ಇಂಧನ ಸಚಿವಾಲಯ

ಕೋವಿಡ್-19 ವಿರುದ್ಧ ಸಂರಕ್ಷಣಾ ಉಪಕ್ರಮಗಳನ್ನು ಮುಂದುವರಿಸಿದ ಪವರ್ ಗ್ರಿಡ್ ಕಾರ್ಪೊರೇಷನ್

Posted On: 26 MAY 2021 10:34AM by PIB Bengaluru

ಭಾರತ ಸರ್ಕಾರದ ಇಂಧನ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಮಹಾರತ್ನಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಭಾರತೀಯ ಪವರ್ ಗ್ರಿಡ್ ನಿಗಮ ನಿಯಮಿತ (ಪವರ್ ಗ್ರಿಡ್)ವು ತನ್ನೆಲ್ಲಾ ಉದ್ಯೋಗಿಗಳು(ಹಾಲಿ, ಮೇಲ್ವಿಚಾರಣೆ ಮತ್ತು ಗುತ್ತಿಗೆ ಉದ್ಯೋಗಿಗಳು) ಮತ್ತು ಅವರ ಅವಲಂಬಿತರಿಗೆ ಕೋವಿಡ್-19 ಚಿಕಿತ್ಸೆ ಒದಗಿಸಲು ಅಗತ್ಯವಾದ ಎಲ್ಲಾ ನೆರವು ಒದಗಿಸುತ್ತಿದೆ. ಪ್ಯಾನ್ ಇಂಡಿಯಾ ಯೋಜನೆಯಡಿ ಪವರ್ ಗ್ರಿಡ್ ಕಂಪನಿಯು ಕೋವಿಡ್-19 ಸೋಂಕಿತ ನೌಕರರಿಗೆ ಚಿಕಿತ್ಸೆ ಒದಗಿಸುವ ಜತೆಗೆ, ಕೋವಿಡ್ ಸೂಕ್ತ ನಡವಳಿಕೆಗಳ ಬಗ್ಗೆ ಇತರರಿಗೂ ಜಾಗೃತಿ ಮೂಡಿಸುತ್ತಿದೆ.

ಪವರ್ ಗ್ರಿಡ್ ಕಂಪನಿಯ ಉತ್ತರ ವಲಯ-2 ತನ್ನೆಲ್ಲಾ ಉದ್ಯೋಗಿಗಳು, ಅವರ ಅವಲಂಬಿತರಿಗೆ ಐದು ಲಸಿಕಾ ಆಂದೋಲನಗಳನ್ನು ಹಮ್ಮಿಕೊಂಡಿತ್ತು. ಜಲಂಧರ್, ಮೋಗ, ಹಮಿರ್|ಪುರ್ ಮತ್ತು ವಗೂರದಲ್ಲಿ ಲಸಿಕಾ ಆಂದೋಲನ ನಡೆಯಿತು. ಜಮ್ಮುವಿನಲ್ಲಿರುವ ಪವರ್ ಗ್ರಿಡ್ ಕಂಪನಿಯ ಪ್ರಾದೇಶಿಕ ಕೇಂದ್ರ ಸ್ಥಾನಿಕ ಕಚೇರಿಯಲ್ಲಿ 100 ಗುತ್ತಿಗೆ ನೌಕರರಿಗೆ ಲಸಿಕಾ ಆಂದೋಲನ ಆಯೋಜಿಸಲಾಗಿತ್ತು.

ಪವರ್ ಗ್ರಿಡ್ ಕಂಪನಿಯು ಆಮ್ಲಜನಕ ಪೂರೈಸುವ 35 ಕೋವಿಡ್ ಸಂರಕ್ಷಣಾ ಸೌಲಭ್ಯವುಳ್ಳ ಹಾಸಿಗೆಗಳ ವ್ಯವಸ್ಥೆ ಮಾಡಿದೆ. 24 ತಾಸು ದಾದಿಯರ ಸಂರಕ್ಷಣಾ ಸೌಲಭ್ಯವುಳ್ಳ ಐಸೊಲೇಷನ್ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲದೆ, ನೌಕರರು ಮತ್ತು ಅವಲಂಬಿತರ ಆರೋಗ್ಯ ತಪಾಸಣೆ, ಚಿಕಿತ್ಸೆ ಸೇರಿದಂತೆ ಸಮಗ್ರ ಆರೋಗ್ಯ ಸಮಾಲೋಚನಗಾಗಿ ತಜ್ಞವೈದ್ಯರೊಬ್ಬರನ್ನು ನೇಮಿಸಲಾಗಿದೆ.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಮುಖ ಮತ್ತು ಕೈಗಳ ನಿಯಮಿತ ಸ್ವಚ್ಛತೆಯ ಮಹತ್ವ ಕುರಿತು ನೌಕರರು, ಅವರ ಕುಟುಂಬ ಸದಸ್ಯರು ಮತ್ತು ಕಂಪನಿಯ ಸಿಬ್ಬಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೋವಿಡ್-19 ಸೂಕ್ತ ನಡವಳಿಕೆಗಳನ್ನು ಅರ್ಥ ಮಾಡಿಸುವ ಪೋಸ್ಟರ್|ಗಳನ್ನು ಜಮ್ಮುವಿನ ಪ್ರಾದೇಶಿಕ ಕೇಂದ್ರ ಸ್ಥಾನಿಕ ಕಚೇರಿಯ ಪ್ರಮುಖ ದ್ವಾರ, ವಾಹನಗಳ ನಿಲುಗಡೆ ತಾಣ, ಲಿಫ್ಟ್ ಜಾಗ ಮತ್ತು ಕಚೇರಿಯ ಪ್ರವೇಶ ಆವರಣ, ಸಮುದಾಯ ಕೇಂದ್ರಗಳು ಮತ್ತು ವಸತಿ ಸಮುಚ್ಛಯಗಳಲ್ಲಿ ಹಾಕಲಾಗಿದೆ.

ಇಂತಹ ಸಣ್ಣ ಉಪಕ್ರಮಗಳು ನೌಕರರ ಅನಾರೋಗ್ಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಅವರಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆಯನ್ನು ಒದಗಿಸಲು ಸಹಾಯ ಮಾಡಿವೆ.

***



(Release ID: 1721899) Visitor Counter : 162