ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಭಾರತರತ್ನ ಪ್ರೊ. ಸಿ.ಎನ್.ಆರ್.ರಾವ್  ಅವರು ಇಂಧನ ಕ್ಷೇತ್ರಗಳಲ್ಲಿ ಸಂಶೋಧನೆಗಾಗಿ ಎನಿ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ


ಅಕ್ಟೋಬರ್ 14 2021 ರಂದು ರೋಮ್ ನ ಕ್ವಿರಿನಲ್ ಪ್ಯಾಲೇಸ್ನಲ್ಲಿ ನಡೆಯುವ  ಅಧಿಕೃತ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು

Posted On: 27 MAY 2021 4:52PM by PIB Bengaluru

ಭಾರತರತ್ನ ಪ್ರೊ. ಸಿ.ಎನ್.ಆರ್.ರಾವ್ ಅವರು ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಸಂಗ್ರಹಣೆಯ ಸಂಶೋಧನೆಗಾಗಿ   ಅಂತರರಾಷ್ಟ್ರೀಯ ಎನಿ ಪ್ರಶಸ್ತಿ 2020 ಅನ್ನು ಪಡೆದಿದ್ದಾರೆ, ಇದನ್ನು ಎನರ್ಜಿ ಫ್ರಾಂಟಿಯರ್ ಪ್ರಶಸ್ತಿ ಎಂದೂ ಕರೆಯುತ್ತಾರೆ. ಇದನ್ನು  ಇಂಧನ ಸಂಶೋಧನೆಯ  ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿಸಲಾಗಿದೆ.

ಪ್ರೊಫೆಸರ್ ರಾವ್ ಸಮಸ್ತ ಮಾನವಕುಲದ ಹಿತದೃಷ್ಟಿಯಿಂದ ಏಕೈಕ ಶಕ್ತಿಯ ಮೂಲವಾಗಿ  ಜಲಜನಕ  (ಹೈಡ್ರೋಜನ್) ಶಕ್ತಿಯ ಮೇಲೆ ಕೆಲಸ ಮಾಡುತ್ತಿದ್ದಾರೆಜಲಜನಕ ಸಂಗ್ರಹಣೆ, ಜಲಜನಕದ  ದ್ಯುತಿರಾಸಾಯನಿಕ ಮತ್ತು ಎಲೆಕ್ಟ್ರೋಕೆಮಿಕಲ್ ಉತ್ಪಾದನೆ, ಜಲಜನಕದ ಸೌರಶಕ್ತಿ ಉತ್ಪಾದನೆ ಮತ್ತು ಲೋಹವಲ್ಲದ ವೇಗವರ್ಧನೆ ಅವರ ಕಾರ್ಯದ ಪ್ರಮುಖ ಅಂಶಗಳಾಗಿವೆ.

ಲೋಹದ ಆಕ್ಸೈಡ್ಗಳು, ಇಂಗಾಲದ ನ್ಯಾನೊಟ್ಯೂಬ್ಗಳು ಮತ್ತು ಇತರ ವಸ್ತುಗಳು ಮತ್ತು ಗ್ರ್ಯಾಫೀನ್, ಬೋರಾನ್-ಸಾರಜನಕ -ಇಂಗಾಲದ ಹೈಬ್ರಿಡ್ ವಸ್ತುಗಳು, ಮತ್ತು ಹಸಿರು ಜಲಜನಕ ಉತ್ಪಾದನೆ ಹಾಗೂ ಇಂಧನ ಅನ್ವಯಿಕೆಗಳಿಗಾಗಿ ಮಾಲಿಬ್ಡಿನಮ್ ಸಲ್ಫೈಡ್ (ಮಾಲಿಬ್ಡಿನೈಟ್ - ಮೊಎಸ್ 2) ಸೇರಿದಂತೆ ಎರಡು ಆಯಾಮದ ವ್ಯವಸ್ಥೆಗಳ ಕುರಿತಾದ  ಕಾರ್ಯಕ್ಕಾಗಿ ಎನರ್ಜಿ ಫ್ರಾಂಟಿಯರ್ಸ್ ಪ್ರಶಸ್ತಿಯನ್ನು ನೀಡಲಾಗಿದೆಜಲಜನಕ ಉತ್ಪಾದನೆಯನ್ನುವಾಸ್ತವವಾಗಿ, ನೀರಿನ ಫೋಟೊಡಿಸೋಸಿಯೇಶನ್, ಉಷ್ಣ  ವಿಘಟನೆ ಮತ್ತು ಸೌರ ಅಥವಾ ಪವನ ಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುಚ್ಛ ಕ್ತಿಯಿಂದ ಸಕ್ರಿಯಗೊಂಡ ವಿದ್ಯುದ್ವಿಭಜನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳ ಮೂಲಕ ಸಾಧಿಸಬಹುದು. ಪ್ರೊಫೆಸರ್ ರಾವ್ ಅವರು ಎಲ್ಲಾ ಮೂರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಕೆಲವು ಹೆಚ್ಚು ನವೀನ ವಸ್ತುಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಅದೇ ಅಥವಾ ಸಂಬಂಧಿತ ವಸ್ತುಗಳು ಜಲಜನಕ ಶೇಖರಣಾ ವ್ಯವಸ್ಥೆಗಳು ಮತ್ತು ಹೆಚ್ಚಿನ ನಿರ್ದಿಷ್ಟ ಶಕ್ತಿಯನ್ನು ಹೊಂದಿರುವ ಸೂಪರ್ ಕ್ಯಾಪಾಸಿಟರ್ಗಳ ನಿರ್ಮಾಣಕ್ಕೆ ಮತ್ತು ಹೆಚ್ಚಿನ ಸಂಖ್ಯೆಯ ಚಾರ್ಜ್-ಡಿಸ್ಚಾರ್ಜ್ ಚಕ್ರಗಳ ನಿರ್ಮಾಣಕ್ಕೆ ಪ್ರಯೋಜನಕಾರಿ ಗುಣಲಕ್ಷಣಗಳನ್ನು ಹೊಂದಿವೆ ಎಂದು ತೋರಿಸಲಾಗಿದೆಸೂಪರ್ ಕ್ಯಾಪಾಸಿಟರ್ ಗಳು  ಬ್ಯಾಟರಿಗಳಂತೆಯೇ ಶಕ್ತಿ ಶೇಖರಣಾ ಸಾಧನಗಳಾಗಿವೆಇದು ನವೀಕರಿಸಬಹುದಾದ ಇಂಧನ ಕ್ಷೇತ್ರದ ಪ್ರಮುಖ ಭಾಗವಾಗಲಿದೆ.

ಎನಿ ಪ್ರಶಸ್ತಿ 2020 ಅನ್ನು ಅಕ್ಟೋಬರ್ 14, 2021 ರಂದು ರೋಮ್ ಕ್ವಿರಿನಲ್ ಪ್ಯಾಲೇಸ್ನಲ್ಲಿ ನಡೆಯುವ ಅಧಿಕೃತ ಸಮಾರಂಭದಲ್ಲಿ ಇಟಲಿಯ ಅಧ್ಯಕ್ಷರಾದ  ಸೆರ್ಗಿಯೋ ಮ್ಯಾಟರೆಲ್ಲಾ ಭಾಗವಹಿಸಲಿದ್ದಾರೆ.

ಇಂಧನ ಮತ್ತು ಪರಿಸರ ಸಂಶೋಧನಾ ಕ್ಷೇತ್ರದಲ್ಲಿ ಹಲವು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಪ್ರಶಸ್ತಿಯು, ಇಂಧನ ಮೂಲಗಳ ಉತ್ತಮ ಬಳಕೆಯನ್ನು ಉತ್ತೇಜಿಸುವ ಮತ್ತು ಹೊಸ ತಲೆಮಾರಿನ ಸಂಶೋಧಕರನ್ನು ತಮ್ಮ ಕೆಲಸದಲ್ಲಿ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಗಳ ಮೇಲೆ ಎನಿ ನೀಡುವ  ಪ್ರಾಮುಖ್ಯತೆಗೆ ಇದು ಸಾಕ್ಷಿಯಾಗಿದೆ ಪ್ರಶಸ್ತಿಯು ನಗದು ಬಹುಮಾನ ಮತ್ತು ವಿಶೇಷವಾಗಿ ಮುದ್ರಿತವಾಗಿರುವ ಚಿನ್ನದ ಪದಕವನ್ನು ಒಳಗೊಂಡಿದೆ.

***



(Release ID: 1722422) Visitor Counter : 211