ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ ಪರಿಹಾರ ನೆರವಿನ ಬಗ್ಗೆ ಪರಿಷ್ಕೃತ ಮಾಹಿತಿ
ಇದುವರೆಗೆ 18,016 ಆಕ್ಸಿಜನ್ ಕಾನ್ಸಂಟ್ರೇಟರ್ಗಳು; 19,085 ಆಕ್ಸಿಜನ್ ಸಿಲಿಂಡರ್ಗಳು; 19 ಆಮ್ಲಜನಕ ಉತ್ಪಾದನಾ ಘಟಕಗಳು; 15,206 ವೆಂಟಿಲೇಟರ್ಗಳು/ ಬಿಐಪಿಎಪಿ; 7.7 ಲಕ್ಷ ರೆಮ್‌ಡೆಸಿವಿರ್ ಸೀಸೆಗಳು, 12 ಲಕ್ಷ ಫೆವಿಪಿರಾವಿರ್ ಮಾತ್ರೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗಿದೆ/ ರವಾನಿಸಲಾಗಿದೆ
Posted On:
28 MAY 2021 1:45PM by PIB Bengaluru
ಭಾರತ ಸರಕಾರವು 2021ರ ಏಪ್ರಿಲ್ 27ರಿಂದ ವಿವಿಧ ದೇಶಗಳು/ಸಂಸ್ಥೆಗಳಿಂದ ಕೋವಿಡ್-19 ಪರಿಹಾರದ ವೈದ್ಯಕೀಯ ಪೂರೈಕೆಗಳು ಮತ್ತು ಸಲಕರಣೆಗಳ ರೂಪದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಪಡೆಯುತ್ತಿದೆ. ಇವುಗಳನ್ನು ತ್ವರಿತವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗುತ್ತಿದೆ/ತಲುಪಿಸಲಾಗುತ್ತಿದೆ.
ಒಟ್ಟಾರೆಯಾಗಿ, 18,016 ಆಕ್ಸಿಜನ್ ಕಾನ್ಸಂಟ್ರೇಟರ್ಗಳು; 19,085 ಆಕ್ಸಿಜನ್ ಸಿಲಿಂಡರ್ಗಳು; 19 ಆಮ್ಲಜನಕ ಉತ್ಪಾದನಾ ಘಟಕಗಳು; 15,206 ವೆಂಟಿಲೇಟರ್ಗಳು/ ಬಿಐಪಿಎಪಿ; 7.7 ಲಕ್ಷ ರೆಮ್‌ಡೆಸಿವಿರ್ ಸೀಸೆಗಳು, 12ಎಲ್ ಫೆವಿಪಿರಾವಿರ್ ಮಾತ್ರೆಗಳನ್ನು 2021ರ ಏಪ್ರಿಲ್ 27ರಿಂದ 26 ಮೇ 2021ರವರೆಗೆ ರಸ್ತೆ ಮತ್ತು ವಾಯು ಮಾರ್ಗದ ಮೂಲಕ ತಲುಪಿಸಲಾಗಿದೆ/ ರವಾನಿಸಲಾಗಿದೆ.
ಕೆನಡಾ, ಜರ್ಮನಿ, ಬಹ್ರೇನ್ (ಭಾರತೀಯ ಮತ್ತು ಬಹ್ರೇನ್ ಸಂಸ್ಥೆಗಳು), ರಾಬರ್ಟ್ ಬಾಷ್ (ಜರ್ಮನಿ) ನಿಂದ 26/27 ಮೇ 2021ರಂದು ಪಡೆದ ಪ್ರಮುಖ ಸರಕುಗಳು
ಸರಕುಗಳು
|
ಪ್ರಮಾಣ
|
ಆಕ್ಸಿಜನ್ ಕಾನ್ಸಂಟ್ರೇಟರ್ಗಳು
|
10
|
ವೆಂಟಿಲೇಟರ್ ಗಳು/ ಬಿಐಪಿಎಪಿ/ ಸಿಪಿಎಪಿ
|
692
|
ಪರಿಹಾರ ಸ್ವೀಕರಿಸುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳಿಗೆ ತ್ವರಿತ ಹಾಗೂ ಪರಿಣಾಮಕಾರಿ ಹಂಚಿಕೆ, ಸುವ್ಯವಸ್ಥಿತ ವಿತರಣೆಯು ನಿರಂತರವಾಗಿ ನಡೆಯುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಇದನ್ನು ನಿಯಮಿತವಾಗಿ, ಸಮಗ್ರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅನುದಾನ, ನೆರವು ಮತ್ತು ದೇಣಿಗೆಗಳ ರೂಪದಲ್ಲಿ ವಿದೇಶಿ ಕೋವಿಡ್ ಪರಿಹಾರ ಸಾಮಗ್ರಿಯನ್ನು ಅಂತಾರಾಷ್ಟ್ರೀಯ ಸಹಕಾರವಾಗಿ ಸ್ವೀಕರಿಸಲು ಮತ್ತು ಹಂಚಿಕೆ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ವಿಶೇಷ ಸಮನ್ವಯ ಘಟಕವನ್ನು ರಚಿಸಲಾಗಿದೆ. ಈ ಘಟಕವು 2021ರ ಏಪ್ರಿಲ್ 26ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. 2021ರ ಮೇ 2ರಿಂದ ಆರೋಗ್ಯ ಸಚಿವಾಲಯವು ಪ್ರಮಾಣಿತ ಕಾರ್ಯವಿಧಾನವನ್ನು(ಎಸ್ಒಪಿ) ರೂಪಿಸಿ, ಜಾರಿಗೆ ತಂದಿದೆ.
***
(Release ID: 1722471)
Visitor Counter : 242