ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಲಸಿಕೆ ಕುರಿತ ಸುಳ್ಳುಗಳ ಬಯಲು


ಕೋವಿಡ್ -19 ವಿರುದ್ಧ ಹೋರಾಟಕ್ಕಾಗಿರುವ ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣೆಯ ಅಧಿಕಾರಯುಕ್ತ ಗುಂಪಿನ ಅಧ್ಯಕ್ಷರಿಂದ ಕೋವಿನ್ ಕಾರ್ಯನಿರ್ವಹಣೆ ಕುರಿತ ತಪ್ಪು ಮಾಹಿತಿಯ ಅನಾವರಣ

ಅರ್ಹ ಭಾರತೀಯರಲ್ಲಿ 17.67 % ಮಂದಿ ಈಗಾಗಲೇ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

ಒ.ಟಿ.ಪಿ. ಮತ್ತು ಮನುಷ್ಯ ಗುರುತಿಸುವಿಕೆಯನ್ನು

ಕಡೆಗಣಿಸಲಾಗದು; ಕೋವಿನ್ ನ್ನು ಅತಿಕ್ರಮಿಸಿ ಕೈವಶ ಮಾಡಿಕೊಳ್ಳುವುದು ಸಾಧ್ಯವಿಲ್ಲ

ಲಸಿಕೆಯ ಪೂರೈಕೆ ಹೆಚ್ಚುತ್ತಿದ್ದಂತೆ , ಹೆಚ್ಚು ಸ್ಲಾಟ್ ಗಳನ್ನು ತೆರೆಯಲಾಗುವುದು

ಲಸಿಕಾ ಕೇಂದ್ರದಲ್ಲಿ ಜನಸಾಂದ್ರತೆ ಹೆಚ್ಚುವುದನ್ನು ನಿಯಂತ್ರಿಸುವ ಮೂಲಕ  “ಕೊವಿನ್”  ನೊಂದಾವಣೆ ಕಾರ್ಯಕ್ರಮ ಕಲಸುಮೇಲೋಗರವಾಗಿ ಅಸ್ತವ್ಯಸ್ತವಾಗದಂತೆ ತಡೆಯುತ್ತದೆ.

ಸ್ಥಳಕ್ಕೆ ಬಂದು ನೊಂದಾವಣೆ ಮಾಡಿಕೊಳ್ಳಲು ಮತ್ತು ಇತರ ಎಲ್ಲಾ ವಯೋಮಾನದವರಿಗೆ ಬಳಗದಲ್ಲಿ ನೊಂದಾಯಿಸಿಕೊಳ್ಳಲು ವ್ಯವಸ್ಥೆ ಲಭ್ಯ



ಭಾರತ ಸರಕಾರವು  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮರ್ಪಕ ಲಸಿಕಾ ಆಂದೋಲನಕ್ಕಾಗಿ “ಇಡೀ ಸರಕಾರ” ಧೋರಣೆಯಲ್ಲಿ ಈ ವರ್ಷದ ಜನವರಿ 16 ರಿಂದ ಬೆಂಬಲವನ್ನು ನೀಡುತ್ತಿದೆ. ಭಾರತದ ಭೌಗೋಳಿಕ ವ್ಯಾಪ್ತಿಯ ವಿವಿಧ ಮೂಲೆಗಳಲ್ಲಿ ಕೊನೆಯ ನಾಗರಿಕರಿಗೂ ಸಹ ಲಸಿಕೆ ಲಭ್ಯವಾಗಬೇಕು ಎಂಬ ಕಾರಣದಿಂದ ಇಡೀ ವ್ಯವಸ್ಥೆಯನ್ನು ಸುಸೂತ್ರವಾಗಿ ಮುನ್ನಡೆಸಲು ಕೇಂದ್ರ ಸರಕಾರವು ಕೋವಿನ್ ವೇದಿಕೆಯನ್ನು ನಿರ್ಮಾಣ ಮಾಡಿದೆ

Posted On: 29 MAY 2021 8:33PM by PIB Bengaluru

ಭಾರತದಲ್ಲಿ ಲಸಿಕಾಕರಣವನ್ನು ನಿರ್ದೇಶಿಸುವ ತಾಂತ್ರಿಕ ಬೆನ್ನೆಲುಬು ಕೋವಿನ್.  ಕೋವಿನ್ ಲಸಿಕಾಕರಣ ಪ್ರಕ್ರಿಯೆಯ ಎಲ್ಲಾ ಘಟಕಾಂಶಗಳನ್ನು ಒಳಗೊಂಡಿದೆ. ಅಧಿಕೃತ ಲಸಿಕೆಗಳ ಪೂರೈಕೆಯ ನಿಗಾದಿಂದ ಹಿಡಿದು ಲಸಿಕಾ ಕೇಂದ್ರಗಳಲ್ಲಿ  ನೊಂದಾವಣೆಯ ನಿಭಾವಣೆ, ನಾಗರಿಕರಿಗೆ ಪ್ರಮಾಣ ಪತ್ರ ಒದಗಿಸುವವರೆಗೆ ಇಡೀ ಮೌಲ್ಯ ಸರಪಳಿಯನ್ನು ಕೋವಿನ್ ವೇದಿಕೆಯ ಮೂಲಕ ನಿರ್ವಹಿಸಲಾಗುತ್ತಿದೆ. ಎಲ್ಲಾ ಭಾಗೀದಾರರನ್ನು   ಜೋಡಿಸಿಕೊಳ್ಳಲು ಇಂತಹ ತಾಂತ್ರಿಕ ವೇದಿಕೆ ಅವಶ್ಯವಾಗಿರುತ್ತದೆ ಮತ್ತು ಪಾರದರ್ಶಕತೆ ತರಲು, ಮಾಹಿತಿ ಅಸಮತೆಯನ್ನು ತಡೆಯಲು ಮತ್ತು ಬಾಡಿಗೆ ಪ್ರೇರಿತ ಪ್ರಯತ್ನಗಳನ್ನು ತಡೆಯುವುದಕ್ಕೂ ಇದು ಅಗತ್ಯ.

ಕೆಲವು ಲೇಖಕರು ಕೊವಿನ್ ಲಸಿಕೆಯ ಮುಂಗಡ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಟೀಕಿಸುತ್ತಿದ್ದು, ಅವರು ಭಾರತದ ಲಸಿಕಾ ಆಂದೋಲನದ  ವ್ಯಾಪ್ತಿಪ್ರಮಾಣ ಮತ್ತು ಸಂಕೀರ್ಣತೆಯನ್ನು ಸಂಪೂರ್ಣವಾಗಿ ಗ್ರಹಿಸಿಕೊಂಡಿಲ್ಲ. ತಪ್ಪು ತಿಳುವಳಿಕೆಯನ್ನು ತೊಡೆಯಲು ನಾವು ಮೊದಲು ನೊಂದಾವಣೆ ಅಲ್ಲದೆ ಕೋವಿನ್ ನಿರ್ವಹಿಸಬೇಕಾದ ವಿಸ್ತಾರ ವ್ಯಾಪ್ತಿಯ ಪಾತ್ರದ ಬಗ್ಗೆ ಗಮನ ಹರಿಸಬೇಕು. ಬಳಿಕ ನಾವು ಬೇಡಿಕೆ ಪೂರೈಕೆಗೆ ಸಂಬಂಧಿಸಿದ ಪ್ರಸ್ತುತ ವಿಷಯಗಳು ಮತ್ತು ಅದನ್ನು ಅನುಸರಿಸಿ ಲಸಿಕೆ ನೋಂದಣೆಯ ಬಹು ಮಾದರಿಗಳು ಮತ್ತು ವಿಧಾನಗಳು ಹಾಗು ಎಲ್ಲರನ್ನೂ ಒಳಗೊಳ್ಳುವ ಮತ್ತು 1.37 ಬಿಲಿಯನ್ ನಾಗರಿಕರ ಜನಸಂಖ್ಯೆಗೆ ಸಮಾನ ಲಸಿಕಾಕರಣಕ್ಕೆ ಸಂಯೋಜಿಸಲಾದ ಆಂದೋಲನಕ್ಕೆ ಕೈಗೊಳ್ಳಲಾದ ಕ್ರಮಗಳನ್ನು ತಿಳಿಸುತ್ತೇವೆ.

ಕೋವಿನ್ ವೇದಿಕೆಯು ಬರೇ ನಾಗರಿಕರನ್ನು ಎದುರುಗೊಳ್ಳುವ ವೇದಿಕೆ ಮಾತ್ರ ಅಲ್ಲ. ಅದು ಲಸಿಕಾ ಕೇಂದ್ರಗಳಿಗೆ ನೆರವಾಗುವ ಮತ್ತು ಆಡಳಿತಗಾರರಿಗೆ ಭೌತಿಕ ಕಾರ್ಯಾಚರಣೆಯಲ್ಲಿ ಮತ್ತು ನಿರ್ವಹಣೆಯಲ್ಲಿ ನೆರವಾಗುವ ಮಾದರಿಗಳನ್ನು ಒಳಗೊಂಡಿದೆ. ಲಸಿಕಾ ಸ್ಲಾಟ್ ಗಳ  ಶೋಧನೆ ಮತ್ತು ನೊಂದಾವಣೆ ಮಾತ್ರ ಕಣ್ಣಿಗೆ ಕಾಣುವ ಭಾಗವಾಗಿದೆ, ಮುಳುಗಿರುವ ಬೃಹತ್ ಐಸ್ ಬರ್ಗ್ ಮೇಲಿನ ಒಂದು ಸಣ್ಣ ಭಾಗದಂತೆ. ಮೊದಲ ಡೋಸಿನ ಬಳಿಕ, ಕೋವಿನ್ ಲಸಿಕೆಯ ಬ್ರಾಂಡನ್ನು ಅನುಸರಿಸಿ  ನಾಗರಿಕರಿಗೆ ಲಸಿಕೆಯ ವೇಳಾಪಟ್ಟಿಯನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ತಾತ್ಕಾಲಿಕ ಪ್ರಮಾಣ ಪತ್ರವನ್ನೂ ನೀಡುತ್ತದೆ. ಇದರಿಂದ ಲಸಿಕೆಯ ನಿರ್ವಹಣೆ ಮಾಡುತ್ತಿರುವ ಆಡಳಿತಗಾರರಿಗೆ ನಿಗದಿತ ವೇಳಾಪಟ್ಟಿಯನ್ನು ಅನುಸರಿಸಲು ವಿಫಲರಾದವರನ್ನು ಅಥವಾ ಅವಶ್ಯ ಮಾಹಿತಿ ಕೊರತೆ ಇರುವವರನ್ನು ಪತ್ತೆ ಹಚ್ಚಿ ನಿಗಾ ಇಡಲು ಸಹಾಯವಾಗುತ್ತದೆ. ಎರಡನೇ ಡೋಸಿನ ಬಳಿಕ ದೇಶಾದ್ಯಂತ ಕೇಂದ್ರೀಕೃತ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ, ಅದು ಎಲ್ಲ ಕಡೆಯೂ ಅಂಗೀಕರಿಸಲ್ಪಡುತ್ತದೆ.

ಇದರ ಜೊತೆಗೆ ಕೊವಿನ್ ಲಸಿಕೆ ಒದಗಣೆದಾರರಿಗೆ ಲಸಿಕೆ ಲಭ್ಯತೆಯ ಮೆಲೆ ಅವರ ಲಸಿಕೆ ನೀಡಿಕೆಯ ವೇಳಾಪಟ್ಟಿಯನ್ನು ಪ್ರಕಟಿಸಲು ಸಹಾಯ ಮಾಡುತ್ತದೆ, ನಾಗರಿಕರನ್ನು ಲಸಿಕಾ ಬಿಂದುವಿನಲ್ಲಿ ಪರಿಶೀಲನೆ ಮಾಡುತ್ತದೆ, ಲಸಿಕಾಕರಣವನ್ನು ದಾಖಲಿಸುತ್ತದೆ ಮಾತ್ರವಲ್ಲ ಲಸಿಕಾಕರಣದ ಬಳಿಕದ ಪ್ರತಿಕೂಲ ಪ್ರತಿಕ್ರಿಯಾ ಘಟನೆಗಳು (..ಎಫ್..)  ಯಾವುದಾದರೂ ಸಂಭವಿಸಿದರೆ ಅದನ್ನೂ ದಾಖಲಿಸುತ್ತದೆ. ದತ್ತಾಂಶ ಚಾಲಿತ ಸಾರ್ವಜನಿಕ ಆರೋಗ್ಯ ನೀತಿ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ..ಎಫ್..ಯು ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದರ ಜೊತೆಗೆ ಲಸಿಕೆ ಹಾಕುವ ಸಮಯದಲ್ಲಿ ಯಾವುದೇ ವ್ಯಕ್ತಿಯ ಹೆಸರು, ವಯಸ್ಸು ಮತ್ತು ಲಿಂಗವನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತದೆ. ಜೊತೆಯಲ್ಲಿ ಲಸಿಕೆ ಮತ್ತು ಲಸಿಕಾ ಕೇಂದ್ರದ ವಿವರಗಳೂ ದಾಖಲಾಗುತ್ತವೆ. ವಿವರಗಳನ್ನು ಲಸಿಕಾ ಆಂದೋಲನದ ವ್ಯಾಪ್ತಿಯ ಮೌಲ್ಯಮಾಪನ ಮಾಡಲು ಮತ್ತು ಭೌಗೋಳಿಕ ಮಟ್ಟದಲ್ಲಿ ತೀರಾ ಸಣ್ಣ ಪ್ರದೇಶದವರೆಗೂ ಲಸಿಕಾಕರಣವನ್ನು ಖಾತ್ರಿಪಡಿಸಲೂ ಬಳಕೆ ಮಾಡಲಾಗುತ್ತದೆ. ಇಂತಹ ಪ್ರಾಯೋಗಿಕ ಆನ್ವಯಿಕತೆಗಳು ಮತ್ತು ಆವಶ್ಯಕತೆಗಳ ಹೊರತಾಗಿ ಕೋವಿನ್ ಸಾಮೂಹಿಕ ದತ್ತಂಶ ಸಂಗ್ರಹಣೆ ಸಲಕರಣೆ ಎಂಬ ಆಪಾದನೆಯನ್ನೂ ಹೊತ್ತುಕೊಂಡಿದೆ.

ಲಸಿಕಾಕರಣದ ಸ್ಲಾಟ್ ಗಳು ಲಭ್ಯವಾಗದ ವಿಷಯದ ಬಗ್ಗೆ ಪರಿಶೀಲಿಸಿದರೆ, ಏಪ್ರಿಲ್ 28ರಂದು 18ರಿಂದ 44 ವರ್ಷದವರೆಗಿನ ವಯೋಮಾನದವರಿಗೆ ರಿಜಿಸ್ಟ್ರೇಶನ್ ಅವಕಾಶ ಮುಕ್ತ ಮಾಡಿದ ಬಳಿಕ ಕೂಗೆದ್ದಿದೆ. ವಯೋಮಿತಿಯಲ್ಲಿ ಲಸಿಕೆಗೆ ಬೇಡಿಕೆ ಮತ್ತು ಪೂರೈಕೆ ಹೇಗೆ ತೀವ್ರವಾಗಿ ತಿರುಚಿಕೊಂಡಿತು ಎಂಬುದನ್ನು ತಿಳಿದುಕೊಂಡರೆ ಅದೊಂದು ಅದ್ಭುತ ಸಂಗತಿಯಾಗುತ್ತದೆ. ನೋಂದಣೆ ಮತ್ತು ಡೋಸ್ ಗಳನ್ನು ನೀಡಲಾದ ಅನುಪಾತ 6.5 :1 ಆಯಿತು. ವಾರದ ಹಿಂದೆ ಅದು 11:1 ಆಗಿತ್ತು. ಒಟ್ಟು 244 ಮಿಲಿಯನ್ ನೋಂದಣೆಗಳು ಮತ್ತು 167 ಮಿಲಿಯನ್ನಿಗೂ ಅಧಿಕ ಮಂದಿ ಕನಿಷ್ಠ ಒಂದು ಡೋಸ್ (2021 ಮೇ 29 ಸಂಜೆ ಗಂಟೆ 7 ಕ್ಕೆ ಲಭ್ಯವಾದ ದತ್ತಾಂಶಗಳ ಪ್ರಕಾರ) ಪಡೆಯುತ್ತಿರುವಾಗ  ಕೊರತೆಯೇ ಹಾಲಿ ಪ್ರಕ್ರಿಯೆಗಳ ವಿವರಣೆಯನ್ನು ಒದಗಿಸುತ್ತದೆ. ಸಹಜವಾಗಿ ಸಮಯ ಕಳೆದಂತೆ ಅಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಪೂರೈಕೆಯಾಗುತ್ತದೆ.

1.37 ಬಿಲಿಯನ್ ಗೂ ಅಧಿಕ ಜನಸಂಖ್ಯೆ ಇರುವ ದೇಶದಲ್ಲಿ 167 ಮಿಲಿಯನ್  ಜನರು ಕನಿಷ್ಠ ಒಂದು ಡೋಸ್ ಆದರೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಅಂದರೆ ~12.21% ಜನಸಂಖ್ಯಾ ವ್ಯಾಪ್ತಿಯನ್ನು ಇದು ತಲುಪಿದೆ. ಅಥವಾ ಪ್ರತೀ 8 ಮಂದಿ ಭಾರತೀಯರಲ್ಲಿ ಒಬ್ಬರು ಲಸಿಕೆ ಹಾಕಿಸಿಕೊಂಡಿದ್ದಾರೆ. 18+ ಜನಸಂಖ್ಯೆಗೆ ಸಂಬಂಧಿಸಿದ ವಾಸ್ತವದ ಗುರಿಯನ್ನು ಗಮನಿಸಿದರೆ, ಜನಸಂಖ್ಯೆ 944.7 ಮಿಲಿಯನ್, ಅಂದರೆ ~17.67% ಅಥವಾ ಪ್ರತೀ 11 ಮಂದಿ ಭಾರತೀಯರಲ್ಲಿ ಇಬ್ಬರು. ದತ್ತಾಂಶವನ್ನು ಕೊವಿನ್ ಜಾಲತಾಣದಲ್ಲಿ ರಿಯಲ್ ಟೈಮ್ ಆಧಾರದಲ್ಲಿ ಸಕಾಲಿಕಗೊಳಿಸಲಾಗಿದೆ ಮತ್ತು ಅದು ಎಲ್ಲರ ವೀಕ್ಷಣೆಗೂ ಲಭ್ಯ ಇದೆ. ರಾಜ್ಯದಲ್ಲಿ ಜಿಲ್ಲಾ ಮಟ್ಟದವರೆಗೂ ಅದು ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ.

ಇದಲ್ಲದೆ, ಲೇಖಕರು ಆನ್ ಲೈನ್ ನೋಂದಣೆಯ ಜೊತೆಗೆ  ಅಲ್ಲಿ ಬೇರೆ ಯಾವುದೇ ಮಾದರಿಯ ನೋಂದಣೆ ಇಲ್ಲವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಜನವರಿಯಿಂದ ಆಫ್ ಲೈನ್ ಆಗಿ ಸ್ಥಳಕ್ಕೆ ಬಂದು ಲಸಿಕೆ ಪಡೆಯುವ ವಿಧಾನ ಲಸಿಕಾಕರಣದ ಪ್ರಕ್ರಿಯೆಯಲ್ಲಿ ಅವಿಭಾಜ್ಯ ಅಂಗವಾಗಿತ್ತು. ಆನ್ ಲೈನ್ ನೋಂದಣೆ ಮತ್ತು ಆಫ್ ಲೈನ್ ಮೂಲಕ ಅಂದರೆ ಸ್ಥಳದಲ್ಲಿಯೇ ಬಂದು ನೊಂದಾಯಿಸಿ ಲಸಿಕೆ ಪಡೆಯುವ ಅನುಪಾತವನ್ನು ಕಾಲ ಕಾಲಕ್ಕೆ ಪರಿಷ್ಕರಿಸಲಾಗಿದೆ. ಲಸಿಕಾ ಕೇಂದ್ರಗಳಲ್ಲಿ ಜನದಟ್ಟಣೆ ತಡೆಯಲು ಕ್ರಮ ಅನುಸರಿಸಲಾಗಿದೆ. ವಾಸ್ತವ ಎಂದರೆ ಇದುವರೆಗೆ ನೀಡಲಾದ 211.8 ಮಿಲಿಯನ್ ಡೋಸ್ ಲಸಿಕೆಗಳಲ್ಲಿ ಸುಮಾರು 55% ನಷ್ಟು ಲಸಿಕೆಗಳು ಸ್ಥಳಕ್ಕೆ ಬಂದು ನೊಂದಾಯಿಸಿಕೊಂಡವರೇ ಪಡೆದಿದ್ದಾರೆ. ಕೋವಿನ್ ಬುದ್ಧಿಮತ್ತೆ ಇರುವುದೇ ಆನ್ ಲೈನ್ ನೊಂದಣೆ ಮತ್ತು ಆಫ್ ಲೈನ್ ನಲ್ಲಿ ಸ್ಥಳಕ್ಕೆ ಬಂದು ಲಸಿಕೆ ಪಡೆಯುವವರಿಗೆ ಒದಗಿಸಲಾಗುವ ಸ್ಲಾಟ್ ಗಳಲ್ಲಿ ಬದಲಾವಣೆಗೆ ಅವಕಾಶ ನೀಡುವುದರಲ್ಲಿ.

ಇಂತಹ ಮುನ್ನೋಟದ ಧೋರಣೆಯೊಂದಿಗೆ ಕೋವಿನ್ ನನ್ನು ಅಂತರ ಕಾರ್ಯಾಚರಣೆಯನ್ನು ನಿಭಾಯಿಸಲು ಅನುಕೂಲವಾಗುವ ರೀತಿಯಲ್ಲಿ ರೂಪಿಸಲಾಗಿದೆ. ಅದು ಸಾರ್ವಜನಿಕ ಒಳಿತಿಗಾಗಿ ಬಳಕೆಯಾಗುವ ತಾಂತ್ರಿಕ ಅನ್ವೇಷಣೆ. ಕೋವಿನ್ .ಪಿ..ಗಳನ್ನು ಲಸಿಕಾ ಸ್ಲಾಟ್ ಗಳ ಹುಡುಕಾಟಕ್ಕಾಗಿ ಮೂರನೇ ಪಕ್ಷದ ಅಭಿವೃದ್ಧಿಕಾರರಿಗೂ ಮುಕ್ತವಾಗಿರಿಸಲಾಗಿದೆ. ವ್ಯಾಪಕ ಬಾಹ್ಯಪ್ರಸರಣ ಬೆಂಬಲಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಬೆರ್ಟಿ ಥಾಮಸ್ ರಂತಹ ಕೋಡರ್ ಗಳ ಬಗ್ಗೆ ನಾವು ಕೇಳುವಾಗ ( ತಪ್ಪು ಮಾಹಿತಿ ನೀಡಿದ ಒಂದು ಲೇಖನದಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ) ಅದು ಅವರ ಸಮುದಾಯದವರಿಗೆ ಲಭ್ಯ ಮುಕ್ತ ಸ್ಲಾಟ್ ಗಳನ್ನು ಹುಡುಕಲು ಸಂಜ್ಞಾ ವ್ಯವಸ್ಥೆಯನ್ನು ರೂಪಿಸುತ್ತದೆ. ಇದು ತಂತ್ರಜ್ಞಾನ ಇನ್ನಷ್ಟು ವಿಸ್ತಾರಕ್ಕೆ ಹೋಗುತ್ತಿರುವ ಸಾಧ್ಯತೆ. ಬೇಡಿಕೆ-ಪೂರೈಕೆಯಲ್ಲಿಯ ಏರಿಳಿತ ಪರಿಗಣಿಸಿದರೆ ಇಂತಹ ಅನ್ವೇಷಣೆಗಳು ಲಸಿಕಾ ಕೇಂದ್ರಗಳು ಜನಜಂಗುಳಿಯಿಂದ ತುಂಬುವುದನ್ನು ತಡೆಯುತ್ತವೆ. ಮತ್ತು ನಾಗರಿಕರು ಕೂಡಾ ಲಸಿಕೆಗೆ ಸ್ಲಾಟ್ ಗಳು ಲಭ್ಯವಿದ್ದರೆ ಮಾತ್ರ ಅವರ ಮನೆಯನ್ನು ಬಿಟ್ಟು ಲಸಿಕಾ ಕೇಂದ್ರಗಳಿಗೆ ಬರಬಹುದಾಗಿದೆ. ಇಂತಹ ಅನ್ವೇಷಣೆಗಳು ಕಂದಕವನ್ನು ನಿರ್ಮಾಣ ಮಾಡುವುದಿಲ್ಲ, ಅವುಗಳು ಸಾರ್ವಜನಿಕವಾಗಿ ಲಭ್ಯ ಇರುತ್ತವೆ ಮತ್ತು ಅವುಗಳು ಪೇಟಿಂ ಅಥವಾ ಟೆಲಿಗ್ರಾಂಗಳಂತೆ ಆನ್ವಯಿಕತೆಯ ಮೂಲಕ ಪ್ರಜಾಸತ್ತಾತ್ಮಕವಾಗಿರುತ್ತವೆ.

ವ್ಯಕ್ತಿಗಳು ಅಥವಾ ಗುಂಪುಗಳು ಕಥಾನಕದಂತಹ ಹೇಳಿಕೆಗಳನ್ನು ಮಾಡಿದಾಗ ಅಥವಾ ಮುಗ್ಧ ನಾಗರಿಕರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುವಾಗ ಕಂದಕ/ವಿಭಜನೆ ಉಂಟಾಗುತ್ತದೆ. ಇನ್ನೊಬ್ಬರ ದಯನೀಯ ಸ್ಥಿತಿಯಲ್ಲಿ ಸಾರ್ವಜನಿಕ ಸೇವೆಯ ಪ್ರಕ್ರಿಯೆಯಲ್ಲಿ, ಅದೂ ಉಚಿತವಾಗಿ ಲಭ್ಯ ಇರುವಾಗ ಅದರಲ್ಲಿ ಹಣ ಮಾಡುವ ಧಂದೆ ಅತ್ಯಂತ ಹೀನ ಕೃತ್ಯ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇಂತಹ ಕೋಡರ್ ಗಳನ್ನು  ಹೊಗಳುವಲ್ಲಿ ನಿರತರಾಗಬಾರದು ಎಂದು ನಾವು ಪ್ರಕಟಣೆಗಳಲ್ಲಿ ಮನವಿ ಮಾಡುತ್ತೇವೆ ಹಾಗು ಇಂತಹ ವರ್ತನೆಯನ್ನು  ಪ್ರಶ್ನಿಸುವಲ್ಲಿ  ಹಿಂದೆ ಬೀಳಬಾರದು ಎಂದೂ ಕೋರುತ್ತೇವೆ.

ಇದಲ್ಲದೆ ಮೂರನೇ ಪಕ್ಷದ ಡೆವಲಪರ್ ಗಳು .ಪಿ..ಗಳ ಪತ್ತೆಯನ್ನು ಮಾಡುವುದಕ್ಕೆ ಮಾತ್ರವೇ ಸಂಪರ್ಕವನ್ನು ಹೊಂದಿರುತ್ತಾರೆ. ಮತ್ತು ನೋಂದಣೆ ಕೋವಿನ್ ವೇದಿಕೆಯಲ್ಲಿ ಮಾತ್ರವೇ ಕೇಂದ್ರೀಕೃತವಾಗಿ ನಡೆಯುತ್ತದೆ. ವೇದಿಕೆಯು ಖಚಿತವಾದ ಭದ್ರತಾ ಪರೀಕ್ಷೆಗಳನ್ನು ಹಾದು ಬಂದಿದೆ. ನಾವು ಅತ್ಯಂತ ಸ್ಪಷ್ಟವಾಗಿ ಇದನ್ನು ಹೇಳುತ್ತೆವೆ-ಇದುವರೆಗೆ ಇದರಲ್ಲಿ ವೈಫಲ್ಯಗಳು ಕಂಡು ಬಂದಿಲ್ಲ. ಒಟಿಪಿ. ಪರಿಶೀಲನೆ ಮತ್ತು ವ್ಯಕ್ತಿಯ ಗುರುತಿಸುವಿಕೆಯನ್ನು ಯಾರಿಗೂ ಬೈಪಾಸ್ ಮಾಡುವುದು ಸಾಧ್ಯವಿಲ್ಲ. ಯಾಕೆಂದರೆ ಅವುಗಳು ಸ್ವಯಂ ವ್ಯಕ್ತಿಯನ್ನು ದಾಖಲಿಸುತ್ತವೆ. ಅನಧಿಕೃತ ಕೋಡರ್ ಗಳಿಗೆ ಬರೇ ಬುಕ್ಕಿಂಗ್ ಗಾಗಿಯೇ 400 ರಿಂದ 3000 ರೂಪಾಯಿಗಳವರೆಗೆ (ಅಮೆರಿಕನ್ ಡಾಲರ್ ೭ರಿಂದ ೪೦) ಹಣವನ್ನು ನಾಗರಿಕರು ಪಾವತಿ ಮಾಡಬೇಕಾಗಿದ್ದರೆ ಇಂದಿನವರೆಗೆ ಆನ್ ಲೈನ್ ನೋಂದಣೆ ಮೂಲಕ 90 ಮಿಲಿಯನ್ ಲಸಿಕೆಗಳನ್ನು ಸುಸೂತ್ರವಾಗಿ ಹಾಕುವುದು ನಮಗೆ ಸಾಧ್ಯವಾಗುತ್ತಿರಲಿಲ್ಲ. ಇಂತಹ ಹೇಳಿಕೆಗಳಿಗೆ ಸಾಕ್ಷಾಧಾರಗಳಿಲ್ಲ. ಮತ್ತು ನಾವು ಇಂತಹ ಮೋಸಗಾರರ ಮಾತುಗಳಿಗೆ  ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡುತ್ತೇವೆ.

ಈಗಾಗಲೇ ನಿರಾಕರಿಸಲಾದ ಹೇಳಿಕೆಗಳಲ್ಲದೆ, ಅಲ್ಲಿ ಡಿಜಿಟಲ್ ಕಂದಕದ ಮತ್ತು ಎಲ್ಲರನ್ನೂ ಒಳಗೊಳ್ಳುವ ಕುರಿತ ಚರ್ಚೆ ಎದ್ದಿದೆ. ಸಮಾನವಾದ ರೀತಿಯಲ್ಲಿ ಲಸಿಕಾಕರಣ ಮಾಡುವ ರಾಷ್ಟ್ರದ  ಪ್ರಯತ್ನಗಳನ್ನು ಕೋವಿನ್  ಕುಂಠಿತ ಮಾಡುತ್ತಿದೆ ಎಂಬುದಾಗಿಯೂ ಹೇಳಲಾಗುತ್ತಿದೆ. ಸವಲತ್ತುಗಳಿಲ್ಲದವರ ಹಿತಾಸಕ್ತಿಗಳನ್ನು ಕಾಪಾಡಲು ನಾವು ನೋಂದಣೆ ಪ್ರಕ್ರಿಯೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಅತ್ಯಂತ ಸರಳಗೊಳಿಸಿದ್ದೇವೆ. ಹೌದು ಅಥವಾ ಅಲ್ಲ ಎನ್ನುವ /ಏಕ ಪದ ಪ್ರಶ್ನೆಗಳನ್ನು ಭಾಷೆಯ ಅಡೆ ತಡೆಗಳನ್ನು ಮೀರುವುದಕ್ಕಾಗಿ ಅಳವಡಿಸಿಕೊಳ್ಳಲಾಗಿದೆ. ಕಳವಳವನ್ನು ಪರಿಹರಿಸಲು ನಾವು ಮತ್ತೆ 14 ಪ್ರಾದೇಶಿಕ ಭಾಷೆಗಳಲ್ಲಿ ಆಯ್ಕೆ ಮಾಡುವ ಅವಕಾಶವನ್ನು ಆದಷ್ಟು ಬೇಗ ಅಳವಡಿಸಲಿದ್ದೇವೆ. ನೋಂದಣೆ ಮತ್ತು ಸೈನ್ ಅಪ್ ಗಳಿಗೆ ಮೊಬೈಲ್ ಸಂಖ್ಯೆ, ವಯಸ್ಸು ಮತ್ತು ಲಿಂಗಕ್ಕೆ ಸಂಬಂಧಿಸಿದ ಮಾಹಿತಿ ಇದ್ದರೆ ಸಾಕು. ಇದಲ್ಲದೆ, ಕೋವಿನ್ ಗುರುತಿಸುವಿಕೆಗೆ 7 ಆಯ್ಕೆಗಳನ್ನು ಒದಗಿಸುತ್ತದೆ.

ಎಲ್ಲರನ್ನೂ ಒಳಗೊಳಿಸಿಕೊಳ್ಳುವುದಕ್ಕಾಗಿ ಓರ್ವ ನಾಗರಿಕರು ಒಂದೇ ಮೊಬೈಲ್ ಸಂಖ್ಯೆಯಲ್ಲಿ ನಾಲ್ಕು ಮಂದಿಯನ್ನು ನೊಂದಾಯಿಸಬಹುದು. ಗ್ರಾಮೀಣ ನಾಗರಿಕರಿಗೆ ನೋಂದಾವಣೆಯಲ್ಲಿ ನೆರವು ನೀಡಲು 250,000ಕ್ಕೂ ಅಧಿಕ ಸಮುದಾಯ ಸೇವಾ ಕೇಂದ್ರಗಳನ್ನು (ಸಿ.ಎಸ್.ಸಿ.ಗಳು) ಹೊಂದಿದ್ದೇವೆ. ಹೆಚ್ಚುವರಿಯಾಗಿ ನಾವು ಎನ್.ಎಚ್.. (ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ) ಯಲ್ಲಿ  ಕಾಲ್ ಸೆಂಟರ್ ಗಳನ್ನು ಫೋನ್ ಕರೆಯ ಮೇಲೆ ನೊಂದಣೆ ಮಾಡಿಕೊಳ್ಳುವವರಿಗಾಗಿ ಸಹಾಯ ಮಾಡುವುದಕ್ಕಾಗಿ   ವ್ಯವಸ್ಥೆ ಮಾಡಲಿದ್ದೇವೆ. ಮತ್ತು ಮೊದಲೇ ಪ್ರಸ್ತಾಪಿಸಿದಂತೆ ಆನ್ ಲೈನ್ ನಲ್ಲಿ ನೋಂದಣೆ ಮಾಡಿಕೊಳ್ಳಲಾಗದವರಿಗೆ ಆಫ್ ಲೈನ್ ನಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವ ಅವಕಾಶ ಸದಾ ಲಭ್ಯ ಇರುತ್ತದೆ. ಇದಕ್ಕೆ ಆಫ್ ಲೈನ್ ಮೂಲಕ ಲಸಿಕಾ ಕೇಂದ್ರಕ್ಕೆ ಬಂದು 110 ಮಿಲಿಯನ್ನಿಗೂ ಅಧಿಕ ಡೋಸ್ ಲಸಿಕೆಗಳನ್ನು ಪಡೆದಿರುವುದು ಸಾಕ್ಷಿಯಾಗಿದೆ.

ನಮ್ಮ ಪ್ರಯತ್ನಗಳ ಸುಳಿವು ಹಿಡಿದು ನೈಜೀರಿಯಾದಂತಹ ವಿವಿಧಅತಿ ಹೆಚ್ಚು ಜನಸಾಂದ್ರತೆಯ ಆಪ್ರಿಕನ್ ದೇಶಗಳು ಅವರ ಲಸಿಕಾ ಆಂದೋಲನವನ್ನು ಡಿಜಿಟಲೀಕರಣ ಮಾಡುವ ಪ್ರಯತ್ನಗಳಿಗೆ ನಮ್ಮ ಸಹಕಾರವನ್ನು ಕೋರಿವೆ. ಇದರಿಂದ ಸಮಾನ ಭೌಗೋಳಿಕ ಹಂಚಿಕೆ ವ್ಯಾಪ್ತಿಯನ್ನು ನಿಗಾ ಮಾಡುವುದಕ್ಕೆ ಸಹಾಯವಾಗಲಿದೆ.ಇಂತಹ ರಾಷ್ಟ್ರಗಳು ಎದುರಿಸುವ ಬೃಹತ್ ಪ್ರಮಾಣದ ಸಾಗಾಣಿಕೆ ಸವಾಲುಗಳು ಭಾರತ ಎದುರಿಸುವ  ಸವಾಲುಗಳಂತಹವುಗಳೇ ಆಗಿವೆ. ಮತ್ತು ಅದರಿಂದಾಗಿ ಮುಂದಿರುವುದು ಡಿಜಿಟಲ್ ಹಾದಿ ಮಾತ್ರ ಎಂದವರು   ಅರ್ಥ ಮಾಡಿಕೊಂಡಿದ್ದಾರೆ.

ಅಂತಿಮವಾಗಿ ಲೇಖಕರು ಲಸಿಕಾ ನಿಭಾವಣೆಗಾಗಿ ಹೆಚ್ಚು ಸಮರ್ಥವಾದಂತಹ ವ್ಯವಸ್ಥೆಯನು ನಿರ್ಮಾಣ ಮಾಡಲು ಪರ್ಯಾಯ ಪರಿಹಾರಗಳನ್ನು ಪ್ರಸ್ತಾಪಿಸುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ. ಹಾನಿಕಾರಕ ಟೀಕೆ ಕೀಳರಿಮೆ ಮತ್ತು ದೃಷ್ಟಿದೋಷಕ್ಕೆ ಹಾದಿ ತೋರಿಸುತ್ತದೆಯೇ ಹೊರತು ಮುನ್ನಡೆ ಮತ್ತು ವಿಕಸನಕ್ಕೆ ಅದು ಅವಕಾಶ ಮಾಡಿಕೊಡುವುದಿಲ್ಲ. ಡಿಜಿಟಲ್  ತಂತ್ರಜ್ಞಾನದ ಬೆಳವಣಿಗೆಯನ್ನು ತೋರಿಸುತ್ತಿರುವ ದೇಶಕ್ಕೆ ಕೋವಿನ್ ಮಾಹಿತಿ ಅಸಮಾನತೆಯನ್ನು ತೊಡೆಯಲು ಮತ್ತು ಎಲ್ಲರಿಗೂ ಸಮಾನ ಲಸಿಕಾ ಲಭ್ಯತೆಯನ್ನು ಖಾತ್ರಿಪಡಿಸಲು ಅವಶ್ಯ ತಂತ್ರಜ್ಞಾನದ ಬೆನ್ನೆಲುಬಾಗಿ ಕೆಲಸ ಮಾಡುತ್ತದೆ.

***


(Release ID: 1722996) Visitor Counter : 258