ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19 ಅಪ್ಡೇಟ್
ಪ್ರಕಟಣಾ ದಿನಾಂಕ:
02 JUN 2021 9:49AM by PIB Bengaluru
ಭಾರತದಲ್ಲಿ ದೈನಿಕ 1.32 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಹೊಸ ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರೆದಿದೆ.
ಭಾರತದ ಸಕ್ರಿಯ ಪ್ರಕರಣಗಳ ಹೊರೆ ಇನ್ನಷ್ಟು ಇಳಿಕೆಯಾಗಿದ್ದು 20 ಲಕ್ಷಕ್ಕಿಂತ ಕೆಳಗಿದೆ ಮತ್ತು ಅದು ಈಗ 17,93,645ರಲ್ಲಿದೆ.
ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 1,01,875 ರಷ್ಟು ಕಡಿಮೆಯಗಿವೆ.
ಇದುವರೆಗೆ ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 2,61,79,085
ಕಳೆದ 24 ಗಂಟೆಗಳಲ್ಲಿ 2,31,456 ರೋಗಿಗಳು ಗುಣಮುಖರಾಗಿದ್ದಾರೆ.
ಸತತ 20ನೇ ದಿನವೂ ದೈನಿಕ ಚೇತರಿಕೆ/ಗುಣಮುಖರಾದವರ ಸಂಖ್ಯೆ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ.
ಗುಣಮುಖ ದರ 92.48% ಗೇರಿದೆ.
ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 8.21 %
ದೈನಿಕ ಪಾಸಿಟಿವ್ ದರ 6.57% ಇದ್ದು, ಸತತ 9 ನೇ ದಿನವೂ 10 % ಗಿಂತ ಕಡಿಮೆ ಇದೆ.
ಪರೀಕ್ಷಾ ಸಾಮರ್ಥ್ಯವನ್ನು ವ್ಯಾಪಕವಾಗಿ ಹೆಚ್ಚಿಸಲಾಗಿದ್ದು- ಇದುವರೆಗೆ ಒಟ್ಟು 35 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
ಇದುವರೆಗೆ ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಅಂಗವಾಗಿ 21.85 ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.
***
(ಪ್ರಕಟಣೆ ಐ.ಡಿ.: 1723651)
ವಿಸಿಟರ್ ಕೌಂಟರ್ : 179
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Punjabi
,
Gujarati
,
Odia
,
Tamil
,
Telugu
,
Malayalam