ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಆನ್ ಲೈನ್ ಟ್ರ್ಯಾಕಿಂಗ್ ಪೋರ್ಟಲ್ನಲ್ಲಿ “ಬಾಲ್ ಸ್ವರಾಜ್ (ಕೋವಿಡ್-ಕೇರ್)” ನಲ್ಲಿ ಕೋವಿಡ್ -19 ದೆಸೆಯಿಂದ  ತಂದೆ ತಾಯಿಯಲ್ಲೊಬ್ಬರು ಅಥವಾ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳ ದತ್ತಾಂಶವನ್ನು ಅಪ್ಲೋಡ್ ಮಾಡಲು ಎನ್ ಸಿಪಿಸಿಆರ್ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ

Posted On: 29 MAY 2021 3:49PM by PIB Bengaluru

ಬಾಲ ನ್ಯಾಯ ಕಾಯ್ದೆ, 2015 ಸೆಕ್ಷನ್ 109 ಪರಿಚ್ಚೇದದ ಅಡಿಯಲ್ಲಿ ಮೇಲ್ವಿಚಾರಣಾ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಲು ಮತ್ತು ಕೋವಿಡ್-19ರಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚುತ್ತಿರುವ ಸಮಸ್ಯೆಯ ದೃಷ್ಟಿಯಿಂದ, ಮಕ್ಕಳ ಹಕ್ಕುಗಳ ಸಂರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗಾಗಿ ಆನ್ಲೈನ್ ಟ್ರ್ಯಾಕಿಂಗ್ ಪೋರ್ಟಲ್ ಬಾಲ್ ಸ್ವರಾಜ್ (ಕೋವಿಡ್ ಕೇರ್ ಲಿಂಕ್)ಅನ್ನು ರೂಪಿಸಿದೆ.

ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ಆನ್ಲೈನ್ ಟ್ರ್ಯಾಕಿಂಗ್ ಮತ್ತು ಡಿಜಿಟಲ್ ನೈಜ ಸಮಯ ಮೇಲ್ವಿಚಾರಣಾ ಕಾರ್ಯವಿಧಾನದ ಉದ್ದೇಶದಿಂದ ಆಯೋಗದ ಪೋರ್ಟಲ್ ಅನ್ನು ರಚಿಸಲಾಗಿದೆ. ಕೋವಿಡ್-19 ದೆಸೆಯಿಂದ   ತನ್ನ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನೂ  ಕಳೆದುಕೊಂಡಿರುವ ಮಕ್ಕಳನ್ನು ಪತ್ತೆಹಚ್ಚಲು ಆಯೋಗವು ಪೋರ್ಟಲ್ ಬಳಕೆಯನ್ನು ವಿಸ್ತರಿಸಿದೆ ಮತ್ತು ಅಂತಹ ಮಕ್ಕಳ ವಿವರಗಳನ್ನ  ಸಂಬಂಧಪಟ್ಟ  ಅಧಿಕಾರಿ / ಇಲಾಖೆಯು  ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲು “COVID-Care” ಹೆಸರಿನಲ್ಲಿ ಲಿಂಕ್ ಅನ್ನು ಒದಗಿಸಿದೆ

ಕುಟುಂಬದ ಬೆಂಬಲವನ್ನು ಕಳೆದುಕೊಂಡಿರುವ ಅಥವಾ ಯಾವುದೇ ಜೀವನಾಧಾರವಿಲ್ಲದ ಮಕ್ಕಳು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು ಮತ್ತು ಅಂತಹ ಮಕ್ಕಳಿಗೆ ಬಾಲ ನ್ಯಾಯ ಕಾಯ್ದೆ, 2015 ಪರಿಚ್ಛೇದ 2 (14) ಅಡಿಯಲ್ಲಿ ನೀಡಲಾದ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಬೇಕು ಮಕ್ಕಳ ಯೋಗಕ್ಷೇಮ ಮತ್ತು ಉತ್ತಮ ಆಸಕ್ತಿಯನ್ನು ಖಚಿತಪಡಿಸಿಕೊಳ್ಳಬೇಕು.

"ಬಾಲ್ ಸ್ವರಾಜ್-ಕೋವಿಡ್-ಕೇರ್" ಪೋರ್ಟಲ್ ಕೋವಿಡ್ -19ರಿಂದ  ಕಷ್ಟಕ್ಕೀಡಾದ ಮಕ್ಕಳನ್ನು ಪತ್ತೆಹಚ್ಚುವುದು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಮುಂದೆ ಮಕ್ಕಳನ್ನು ಸೇರಿಸುವುದರಿಂದ  ಹಿಡಿದು ಮಕ್ಕಳನ್ನು ಅವರ ಪೋಷಕರು / ಪೋಷಕರು / ಸಂಬಂಧಿಕರಿಗೆ ಮರಳಿಸುವವರೆಗೆ ಮತ್ತು ಅದರ ನಂತರ ನಿಗಾ ಇಡುವ  ಗುರಿಯನ್ನು ಹೊಂದಿದೆಪ್ರತಿ ಮಗುವಿನ ಬಗ್ಗೆ ಜಿಲ್ಲಾ ಅಧಿಕಾರಿಗಳು ಮತ್ತು ರಾಜ್ಯ ಅಧಿಕಾರಿಗಳು ಪೋರ್ಟಲ್ನಲ್ಲಿ ಭರ್ತಿ ಮಾಡಿದ ಮಾಹಿತಿಯ ಮೂಲಕ, ಮಗುವಿಗೆ ಅವನ / ಅವಳಿಗೆ ಸಿಗಬೇಕಾದ   ಸವಲತ್ತುಗಳು ಮತ್ತು ವಿತ್ತೀಯ ಲಾಭಗಳನ್ನು ಪಡೆಯಲು ಮಗುವಿಗೆ ಸಾಧ್ಯವಿದೆಯೇ ಎಂಬ ಬಗ್ಗೆ ಆಯೋಗವು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಿಡಬ್ಲ್ಯುಸಿಗೆ ಮುಂಚಿತವಾಗಿ ಮಗುವನ್ನು ಸೇರಿಸಲಾಯಿತೆ ಮತ್ತು ಅವನ / ಅವಳ  ಬಗ್ಗೆ ಆದೇಶಗಳನ್ನು ರವಾನಿಸಲಾಗಿದೆಯೆ ಎನ್ನುವುದು ಸಹ ತಿಳಿಯುತ್ತದೆ. ಮಕ್ಕಳಿಗಾಗಿ ಜಾರಿಗೆ ತಂದ ಯೋಜನೆಗಳ ಅಡಿಯಲ್ಲಿ ಲಾಭವನ್ನು ನೀಡಲು ಹೆಚ್ಚಿನ ಹಣವನ್ನು ಪಡೆಯಲು ರಾಜ್ಯಕ್ಕೆ ಹಣಕಾಸಿನ ನೆರವು ಅಗತ್ಯವಿದೆಯೇ ಎನ್ನುವುದನ್ನು ಸಹ  ಆಯೋಗವು ಗುರುತಿಸಬಹುದು.

2020 ಎಸ್ಎಂಡಬ್ಲ್ಯುಪಿ ಸಂಖ್ಯೆ 4 ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್  ಬಾಲ ಗೃಹಗಳಲ್ಲಿ ಕೋವಿಡ್ -19 ವೈರಸ್ನ ಸಾಂಕ್ರಾಮಿಕತೆ ”, 28.05.2021 ದಿನಾಂಕದ ಆದೇಶದ ಪ್ರಕಾರ, ಶನಿವಾರ ಸಂಜೆ (29.05.2021 ಸಂಜೆ) ಕೋವಿಡ್- ಕೇರ್ ಲಿಂಕ್ ಅಡಿಯಲ್ಲಿ ಬಾಲ್ ಸ್ವರಾಜ್ ಪೋರ್ಟಲ್ನಲ್ಲಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ 28.05.2021 ರಂದು ಮತ್ತು 29.05.2021 ರಂದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರಗಳ ಮೂಲಕ ಮಾನ್ಯ ಸುಪ್ರೀಂ ಕೋರ್ಟ್ನ ನಿರ್ದೇಶನ ಕುರಿತು ಆಯೋಗವು ಎಲ್ಲಾ ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ಪ್ರತಿ ಬಳಕೆದಾರ / ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮತ್ತು ರಾಜ್ಯ ಸರ್ಕಾರದ ಬಳಕೆದಾರ ಹೆಸರು ಮತ್ತು ಗುಪ್ತ ಪದವನ್ನು   ಎಲ್ಲಾ ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಎನ್ ಸಿಪಿಸಿಆರ್ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತದೆ.

***



(Release ID: 1722760) Visitor Counter : 358