ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 21.89 ಕೋಟಿ ಗೂ ಹೆಚ್ಚು ಡೋಸ್ ಗಳ ಲಸಿಕೆ ವಿತರಣೆ
ರಾಜ್ಯಗಳು. ಕೇಂದ್ರಾಡಳಿತ ಪ್ರದೇಶಗಳ ಬಳಿ 1.77 ಕೋಟಿ ಗೂ ಹೆಚ್ಚು ಡೋಸ್ ಗಳ ಲಸಿಕೆ ಲಭ್ಯ
Posted On:
25 MAY 2021 2:00PM by PIB Bengaluru
ರಾಷ್ಟ್ರೀಯ ಲಸಿಕಾ ಅಭಿಯಾನದ ಭಾಗವಾಗಿ ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಕೋವಿಡ್ ಲಸಿಕೆಯನ್ನು ವಿತರಿಸುತ್ತಿದೆ.
ಇದರ ಜತೆಗೆ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನೇರವಾಗಿ ಲಸಿಕೆ ಖರೀದಿಸಲು ಸಹಕರಿಸುತ್ತಿದೆ. ಸಾಂಕ್ರಾಮಿಕ ನಿರ್ವಹಣೆ ಮತ್ತು ನಿಯಂತ್ರಣ ಕುರಿತ ಸಮಗ್ರ ಕಾರ್ಯತಂತ್ರದಲ್ಲಿ ಸೋಂಕು ಪತ್ತೆ, ಜಾಡು, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ವರ್ತನೆಯ ಜತೆ ಲಸಿಕೆ ಅವಿಭಾಜ್ಯ ಅಂಗವಾಗಿದೆ.
ಕೋವಿಡ್ – 19 ಲಸಿಕೆಯ ಉದಾರೀಕೃತ ಮತ್ತು ತ್ವರಿತ ಅನುಷ್ಠಾನದ 3ನೇ ಹಂತ 2021 ಮೇ 1 ರಂದು ಆರಂಭಗೊಂಡಿದೆ.
ಈ ಕಾರ್ಯತಂತ್ರದ ಭಾಗವಾಗಿ ಪ್ರತಿತಿಂಗಳು ಉತ್ಪಾದಕರಿಂದ ಖರೀದಿಸುವ ಶೇ 50 ರಷ್ಟು ಲಸಿಕೆ ಡೋಸ್ ಗಳನ್ನು ಕೇಂದ್ರೀಯ ಔಷಧ ಪ್ರಯೋಗಾಲಯ [ಸಿ.ಡಿ.ಎಲ್] ಸಂಗ್ರಹಿಸಲಿದೆ. ಈ ಪ್ರಮಾಣದ ಲಸಿಕೆಯನ್ನು ಹಿಂದಿನಂತೆ ಸಂಪೂರ್ಣವಾಗಿ ಉಚಿತವಾಗಿ ಒದಗಿಸಲಿದೆ.
ಉಚಿತ ಮತ್ತು ರಾಜ್ಯ ಸರ್ಕಾರಗಳು ನೇರವಾಗಿ ಖರೀದಿಸುವ ಒಟ್ಟು ಲಸಿಕೆ 21.89 ಕೋಟಿ ಡೋಸ್ ಗೂ ಹೆಚ್ಚಿದ್ದು, (21,89,69,250) ಇವುಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ.
ಈ ಪೈಕಿ ವ್ಯರ್ಥವಾದದ್ದು ಸೇರಿ ಒಟ್ಟು 19,93,39,750 ಡೋಸ್ ಲಸಿಕೆ ಬಳಕೆಯಾಗಿದೆ [ಇಂದು ಬೆಳಿಗ್ಗೆ 8 ಗಂಟೆ ವರೆಗಿನ ಮಾಹಿತಿ]
1.77 ಕೋಟಿ ಗೂ ಹೆಚ್ಚು ಡೋಸ್ ಗಳು ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ ಲಭ್ಯವಿದೆ.
ಸುಮಾರು 7 ಲಕ್ಷಕ್ಕೂ ಹೆಚ್ಚು (7,00,000) ಲಸಿಕೆ ಪೂರೈಕೆ ಹಂತದಲ್ಲಿದೆ ಮತ್ತು ಮುಂದಿನ 3 ದಿನಗಳ ಅವಧಿಯಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಲಸಿಕೆ ಸ್ವೀಕರಿಸಲಿವೆ..
***
(Release ID: 1721606)
Visitor Counter : 256