತಮಿಳುನಾಡಿನಿಂದ 51000 ಎಂ.ಟಿ. ಕೊಬ್ಬರಿಯನ್ನು ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ. ಖರೀದಿಯು ರಾಜ್ಯ ಸರಕಾರ ನಿರ್ಧರಿಸಿದ ದಿನದಿಂದ ಆರಂಭವಾಗಲಿದೆ.

ದ್ವಿದಳ ಧಾನ್ಯಗಳು ಮತ್ತು ತೈಲ ಬೀಜಗಳು ಬಂದ ಸಮಯವನ್ನಾಧರಿಸಿ ಅಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಾವು ನಿರ್ಧರಿಸಿದ ದಿನಾಂಕದಿಂದ ಅವುಗಳ ಖರೀದಿ ಆರಂಭಿಸಲು ಅವಶ್ಯ ವ್ಯವಸ್ಥೆಗಳನ್ನು ಮಾಡುತ್ತವೆ.

 

***



(Release ID: 1723969) Visitor Counter : 198