ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಎರಡನೇ ಕೋವಿಡ್ -19 ಲಾಕ್ ಡೌನ್ ಸಮಯದಲ್ಲಿ ಕೆವಿಐಸಿಗೆ 45 ಕೋಟಿ ರೂಪಾಯಿಗಳ ಸರ್ಕಾರಿ ಖರೀದಿ ಆದೇಶಗಳಿಂದಾಗಿ ಖಾದಿ ಕುಶಲಕರ್ಮಿಗಳಿಗೆ ದೊರಕಿದೆ ದೊಡ್ಡ ಉತ್ತೇಜನ
Posted On:
29 MAY 2021 1:45PM by PIB Bengaluru
ಖಾದಿ ಕುಶಲಕರ್ಮಿಗಳಿಗೆ ಸಿಗುತ್ತಿರುವ ಸಾಕಷ್ಟು ಉದ್ಯೋಗಾವಕಾಶಗಳು ಮತ್ತೊಮ್ಮೆ ಆರ್ಥಿಕ ಸಂಕಷ್ಟದ ವಿರುದ್ಧ ಹೋರಾಡಲು ಸಹಾಯ ಮಾಡಿವೆ, ಏಕೆಂದರೆ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ದೇಶದ ಹೆಚ್ಚಿನ ಭಾಗಗಳು ಲಾಕ್ ಡೌನಿನಲ್ಲಿವೆ. ಈ ವರ್ಷದ ಮಾರ್ಚ್ ಮತ್ತು ಮೇ ನಡುವೆ ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳಿಗೆ ತೀವ್ರ ಕುಸಿತದ ಹೊರತಾಗಿಯೂ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ವು ಲಕ್ಷಾಂತರ ಖಾದಿ ಕುಶಲಕರ್ಮಿಗಳ ಜೀವನೋಪಾಯಕ್ಕಾಗಿ ಸಹಾಯಕವಾಗುವ 45 ಕೋಟಿ ರೂಪಾಯಿಗಳ ಖರೀದಿ ಆದೇಶಗಳನ್ನು ಪಡೆದಿದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಭಾರತೀಯ ರೈಲ್ವೆ ಮತ್ತು ಏರ್ ಇಂಡಿಯಾದಿಂದ ಈ ಖರೀದಿ ಆದೇಶಗಳು ದೊರಕಿವೆ.
ಬುಡಕಟ್ಟು ವಿದ್ಯಾರ್ಥಿಗಳಿಗೆ 6.38 ಲಕ್ಷ ಮೀಟರ್ ಪಾಲಿ ಖಾದಿ ಬಟ್ಟೆಯನ್ನು ಖರೀದಿಸಲು ಕೆವಿಐಸಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ನಡುವಿನ ಒಪ್ಪಂದವನ್ನು ಏಪ್ರಿಲ್ 2021 ರಲ್ಲಿ 20.60 ಕೋಟಿ ರೂಪಾಯಿ ಮೌಲ್ಯದ 8.46 ಲಕ್ಷ ಮೀಟರ್ ಬಟ್ಟೆಗೆ ವಿಸ್ತರಿಸಲಾಗಿದೆ. ಈ ಆದೇಶವನ್ನು ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಹರಿಯಾಣದಲ್ಲಿರುವ ಹಲವಾರು ಖಾದಿ ಸಂಸ್ಥೆಗಳ ನಡುವೆ ವಿತರಿಸಲಾಗಿದೆ. ಈ ವರ್ಷದ ಜೂನ್ ವೇಳೆಗೆ ಉತ್ಪನ್ನಗಳನ್ನು ಸರಬರಾಜು ಮಾಡಲಾಗುವುದು.
ರೈಲ್ವೆ ಸಚಿವಾಲಯವು ಏಪ್ರಿಲ್ ಮತ್ತು ಮೇ ನಡುವೆ ಕೆವಿಐಸಿಗೆ ರೂ .19.50 ಕೋಟಿ ಮೌಲ್ಯದ ಖರೀದಿ ಆದೇಶಗಳನ್ನು ನೀಡಿದೆ. ಶೀಟಿಂಗ್ ಬಟ್ಟೆ, ಟವೆಲ್, ಬೆಡ್ ಶೀಟ್, ಫ್ಲ್ಯಾಗ್ ಬ್ಯಾನರ್, ಸ್ಪಂಜು ಬಟ್ಟೆ, ದೋಸುಟಿ ಕಾಟನ್ ಖಾದಿ, ಬಂಟಿಂಗ್ ಬಟ್ಟೆ ಮುಂತಾದ ವಿಶೇಷ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವ ದೇಶಾದ್ಯಂತ 100 ಕ್ಕೂ ಹೆಚ್ಚು ಖಾದಿ ಸಂಸ್ಥೆಗಳಲ್ಲಿ ನೋಂದಾಯಿತ ಕುಶಲಕರ್ಮಿಗಳಿಗೆ ಇದು ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಜೂನ್ ಮತ್ತು ಜುಲೈ 2021ರವೇಳೆಗೆ ಉತ್ಪನ್ನಗಳನ್ನು ಸರಬರಾಜು ಮಾಡಲಾಗುವುದು.
ಭಾರತದ ರಾಷ್ಟ್ರೀಯ ವಿಮಾನವಾಹಕ ಏರ್ ಇಂಡಿಯಾ ಕೂಡ ತನ್ನ ಎಕ್ಸಿಕ್ಯೂಟಿವ್ ಮತ್ತು ಬ್ಯುಸಿನೆಸ್ ವರ್ಗದ ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ರೂ .4.19 ಕೋಟಿ ಮೌಲ್ಯದ 1.10 ಲಕ್ಷ ಅಮೆನಿಟಿ ಕಿಟ್ ಗಳನ್ನು ಖರೀದಿಸಲಿದೆ.
ವೈಮಾನಿಕ ವಲಯದ ಹೊರತಾಗಿಯೂ, ವಿಶೇಷವಾಗಿ ಅಂತರರಾಷ್ಟ್ರೀಯ ಕಾರ್ಯಾಚರಣೆಗಳ ಹೊರತಾಗಿಯೂ, ಏಪ್ರಿಲ್ ತಿಂಗಳಲ್ಲಿ ಹೊರಡಿಸಲಾದ ಹೊಸ ಆದೇಶವು ಕೋವಿಡ್ -19 ಸಮಯದದಲ್ಲಿ ಪ್ರಮುಖ ಯಶಸ್ಸನ್ನು ಕಂಡಿದೆ. ಸಣ್ಣ ಹಳ್ಳಿ ಉದ್ಯಮ ಘಟಕಗಳಿಂದ, ಗುಡಿ ಕೈಗಾರಿಕೆಗಳಿಂದ ತಯಾರಿಸಲ್ಪಟ್ಟ ಖಾದಿ ಆಮೆನಿಟಿ ಕಿಟ್ ನಲ್ಲಿ ಖಾದಿ ಹ್ಯಾಂಡ್ ಸ್ಯಾನಿಟೈಜರ್, ಖಾದಿ ಮಾಯಿಶ್ಚರೈಸರ್ ಲೋಷನ್, ಖಾದಿ ಲೆಮನ ಗ್ರಾಸ್ ಎಣ್ಣೆ, ಖಾದಿ ಕೈಯಿಂದ ತಯಾರಿಸಿದ ಸೋಪ್, ಖಾದಿ ಲಿಪ್ ಬಾಮ್, ಖಾದಿ ರೋಸ್ ಫೇಸ್ ವಾಶ್, ಅವಶ್ಯ್ಕ ತೈಲಗಳು ಮುಂತಾದ ಉತ್ಕೃಷ್ಟ ಗಿಡಮೂಲಿಕೆಗಳ ಸೌಂದರ್ಯವರ್ಧಕ ಉತ್ಪನ್ನಗಳು ಸೇರಿವೆ.
ಕೆವಿಐಸಿ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸಕ್ಸೇನಾ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಈ ಬಿಕ್ಕಟ್ಟಿನ ಕಾಲದಲ್ಲಿ ಇಂತಹ ದೊಡ್ಡ ಆದೇಶಗಳು ಕುಶಲಕರ್ಮಿಗಳಿಗೆ ಗರಿಷ್ಠ ಉದ್ಯೋಗವನ್ನು ಸೃಷ್ಟಿಸುವ ಕೆವಿಐಸಿಯ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತವೆ ಮತ್ತು ‘ಆತ್ಮನಿರ್ಭರ ಭಾರತ’ದ ಕನಸನ್ನು ಈಡೇರಿಸುತ್ತವೆ. ಲಾಕ್ ಡೌನ್ ಸಮಯದಲ್ಲಿ, ಕೆವಿಐಸಿ ಕುಶಲಕರ್ಮಿಗಳ ಉದ್ಯೋಗ ಮತ್ತು ಜೀವನೋಪಾಯವನ್ನು ಉಳಿಸಿಕೊಳ್ಳುವ ದೊಡ್ಡ ಸವಾಲನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು. ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಭಾರತೀಯ ರೈಲ್ವೆ ಮತ್ತು ಏರ್ ಇಂಡಿಯಾದ ಹೆಚ್ಚಿನ ಆದೇಶಗಳು ಖಾದಿಯ ಚರಕಾ ನೂಲುವಿಕೆಯನ್ನು ಅಂದರೆ ಸ್ಪಿನ್ನರ್ಗಳು, ನೇಕಾರರು, ಸಂಬಂಧಪಟ್ಟ ಕಾರ್ಮಿಕರು ಮತ್ತು ಹಳ್ಳಿ ಕೈಗಾರಿಕೆಗಳಲ್ಲಿ ತೊಡಗಿರುವ ಬೃಹತ್ ಕಾರ್ಯಪಡೆಗೆ ಉದ್ಯೋಗ ಮತ್ತು ಆದಾಯ ಗಳಿಕೆಯನ್ನು ನಡೆಸಿಕೊಂಡು ಹೋಗುತ್ತಿವೆ ಎಂದು ಹೇಳಿದರು.
***
(Release ID: 1722731)
Visitor Counter : 195