ರೈಲ್ವೇ ಸಚಿವಾಲಯ

ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳಿಂದ ದಕ್ಷಿಣದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಿಗೆ  ತಲಾ 2000 ಎಂಟಿಗೂ ಅಧಿಕ ಎಲ್ಎಂಒ ಸ್ವೀಕಾರ


ನಾಲ್ಕನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿನ ಮೂಲಕ 80 ಎಂಟಿ  ಎಲ್ಎಂಒ ಸ್ವೀಕರಿಸಿದ ಅಸ್ಸಾಂ

ಆಕ್ಸಿಜನ್ ಎಕ್ಸ್ ಪ್ರೆಸ್ ಗಳ ಮೂಲಕ ರಾಷ್ಟ್ರಕ್ಕೆ 22916 ಎಂಟಿ ಎಲ್ಎಂಒ ಸರಬರಾಜು

ದೇಶಾದ್ಯಂತ 334 ಎಕ್ಸ್ ಪ್ರೆಸ್ ರೈಲುಗಳು ಆಕ್ಸಿಜನ್ ವಿತರಣೆ ಪೂರ್ಣ

ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ಈವರೆಗೆ 1357 ಟ್ಯಾಂಕರ್ ಗಳ ಮೂಲಕ ಎಲ್ಎಂಒ ಸಾಗಾಣೆ ಮತ್ತು 15 ರಾಜ್ಯಗಳಿಗೆ ನೆರವು

ಮಹಾರಾಷ್ಟ್ರಕ್ಕೆ 614 ಎಂಟಿ ಆಕ್ಸಿಜನ್, ಉತ್ತರ ಪ್ರದೇಶಕ್ಕೆಸುಮಾರು 3797 ಎಂಟಿ, ಮಧ್ಯಪ್ರದೇಶಕ್ಕೆ  656, ದೆಹಲಿಗೆ 5557 ಎಂಟಿ, ಹರಿಯಾಣಕ್ಕೆ 2089, ರಾಜಸ್ಥಾನಕ್ಕೆ 98, ಕರ್ನಾಟಕಕ್ಕೆ 2440, ಉತ್ತರಾಖಂಡಕ್ಕೆ 320, ತಮಿಳುನಾಡಿಗೆ 2190, ಆಂಧ್ರಪ್ರದೇಶಕ್ಕೆ 2125, ಪಂಜಾಬ್ ಗೆ 225, ಕೇರಳಕ್ಕೆ 380, ತೆಲಂಗಾಣಕ್ಕೆ  2062,  ಜಾರ್ಖಂಡ್ ಗೆ 38 ಮತ್ತು ಅಸ್ಸಾಂಗೆ 320 ಎಂಟಿ ಪೂರೈಕೆ

Posted On: 01 JUN 2021 4:14PM by PIB Bengaluru

ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಹೊಸ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಭಾರತೀಯ ರೈಲ್ವೆ ದೇಶಾದ್ಯಂತ ಹಲವು ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಕ್ಸಿಜನ್(ಎಲ್ಎಂಒ) ಸರಬರಾಜಿನಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಿ ನೆರವನ್ನು ನೀಡುತ್ತಿದೆ. ಈವರೆಗೆ ಭಾರತೀಯ ರೈಲ್ವೆ ದೇಶಾದ್ಯಂತ ಹಲವು ರಾಜ್ಯಗಳಿಗೆ 1357ಕ್ಕೂ ಅಧಿಕ ಟ್ಯಾಂಕರ್ ಗಳ ಮೂಲಕ 22916 ಎಂಟಿ ಎಲ್ಎಂಒ ಅನ್ನು ಒದಗಿಸಿದೆ.

ಈವರೆಗೆ 334 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ತನ್ನ ಪ್ರಯಾಣವನ್ನು ಪೂರ್ಣಗೊಳಿಸಿ ಹಲವು ರಾಜ್ಯಗಳಿಗೆ ನೆರವು ನೀಡಿರುವುದು ಇಲ್ಲಿ ಗಮನಿಸಬೇಕಾಗಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ದಕ್ಷಿಣದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಿಗೆ ತಲಾ 2000ಎಂಟಿಗೂ ಅಧಿಕ ಎಲ್ಎಂಒ ಅನ್ನು ಪೂರೈಸಲಾಗಿದೆ.

ಅಸ್ಸಾಂ ನಾಲ್ಕನೇ ಎಕ್ಸ್ ಪ್ರೆಸ್ ರೈಲಿನ ಮೂಲಕ ನಾಲ್ಕು ಟ್ಯಾಂಕರ್ ಗಳಲ್ಲಿ 80 ಎಂಟಿ ಎಲ್ಎಂಒ ಸ್ವೀಕರಿಸಿದೆ.

ಪ್ರಕಟಣೆ ಹೊರಬೀಳುವ ವೇಳೆಗೆ, 32 ಟ್ಯಾಂಕರ್ ಗಳಲ್ಲಿ 500 ಎಂಟಿ ಎಲ್ಎಂಒ ಹೊತ್ತ 6 ಭರ್ತಿ ಮಾಡಿದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಪ್ರಗತಿಯಲ್ಲಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು 38 ದಿನಗಳ ಹಿಂದೆ ಮೊದಲು ಏಪ್ರಿಲ್ 24ರಂದು ಮಹಾರಾಷ್ಟ್ರಕ್ಕೆ 126 ಎಂಟಿ ಆಮ್ಲಜನಕ ಪೂರೈಸುವ ಮೂಲಕ ಕಾರ್ಯಾರಂಭ ಮಾಡಿದ್ದು ಇಲ್ಲಿ ಉಲ್ಲೇಖ ಮಾಡಬಹುದು

ರಾಜ್ಯಗಳ ಮನವಿ ಮೇರೆಗೆ ಅತ್ಯಲ್ಪ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಎಲ್ಎಂಒ ಅನ್ನು ಒದಗಿಸಲು ಭಾರತೀಯ ರೈಲ್ವೆ ಅಹರ್ನಿಷಿ ಕಾರ್ಯನಿರ್ವಹಿಸುತ್ತಿದೆ.

ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂ ಸೇರಿ 15 ರಾಜ್ಯಗಳಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಆಮ್ಲಜನಕವನ್ನು ನೆರವು ನೀಡಲಾಗುತ್ತಿದೆ

ಪ್ರಕಟಣೆ ಹೊರಬೀಳುವ ವೇಳೆಗೆ, ಮಹಾರಾಷ್ಟ್ರಕ್ಕೆ 614 ಎಂಟಿ ಆಕ್ಸಿಜನ್, ಉತ್ತರ ಪ್ರದೇಶಕ್ಕೆಸುಮಾರು 3797 ಎಂಟಿ, ಮಧ್ಯಪ್ರದೇಶಕ್ಕೆ  656, ದೆಹಲಿಗೆ 5557 ಎಂಟಿ, ಹರಿಯಾಣಕ್ಕೆ 2089, ರಾಜಸ್ಥಾನಕ್ಕೆ 98, ಕರ್ನಾಟಕಕ್ಕೆ 2440, ಉತ್ತರಾಖಂಡಕ್ಕೆ 320, ತಮಿಳುನಾಡಿಗೆ 2190, ಆಂಧ್ರಪ್ರದೇಶಕ್ಕೆ 2125, ಪಂಜಾಬ್ ಗೆ 225, ಕೇರಳಕ್ಕೆ 380, ತೆಲಂಗಾಣಕ್ಕೆ  2062ಜಾರ್ಖಂಡ್ ಗೆ 38 ಮತ್ತು ಅಸ್ಸಾಂಗೆ 320 ಎಂಟಿ ಆಕ್ಸಿಜನ್ ತಲುಪಿಸಲಾಗಿದೆ.

ಈವರೆಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಸಮರೋಪಾದಿಯಲ್ಲಿ ದೇಶಾದ್ಯಂತ 15 ರಾಜ್ಯಗಳ 39 ನಗರ/ಪಟ್ಟಣಗಳಿಗೆ ಎಲ್ಎಂಒ ಅನ್ನು ಒದಗಿಸಿದೆ, ನಗರಗಳೆಂದರೆ ಉತ್ತರ ಪ್ರದೇಶದ ಲಕ್ನೋ, ವಾರಾಣಸಿ, ಕಾನ್ಪುರ, ಬರೈಲಿ, ಗೋರಖ್ ಪುರ ಮತ್ತು ಅಗ್ರಾಮಧ್ಯಪ್ರದೇಶದ ಸಾಗರ್, ಜಬಲ್ಪುರ, ಕತ್ನಿ ಮತ್ತು ಭೂಪಾಲ್, ಮಹಾರಾಷ್ಟ್ರದ  ನಾಗ್ಪುರ, ನಾಸಿಕ್, ಪುಣೆ, ಮುಂಬೈ ಮತ್ತು ಸೋಲ್ಲಾಪುರ್ತೆಲಂಗಾಣದ ಹೈದರಾಬಾದ್, ಹರಿಯಾಣದ ಫರಿದಾಬಾದ್ ಮತ್ತು ಗುರುಗ್ರಾಮ, ದೆಹಲಿಯ ತೊಘಲಕಾಬಾದ್, ದೆಹಲಿ ಕಂಟೋನ್ಮೆಂಟ್ ಮತ್ತು ಓಕ್ಲಾ, ರಾಜಸ್ಥಾನದ ಕೋಟಾ ಮತ್ತು ಕನಕಪಾರಾ, ಕರ್ನಾಟಕದ ಬೆಂಗಳೂರು, ಉತ್ತರಾಖಂಡದ ಡೆಹ್ರಾಡೂನ್, ಆಂಧ್ರಪ್ರದೇಶದ ನೆಲ್ಲೂರು, ಗುಂಟೂರು, ತಾಡಪತ್ರಿ ಮತ್ತು ವಿಶಾಖಪಟ್ಟಣಂ, ಕೇರಳದ ಎರ್ನಾಕುಲಂ, ತಮಿಳುನಾಡಿನ ತಿರುವಳ್ಳವರ್, ಚೆನ್ನೈ, ಟುಟಿಕಾರ್ನ್, ಕೊಯಮತ್ತೂರು ಮತ್ತು ಮಧುರೈ, ಪಂಜಾಬ್ ಭಟಿಂಡಾ ಮತ್ತು ಫಿಲೌರ್, ಅಸ್ಸಾಂನ ಕಾಮರೂಪ್ ಮತ್ತು ಜಾರ್ಖಂಡ್ ರಾಂಚಿಗಳಿಗೆ ತಲುಪಿಸಲಾಗಿದೆ

ರೈಲ್ವೆ ಆಮ್ಲಜನಕ ಪೂರೈಕೆ ಸ್ಥಳಗಳಿಗೆ ನಾನಾ ಮಾರ್ಗಗಳನ್ನು ಗುರುತಿಸಿದೆ ಮತ್ತು ರಾಜ್ಯಗಳ ತುರ್ತು ಅಗತ್ಯಗಳಿಗೆ ಅದು ತನ್ನನ್ನು ತಾವು ಸನ್ನದ್ಧವಾಗಿಟ್ಟುಕೊಂಡಿದೆ. ರಾಜ್ಯಗಳು ಭಾರತೀಯ ರೈಲ್ವೆಗೆ ಎಲ್ಎಂಒ ತರಲು ಟ್ಯಾಂಕರ್ ಗಳನ್ನು ಒದಗಿಸುತ್ತಿವೆ.

ದೇಶದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆಯೇ ಭಾರತೀಯ ರೈಲ್ವೆ ಆಮ್ಲಜನಕವನ್ನು ಪಶ್ಚಿಮದ ಹಪಾ, ಬರೋಡಾ, ಮುಂದ್ರಾ ಹಾಗೂ ಪೂರ್ವದ ರೂರ್ಕೆಲಾ, ದುರ್ಗಾಪುರ್, ಟಾಟಾನಗರ್, ಅಂಗುಲ್ ನಿಂದ ಭರ್ತಿ ಮಾಡಿಕೊಂಡು ಆನಂತರ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ಸಂಕೀರ್ಣ ಕಾರ್ಯಾಚರಣೆ ಮಾರ್ಗಗಳ ಮೂಲಕ ಸಾಗಾಣೆ ಮಾಡುತ್ತಿದೆ.

ಎಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ಆಕ್ಸಿಜನ್ ಪರಿಹಾರ ತಲುಪುವುದನ್ನು ಖಾತ್ರಿಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಆಕ್ಸಿಜನ್ ಎಕ್ಸ್ ಪ್ರೆಸ್ ಸರಕು ರೈಲುಗಳ ಸಂಚಾರಕ್ಕೆ ಹೊಸ ಮಾನದಂಡ ಮತ್ತು ಅನಿರೀಕ್ಷಿತ ಹೆಜ್ಜೆ ಗುರುತುಗಳನ್ನು ಸೃಷ್ಟಿಸಿದೆ. ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗ ಹೆಚ್ಚಿನ ಸಂದರ್ಭಗಳಲ್ಲಿ 55ಕ್ಕಿಂತ  ಅಧಿಕವಾಗಿರುತ್ತದೆ. ಗರಿಷ್ಠ ಆದ್ಯತೆಯ ಗ್ರೀನ್ ಕಾರಿಡಾರ್ ನಲ್ಲಿ ಸಂಚರಿಸುವ ರೈಲುಗಳು ಅತ್ಯಂತ ತುರ್ತು ಮತ್ತು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ನಾನಾ ವಲಯಗಳ ಕಾರ್ಯಾಚರಣೆ ತಂಡಗಳು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ತಲುಪುವುದನ್ನು ಖಾತ್ರಿಪಡಿಸಲು ಹಗಲಿರುಳು ಶ್ರಮಿಸುತ್ತಿವೆ. ನಾನಾ ಮಾರ್ಗಗಳಲ್ಲಿ ಸಿಬ್ಬಂದಿಯ ಬದಲಾವಣೆಗಾಗಿ ತಾಂತ್ರಿಕ ನಿಲುಗಡೆಯಾಗುವ ಸಮಯವನ್ನು ಒಂದು ನಿಮಿಷಕ್ಕೆ ಇಳಿಸಲಾಗಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ಮಾರ್ಗಗಳನ್ನು ಮುಕ್ತವಾಗಿರಿಸಲಾಗಿದೆ ಮತ್ತು  ಅವು ಜಿಪ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಗರಿಷ್ಠ ಜಾಗರೂಕತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ.

ಎಲ್ಲ ಕಾರ್ಯವನ್ನು ಸರಕು ಕಾರ್ಯಾಚರಣೆ ರೈಲಿನ ವೇಗ ತಗ್ಗದ ರೀತಿಯಲ್ಲಿ ರೂಪಿಸಲಾಗಿದೆ.

ಹೊಸ ಆಕ್ಸಿಜನ್ ರೈಲುಗಳ ಸಂಚಾರ ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು, ಅವುಗಳ ಅಂಕಿ-ಅಂಶ ಸದಾ ಪರಿಷ್ಕೃತವಾಗುತ್ತಿರುತ್ತದೆ. ಇನ್ನೂ ಹೆಚ್ಚು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ರಾತ್ರಿಯ ನಂತರ ಪ್ರಯಾಣ ಆರಂಭಿಸುವ ಸಾಧ್ಯತೆ ಇದೆ.

***


(Release ID: 1723495) Visitor Counter : 289