ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಹೆಚ್ಚುವರಿಯಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 29,250 ವಯಲ್ಸ್ ಆಂಪೋಟೆರಿಸಿನ್ – ಬಿ ಹಂಚಿಕೆ
19,420 ವಯಲ್ಸ್ ಆಂಪೋಟೆರಿಸಿನ್ – ಬಿಯನ್ನು ಮೇ 24ರಂದು ಹಂಚಿಕೆ ಮಾಡಲಾಗಿತ್ತು
Posted On:
26 MAY 2021 1:15PM by PIB Bengaluru
ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗಾಗಿ ಬಳಸಲಾಗುವ ಆಂಪೋಟೆರಿಸಿನ್ –ಬಿ ಔಷಧದ 29,250 ವಯಲ್ಸ್ ಗಳನ್ನು ಹೆಚ್ಚುವರಿಯಾಗಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ಅವರಿಂದು ಪ್ರಕಟಿಸಿದ್ದಾರೆ.
ಇದಕ್ಕೂ ಮೊದಲು ಮೇ 24 ರಂದು ಹೆಚ್ಚುವರಿ 19,420 ಆಂಫೊಟೆರಿಸಿನ್-ಬಿ ವಯಲ್ಸ್ ಗಳನ್ನು ಹಂಚಿಕೆ ಮಾಡಲಾಗಿದ್ದು, ಮೇ 21 ರಂದು ದೇಶಾದ್ಯಂತ 23,680 ವಯಲ್ಸ್ ಗಳನ್ನು ಸರಬರಾಜು ಮಾಡಲಾಗಿದೆ.
***
(Release ID: 1721883)
Visitor Counter : 224