ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಪರಿಹಾರ ನೆರವು ಕುರಿತಂತೆ ಅಪ್ಡೇಟ್


ಇದುವರೆಗೆ 16,530 ಆಮ್ಲಜನಕ ಕಾನ್ಸಂಟ್ರೇಟರ್ ಗಳು; 15,901 ಆಮ್ಲಜನಕ ಸಿಲಿಂಡರ್ ಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು; 11,416 ವೆಂಟಿಲೇಟರುಗಳು/ಬಿ.ಐ.ಪಿ.ಎ.ಪಿ; ~6.6 ಲಕ್ಷ ರೆಮಿಡಿಸಿವಿರ್ ಬಾಟಲಿಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ/ತ್ವರಿತವಾಗಿ ಕಳುಹಿಸಿಕೊಡಲಾಗಿದೆ.

Posted On: 22 MAY 2021 4:18PM by PIB Bengaluru

ಭಾರತ ಸರಕಾರವು 2021 ರ ಏಪ್ರಿಲ್ 27 ರಿಂದ ಅಂತಾರಾಷ್ಟ್ರೀಯ ಸಹಕಾರದಲ್ಲಿ ಕೋವಿಡ್ -19 ಪರಿಹಾರಾರ್ಥವಾಗಿ  ವಿವಿಧ ದೇಶಗಳಿಂದ/ ಸಂಘಟನೆಗಳಿಂದ ವೈದ್ಯಕೀಯ ಪೂರೈಕೆ ಮತ್ತು ಸಲಕರಣೆಗಳನ್ನು ಪಡೆಯುತ್ತಿದೆ. ಇವುಗಳನ್ನು ತ್ವರಿತವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಕೋವಿಡ್ -19  ನಿರ್ವಹಣೆಗೆ ಪೂರಕವಾಗಿ ಕಳುಹಿಸಿಕೊಡಲಾಗುತ್ತಿದೆ/ಪೂರೈಸಲಾಗುತ್ತಿದೆ.

ಒಟ್ಟು, 16,530 ಆಮ್ಲಜನಕ ಕಾನ್ಸಂಟ್ರೇಟರ್ ಗಳು; 15,901 ಆಮ್ಲಜನಕ ಸಿಲಿಂಡರುಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು, 11,416 ವೆಂಟಿಲೇಟರುಗಳು/ಬಿಐ.ಪಿ.ಎ.ಪಿ; ~6.6 ಲಕ್ಷ ರೆಮಿಡಿಸಿವಿರ್ ಬಾಟಲಿಗಳನ್ನು 2021 ರ ಏಪ್ರಿಲ್ 27 ರಿಂದ 2021 ರ ಮೇ 21 ರವರೆಗೆ ರಸ್ತೆ ಮತ್ತು ವಾಯು ಸಾರಿಗೆ ಮೂಲಕ ಪೂರೈಸಲಾಗಿದೆ/ಕಳುಹಿಸಿಕೊಡಲಾಗಿದೆ

ಕತಾರ್, ವೇಲ್ಸ್ ಸರಕಾರ (ಯು.ಕೆ.). ಕೆನಡಾ ಸರಕಾರ, ಸಾಸ್ಕಟ್ಚೆವಾನ್ (ಕೆನಡಾ), ಯು.ಎಸ್.ಐ.ಎಸ್.ಪಿ.ಎಫ್, ರಾಬರ್ಟ್ ಬೋಶ್ (ಜರ್ಮನಿ)ಗಳಿಂದ 2021ರ ಮೇ 20/21ರಂದು ಬಂದಿರುವ ಪ್ರಮುಖ ಸರಕುಗಳಲ್ಲಿ ಈ ಕೆಳಗಿನವು ಸೇರಿವೆ.

 

ಸರಕುಗಳು

ಒಟ್ಟು ಸಂಖ್ಯೆ

ಆಮ್ಲಜನಕ ಕಾನ್ಸಂಟ್ರೇಟರ್ ಗಳು

963

ವೆಂಟಿಲೇಟರ್ ಗಳು/ಬಿಐ-ಪಿ.ಎ.ಪಿ/ಸಿ.ಪಿ.ಎ.ಪಿ

465

 

  • ಹೆಚ್ಚುವರಿಯಾಗಿ ಮುಖ ಕವಚಗಳು, ಮುಖಗವಸುಗಳು ಮತ್ತು ಇತರ ಪಿ.ಪಿ.ಇ.ಗಳು ಬಂದಿವೆ.

ತಕ್ಷಣವೇ ಅವುಗಳ ಮಂಜೂರಾತಿ ಮತ್ತು ಪಡೆದುಕೊಳ್ಳುವ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಸಂಸ್ಥೆಗಳಿಗೆ ರವಾನೆ ಮಾಡುವುದು ಚಾಲ್ತಿಯಲ್ಲಿರುವ ಪ್ರಕ್ರಿಯೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಈ ಕಾರ್ಯಚಟುವಟಿಕೆಯನ್ನು ನಿಯಮಿತವಾಗಿ ಸಮಗ್ರವಾಗಿ ಉಸ್ತುವಾರಿ ಮಾಡುತ್ತಿದೆ. ದಾನ, ಸಹಾಯ ಮತ್ತು ದೇಣಿಗೆಗಳ ರೂಪದಲ್ಲಿ ಅಂತಾರಾಷ್ಟ್ರೀಯ ಸಹಕಾರದಡಿ ಬರುತ್ತಿರುವ ವಿದೇಶೀ ಕೋವಿಡ್ ಪರಿಹಾರ ಸಾಮಗ್ರಿಗಳನ್ನು ಪಡೆದು ವಿತರಿಸುವುದಕ್ಕಾಗಿಯೇ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತ್ಯೇಕ ಸಮನ್ವಯ ಘಟಕವನ್ನು ರೂಪಿಸಿದೆ. ಈ ಘಟಕ /ಕೋಶವು 2021 ರ ಏಪ್ರಿಲ್ 21 ರಿಂದ ಕಾರ್ಯಾರಂಭ ಮಾಡಿದೆ. 2021 ರ ಮೇ 2 ರಿಂದ ಆರೋಗ್ಯ ಸಚಿವಾಲಯವು ಗುಣಮಟ್ಟ ಕಾರ್ಯಾಚರಣಾ ಪ್ರಕ್ರಿಯೆಯನ್ನು ರೂಪಿಸಿ ಜಾರಿಗೆ ತಂದಿದೆ.

***



(Release ID: 1720968) Visitor Counter : 186