ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಪರಿಹಾರ ನೆರವಿನ ತಾಜಾ ಮಾಹಿತಿ


17,755 ಆಕ್ಸಿಜನ್ ಸಾಂದ್ರಕಗಳು; 16,301 ಆಕ್ಸಿಜನ್ ಸಿಲಿಂಡರ್ ಗಳು; 19 ಆಕ್ಸಿಜನ್ ಉತ್ಪಾದನಾ ಘಟಕಗಳು; 13,449 ವೆಂಟಿಲೇಟರ್ಸ್/ ಬಿಪಾಪ್; ~6.9 ಲಕ್ಷ ರೆಮ್ ಡಿಸಿವಿರ್ ವಯಲ್ಸ್, ~12 ಲಕ್ಷ ಫವಿಪಿರಾವೀರ್ ಮಾತ್ರೆಗಳು  ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಣೆ/ ರವಾನೆ

Posted On: 25 MAY 2021 2:48PM by PIB Bengaluru

ಭಾರತ ಸರ್ಕಾರ ನಾನಾ ದೇಶಗಳು ಮತ್ತು ಸಂಸ್ಥೆಗಳಿಂದ 2021ರ ಏಪ್ರಿಲ್ ನಿಂದೀಚೆಗೆ ಅಂತಾರಾಷ್ಟ್ರೀಯ ಸಹಕಾರದಡಿ ಕೋವಿಡ್-19 ವೈದ್ಯಕೀಯ ಸಾಮಗ್ರಿಗಳು ಮತ್ತು ಸಾಧನಗಳನ್ನು ಸ್ವೀಕರಿಸುತ್ತಿದೆ. ಅವುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಾಮಾಣಿಕವಾಗಿ ವಿತರಣೆ ಮತ್ತು ವರ್ಗಾವಣೆ ಮಾಡುತ್ತಿದೆ.

ಒಟ್ಟಾರೆ 2021ರ ಏಪ್ರಿಲ್ 27ರಿಂದ ಮೇ 24ರ ವರೆಗೆ ರಸ್ತೆ ಮತ್ತು ವಿಮಾನದ ಮೂಲಕ  ಒಟ್ಟಾರೆ 17,755 ಆಕ್ಸಿಜನ್ ಸಾಂದ್ರಕಗಳು; 16,301 ಆಕ್ಸಿಜನ್ ಸಿಲಿಂಡರ್ ಗಳು; 19 ಆಕ್ಸಿಜನ್ ಉತ್ಪಾದನಾ ಘಟಕಗಳು; 13,449 ವೆಂಟಿಲೇಟರ್ಸ್/ ಬಿಪಾಪ್; ~6.9 ಲಕ್ಷ ರೆಮ್ ಡಿಸಿವಿರ್ ವಯಲ್ಸ್, ~12 ಲಕ್ಷ ಫವಿಪಿರಾವೀರ್ ಮಾತ್ರೆಗಳನ್ನು ವಿತರಣೆ ಅಥವಾ ರವಾನೆ ಮಾಡಲಾಗಿದೆ.

ಯುಎಇ, ಸಿಂಗಾಪುರ್ಒಂಟಾರಿಯೊ(ಕೆನಡಾ), ಯುಎಸ್ಐಎಸ್ ಪಿಎಫ್, ನೆಸ್ಲೆ(ಸ್ವಿಸ್ ಇಂಡಿಯಾ ಚೇಂಬರ್ ಆಫ್ ಕಾಮರ್ಸ್)ನಿಂದ 2021 ಮೇ 23/24ರಂದು ಸ್ವೀಕರಿಸಿರುವ ಪ್ರಮುಖ ಕನ್ಸೈನ್ ಮೆಂಟ್ ಗಳು

ಕನ್ಸೈನ್ ಮೆಂಟ್ ಗಳು

ಪ್ರಮಾಣ

ಆಕ್ಸಿಜನ್ ಸಾಂದ್ರಕಗಳು

20

ಆಕ್ಸಿಜನ್ ಸಿಲಿಂಡರ್ ಗಳು

540

ವೆಂಟಿಲೇಟರ್ಸ್/ಬಿ-ಪಾಪ್/ಸಿಪಿಎಪಿ

536

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಸಂಸ್ಥೆಗಳಿಗೆ ತಕ್ಷಣವೇ ನೆರವಿನ ಪರಿಣಾಮಕಾರಿ ಹಂಚಿಕೆ ಮತ್ತು ಪೂರೈಕೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.

ಕೇಂದ್ರ ಗೃಹ ಸಚಿವಾಲಯ ನಿರಂತರವಾಗಿ  ಆ ಬಗ್ಗೆ ಸಮಗ್ರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಅಂತಾರಾಷ್ಟ್ರೀಯ ಸಹಕಾರದಿಂದ ಕೊಡುಗೆ, ನೆರವು ಮತ್ತು ದೇಣಿಗೆ ರೂಪದಲ್ಲಿ ವಿದೇಶದಿಂದ ಬರುತ್ತಿರುವ ಕೋವಿಡ್ ಪರಿಹಾರ ಸಾಮಗ್ರಿಯನ್ನು ಹಂಚಿಕೆ ಮಾಡಲು ಪ್ರತ್ಯೇಕ ಸಮನ್ವಯ ಘಟಕವನ್ನು ಸೃಷ್ಟಿಸಲಾಗಿದೆ. ಈ ಘಟಕ  2021ರ ಏಪ್ರಿಲ್ 26ರಿಂದ ಕಾರ್ಯಾರಂಭ ಮಾಡಿದೆ. ಆರೋಗ್ಯ ಸಚಿವಾಲಯ 2021ರ ಮೇ 2ರಿಂದೀಚೆಗೆ ಇದಕ್ಕೆ ಪ್ರತ್ಯೇಕ ಎಸ್ಒಪಿಯನ್ನು ರೂಪಿಸಿ ಅದನ್ನು ಜಾರಿಗೊಳಿಸುತ್ತಿದೆ.

***


(Release ID: 1721646) Visitor Counter : 242