ನಾಗರೀಕ ವಿಮಾನಯಾನ ಸಚಿವಾಲಯ

ಭಾರತವು 8 ಹೊಸ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿಗಳನ್ನು ಪಡೆಯಲಿದೆ

Posted On: 02 JUN 2021 6:29PM by PIB Bengaluru

ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಉದಾರೀಕೃತ  ವೈಮಾನಿಕ ತರಬೇತಿ ಸಂಸ್ಥೆಯ (ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಸೇಶನ್ - ಎಫ್ ಟಿಒ) ನೀತಿಯಡಿ ಭಾರತ 8 ಹೊಸ  ವೈಮಾನಿಕ ತರಬೇತಿ ಅಕಾಡೆಮಿಗಳನ್ನು ಪಡೆಯಲಿದೆ. ಅಕಾಡೆಮಿಗಳನ್ನು ಬೆಳಗಾವಿ, ಜಲಗಾಂವ್, ಕಲಬುರಗಿ, ಖಜುರಾಹೊ ಮತ್ತು ಲೀಲಬರಿಯಲ್ಲಿ ಸ್ಥಾಪಿಸಲಾಗುವುದು. 8  ಅಕಾಡೆಮಿಗಳ ಸ್ಥಾಪನೆಯು ಭಾರತವನ್ನು ಜಾಗತಿಕ ವೈಮಾನಿಕ ತರಬೇತಿ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ ಮತ್ತು ವಿದೇಶಿ  ವೈಮಾನಿಕ ತರಬೇತಿ ಅಕಾಡೆಮಿಗಳಿಗೆ ಭಾರತೀಯ ವಿದ್ಯಾರ್ಥಿಗಳು ಹೋಗುವುದನ್ನು ತಡೆಯುತ್ತದೆಜೊತೆಗೆ, ಭಾರತದ ನೆರೆಯ ರಾಷ್ಟ್ರಗಳಲ್ಲಿನ ವಿದ್ಯಾರ್ಥಿಗಳ ವೈಮಾನಿಕ ತರಬೇತಿಯ ಅವಶ್ಯಕತೆಗಳನ್ನು ಪೂರೈಸಲು ಸಂಸ್ಥೆಗಳನ್ನು  ರೂಪಿಸಲಾಗುವುದು.

ಕೋವಿಡ್ -19 ಎರಡನೇ ಅಲೆಯಿಂದಾಗಿ ಉಂಟಾದ  ಸಂಕಷ್ಟದ  ಸಮಯದ ನಡುವೆಯೂ ಬಿಡ್ಡಿಂಗ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಯಶಸ್ವಿಯಾಯಿತು ಎನ್ನುವುದು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಂಡದ ಪರಿಶ್ರಮ ಮತ್ತು ದೃಢ  ನಿಶ್ಚಯವನ್ನು ದೃಢೀಕರಿಸುವುದು ಐದು ವಿಮಾನ ನಿಲ್ದಾಣಗಳನ್ನು ಹವಾಮಾನ ಸಮಸ್ಯೆಗಳು ಮತ್ತು ನಾಗರಿಕ ಮತ್ತು ಮಿಲಿಟರಿ ವಾಯು ಸಂಚಾರದ  ಕನಿಷ್ಠ ಅಡ್ಡಿಯಿರುವ  ಕಾರಣ ಅವುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ. ಉಪಕ್ರಮವು ಆತ್ಮ ನಿರ್ಭರ ಭಾರತದ ಉಪಕ್ರಮದಡಿಯಲ್ಲಿ ಭಾರತೀಯ ಹಾರಾಟದ ತರಬೇತಿ ಕ್ಷೇತ್ರಕ್ಕೆ ಹೆಚ್ಚು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ.

ವಿಮಾನ ನಿಲ್ದಾಣ ಪ್ರಾಧಿಕಾರವು 2020 ನವೆಂಬರ್ನಲ್ಲಿ ಬಿಡ್ಗಳನ್ನು ಆಹ್ವಾನಿಸಿತ್ತು ವಿಜೇತ ಬಿಡ್ಡುದಾರರಿಗೆ ಆದೇಶ ಪತ್ರಗಳನ್ನು 20 ಮೇ 2021 ರಂದು ನೀಡಲಾಯಿತುಏಷ್ಯಾ-ಪೆಸಿಫಿಕ್, ಜೆಟ್ ಸರ್ವ್, ರೆಡ್ ಬರ್ಡ್, ಸಂವರ್ದನೆ  ಮತ್ತು ಸ್ಕೈ ನೆಕ್ಸ್. ನಿರೀಕ್ಷಿತ ಬಿಡ್ಡುದಾರರಿಗೆ ನಿಗದಿಪಡಿಸಿದ  ನಿಯತಾಂಕಗಳಲ್ಲಿ ವಾಯುಯಾನ ಸುರಕ್ಷತಾ ಅಂಶಗಳು, ನಿಯಂತ್ರಕ ಕಾರ್ಯವಿಧಾನಗಳು, ಮಾನವ ಚಾಲಿತ ವಿಮಾನದಲ್ಲಿ ತರಬೇತಿ ಪೈಲಟ್ಗಳ ಕ್ಷೇತ್ರದಲ್ಲಿ ಅನುಭವ, ಸಲಕರಣೆಗಳ ಲಭ್ಯತೆ, ತರಬೇತುದಾರರು ಇತ್ಯಾದಿ ಆಂಶಗಳು ಸೇರಿದ್ದವು. ಎಫ್ ಡಿಒಗಳನ್ನು ಬಿಡ್ಡುದಾರರಿಗೆ ಆಕರ್ಷಕವಾಗಿಸಲು, ಎಎಐ ಕನಿಷ್ಠ ವಾರ್ಷಿಕ ಬಾಡಿಗೆಯನ್ನು ಗಮನಾರ್ಹವಾಗಿ 15 ಲಕ್ಷ ರೂಪಾಯಿಗಳಿಗೆ ಕಡಿಮೆ ಮಾಡಿತು ಇದಲ್ಲದೆ, ಉದ್ಯಮಗಳನ್ನು ವ್ಯಾಪಾರ ಸ್ನೇಹಿಯನ್ನಾಗಿ ಮಾಡಲು ವಿಮಾನ ನಿಲ್ದಾಣದ ರಾಯಧನದ ಪರಿಕಲ್ಪನೆಯನ್ನು ರದ್ದುಗೊಳಿಸಲಾಯಿತು.

***



(Release ID: 1723900) Visitor Counter : 218