ರೈಲ್ವೇ ಸಚಿವಾಲಯ

ಆಕ್ಸಿಜನ್ ಎಕ್ಸ್ಪ್ರೆಸ್ ಗಳು 21392 ಮೆ.ಟನ್.ಗಿಂತ ಹೆಚ್ಚಿನ  ಆಮ್ಲಜನಕವನ್ನು  ದೇಶಾದ್ಯಂತ  ತಲುಪಿಸಿವೆ


313 ಆಕ್ಸಿಜನ್ ಎಕ್ಸ್ಪ್ರೆಸ್ ಗಳು ದೇಶಾದ್ಯಂತ ಆಮ್ಲಜನಕ ವಿತರಣೆಯನ್ನು ಪೂರ್ಣಗೊಳಿಸಿವೆ

ಆಕ್ಸಿಜನ್ ಎಕ್ಸ್ಪ್ರೆಸ್ ಗಳು ಈವರೆಗೆ 1274 ಟ್ಯಾಂಕರ್ಗಳ ಆಮ್ಲಜನಕವನ್ನು ಸಾಗಿಸಿ 15 ರಾಜ್ಯಗಳಿಗೆ ಪರಿಹಾರವನ್ನು ಒದಗಿಸಿವೆ

ಹರಿಯಾಣ ಮತ್ತು ಕರ್ನಾಟಕಕ್ಕೆ ಆಮ್ಲಜನಕದ ವಿತರಣೆಯು ತಲಾ 2000 ಮೆ.ಟನ್ ದಾಟಿದೆ

ಮಹಾರಾಷ್ಟ್ರದಲ್ಲಿ 614 ಮೆ.ಟನ್, ಉತ್ತರಪ್ರದೇಶದಲ್ಲಿ ಸುಮಾರು 3797 ಮೆ.ಟನ್, ಮಧ್ಯಪ್ರದೇಶದಲ್ಲಿ 656 ಮೆ.ಟನ್, ದೆಹಲಿಯಲ್ಲಿ 5476 ಮೆ.ಟನ್, ಹರಿಯಾಣದಲ್ಲಿ 2023 ಮೆ.ಟನ್, ರಾಜಸ್ಥಾನದಲ್ಲಿ 98 ಮೆ.ಟನ್, ಕರ್ನಾಟಕದಲ್ಲಿ 2115 ಮೆ.ಟನ್, ಉತ್ತರಾಖಂಡದಲ್ಲಿ 320 ಮೆ.ಟನ್, 1808 ಮೆ.ಟನ್ ತಮಿಳುನಾಡಿನಲ್ಲಿ, ಆಂಧ್ರಪ್ರದೇಶದಲ್ಲಿ 1738 ಮೆ.ಟನ್, ಪಂಜಾಬ್ನಲ್ಲಿ 225 ಮೆ.ಟನ್, ಕೇರಳದಲ್ಲಿ 380 ಮೆ.ಟನ್, ತೆಲಂಗಾಣದಲ್ಲಿ 1858 ಮೆ.ಟನ್, ಜಾರ್ಖಂಡ್ನಲ್ಲಿ 38 ಮೆ.ಟನ್ ಮತ್ತು ಅಸ್ಸಾಂನಲ್ಲಿ 240 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ತಲುಪಿಸಲಾಗಿದೆ

Posted On: 30 MAY 2021 2:37PM by PIB Bengaluru

ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ  ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ತಲುಪಿಸುವ ಮೂಲಕ ಪರಿಹಾರವನ್ನು ತಲುಪಿಸುವ ಕಾರ್ಯವನ್ನು ಮುಂದುವರಿಸಿದೆ. ಇಲ್ಲಿಯವರೆಗೆ, ಭಾರತೀಯ ರೈಲ್ವೆಯು ಸುಮಾರು 1274 ಕ್ಕೂ ಹೆಚ್ಚು ಟ್ಯಾಂಕರ್ಗಳಲ್ಲಿ ಸುಮಾರು 21392  ಮೆ.ಟನ್ ಎಲ್ಎಂಒವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ.

313 ಆಕ್ಸಿಜನ್ ಎಕ್ಸ್ಪ್ರೆಸ್ಗಳು ಈವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರವನ್ನು ನೀಡಿವೆ ಎನ್ನುವುದನ್ನು ಗಮನಿಸಬಹುದು.

ಸುದ್ದಿ ಬಿಡುಗಡೆಯ ಸಮಯದವರೆಗೆ, 23 ಟ್ಯಾಂಕರ್ಗಳಲ್ಲಿ 5 ಲೋಡ್ ಆಕ್ಸಿಜನ್ ಎಕ್ಸ್ಪ್ರೆಸ್ಗಳು 406 ಮೆ.ಟನ್ ಗಿಂತ ಹೆಚ್ಚಿನ ಆಮ್ಲಜನಕದೊಂದಿಗೆ ಮಾರ್ಗದಲ್ಲಿ ಚಲಿಸುತ್ತಿವೆ.

ಹರಿಯಾಣ ಮತ್ತು ಕರ್ನಾಟಕಕ್ಕೆ ಆಮ್ಲಜನಕ ವಿತರಣೆಯು ತಲಾ 2000 ಮೆ.ಟನ್ ದಾಟಿದೆ.

ತಮಿಳುನಾಡು ಮತ್ತು ತೆಲಂಗಾಣ ರಾಜ್ಯಕ್ಕೆ  ಆಮ್ಲಜನಕ  ವಿತರಣೆಯು ತಲಾ 1800 ಮೆ.ಟನ್ ದಾಟಿದೆ.

ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ 126 ಮೆ.ಟನ್  ತಲುಪಿಸುವುದರೊಂದಿಗೆ   ಆಕ್ಸಿಜನ್ ಎಕ್ಸ್ಪ್ರೆಸ್ 36 ದಿನಗಳ ಹಿಂದೆಯೇ ತಮ್ಮ ಕಾರ್ಯವನ್ನು ಪ್ರಾರಂಭಿಸಿತು ಎನ್ನುವುದು  ಉಲ್ಲೇಖನಾರ್ಹವಾಗಿದೆ .

ಕೋರಿಕೊಂಡಿರುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಎಲ್ಎಂಒ ತಲುಪಿಸುವುದು ಭಾರತೀಯ ರೈಲ್ವೆಯ ಪ್ರಯತ್ನವಾಗಿದೆ.

ಆಕ್ಸಿಜನ್ ಎಕ್ಸ್ಪ್ರೆಸ್ಗಳ ಆಮ್ಲಜನಕ ಪರಿಹಾರವು 15 ರಾಜ್ಯಗಳಾದ ಉತ್ತರಾಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂಗೆ ತಲುಪಿದೆ.

ಸುದ್ದಿ ಬಿಡುಗಡೆಯ ಸಮಯದವರೆಗೆ, ಮಹಾರಾಷ್ಟ್ರದಲ್ಲಿ 614 ಮೆ.ಟನ್ ಆಕ್ಸಿಜನ್, ಉತ್ತರಪ್ರದೇಶದಲ್ಲಿ ಸುಮಾರು 3797 ಮೆ.ಟನ್, ಮಧ್ಯಪ್ರದೇಶದಲ್ಲಿ 656 ಮೆ.ಟನ್, ದೆಹಲಿಯಲ್ಲಿ 5476 ಮೆ.ಟನ್, ಹರಿಯಾಣದಲ್ಲಿ 2023 ಮೆ.ಟನ್, ರಾಜಸ್ಥಾನದಲ್ಲಿ 98 ಮೆ.ಟನ್, ಕರ್ನಾಟಕದಲ್ಲಿ 2115 ಮೆ.ಟನ್, ಉತ್ತರಾಖಂಡದಲ್ಲಿ 320 ಮೆ.ಟನ್, ತಮಿಳುನಾಡಿನಲ್ಲಿ 1808 ಮೆ.ಟನ್, ಆಂಧ್ರಪ್ರದೇಶದಲ್ಲಿ 1738 ಮೆ.ಟನ್, ಪಂಜಾಬ್ನಲ್ಲಿ 225 ಮೆ.ಟನ್, ಕೇರಳದಲ್ಲಿ 380 ಮೆ.ಟನ್, ತೆಲಂಗಾಣದಲ್ಲಿ 1858 ಮೆ.ಟನ್, ಜಾರ್ಖಂಡ್ನಲ್ಲಿ 38 ಮೆ.ಟನ್ ಮತ್ತು ಅಸ್ಸಾಂನಲ್ಲಿ 240 ಮೆ.ಟನ್ ಆಮ್ಲಜನಕವನ್ನು ತಲುಪಿಸಲಾಗಿದೆ.

ಇಲ್ಲಿಯವರೆಗೆ ಆಕ್ಸಿಜನ್  ಎಕ್ಸ್ಪ್ರೆಸ್ಗಳು ದೇಶಾದ್ಯಂತ 15 ರಾಜ್ಯಗಳ ಸುಮಾರು 39 ನಗರಗಳು ಹಾಗೂ  ಪಟ್ಟಣಗಳಲ್ಲಿ ಎಲ್ಎಂಒ ಅನ್ನು ತಲುಪಿಸಿವೆ, ಅವುಗಳೆಂದರೆ ಉತ್ತರ ಪ್ರದೇಶದ ಲಕ್ನೋ, ವಾರಣಾಸಿ, ಕಾನ್ಪುರ್, ಬರೇಲಿ, ಗೋರಖ್ಪುರ ಮತ್ತು ಆಗ್ರಾ; ಮಧ್ಯಪ್ರದೇಶದ ಸಾಗರ್, ಜಬಲ್ಪುರ್, ಕಟ್ನಿ ಮತ್ತು ಭೋಪಾಲ್ ; ಮಹಾರಾಷ್ಟ್ರದ ನಾಗ್ಪುರ, ನಾಸಿಕ್, ಪುಣೆ, ಮುಂಬೈ ಮತ್ತು ಸೋಲಾಪುರ ; ತೆಲಂಗಾಣದ ಹೈದರಾಬಾದ್ ; ಹರಿಯಾಣದ ಫರಿದಾಬಾದ್ ಮತ್ತು ಗುರುಗ್ರಾಮ್; ದೆಹಲಿಯ ದೆಹಲಿ ಕ್ಯಾಂಟ್ ಮತ್ತು ಓಖ್ಲಾ; ರಾಜಸ್ಥಾನದ ಕೋಟಾ ಮತ್ತು ಕನಕ್ಪರಾ; ಕರ್ನಾಟಕದ ಬೆಂಗಳೂರು; ಉತ್ತರಾಖಂಡದ ಡೆಹ್ರಾಡೂನ್; ಆಂಧ್ರಪ್ರದೇಶದ ನೆಲ್ಲೂರು, ಗುಂಟೂರು, ತಡಿಪಾಟ್ರಂ ಮತ್ತು ವಿಶಾಖ ಪಟ್ನಂ; ತಮಿಳುನಾಡಿನ ಚೆನ್ನೈ ಟ್ಯುಟಿಕೋರಿನ್ ಕೊಯಮತ್ತೂರು ಮತ್ತು ಮಧುರೈ; ಪಂಜಾಬ್ ಭಟಿಂಡಾ ಮತ್ತು ಫಿಲ್ಲೌರ್ಅಸ್ಸಾಂನ ಕಮ್ರೂಪ್ ಮತ್ತು ಜಾರ್ಖಂಡ್ನ ರಾಂಚಿ.

ರೈಲ್ವೆಯು ವಿವಿಧ ಮಾರ್ಗಗಳನ್ನು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ಯೋಜಿಸಿಕೊಂಡಿದೆ ಮತ್ತು ರಾಜ್ಯಗಳ ಯಾವುದೇ ಮುಂದಿನ ಅಗತ್ಯತೆಗಳೊಂದಿಗೆ ಸಿದ್ಧವಾಗಿದೆಎಲ್ಎಂಒ ತರಲು ರಾಜ್ಯಗಳು ಭಾರತೀಯ ರೈಲ್ವೆಗೆ ಟ್ಯಾಂಕರ್ ಗಳನ್ನು ಒದಗಿಸುತ್ತವೆ.

ದೇಶದ ಉದ್ದಗಲಕ್ಕೆ ಸಂಚರಿಸುತ್ತಾ  ಭಾರತೀಯ ರೈಲ್ವೆಯು ಪಶ್ಚಿಮದಲ್ಲಿ ಹಪಾ ಮತ್ತು ಮುಂಡ್ರಾ ಮತ್ತು ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಪೂರ್ವದ ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ತೆಗೆದುಕೊಂಡು ನಂತರ ಅದನ್ನು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು , ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು  ಉತ್ತರ ಪ್ರದೇಶದ ರಾಜ್ಯಗಳಿಗೆ ಕ್ಲಿಷ್ಟಕರವಾದ ಕಾರ್ಯಾಚರಣೆ ಮಾರ್ಗ ಯೋಜನೆ ಸನ್ನಿವೇಶಗಳಲ್ಲಿ ತಲುಪಿಸುತ್ತಿದೆ

ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ರೈಲ್ವೆ ಆಕ್ಸಿಜನ್ ಎಕ್ಸ್ಪ್ರೆಸ್ ಸರಕು ರೈಲುಗಳ ಚಾಲನೆಯಲ್ಲಿ ಹೊಸ ಮಾನದಂಡಗಳನ್ನು ಮತ್ತು ಅಭೂತಪೂರ್ವ ಮಾನದಂಡಗಳನ್ನು ರಚಿಸುತ್ತಿದೆ ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗವು ಹೆಚ್ಚಿನ ಸಂದರ್ಭಗಳಲ್ಲಿ 55ಕ್ಕಿಂತ ಹೆಚ್ಚಿನದಾಗಿದೆ. ಹೆಚ್ಚಿನ ಆದ್ಯತೆಯ ಗ್ರೀನ್ ಕಾರಿಡಾರ್ನಲ್ಲಿ ಚಾಲನೆಯಲ್ಲಿರುವ, ಹೆಚ್ಚಿನ ತುರ್ತು ಪ್ರಜ್ಞೆಯೊಂದಿಗೆ, ವಿವಿಧ ವಲಯಗಳ ಕಾರ್ಯಾಚರಣಾ ತಂಡಗಳು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ಇಪ್ಪತ್ತನಾಲ್ಕು ಘಂಟೆಗಳ ಕಾಲ  ಕೆಲಸ ಮಾಡುತ್ತಿದ್ದು, ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತ ಪಡಿಸುತ್ತವೆ. ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿ ಬದಲಾವಣೆಗಳಿಗಾಗಿ ತಾಂತ್ರಿಕ ನಿಲುಗಡೆಗಳನ್ನು 1 ನಿಮಿಷಕ್ಕೆ ಇಳಿಸಲಾಗಿದೆ.

ಟ್ರ್ಯಾಕ್ ಗಳನ್ನು ಮುಕ್ತವಾಗಿ ಇಡಲಾಗುತ್ತದೆ ಮತ್ತು ಆಕ್ಸಿಜನ್ ಎಕ್ಸ್ಪ್ರೆಸ್ ತಡೆಯಿಲ್ಲದೆ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಗರೂಕತೆಯನ್ನು ವಹಿಸಿಲಾಗುತ್ತಿದೆ.

ಇತರ ಸರಕು ಸಾಗಣಿಕೆಯ ವೇಗವು ಕಡಿಮೆಯಾಗಬಾರದು ಎನ್ನುವ ರೀತಿಯಲ್ಲಿ ಇದನ್ನು ಮಾಡಲಾಗುತ್ತದೆ.

ಹೊಸ ಆಮ್ಲಜನಕ ಎಕ್ಸ್ ಪ್ರೆಸ್ ಗಳನ್ನು ಚಲಾಯಿಸುವುದು ಬಹಳ ಕ್ರಿಯಾತ್ಮಕ ಕ್ರಿಯೆಯಾಗಿದ್ದು ಮತ್ತು ಅಂಕಿಅಂಶಗಳು ಸಾರ್ವಕಾಲಿಕ ಹೊಸದಾಗಿ ಬದಲಾಗುತ್ತಿರುತ್ತವೆ. ಮತ್ತಷ್ಟು ಆಮ್ಲಜನಕ ತುಂಬಿಕೊಂಡ ಆಕ್ಸಿಜನ್ ಎಕ್ಸ್ ಪ್ರೆಸ್ಗಳು ರಾತ್ರಿಯ ನಂತರ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

***



(Release ID: 1723017) Visitor Counter : 216