ನೌಕಾ ಸಚಿವಾಲಯ

ಯಾಸ್ ಚಂಡಮಾರುತ ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಪರಾಮರ್ಶೆ ನಡೆಸಿದ ಕೇಂದ್ರ ಸಚಿವ ಶ್ರೀ ಮನ್ಸುಖ್ ಮಾಂಡವಿಯ

Posted On: 25 MAY 2021 6:27PM by PIB Bengaluru

ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಭಾರತದ ಪೂರ್ವ ಕರಾವಳಿಯಲ್ಲಿನ ಪ್ರಮುಖ ಬಂದರುಗಳಲ್ಲಿ ಕೈಗೊಂಡಿರುವ ಸಿದ್ಧತಾ ಕ್ರಮಗಳ ಕುರಿತು ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ (ಸ್ವತಂತ್ರ ಹೊಣೆಗಾರಿಕೆ) ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವೀಯ ಪರಿಶೀಲನೆ ನಡೆಸಿದರು. ಬಂದರು, ಶಿಪ್ಪಿಂಗ್ ಮತ್ತು ಒಳನಾಡು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಪ್ರಮುಖ ಬಂದರುಗಳ ಅಧ್ಯಕ್ಷರು ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು

ಪ್ರಮುಖ ಬಂದರುಗಳ ಅಧ್ಯಕ್ಷರು ಚಂಡಮಾರುತದಿಂದ ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಬಂದರುಗಳಲ್ಲಿ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗಿದೆ:

  • ಬಂದರು, ಶಿಪ್ಪಿಂಗ್ ಮತ್ತು ಜಲ ಮಾರ್ಗಗಳ ಸಚಿವಾಲಯದಿಂದ ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ ನಿಯಂತ್ರಣ ಕೋಣೆಯನ್ನು ತೆರೆಯಲಾಗಿದೆ. ಎಂಒಪಿಎಸ್ ಡಬ್ಲ್ಯೂ, ನೌಕಾಪಡೆ, ಐಸಿಜಿ, ಎಂಒಪಿಎನ್ ಜಿಯ ನಿಯಂತ್ರಣ ಕೊಠಡಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿವೆ.   
  • ಶಿಪ್ಪಿಂಗ್ ಕಂಪನಿಗಳು ಮತ್ತು ಕಾರ್ಯ ನಿರ್ವಾಹಕರಿಗೆ ಸೂಚನೆಯನ್ನು ನೀಡಲಾಗಿದ್ದು ಅವರು, ಪ್ರದೇಶದಲ್ಲಿರುವ ಹಡಗುಗಳಿಗೆ ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.
  • ಹೈ ಮಾಸ್ಟ್ ದೀಪಗಳನ್ನು ಕೆಳಗಿಳಿಸಲು ಮತ್ತು ಹಾರುವ ವಸ್ತುಗಳನ್ನು ಸುರಕ್ಷಿತವಾಗಿಡಲು ಸೂಚನೆಗಳನ್ನು ಹೊರಡಿಸಲಾಗಿದೆ.
  • ಇಡೀ ಬಂದರು ಕಾರ್ಯಾಚರಣೆ ಪ್ರದೇಶದಿಂದ ಬಂದರು ಬಳಕೆದಾರರು ಮತ್ತು ಕಾರ್ಮಿಕರನ್ನು ಹೊರಗೆ ಕಳುಹಿಸಲಾಗಿದೆ.
  • ಸಮುದ್ರ ತೀರದ ಎಲ್ಲಾ ಕ್ರೇನ್ ಗಳು, ವಿವಿಧ ಯಂತ್ರೋಪಕರಣಗಳು, ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿನ ಸಾಮಗ್ರಿಗಳನ್ನು, ಲೋಕೋಮೋಟಿವ್ ರೇಖ್ ಮತ್ತು ಹೈ ಮಾಸ್ಟ್  ದೀಪಗಳನ್ನು ರಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
  • ಬಂದರು ಪ್ರದೇಶದಲ್ಲಿ ರೈಲ್ವೆ, ರಸ್ತೆ ಸಂಚಾರವನ್ನು ರದ್ದುಗೊಳಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.
  • ಖಾಸಗಿ ಕರಕುಶಲ ವಸ್ತುಗಳು (ಕ್ರಾಫ್ಟ್) ಮತ್ತು ಉಡಾವಣಾ(ಲಾಂಚ್ ಗಳ) ಸುರಕ್ಷತೆಗಾಗಿ ನಿರ್ದೇಶನಗಳನ್ನು ನೀಡಲಾಗಿದೆ.
  • ಪೋರ್ಟಬಲ್ ಜನ್ ಸೆಟ್ ಗಳನ್ನು ಸನ್ನದ್ಧವಾಗಿಡಲಾಗಿದೆ.
  • ಪೋರ್ಟ್ ಆಂಬುಲೆನ್ಸ್ ಅನ್ನು ತುರ್ತು ಬಳಕೆಗಾಗಿ ಸನ್ನದ್ಧವಾಗಿಡಲಾಗಿದೆ.
  • ಬಂದರಿನೊಳಗಿನ  ಹಡಗುಗಳು, ಲಾಂಚರ್ಸ್ ಗಳು, ಪ್ರವಾಸಿ ದೋಣಿಗಳ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
  • ಬಂದರಿನ ಹೊರ ಪ್ರದೇಶದಲ್ಲಿನ ಹಡಗುಗಳ ಸುರಕ್ಷತೆಗೂ ಕ್ರಮ ಕೈಗೊಳ್ಳಲಾಗಿದೆ.

ಐಡಬ್ಲ್ಯೂಎಐ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:

1.   2021 ಮೇ 23ರಿಂದ ಅನ್ವಯವಾಗುವಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕೃತವಾಗಿ ವಾಪಸ್ ಪಡೆಯುವವರೆಗೆ ಭಾರತ-ಬಾಂಗ್ಲಾದೇಶ ಶಿಷ್ಟಾಚಾರ ಮಾರ್ಗಗಳು ಮತ್ತು ರಾಷ್ಟ್ರೀಯ ಜಲಮಾರ್ಗಗಳಲ್ಲಿ ಎಲ್ಲಾ ಐಡಬ್ಲ್ಯೂಟಿ ಬಾರ್ಜ್, ಕ್ರೂಸ್ ಆಪರೇಟರ್ ಗಳು, ಶಿಪ್ಪಿಂಗ್ ಏಜೆಂಟರು/ರಫ್ತುದಾರರ ಎಲ್ಲ ಬಗೆಯ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ದೇಶನ ನೀಡಲಾಗಿದೆ.

2.   ಚಂಡಮಾರುತ ಕೊನೆಯಾಗುವವರೆಗೆ ಚಾಲಕರು ಮತ್ತು ಹಡಗಿನ ಸುರಕ್ಷತೆ ಖಾತ್ರಿಪಡಿಸಲು ತಮ್ಮ ಹಡಗುಗಳನ್ನು ನದಿ ಪಾತ್ರದ ಹೊಳೆಗಳು/ ಕಾಲುವೆಗಳು. ನದಿ ಮಾರ್ಗ ಸೇರಿ ಸೂಕ್ತ ಜಾಗಗಳಲ್ಲಿಡುವಂತೆ ಸಲಹೆ ನೀಡಲಾಗಿದೆ.

3.   ಐಡಬ್ಲ್ಯೂಟಿ ಹಡಗುಗಳನ್ನು ಕೆಒಪಿಟಿಯ ಮುಖ್ಯ ಚಾನಲ್ ನಲ್ಲಿ ಲಂಗರು ಹಾಕದಂತೆ ನಿರ್ದೇಶನ ನೀಡಲಾಗಿದೆ.

ತಮ್ಮ ಸಮಾರೋಪ ಭಾಷಣದಲ್ಲಿ ಶ್ರೀ ಮನ್ಸುಖ್ ಮಾಂಡವೀಯ ಅವರು, ಯಾಸ್ ಚಂಡಮಾರುತದಿಂದ ಸಾಧ್ಯವಾದ ಮಟ್ಟಿಗೂ ನಷ್ಟ ತಡೆಯಬೇಕು. ಹಾಗೊಂದುವೇಳೆ ಆದರೆ ಕನಿಷ್ಠ ಪ್ರಮಾಣದಲ್ಲಿ ಬಂದರು ಆಸ್ತಿ ಮತ್ತು ಜೀವ ಹಾನಿ   ಆಗುವಂತೆ ನೊಡಿಕೊಳ್ಳಬೇಕು ಎಂದು ಹೇಳಿದರು. ಬಂದರು ಸಮೀಪದ ಜನರಿಗೆ ಅಗತ್ಯ ನೆರವು ನೀಡುವಂತೆ ಅವರು ಬಂದರುಗಳಿಗೆ ಸಲಹೆ ನೀಡಿದರು. ಬಂದರಿನ ಮುಖ್ಯಸ್ಥರು ಯಾಸ್ ಚಂಡಮಾರುತದಿಂದ ಎದುರಾಗಲಿರುವ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಭರವಸೆ ನೀಡಿದರು

***



(Release ID: 1721725) Visitor Counter : 179