ರೈಲ್ವೇ ಸಚಿವಾಲಯ

ಮೇ ತಿಂಗಳಲ್ಲಿ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ 114.8 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಿದ ರೈಲ್ವೆ


2019 ರ ಮೇ ನಲ್ಲಿ 104.6 ಮೆಟ್ರಿಕ್ ಟನ್ ಸರಕುಗಳನ್ನು ಸಾಗಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 2021 ರ ಮೇ ನಲ್ಲಿ ಶೇ 9.7 ರಷ್ಟು ಏರಿಕೆ

Posted On: 01 JUN 2021 3:05PM by PIB Bengaluru

ಸರಕು ಸಾಗಣೆ ಅಂಕಿ ಅಂಶಗಳಲ್ಲಿ ಭಾರತೀಯ ರೈಲ್ವೆ ವೇಗ ಕಾಯ್ದುಕೊಂಡಿದ್ದು, 2021 ಮೇ ನಲ್ಲಿ ಕೋವಿಡ್ ಸವಾಲುಗಳ ಹೊರತಾಗಿಯೂ ಗಳಿಕೆ ಮತ್ತು ಲೋಡಿಂಗ್ ನಲ್ಲಿ ಉತ್ತಮ ಸಾಧನೆ ಮಾಡಿದೆ.

ಅಭಿಯಾನದ ಮಾದರಿಯಲ್ಲಿ ರೈಲ್ವೆ ಕಾರ್ಯನಿರ್ವಹಿಸುತ್ತಿದ್ದು, ಮೇ ತಿಂಗಳಲ್ಲಿ ಭಾರತೀಯ ರೈಲ್ವೆ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಲೋಡಿಂಗ್ ಮಾಡಿದೆ.

2021 ಮೇ ನಲ್ಲಿ 114.8 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಿದ್ದು, ಕಳೆದ 2019 ಇದೇ ಮೇ ಗೆ ಹೋಲಿಸಿದರೆ ಶೇ 9.7 ರಷ್ಟು [104.6 ಮೆಟ್ಟಿಕ್ ಟನ್] ಪ್ರಗತಿ ಸಾಧಿಸಿದೆ

2021 ಮೇ ನಲ್ಲಿ ಪ್ರಮುಖ ವಸ್ತುಗಳನ್ನು ಸಾಗಣೆ ಮಾಡಿದ್ದು, ಅದರಲ್ಲಿ 54.52 ದಶಲಕ್ಷ ಟನ್ ಕಲ್ಲಿದ್ದಲು, 15.12 ದಶಲಕ್ಷ ಟನ್ ಕಬ್ಬಿಣದ ಅದಿರು, 5.61 ದಶಲಕ್ಷ ಟನ್ ಆಹಾರ ಧಾನ್ಯಗಳು, 3.68 ದಶಲಕ್ಷ ಟನ್ ರಸಗೊಬ್ಬರ, 3.18 ದಶಲಕ್ಷ ಟನ್ ಖನಿಜ ತೈಲ, 5.36 ದಶಲಕ್ಷ ಟನ್ ಸೀಮೆಂಟ್ [ಕ್ಲಿಂಕೆರ್ ಹೊರತುಪಡಿಸಿ] ಮತ್ತು 4.2 ದಶಲಕ್ಷ ಟನ್ ಕ್ಲಿಂಕೆರ್ ಸಾಗಾಟ ಮಾಡಿದೆ.

2021  ಮೇನಲ್ಲಿ ಭಾರತೀಯ ರೈಲ್ವೆ 11604.94 ಕೋಟಿ ರೂಪಾಯಿ ಆದಾಯವನ್ನು ಸರಕು ಸಾಗಣೆಯಿಂದ ಗಳಿಸಿದೆ.

2021  ಮೇ ನಲ್ಲಿ ವ್ಯಾಗನ್ ಟರ್ನ್ ನಲ್ಲಿ ಶೇ 26 ರಷ್ಟು ಸುಧಾರಣೆ ಕಂಡಿದ್ದು, 2018 ಮೇ ನಲ್ಲಿ ವ್ಯಾಗನ್ ಟರ್ನ್ ಗೆ 6.46 ದಿನಗಳನ್ನು ತೆಗೆದುಕೊಳ್ಳಲಾಗಿತ್ತು. ಪ್ರಮಾಣ ಇದೀಗ 4.81 ದಿನಗಳಿಗೆ ತಗ್ಗಿದೆ.

ರೈಲ್ವೆ ಸರಕು ಸಾಗಣೆಯನ್ನು ಅತ್ಯಾಕರ್ಷಕಗೊಳಿಸಲು ಭಾರತೀಯ ರೈಲ್ವೆ ಹಲವಾರು ವಿನಾಯಿತಿ ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ.   ಹಾಲಿ ಇರುವ ರೈಲ್ವೆ ಸಂಪರ್ಕಜಾಲದಲ್ಲಿ ಸರಕು ಸಾಗಣೆ ರೈಲುಗಳ ವೇಗವನ್ನು ಸಹ ಹೆಚ್ಚಿಸಲಾಗಿದೆ. ರೈಲುಗಳ ವೇಗದಲ್ಲಿ ಆಗಿರುವ ಸುಧಾರಣೆಯಿಂದ ಎಲ್ಲಾ ಪಾಲುದಾರರಿಗೆ ವೆಚ್ಚ ಕಡಿತವಾಗಲಿದೆ. ಕಳೆದ 18 ತಿಂಗಳ ಅವಧಿಯಲ್ಲಿ ಸರಕು ಸಾಗಿಸುವ ರೈಲುಗಳ ವೇಗ ದ್ವಿಗುಣಗೊಂಡಿದೆ.

ಕೆಲವು ವಲಯಗಳಲ್ಲಿ [ನಾಲ್ಕು ವಲಯಗಳು] ಸರಕು ಸಾಗಣೆ ರೈಲುಗಳ ವೇಗ 50 ಕಿಲೋಮೀಟರ್ ಗಿಂತ ಹೆಚ್ಚಾಗಿದೆ. ಭೌಗೋಳಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೆಲವು ವಲಯಗಳಲ್ಲಿ ಸರಕು ಸಾಗಣೆ ರೈಲುಗಳು ಉತ್ತಮ ವೇಗ ಕಾಯ್ದುಕೊಂಡಿವೆ. 2021 ಮೇ ನಲ್ಲಿ ಸರಾಸರಿ ವೇಗ 45.6 ಕಿಲೋಮೀಟರ್ ಇದೆ. ಇದಕ್ಕೂ ಹಿಂದಿನ ವರ್ಷ 36.19 ಕಿಲೋಮೀಟರ್ ನಷ್ಟಿದ್ದು, ಶೇ 26 ರಷ್ಟು ಪ್ರಗತಿ ಸಾಧಿಸಿದೆ.

ಕೋವಿಡ್ 19 ಪರಿಸ್ಥಿತಿಯನ್ನು ಭಾರತೀಯ ರೈಲ್ವೆ ಒಂದು ಅವಕಾಶವನ್ನಾಗಿ ಮಾಡಿಕೊಂಡಿದ್ದು, ಎಲ್ಲಾ ಹಂತದಲ್ಲೂ  ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಆದ್ಯತೆ ನೀಡಿದೆ.

***



(Release ID: 1723432) Visitor Counter : 183