ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಆಂಫೋಟೆರಿಸಿನ್ –ಬಿ ಚುಚ್ಚುಮದ್ದಿನ ಹೆಚ್ಚುವರಿ 80 ಸಾವಿರ ಬಾಟಲು(ವಯಲ್ಸ್)ಗಳ ಹಂಚಿಕೆ – ಶ್ರೀ ಡಿ. ವಿ. ಸದಾನಂದ ಗೌಡ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 26ರಂದು 29,250 ಬಾಟಲು ಆಂಫೋಟೆರಿಸಿನ್-ಬಿ ಚುಚ್ಚುಮದ್ದು ಹಂಚಿಕೆ
प्रविष्टि तिथि:
27 MAY 2021 6:22PM by PIB Bengaluru
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ವೇಳೆ ಹಾಗೂ ಗುಣಮುಖರಾದ ನಂತರ ಕಾಣಿಸಿಕೊಳ್ಳುತ್ತಿರುವ ಕಪ್ಪು ಶಿಲೀಂಧ್ರ ಸೋಂಕು ‘ಮ್ಯೂಕರ್|ಮೈಕೊಸಿಸ್’ ಚಿಕಿತ್ಸೆಗೆ ಬಳಸಲಾಗುವ ಆಂಫೋಟೆರಿಸಿನ್-ಬಿ ಚುಚ್ಚುಮದ್ದಿನ 80 ಸಾವಿರ ಹೆಚ್ಚುವರಿ ಬಾಟಲುಗಳನ್ನು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಇಂದು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ಪ್ರಕಟಿಸಿದ್ದಾರೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿನ್ನೆ ಮೇ 26ರಂದು ಆಂಫೋಟೆರಿಸಿನ್ ಚುಚ್ಚುಮದ್ದಿನ 29,250 ಬಾಟಲುಗಳನ್ನು ಹಂಚಿಕೆ ಮಾಡಲಾಗಿತ್ತು ಎಂದು ಅವರು ತಿಳಿಸಿದರು.

***
(रिलीज़ आईडी: 1722261)
आगंतुक पटल : 232