ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 22 ಕೋಟಿಗಿಂತ ಹೆಚ್ಚಿನ ಜನರಿಗೆ ಕೋವಿಡ್-19 ಲಸಿಕೆ ನೀಡಿಕೆ


ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1.77 ಕೋಟಿಗಿಂತ ಹೆಚ್ಚಿನ ಡೋಸ್ ಲಸಿಕೆ ಇನ್ನೂ ಲಭ್ಯ

Posted On: 26 MAY 2021 10:08AM by PIB Bengaluru

ರಾಷ್ಟ್ರವ್ಯಾಪಿ ಲಸಿಕಾ ಆಂದೋಲನದ ಭಾಗವಾಗಿ ಭಾರತ ಸರಕಾರ, ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆಯನ್ನು ವಿತರಿಸುತ್ತಿದೆ. ಇದರ ಜತೆಗೆ ಕೇಂದ್ರ ಸರಕಾರ, ಲಸಿಕೆಯ ನೇರ ಖರೀದಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನುವು ಮಾಡಿಕೊಟ್ಟಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ಸಂಪೂರ್ಣ ನಿಯಂತ್ರಣ ತರುವ ಕೇಂದ್ರ ಸರ್ಕಾರದ ಸೋಂಕು ಪತ್ತೆ, ಗಂಟಲು ದ್ರವ ಪರೀಕ್ಷೆ ಮತ್ತು ಚಿಕಿತ್ಸೆ ನೀಡಿಕೆಯ ಕಾರ್ಯತಂತ್ರದ ಭಾಗವಾಗಿ ಲಸಿಕೆ ನೀಡಿಕೆಗೆ ಗಮನ ನೀಡಲಾಗಿದೆ.

ಉದಾರೀಕೃತ ಮತ್ತು ವೇಗವರ್ಧಿತ 3ನೇ ಹಂತದ ಕಾರ್ಯತಂತ್ರ ಕೋವಿಡ್ -19 ಲಸಿಕಾ ಆಂದೋಲನದ ಅನುಷ್ಠಾನ ಮೇ 1ರಿಂದ ಆರಂಭವಾಗಿದೆ. ಕಾರ್ಯತಂತ್ರದಡಿ ಕೇಂದ್ರೀಯ ಔಷಧ ಪ್ರಯೋಗಾಲಯವು ಅನುಮೋದಿಸುವ ಲಸಿಕಾ ತಯಾರಿಕಾ ಕಂಪನಿಗಳ 50% ಲಸಿಕೆಯನ್ನು ಕೇಂದ್ರ ಸರಕಾರ ಪ್ರತಿ ತಿಂಗಳು ಖರೀದಿಸಲಿದೆ. ಅಲ್ಲದೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಿಂದಿನಂತೆ ಉಚಿತವಾಗಿ ಪೂರೈಸಲಿದೆ.

ಕೇಂದ್ರ ಸರಕಾರ ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಮತ್ತು ರಾಜ್ಯಗಳ ನೇರ ಖರೀದಿ ವ್ಯವಸ್ಥೆ ಮೂಲಕ ಒಟ್ಟು 22 ಕೋಟಿಗಿಂತ ಹೆಚ್ಚಿನ (22,00,59,880)ಡೋಸ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿದೆ.ವ್ಯರ್ಥ ವಾದುದು ಸೇರಿದಂತೆ ಒಟ್ಟು ಬಳಕೆಯ ಲಸಿಕೆಯ ಪ್ರಮಾಣ 20,13,74,636 ಡೋಸ್ ಆಗಿದೆ(ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾದ ಅಂಕಿಅಂಶದ ಪ್ರಕಾರ)

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1.77 ಕೋಟಿಗಿಂತ ಹೆಚ್ಚಿನ ಡೋಸ್ (1,77,52,594) ಲಸಿಕೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ.

ಎಲ್ಲಕ್ಕಿಂತ ಮುಖ್ಯವಾಗಿ, 1 ಲಕ್ಷ ಲಸಿಕೆ ಡೋಸ್|ಗಳನ್ನು ಕಳಿಸಲು ಕೇಂದ್ರ ಸರಕಾರ ಸಕಲ ಸಿದ್ದತೆ ನಡೆಸಿದ್ದು, ಇನ್ನು ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವೀಕರಿಸಲಿವೆ.

***


(Release ID: 1721857) Visitor Counter : 285